Women Health: ಪಿರಿಯಡ್ಸ್ ನೋವಿಗೆ ಮಾತ್ರೆಗಳೇ ಪರಿಹಾರವಲ್ಲ...ಈ ಸಲಹೆಗಳನ್ನು ಪ್ರಯತ್ನಿಸಿ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Women Health: ಪಿರಿಯಡ್ಸ್ ನೋವಿಗೆ ಮಾತ್ರೆಗಳೇ ಪರಿಹಾರವಲ್ಲ...ಈ ಸಲಹೆಗಳನ್ನು ಪ್ರಯತ್ನಿಸಿ ನೋಡಿ

Women Health: ಪಿರಿಯಡ್ಸ್ ನೋವಿಗೆ ಮಾತ್ರೆಗಳೇ ಪರಿಹಾರವಲ್ಲ...ಈ ಸಲಹೆಗಳನ್ನು ಪ್ರಯತ್ನಿಸಿ ನೋಡಿ

ಪಿರಿಯಡ್ಸ್ ಸಮಯದಲ್ಲಿ, ಮಹಿಳೆಯರು ಬೆನ್ನು ನೋವು, ಸೊಂಟ, ಹೊಟ್ಟೆ ನೋವು, ಕಾಲುಗಳ ಎಳೆತ, ವಾಕರಿಕೆ, ತಲೆ ತಿರುಗುವಿಕೆ, ತಲೆ ನೋವು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳನ್ನು ಕಡಿಮೆ ಮಾಡಲು, ನಿಮ್ಮ ಪಿರಿಯಡ್ಸ್ ಸಮಯದಲ್ಲಿ ಸೆಳೆತ ಬರದಂತೆ ತಡೆಯಲು ಯೋಗ ಮಾಡಬೇಕು ಎನ್ನುತ್ತಾರೆ ತಜ್ಞರು. ಕೆಲವು ಯೋಗಾಸನಗಳು ನಿಮ್ಮ ನೋವು ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ನಿಮಗೂ ಕೂಡಾ ಈ ಸಮಸ್ಯೆ ಇದ್ದರೆ ಈ ಸಲಹೆಗಳನ್ನು ಅನುಸರಿಸಿ.

ಕೆಲವು ಮಹಿಳೆಯರು ತಮ್ಮ ಮಾಸಿಕ ಅವಧಿಯಲ್ಲಿ ಮುಟ್ಟಿನ ಸೆಳೆತವನ್ನು ಅನುಭವಿಸುತ್ತಾರೆ. ಗರ್ಭಾಶಯವು ಎಂಡೊಮೆಟ್ರಿಯಮ್ ಅನ್ನು ಹೊರ ಹಾಕಲು ಸಂಕುಚಿತಗೊಂಡಾಗ ಇದು ಸಂಭವಿಸುತ್ತದೆ. ಆದರೆ ಮುಟ್ಟಿನ ಸೆಳೆತವು ನೋವಿನಿಂದ ಕೂಡಿರುತ್ತದೆ. ಈ ಸಮಯದಲ್ಲಿ ಕೆಲವರಿಗೆ ಲಘುವಾಗಿ ನೋವು ಕಾಣಿಸಿಕೊಂಡರೆ, ಇನ್ನೂ ಕೆಲವರು ಬಹಳ ಕಷ್ಟಪಡುತ್ತಾರೆ, ಈ ನೋವನ್ನು ಕಡಿಮೆ ಮಾಡಿಕೊಳ್ಳಲು ಬಹುತೇಕ ಮಹಿಳೆಯರು ಮಾತ್ರೆ ಸೇವಿಸುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಸಮಸ್ಯೆ ಉಂಟು ಮಾಡಬಹುದು. ಆದರೆ ಮೊದಲ ದಿನ ಹೊರತುಪಡಿಸಿ ನೀವು ಎರಡನೇ ದಿನದಿಂದ ಇಲ್ಲಿ ತಿಳಿಸಿರುವ ಕೆಲವೊಂದು ವ್ಯಾಯಾಮಗಳನ್ನು ಮಾಡಿದರೆ ಖಂಡಿತ ಸಮಸ್ಯೆ ಅರ್ಧದಷ್ಟು ಕಡಿಮೆ ಆಗುತ್ತದೆ.
icon

(1 / 7)

