ಜಿಮ್, ಡಯೆಟ್ ಏನೇ ಮಾಡಿದ್ರೂ ತೂಕ ಇಳಿತಾ ಇಲ್ವಾ, ಈ ಸಮಸ್ಯೆ ಇರಬಹುದು; ಪರೀಕ್ಷೆ ಮಾಡ್ಸೋದು ಮರಿಬೇಡಿ
ಪ್ರತಿದಿನ ವಾಕಿಂಗ್ ಮಾಡೋದು, ಜಿಮ್‌ನಲ್ಲಿ ಬೆವರಿಳಿಸೋದು, ತಿನ್ನುವ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಪಾಲಿಸುವುದು ಇಷ್ಟೆಲ್ಲಾ ಮಾಡಿದ್ರು ತೂಕ ಇಳಿತಾ ಇಲ್ವಾ? ತೂಕ ಹೆಚ್ಚುತ್ತಲೇ ಇದೆ ಅಂತ ಅನ್ನಿಸ್ತಾ ಇದ್ಯಾ, ಹಾಗಾದ್ರೆ ತಪ್ಪದೇ ಈ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ತೂಕ ಹೆಚ್ಚಲು ಆರೋಗ್ಯ ಸಮಸ್ಯೆಯೂ ಕಾರಣವಿರಬಹುದು.
(1 / 7)
ಇತ್ತೀಚೆಗೆ ತೂಕ ಇಳಿಸಿಕೊಳ್ಳುವುದು ನಿಜಕ್ಕೂ ಸವಾಲು. ಹಲವರು ತಮ್ಮ ತೂಕ ನಿಯಂತ್ರಣಕ್ಕಾಗಿ ಏನೇನೋ ಸರ್ಕಸ್ ಮಾಡುತ್ತಾರೆ. ಕೆಲವರು ಕಡಿಮೆ ತಿನ್ನುತ್ತಾರೆ, ಇನ್ನೂ ಕೆಲವರು ಆರೋಗ್ಯಕರ ಆಹಾರವನ್ನಷ್ಟೇ ಸೇವಿಸುತ್ತಾರೆ. ಕೆಲವರು ನಿರಂತರ ಜಿಮ್‌ನಲ್ಲಿ ಬೆವರಿಸುತ್ತಾರೆ. ಇನ್ನೂ ಕೆಲವರು ವಾಕಿಂಗ್ ಮಾಡುತ್ತಾರೆ. ಇಷ್ಟೆಲ್ಲಾ ಮಾಡಿದ್ರು ತೂಕ ಮಾತ್ರ ಕಡಿಮೆ ಆಗುವ ಬದಲು ಹೆಚ್ಚಾಗುತ್ತಲೇ ಇರುತ್ತದೆ. ಹಾಗಿದ್ರೆ ನೀವು ತಡ ಮಾಡದೇ ಈ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎನ್ನುತ್ತಾರೆ ತಜ್ಞರು. (Unsplash)
(2 / 7)
ಥೈರಾಯ್ಡ್ ಪರೀಕ್ಷೆ: ಮಾನವ ದೇಹದ ಹೆಚ್ಚಿನ ಭಾಗವು ಥೈರಾಯ್ಡ ಗ್ರಂಥಿಯ ಸ್ರವಿಸುವಿಕೆಯನ್ನು ಅವಲಂಬಿಸಿದೆ. ತೂಕ ಹೆಚ್ಚಲು ಪ್ರಮುಖ ಕಾರಣ ಥೈರಾಯ್ಡ್ ಸಮಸ್ಯೆ ಆಗಿರಬಹುದು. ಯಾವುದೇ ವ್ಯಾಯಾಮದಿಂದಲೂ ತೂಕ ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದರೆ ನೀವು ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. (Twitter/WebMD)
