Morning workout: ಬೆಲ್ಲಿ ಫ್ಯಾಟ್ ಚಿಂತೆಗಿನ್ನು ಹಾಕಿ ಫುಲ್‌ಸ್ಟಾಪ್; ಹೊಟ್ಟೆಯ ಬೊಜ್ಜು ಕರಗಿಸಲು ಇಲ್ಲಿದೆ ಸರಳ ವ್ಯಾಯಾಮ
- Exercises To Lose Belly Fat: ಆರೋಗ್ಯ ಹಾಗೂ ದೇಹಸಿರಿಯನ್ನು ಕಾಪಾಡಿಕೊಳ್ಳಲು ಬೆಳಗಿನ ವೇಳೆಯಲ್ಲಿ ವ್ಯಾಯಾಮ ಮಾಡುವುದು ಉತ್ತಮ ಅಭ್ಯಾಸ. ಸೂಕ್ತ ಪೋಷಕಾಂಶ ಹೊಂದಿರುವ ಆಹಾರ ಸೇವನೆ, ನೀರು ಕುಡಿಯುವುದರ ಜೊತೆಗೆ ದೇಹದಂಡನೆಯೂ ಮುಖ್ಯ. ಅದರಲ್ಲೂ ಹೊಟ್ಟೆ, ಸೊಂಟದ ಸುತ್ತಲಿನ ಬೊಜ್ಜು ಕರಗಲು ಇದು ಅನಿವಾರ್ಯ.
- Exercises To Lose Belly Fat: ಆರೋಗ್ಯ ಹಾಗೂ ದೇಹಸಿರಿಯನ್ನು ಕಾಪಾಡಿಕೊಳ್ಳಲು ಬೆಳಗಿನ ವೇಳೆಯಲ್ಲಿ ವ್ಯಾಯಾಮ ಮಾಡುವುದು ಉತ್ತಮ ಅಭ್ಯಾಸ. ಸೂಕ್ತ ಪೋಷಕಾಂಶ ಹೊಂದಿರುವ ಆಹಾರ ಸೇವನೆ, ನೀರು ಕುಡಿಯುವುದರ ಜೊತೆಗೆ ದೇಹದಂಡನೆಯೂ ಮುಖ್ಯ. ಅದರಲ್ಲೂ ಹೊಟ್ಟೆ, ಸೊಂಟದ ಸುತ್ತಲಿನ ಬೊಜ್ಜು ಕರಗಲು ಇದು ಅನಿವಾರ್ಯ.
(1 / 8)
ʼಕೋವಿಡ್ ಸಾಂಕ್ರಾಮಿಕದ ಬಳಿಕ ಬೆಲ್ಲಿ ಫ್ಯಾಟ್ ಅಥವಾ ಸೊಂಟ, ಹೊಟ್ಟೆಯ ಸುತ್ತಲಿನ ಬೊಜ್ಜು ಪ್ರತಿಯೊಬ್ಬರನ್ನೂ ಬಿಡದೇ ಕಾಡುವ ಸಮಸ್ಯೆಯಾಗಿದೆ. ಜಡ ಜೀವನಶೈಲಿಯಿಂದ ಇದು ಇತ್ತೀಚೆಗೆ ಎಲ್ಲರಲ್ಲೂ ಸಾಮಾನ್ಯವಾಗಿದೆ. ಅಸಮರ್ಪಕ ಡಯೆಟ್ ಕ್ರಮ, ಜಡಜೀವನ ಶೈಲಿ, ಮಧ್ಯಪಾನ, ಅಸಮರ್ಪಕ ನಿದ್ದೆ ಸೇರಿದಂತೆ ಹಲವು ಅಂಶಗಳು ಇದಕ್ಕೆ ಕಾರಣವಾಗಿದೆ. ಆದರೆ ಈ ಕೆಲವು ಟಿಪ್ಸ್‌ಗಳನ್ನು ಅನುಸರಿಸುವ ಮೂಲಕ ಬೆಲ್ಲಿ ಫ್ಯಾಟ್‌ಗೆ ಬಾಯ್ ಹೇಳಬಹುದುʼ ಎನ್ನುತ್ತಾರೆ ನವದೆಹಲಿಯ ಕ್ಲೌಡ್‌ನೈನ್ ಆಸ್ಪತ್ರೆಯ ಮಹಿಳಾ ಆರೋಗ್ಯ ಫಿಸಿಯೋಥೆರಪಿಸ್ಟ್ ಪ್ರಿಯಾಂಕಾ ಖನ್ನಾ.