ಕೆಲವು ಮಹಿಳೆಯರು ತಮ್ಮ ಮಾಸಿಕ ಅವಧಿಯಲ್ಲಿ ಮುಟ್ಟಿನ ಸೆಳೆತವನ್ನು ಅನುಭವಿಸುತ್ತಾರೆ. ಗರ್ಭಾಶಯವು ಎಂಡೊಮೆಟ್ರಿಯಮ್ ಅನ್ನು ಹೊರ ಹಾಕಲು ಸಂಕುಚಿತಗೊಂಡಾಗ ಇದು ಸಂಭವಿಸುತ್ತದೆ. ಆದರೆ ಮುಟ್ಟಿನ ಸೆಳೆತವು ನೋವಿನಿಂದ ಕೂಡಿರುತ್ತದೆ. ಈ ಸಮಯದಲ್ಲಿ ಕೆಲವರಿಗೆ ಲಘುವಾಗಿ ನೋವು ಕಾಣಿಸಿಕೊಂಡರೆ, ಇನ್ನೂ ಕೆಲವರು ಬಹಳ ಕಷ್ಟಪಡುತ್ತಾರೆ, ಈ ನೋವನ್ನು ಕಡಿಮೆ ಮಾಡಿಕೊಳ್ಳಲು ಬಹುತೇಕ ಮಹಿಳೆಯರು ಮಾತ್ರೆ ಸೇವಿಸುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಸಮಸ್ಯೆ ಉಂಟು ಮಾಡಬಹುದು. ಆದರೆ ಮೊದಲ ದಿನ ಹೊರತುಪಡಿಸಿ ನೀವು ಎರಡನೇ ದಿನದಿಂದ ಇಲ್ಲಿ ತಿಳಿಸಿರುವ ಕೆಲವೊಂದು ವ್ಯಾಯಾಮಗಳನ್ನು ಮಾಡಿದರೆ ಖಂಡಿತ ಸಮಸ್ಯೆ ಅರ್ಧದಷ್ಟು ಕಡಿಮೆ ಆಗುತ್ತದೆ.(cottonbro)

ಬಾಲಾಸನ: ಚಾಪೆಯ ಮೇಲೆ ಮಂಡಿಯೂರಿ. ನಿಮ್ಮ ತೋಳುಗಳನ್ನು ಮುಂದಕ್ಕೆ ಬಗ್ಗಿಸಿ ಮತ್ತು ನಿಮ್ಮ ತಲೆಯನ್ನು ನೆಲಕ್ಕೆ ಮುಟ್ಟಿಸಿ. 7-8 ಬಾರಿ ಇದೇ ಆಸನವನ್ನು ಮುಂದುವರೆಸಿ. ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ.
icon

(2 / 7)

ಬಾಲಾಸನ: ಚಾಪೆಯ ಮೇಲೆ ಮಂಡಿಯೂರಿ. ನಿಮ್ಮ ತೋಳುಗಳನ್ನು ಮುಂದಕ್ಕೆ ಬಗ್ಗಿಸಿ ಮತ್ತು ನಿಮ್ಮ ತಲೆಯನ್ನು ನೆಲಕ್ಕೆ ಮುಟ್ಟಿಸಿ. 7-8 ಬಾರಿ ಇದೇ ಆಸನವನ್ನು ಮುಂದುವರೆಸಿ. ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ.(Instagram/mindfulbyminna)

ವಜ್ರಾಸನ: ವಾಸ್ತವವಾಗಿ ಈ ಆಸನವನ್ನು ನೀವು ಕೂಡಲೇ ಮಾಡಬೇಕು. ನಿಮ್ಮ ಕಾಲುಗಳನ್ನು ಹಿಂದಕ್ಕೆ ಮಡಚಿ, ನಿಮ್ಮ ಎರಡೂ ಹಿಮ್ಮಡಿಗಳನ್ನು ಒಟ್ಟಿಗೆ ಇರಿಸಿ. ನಿಮ್ಮ ಅಂಗೈಗಳನ್ನು ನಿಮ್ಮ ಮೊಣಕಾಲುಗಳ ಮೇಲೆ ಇರಿಸಿ ಮತ್ತು ನಿಮ್ಮ ಬೆನ್ನನ್ನು ನೇರವಾಗಿ ಇರಿಸಿ. ಸಾಧ್ಯವಾದಷ್ಟು ಸಮಯ ಈ ಆಸನದಲ್ಲಿ ಸ್ವಲ್ಪ ಸಮಯ ಇರಿ.
icon

(3 / 7)