(3 / 7)
ಇನ್ಸುಲಿನ್ ಪ್ರತಿರೋಧ ಮತ್ತು ಗ್ಲೂಕೋಸ್ ಸಹಿಷ್ಣುತೆ ಪರೀಕ್ಷೆ: ಇನ್ಸುಲಿನ್ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇನ್ಸುಲಿನ್ ಅಸಮತೋಲನವು ತೂಕ ಹೆಚ್ಚಾಗಲು ಕಾರಣವಾಗಬಹುದು. ಹಾಗಾಗಿ ನೀವು ಶುಗರ್ ಟೆಸ್ಟ್ ಮಾಡಿಸಬೇಕು. (Shutterstock)
(4 / 7)
ಹಾರ್ಮೋನ್ ಪರೀಕ್ಷೆ: ಚಯಾಪಚಯ ಮತ್ತು ಹಸಿವು ಸೇರಿದಂತೆ ವಿವಿಧ ದೈಹಿಕ ಕಾರ್ಯಗಳನ್ನು ನಿಯಂತ್ರಿಸುವಲ್ಲಿ ಹಾರ್ಮೋನುಗಳು ಪ್ರಮುಖ ಪಾತ್ರವಹಿಸುತ್ತವೆ. ಕಾರ್ಟಿಸೋಲ್, ಲೆಪ್ಟಿನ್, ಗ್ರೆಲಿನ್, ಈಸ್ಟ್ರೊಜೆನ್, ಪ್ರೊಜೆಸ್ಟರಾನ್, ಟೆಸ್ಟೋಸ್ಟೆರಾನ್‌ನಂತಹ ಲೈಂಗಿಕ ಹಾರ್ಮೋನುಗಳ ಅಸಮತೋಲನವು ತೂಕ ಹೆಚ್ಚಲು ಕಾರಣವಾಗಬಹುದು. (Shutterstock)
(5 / 7)
ಆಹಾರ ಸೂಕ್ಷ್ಮತೆಯ ಪರೀಕ್ಷೆ: ಎಲ್ಲರಿಗೂ ಎಲ್ಲಾ ಆಹಾರಗಳು ಸಹ್ಯವಾಗುವುದಿಲ್ಲ. ಕೆಲವರು ಆಹಾರ ಅಲರ್ಜಿಯನ್ನು ಹೊಂದಿರುತ್ತಾರೆ. ಕೆಲವು ಆಹಾರಗಳನ್ನು ಸೇವಿಸಿದ ನಂತರ ಕಾರಣವಿಲ್ಲದೆ ತೂಕ ಹೆಚ್ಚುತ್ತಿದ್ದರೆ ಆ ಆಹಾರಗಳು ನಿಮ್ಮ ದೇಹಕ್ಕೆ ಸಹ್ಯವಾಗುತ್ತಿಲ್ಲ ಎಂದರ್ಥ. ಅದನ್ನು ಪರೀಕ್ಷೆಯ ಮೂಲಕ ತಿಳಿದುಕೊಳ್ಳಬಹುದು. (File/AFP)
(6 / 7)
ಕರುಳಿನ ಆರೋಗ್ಯ: ಕರುಳಿನ ಬ್ಯಾಕ್ಟೀರಿಯಾಗಳು ಆಹಾರವನ್ನು ಜೀರ್ಣಿಸಿಕೊಳ್ಳುವಲ್ಲಿ ಪಾತ್ರವಹಿಸುತ್ತವೆ. ಕರುಳಿನ ಬ್ಯಾಕ್ಟೀರಿಯಾಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ತೂಕ ಹೆಚ್ಚಾಗಬಹುದು. ಹಾಗಾಗಿ ಕರುಳಿನ ಆರೋಗ್ಯ ಬಗ್ಗೆ ತಜ್ಞರಿಂದ ಅಭಿಪ್ರಾಯ ಪಡೆಯಿರಿ. (Shutterstock)
ಇತರ ಗ್ಯಾಲರಿಗಳು