(Freepik)(2 / 8)
30 ನಿಮಿಷಗಳ ಕಾರ್ಡಿಯೋ ವ್ಯಾಯಾಮ: ನಿಮ್ಮ ದಿನವನ್ನು 30 ನಿಮಿಷಗಳ ಕಾರ್ಡಿಯೊ ವ್ಯಾಯಾಮಗಳಿಂದ ಆರಂಭಿಸಿ. ಈ ವ್ಯಾಯಾಮವನ್ನು ವಾರದಲ್ಲಿ 5 ದಿನಗಳ ಕಾಲ, ಕನಿಷ್ಠ 30 ನಿಮಿಷ ಕಾಲ ಮಾಡಬೇಕು. ಇದರೊಂದಿಗೆ ಬೊಜ್ಜನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಏರೋಬಿಕ್ ವ್ಯಾಯಾಮದ ಅನುಕರಣೆ ಕೂಡ ಬಹಳ ಮುಖ್ಯ.
(Freepik)(3 / 8)
ಕೋರ್ ಬಲಪಡಿಸುವ ವ್ಯಾಯಾಮಗಳು: ನಿಮ್ಮ ಕಿಬ್ಬೊಟ್ಟೆಯ ಪ್ರದೇಶವನ್ನು ಟೋನ್ ಮಾಡಲು, ಹೊಟ್ಟೆಯ ಸುತ್ತಲಿನ ಬೊಜ್ಜು ಕರಗಿಸಲು ವ್ಯಾಯಾಮ ಮಾಡುವಾಗ ಕೋರ್ (ಸ್ನಾಯುಗಳು) ಬಲಪಡಿಸುವ ವ್ಯಾಯಾಮಗಳನ್ನು ಸೇರಿಸುವುದು ಮುಖ್ಯವಾಗುತ್ತದೆ.
(Freepik)(4 / 8)
ಲೋವರ್ ಬಾಡಿ ವ್ಯಾಯಾಮಗಳು: ಕಾಲುಗಳನ್ನು ಮೇಲಕ್ಕೆ, ಕೆಳಕ್ಕೆ ಮಾಡುವುದು, ಮಲಗಿದ್ದಲ್ಲೇ ಸೈಕಲ್ ಓಡಿಸುವಂತೆ ಕೈ ಕಾಲುಗಳನ್ನು ಚಲಿಸುವುದು, ನಿತಂಬವನ್ನು ಎತ್ತಿ ಮೇಲಕ್ಕೆ ಕೆಳಕ್ಕೆ ಮಾಡುವುದು ಇಂತಹ ವ್ಯಾಯಾಮಗಳನ್ನು ಮಾಡಬೇಕು.
(Freepik)(5 / 8)
ಕಿಬ್ಬೊಟ್ಟೆಯ ಸ್ನಾಯುಗಳ ವ್ಯಾಯಾಮ: ಕೆಲವು ವ್ಯಾಯಾಮಗಳಲ್ಲಿ ಟ್ರಾನ್ಸ್ವರ್ಸಸ್ ಅಬ್ಡೋಮಿನಿಸ್ ಸಕ್ರಿಯಗೊಳಿಸುವಿಕೆಯು ಬೆನ್ನಿನ ಮತ್ತು ಕೋರ್ ಸ್ನಾಯುಗಳನ್ನು ಸ್ಥಿರಗೊಳಿಸುವ ನೈಸರ್ಗಿಕ ಕಾರ್ಸೆಟ್ ಅನ್ನು ಕಡಿಮೆ ಪ್ರಮಾಣದಲ್ಲಿ ರಚಿಸಲು ಸಹಾಯ ಮಾಡುತ್ತದೆ. ಹೊಟ್ಟೆಯನ್ನು ಮೇಲಕ್ಕೆ ಎತ್ತಿ ಉಸಿರನ್ನು ಎಳೆದುಕೊಳ್ಳುವುದು, ಬಿಡುವುದು ಮಾಡುವುದರಿಂದ ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ.
(Freepik)(6 / 8)
ಬೆಲ್ಲಿ ಫ್ಯಾಟ್ ಕರಗಲು ಯೋಗಾಸನ: ಧನುರಾಸನ (ಬಿಲ್ಲು ಭಂಗಿ). ಹೊಟ್ಟೆಯ ಕೊಬ್ಬನ್ನು ಕರಗಿಸಲು ಉತ್ತಮ ಆಸನಗಳಲ್ಲಿ ಇದೂ ಒಂದು.
(Freepik)(7 / 8)
ಹೊಟ್ಟೆಯ ಕೊಬ್ಬನ್ನು ಟೋನ್ ಮಾಡಲು ವ್ಯಾಯಾಮಗಳು: ಕೆಲವು ಬರ್ಪಿಗಳು, ಬೆಟ್ಟ ಹತ್ತುವುದು ಮತ್ತು ರಷ್ಯಾಯನ್ ಟ್ವಿಸ್ಟ್‌ಗಳು ಹೊಟ್ಟೆಯನ್ನು ಟೋನ್ ಮಾಡಲು ಸಹಾಯ ಮಾಡುವ ಇತರ ಕೆಲವು ವ್ಯಾಯಾಮಗಳಾಗಿವೆ.
(Freepik)ಇತರ ಗ್ಯಾಲರಿಗಳು