ವಜ್ರಾಸನ: ವಾಸ್ತವವಾಗಿ ಈ ಆಸನವನ್ನು ನೀವು ಕೂಡಲೇ ಮಾಡಬೇಕು. ನಿಮ್ಮ ಕಾಲುಗಳನ್ನು ಹಿಂದಕ್ಕೆ ಮಡಚಿ, ನಿಮ್ಮ ಎರಡೂ ಹಿಮ್ಮಡಿಗಳನ್ನು ಒಟ್ಟಿಗೆ ಇರಿಸಿ. ನಿಮ್ಮ ಅಂಗೈಗಳನ್ನು ನಿಮ್ಮ ಮೊಣಕಾಲುಗಳ ಮೇಲೆ ಇರಿಸಿ ಮತ್ತು ನಿಮ್ಮ ಬೆನ್ನನ್ನು ನೇರವಾಗಿ ಇರಿಸಿ. ಸಾಧ್ಯವಾದಷ್ಟು ಸಮಯ ಈ ಆಸನದಲ್ಲಿ ಸ್ವಲ್ಪ ಸಮಯ ಇರಿ.(Photo by Tim Chow on Unsplash)

ಬದ್ಧ ಕೋನಾಸನ: ನಿಮ್ಮ ಕಾಲುಗಳನ್ನು ಮಡಚಿ, ಎರಡೂ ಪಾದಗಳ ಅಡಿ ಭಾಗವನ್ನು ಒಟ್ಟಿಗೆ ತನ್ನಿ. ದೇಹವನ್ನು ಮುಂದಕ್ಕೆ ಬಾಗಿಸಿ ಸಾಧ್ಯವಾದರೆ ನಿಮ್ಮ ಹಣೆಯನ್ನು ನೆಲಕ್ಕೆ ತಾಗಿಸಿ.
icon

(4 / 7)

ಬದ್ಧ ಕೋನಾಸನ: ನಿಮ್ಮ ಕಾಲುಗಳನ್ನು ಮಡಚಿ, ಎರಡೂ ಪಾದಗಳ ಅಡಿ ಭಾಗವನ್ನು ಒಟ್ಟಿಗೆ ತನ್ನಿ. ದೇಹವನ್ನು ಮುಂದಕ್ಕೆ ಬಾಗಿಸಿ ಸಾಧ್ಯವಾದರೆ ನಿಮ್ಮ ಹಣೆಯನ್ನು ನೆಲಕ್ಕೆ ತಾಗಿಸಿ.(Instagram/indirajoga)

ದಂಡಾಸನ: ನೆಲದ ಮೇಲೆ ಕುಳಿತು ಸುಖಾಸನದಿಂದ ಪ್ರಾರಂಭಿಸಿ. ನಿಮ್ಮ ಬೆನ್ನನ್ನು ನೇರವಾಗಿ ಇರಿಸಿ, ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ. ನಿಮ್ಮ ಕಾಲುಗಳು ಪರಸ್ಪರ ಸಮಾನಾಂತರವಾಗಿರಬೇಕು. ನಿಮ್ಮ ಸೊಂಟ ಮತ್ತು ತೊಡೆಯ ಸ್ನಾಯುಗಳನ್ನು ಬಿಗಿಗೊಳಿಸಿ. ನಿಮ್ಮ ಅಂಗೈಗಳನ್ನು ನಿಮ್ಮ ಸೊಂಟದ ಪಕ್ಕದಲ್ಲಿ ನೆಲದ ಮೇಲೆ ಇರಿಸಿ. ಇದು ನಿಮ್ಮ ಬೆನ್ನುಮೂಳೆಯನ್ನು ಬಿಗಿಗೊಳಿಸುತ್ತದೆ. ಅಲ್ಲದೆ ನಿಮ್ಮ ಭುಜಗಳನ್ನು ಸಡಿಲಗೊಳಿಸುತ್ತದೆ. ಸ್ವಲ್ಪ ಹೊತ್ತು ಇದೇ ಆಸನದಲ್ಲಿ ಇರಿ.
icon

(5 / 7)

