ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಭಾರತದ ಸೋಲಿಗೆ 5 ಕಾರಣಗಳು
- India vs South Africa: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕಳಪೆ ಪ್ರದರ್ಶನ ನೀಡಿದ ಭಾರತ ತಂಡ, ಎರಡನೇ ಟೆಸ್ಟ್ನಲ್ಲಿ ತನ್ನ ಆಟದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಿದೆ.
- India vs South Africa: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕಳಪೆ ಪ್ರದರ್ಶನ ನೀಡಿದ ಭಾರತ ತಂಡ, ಎರಡನೇ ಟೆಸ್ಟ್ನಲ್ಲಿ ತನ್ನ ಆಟದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಿದೆ.
(1 / 6)
ಸೆಂಚುರಿಯನ್ ಮೈದಾನದಲ್ಲಿ ಭಾರತವು ರಕ್ಷಣಾತ್ಮಕ ಮನೋಭಾವದಿಂದ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಟೀಮ್ ಇಂಡಿಯಾ ಬ್ಯಾಟರ್ಗಳು ಟೆಸ್ಟ್ ಕ್ರಿಕೆಟ್ಗೆ ತಕ್ಕಂತೆ ಆಟದ ತಂತ್ರದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಬೌಂಡರಿ ಬಾರಿಸುವ ಮೂಲಕವೇ ರನ್ ಕಲೆಹಾಕುವ ಪ್ರವೃತ್ತಿಯು ಭಾರತದ ಬ್ಯಾಟರ್ಗಳಿಗೆ ಮುಳುವಾಯ್ತು. ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಅವರಂತಹ ದಿಟ್ಟ ರಕ್ಷಣಾತ್ಮಕ ಆಟಗಾರರ ಕೊರತೆ ತಂಡದಲ್ಲಿ ಎದ್ದು ಕಾಣುತ್ತಿದೆ. ವಿಕೆಟ್ಗಳ ನಡುವೆ ಓಡುತ್ತಾ, ಹರಿಣಗಳ ಬೌಲರ್ಗಳನ್ನು ಕಾಡುವ ಪ್ರಯತ್ನ ಎಲ್ಲೂ ಕಾಣಲಿಲ್ಲ.(AFP)
(2 / 6)
ಯಶಸ್ವಿ ಜಸ್ವಾಲ್, ಶುಭ್ಮನ್ ಗಿಲ್ ಅವರಿಗೆ ದಕ್ಷಿಣ ಆಫ್ರಿಕಾದ ಪಿಚ್ ಮತ್ತು ಪರಿಸರದ ಬಗ್ಗೆ ತಿಳಿದಿಲ್ಲ. ಅವರಲ್ಲಿ ಅನುಭವದ ಕೊರತೆ ಕಾಣಿಸಿತು. ಕಠಿಣ ಪಿಚ್ ಮರ್ಮ ಅರಿಯಲು ಟೀಮ್ ಇಂಡಿಯಾ ತನ್ನದೇ ಆಟಗಾರರೊಂದಿಗೆ ಕೇವಲ ಒಂದು ಅಭ್ಯಾಸ ಪಂದ್ಯ ಮಾತ್ರ ಆಡಿದೆ. ಪಿಚ್ ಬೌನ್ಸ್ಎದುರಿಸಲು ಇಂಟರ್-ಸ್ಕ್ವಾಡ್ ಅಭ್ಯಾಸ ಪಂದ್ಯಗಳು ಸಾಕಾಗುವುದಿಲ್ಲ ಎಂದು ಸುನಿಲ್ ಗವಾಸ್ಕರ್ ಅವರಂಥ ತಜ್ಞರು ಪ್ರತಿಪಾದಿಸಿದ್ದಾರೆ. ಸೆಂಚುರಿಯನ್ ಟೆಸ್ಟ್ನಲ್ಲಿ ಸೋತ ನಂತರ, ನಾಯಕ ರೋಹಿತ್ ಶರ್ಮಾ ಅವರೇ ಖುದ್ದು ಈ ಪರಿಸರಕ್ಕೆ ಹೊಂದಿಕೊಳ್ಳಲು ಮತ್ತು ಕ್ರಿಕೆಟ್ ಆಡಲು ಕಷ್ಟವಾಯ್ತು ಎಂದು ಒಪ್ಪಿಕೊಂಡರು.(PTI)
(3 / 6)
ಸೆಂಚುರಿಯನ್ನಲ್ಲಿ ಟಾಸ್ ಮತ್ತು ಹವಾಮಾನ ಕೂಡಾ ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ ಎನ್ನಬಹುದು. ಪಂದ್ಯದ ಮೊದಲ ದಿನ ಮೋಡ ಕವಿದ ವಾತಾವರಣದಲ್ಲಿ ಭಾರತ ಬ್ಯಾಟಿಂಗ್ ಮಾಡಬೇಕಾಯಿತು. ಪಂದ್ಯದ ಮೂರನೇ ದಿನದ ವಾತಾವರಣ ಅದ್ಭುತವಾಗಿತ್ತು. ಆದ್ದರಿಂದ ದಕ್ಷಿಣ ಆಫ್ರಿಕಾದ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳಿಗೆ ರನ್ ಗಳಿಸಲು ಯಾವುದೇ ತೊಂದರೆಯಾಗಲಿಲ್ಲ. ಮೊದಲ ಇನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ ದೊಡ್ಡ ಮುನ್ನಡೆ ಸಾಧಿಸಿದ್ದು ತಂಡಕ್ಕೆ ಅನುಕೂಲವಾಯ್ತು.(BCCI)
(4 / 6)
ಸೆಂಚುರಿಯನ್ನಲ್ಲಿ ಭಾರತದ ಫೀಲ್ಡಿಂಗ್ನಲ್ಲೂ ಕೆಲವೊಂದು ತಪ್ಪುಗಳಾದವು. ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ ಜೀವದಾನ ಪಡೆದು ತಂಡದ ಇನ್ನಿಂಗ್ಸ್ಗೆ ಅಮೂಲ್ಯ ರನ್ ಸೇರಿಸಿದರು.(AP)
(5 / 6)
ಭಾರತದ ವೇಗಿಗಳು ಸರಿಯಾದ ಲೈನ್-ಲೆಂತ್ನಲ್ಲಿ ಬೌಲಿಂಗ್ ಮಾಡಲು ವಿಫಲರಾದರು. ಟೆಸ್ಟ್ ಕ್ರಿಕೆಟ್ನಲ್ಲಿ ಬ್ಯಾಟ್ಸ್ಮನ್ಗಳಿಗೆ ಗೊಂದಲಕ್ಕೊಳಗಾಗುವಂತೆ ನಿರಂತರವಾಗಿ ಬೌಲಿಂಗ್ನಲ್ಲಿ ಬದಲಾವಣೆ ಮಾಡಬೇಕು. ಪ್ರಸಿದ್ಧ್ ಕೃಷ್ಣ ಮತ್ತು ಶಾರ್ದೂಲ್ ಠಾಕೂರ್ ತಂತ್ರಗಾರಿಕೆಯಲ್ಲಿ ವಿಫಲರಾದರು. ಮುಖ್ಯವಾಗಿ ತಂಡವು ಅನುಭವಿ ಬೌಲರ್ ಮೊಹಮ್ಮದ್ ಶಮಿಯನ್ನು ಮಿಸ್ ಮಾಡಿಕೊಂಡಿತು.(PTI)
ಇತರ ಗ್ಯಾಲರಿಗಳು