ಕರುಳಿನ ಶುದ್ಧೀಕರಣ ಆಹಾರಕ್ಕೆ ಹೆಚ್ಚು ಒತ್ತುಕೊಡುತ್ತಾರಂತೆ ಅನನ್ಯಾ ಪಾಂಡೆ; ಬಾಲಿವುಡ್ ನಟಿಯ ಡಯೆಟ್ ಸೀಕ್ರೆಟ್ ಇದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕರುಳಿನ ಶುದ್ಧೀಕರಣ ಆಹಾರಕ್ಕೆ ಹೆಚ್ಚು ಒತ್ತುಕೊಡುತ್ತಾರಂತೆ ಅನನ್ಯಾ ಪಾಂಡೆ; ಬಾಲಿವುಡ್ ನಟಿಯ ಡಯೆಟ್ ಸೀಕ್ರೆಟ್ ಇದು

ಕರುಳಿನ ಶುದ್ಧೀಕರಣ ಆಹಾರಕ್ಕೆ ಹೆಚ್ಚು ಒತ್ತುಕೊಡುತ್ತಾರಂತೆ ಅನನ್ಯಾ ಪಾಂಡೆ; ಬಾಲಿವುಡ್ ನಟಿಯ ಡಯೆಟ್ ಸೀಕ್ರೆಟ್ ಇದು

ಬಾಲಿವುಡ್ ನಟಿ ಅನನ್ಯಾ ಪಾಂಡೆ ತನ್ನ ಚಲನಚಿತ್ರ ಆಯ್ಕೆಗಳಿಂದ ಮಾತ್ರವಲ್ಲದೆ ದೇಹವನ್ನು ಫಿಟ್ ಆಗಿರಿಸಿರುವುದರಿಂದಲೂ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅನನ್ಯಾ ಪಾಂಡೆ ತನ್ನ ಪರಿಪೂರ್ಣ ಆಕಾರಕ್ಕಾಗಿ ಕರುಳಿನ ಶುದ್ಧೀಕರಣ ಆಹಾರಕ್ಕೆ ಹೆಚ್ಚು ಒತ್ತುಕೊಡುತ್ತಾರಂತೆ. ಈ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ.

ಬಾಲಿವುಡ್ ನಟಿ ಅನನ್ಯಾ ಪಾಂಡೆ ತನ್ನ ಚಲನಚಿತ್ರ ಆಯ್ಕೆಗಳಿಂದ ಮಾತ್ರವಲ್ಲದೆ ತನ್ನ ಫಿಟ್ನೆಸ್ ಪ್ರಯಾಣದಿಂದಲೂ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸಾಂಪ್ರದಾಯಿಕ ಉಡುಪಾಗಿರಲಿ, ಮಾಡರ್ನ್ ಅಥವಾ ಬಿಕಿನಿಯನ್ನೇ ಧರಿಸಿರಲಿ ನಟಿಯ ಆಕರ್ಷಕ ಮೈಮಾಟ ನೋಡುಗರ ಕಣ್ಣು ಕುಕ್ಕುವಂತಿದೆ. ಅನನ್ಯಾ ಪಾಂಡೆ ತನ್ನ ದೇಹವನ್ನು ಹೇಗೆ ಫಿಟ್ ಆಗಿರಿಸಿದ್ದಾರೆ ಎಂಬ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.
icon

(1 / 8)

ಅನನ್ಯಾ ಪಾಂಡೆ ಫಿಟ್ನೆಸ್ ರಹಸ್ಯ: 26 ವರ್ಷದ ಅನನ್ಯಾ ಪಾಂಡೆ ತಮ್ಮ ತೂಕ ಹೆಚ್ಚಳವಾಗದಂತೆ ಹೆಚ್ಚು ಮುಂಜಾಗರೂಕತೆ ವಹಿಸುತ್ತಾರೆ. ಡಯೆಟ್ ಬಗ್ಗೆ ಕಾಳಜಿ ವಹಿಸಿದರೂ ಆಕೆ ಪಿಜ್ಜಾ, ಐಸ್‍ಕ್ರೀಂ ತಿನ್ನಲು ಹಿಂದೆ ಮುಂದೆ ನೋಡುವುದಿಲ್ಲ. ಆದರೆ, ಮುಖ್ಯವಾಗಿ ಆಕೆ ಕರುಳಿನ ಶುದ್ಧೀಕರಣ ಆಹಾರವನ್ನು ಸೇವಿಸುತ್ತಾರಂತೆ.
icon

(2 / 8)

(Image Credit: PTI)