ದಂಡಾಸನ: ನೆಲದ ಮೇಲೆ ಕುಳಿತು ಸುಖಾಸನದಿಂದ ಪ್ರಾರಂಭಿಸಿ. ನಿಮ್ಮ ಬೆನ್ನನ್ನು ನೇರವಾಗಿ ಇರಿಸಿ, ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ. ನಿಮ್ಮ ಕಾಲುಗಳು ಪರಸ್ಪರ ಸಮಾನಾಂತರವಾಗಿರಬೇಕು. ನಿಮ್ಮ ಸೊಂಟ ಮತ್ತು ತೊಡೆಯ ಸ್ನಾಯುಗಳನ್ನು ಬಿಗಿಗೊಳಿಸಿ. ನಿಮ್ಮ ಅಂಗೈಗಳನ್ನು ನಿಮ್ಮ ಸೊಂಟದ ಪಕ್ಕದಲ್ಲಿ ನೆಲದ ಮೇಲೆ ಇರಿಸಿ. ಇದು ನಿಮ್ಮ ಬೆನ್ನುಮೂಳೆಯನ್ನು ಬಿಗಿಗೊಳಿಸುತ್ತದೆ. ಅಲ್ಲದೆ ನಿಮ್ಮ ಭುಜಗಳನ್ನು ಸಡಿಲಗೊಳಿಸುತ್ತದೆ. ಸ್ವಲ್ಪ ಹೊತ್ತು ಇದೇ ಆಸನದಲ್ಲಿ ಇರಿ.(Twitter/UKIYENGARYOGA)

ಪಶ್ಚಿಮೋತ್ತಾಸನ: ನಿಮ್ಮ ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ, ನಿಮ್ಮ ಕೈಗಳನ್ನು ಮೇಲಕ್ಕೆ ಎತ್ತಿ ನಿಮ್ಮ ಬೆನ್ನುಮೂಳೆಯನ್ನು ನೇರವಾಗಿ ಇರಿಸಿ, ಉಸಿರಾಡಿ. ನಂತರ ಮುಂದಕ್ಕೆ ಬಾಗಿ ಮತ್ತು ನಿಮ್ಮ ಬೆರಳುಗಳಿಂದ ನಿಮ್ಮ ಹೆಬ್ಬೆರಳುಗಳನ್ನು ಮುಟ್ಟಿ. ನಿಮ್ಮ ಮುಖವನ್ನು ಮೊಣಕಾಲುಗಳ ಮಧ್ಯೆ ಇಡಲು ಪ್ರಯತ್ನಿಸಿ. ಸ್ವಲ್ಪ ಸಮಯ ಇದೇ ಆಸನದಲ್ಲಿರಿ.
icon

(6 / 7)

ಪಶ್ಚಿಮೋತ್ತಾಸನ: ನಿಮ್ಮ ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ, ನಿಮ್ಮ ಕೈಗಳನ್ನು ಮೇಲಕ್ಕೆ ಎತ್ತಿ ನಿಮ್ಮ ಬೆನ್ನುಮೂಳೆಯನ್ನು ನೇರವಾಗಿ ಇರಿಸಿ, ಉಸಿರಾಡಿ. ನಂತರ ಮುಂದಕ್ಕೆ ಬಾಗಿ ಮತ್ತು ನಿಮ್ಮ ಬೆರಳುಗಳಿಂದ ನಿಮ್ಮ ಹೆಬ್ಬೆರಳುಗಳನ್ನು ಮುಟ್ಟಿ. ನಿಮ್ಮ ಮುಖವನ್ನು ಮೊಣಕಾಲುಗಳ ಮಧ್ಯೆ ಇಡಲು ಪ್ರಯತ್ನಿಸಿ. ಸ್ವಲ್ಪ ಸಮಯ ಇದೇ ಆಸನದಲ್ಲಿರಿ.(Pexels)

ನಿಮ್ಮ ಋತುಚಕ್ರದ ಸಮಯದಲ್ಲಿ ನೋವು, ಸೆಳೆತದಿಂದ ಪರಿಹಾರ ಪಡೆಯಲು ಈ ಆಸನಗಳು ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ. ಒತ್ತಡಕ್ಕೆ ಕೂಡಾ ಇದು ಪರಿಣಾಮಕಾರಿಯಾಗಿದೆ. ಹೆಚ್ಚು ಹೊತ್ತು ಈ ಆಸನಗಳನ್ನು ಮಾಡಲು ಆಗದೆ ಇರಬಹುದು. ಆದರೆ ನೋವಿನಿಂದ ಒಂದೇ ಸಮಯ ಮಲಗುವುದು, ಮಾತ್ರೆ ಸೇವಿಸುವುದರ ಬದಲಿಗೆ ಈ ಆಸನಗಳನ್ನು ಸ್ವಲ್ಪ ಮಟ್ಟಿಗೆ ