Weight Gain Tips: ಎಲ್ಲರೂ ನಿಮ್ಮನ್ನು ಸಣಕಲು ಅನ್ನುತ್ತಾರ, ದೇಹದ ತೂಕ ಹೆಚ್ಚಿಸಿಕೊಳ್ಳಲು ಈ ಸರಳ ವಿಧಾನಗಳನ್ನು ಪಾಲಿಸಿ
- Gain weight tips in Kannada: ದಪ್ಪಗಿರುವವರಿಗೆ ತೆಳ್ಳಗಾಗುವ ಚಿಂತೆ. ತೆಳ್ಳಗಿರುವವರಿಗೆ ದಪ್ಪಗಾಗುವ ಚಿಂತೆ. ಒಟ್ಟಾರೆ ಈ ಜಗತ್ತು ಚಿಂತೆಯ ಸಂತೆ. ನೀವು ತೆಳ್ಳಗಿದ್ದರೆ ಎಷ್ಟು ತಿಂದರೂ ತೂಕ ಹೆಚ್ಚುತ್ತಿಲ್ಲ ಎಂದು ಚಿಂತೆ ಮಾಡುತ್ತಿದ್ದೀರಾ, ಚಿಂತೆ ಬಿಡಿ. ಆಹಾರ ಸೇವನೆಯ ಅತ್ಯುತ್ತಮ ವಿಧಾನಗಳನ್ನು ಪಾಲಿಸುವ ಮೂಲಕ ನೀವು ತೂಕ ಹೆಚ್ಚಿಸಿಕೊಳ್ಳಬಹುದು.

(1 / 5)
ನೀವು ನೋಡಲು ಸಣಕಲು ಇರಬಹುದು. ದಪ್ಪಗಾಗಬೇಕು ಎಂದು ಹೊಟ್ಟೆ ತುಂಬಾ ತಿನ್ನುವಿರಿ. ಆದರೆ, ಎಷ್ಟು ತಿಂದರೂ ದೇಹದ ಗಾತ್ರ ಹಾಗೆಯೇ ಇರುತ್ತದೆ. ಬಹುಶಃ ನಿಮ್ಮ ಆಹಾರಕ್ರಮದಲ್ಲಿ ತಪ್ಪು ಮಾಡುತ್ತಿರುವುದರಿಂದ ನಿಮ್ಮ ತೂಕ ಹೆಚ್ಚಾಗುತ್ತಿಲ್ಲ.
(Freepik)(2 / 5)
ಒಂದೇ ಸಮಯ ಅಧಿಕ ಆಹಾರ ಸೇವನೆ: ಒಂದು ಹೊತ್ತಿನ ಊಟದ ಸಮಯದಲ್ಲಿ ಹೊಟ್ಟೆ ಬಿರಿಯುವಷ್ಟು ತಿನ್ನಬೇಡಿ. ಇದರಿಂದ ಚಯಾಪಚಯ ನಿಧಾನವಾಗುವ ಸಾಧ್ಯತೆಯಿದೆ. ಇದರ ಬದಲು ದಿನಕ್ಕೆ ಮೂರು ನಾಲ್ಕು ಬಾರಿ ಸ್ವಲ್ಪ ಸ್ವಲ್ಪ ತಿನ್ನಿರಿ.
(Freepik)(3 / 5)
ಹೆಚ್ಚು ಕೊಬ್ಬಿನಾಂಶವಿರುವ ಆಹಾರ ಸೇವಿಸಿ. ಆರೋಗ್ಯಕರ ಕೊಬ್ಬಿನಾಂಶ ಇರುವ ಬೀಜಗಳು, ಆಹಾರಗಳು ದೇಹಕ್ಕೆ ಉಪಯುಕ್ತ. ಆಹಾರ ಸೇವಿಸುವುದರ ಜತೆಗೆ ದೈಹಿಕ ಚಟುವಟಿಕೆಗಳ ಕಡೆಗೂ ಗಮನ ನೀಡಿ.
(Freepik)(4 / 5)
ಹಸಿವು ಹೆಚ್ಚಿಸುವ ಆಹಾರ ಸೇವಿಸಿ: ಹಸಿವನ್ನು ಹೆಚ್ಚು ಮಾಡುವಂತಹ ಶುಂಠಿ, ಬೆಳ್ಳುಳ್ಳಿ, ದಾಲ್ಚಿನ್ನಿ, ಮೆಣಸು ಮುಂತಾದ ಮಸಾಲೆಗಳು ಪಿತ್ತರಸ ಸೇರಿದಂತೆ ಅನೇಕ ಕಿಣ್ವಗಳ ಸ್ರವಿಸುವಿಕೆ ಹೆಚ್ಚಿಸುತ್ತದೆ. ಇದಿರಿಂದ ಹಸಿವು ಹೆಚ್ಚುತ್ತದೆ.
(Freepik)ಇತರ ಗ್ಯಾಲರಿಗಳು