ಕಳೆದ ಕೆಲವು ತಿಂಗಳುಗಳಿಂದ ಕರುಳಿನ ಶುದ್ಧೀಕರಣ ಆಹಾರಕ್ರಮವನ್ನು ಅನುಸರಿಸುತ್ತಿದ್ದು, ಇದು ತುಂಬಾ ಆರೋಗ್ಯಕರವಾಗಿದೆ. ಇದು ನನ್ನ ಜೀವನದಲ್ಲಿ ದೊಡ್ಡ ಬದಲಾವಣೆಯನ್ನುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ. ರಾತ್ರಿಯ ಊಟವನ್ನು ಸಂಜೆ 7 ಗಂಟೆಯ ವೇಳೆಗೆ ಮಾಡುತ್ತಾರೆ. ಆ ಬಳಿಕ ಅವರು ಏನನ್ನೂ ತಿನ್ನುವುದಿಲ್ಲ.
icon

(3 / 8)

(Image Credit: SUJIT JAISWAL / AFP)

ವಿಭಿನ್ನ ಆಹಾರಗಳು ತನ್ನ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಹೆಚ್ಚು ಜಾಗರೂಕಳಾಗಿರುವುದಾಗಿ ನಟಿ ತಿಳಿಸಿದ್ದಾರೆ. ಸರಿಹೊಂದದ ಅಥವಾ ನಾಲಿಗೆಗೆ ರುಚಿಯಾಗಿರುವ ಆಹಾರವನ್ನು ತ್ಯಜಿಸಲು ಪ್ರಾರಂಭಿಸಿದ್ದು, ನಿಜವಾಗಿಯೂ ಸಹಾಯ ಮಾಡಿತು ಎಂದು ನಟಿ ವಿವರಿಸಿದ್ದಾರೆ.
icon

(4 / 8)

ಕರುಳಿನ ಶುದ್ಧೀಕರಣ ಆಹಾರ ಎಂದರೇನು?: ಕರುಳಿನ ಶುದ್ಧೀಕರಣಕ್ಕಾಗಿ ದೇಹವು ತನ್ನದೇ ಆದ ವ್ಯವಸ್ಥೆಯನ್ನು ಹೊಂದಿದೆ ಎಂದು ನ್ಯೂಟ್ರಿಷನಿಸ್ಟ್ ನಮಾಮಿ ಅಗರ್ವಾಲ್ ವಿವರಿಸಿದ್ದಾರೆ. ಕರುಳನ್ನು ಆರೋಗ್ಯಕರವಾಗಿಡಲು, ಪ್ರಿಬಯಾಟಿಕ್‌ಗಳನ್ನು ಸೇರಿಸುವುದು ಮತ್ತು ನೈಸರ್ಗಿಕವಾಗಿ ಪ್ರೋಬಯಾಟಿಕ್ ಆಹಾರವನ್ನು ಸೇವಿಸುವುದು ಅತ್ಯಗತ್ಯ. ಸಲಾಡ್, ಹಣ್ಣುಗಳು, ಹುದುಗಿಸಿದ ಆಹಾರಗಳನ್ನು ಸೇವಿಸುವುದರಿಂದ ಹೆಚ್ಚು ನಾರಿನಂಶ ಮತ್ತು ಉತ್ಕರ್ಷಣ ನಿರೋಧಕಗಳನ್ನು ಪಡೆಯಲಾಗುತ್ತದೆ. ಇವು ನಿರ್ವಿಷೀಕರಣಕ್ಕೆ ಸಹಾಯ ಮಾಡುತ್ತವೆ. ಜೊತೆಗೆ ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನೀರು ಕುಡಿಯುವುದರಿಂದ ಕರುಳು ಸ್ವಚ್ಛವಾಗಿರುತ್ತದೆ.
icon

(5 / 8)

ಬಾಳೆಹಣ್ಣು, ಬೆಳ್ಳುಳ್ಳಿ, ಈರುಳ್ಳಿ, ಶತಾವರಿ, ಚಿಕೋರಿ ಬೇರು, ಓಟ್ಸ್, ಸೇಬು, ಲೀಕ್ಸ್, ಮೊಸರು, ಮಿಸೊ ಮತ್ತು ಬಾರ್ಲಿ ಪ್ರಿಬಯಾಟಿಕ್‍ಗಳ ಕೆಲವು ಉತ್ತಮ ಮೂಲಗಳಾಗಿವೆ. ಇವನ್ನು ಸೇವಿಸುವುದರಿಂದಲೂ ಫಿಟ್ನೆಸ್ ಕಾಪಾಡಬಹುದು.
icon

(6 / 8)

(Image Credit: AFP)

ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.
icon

(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ.
icon

(8 / 8)

ಇತರ ಗ್ಯಾಲರಿಗಳು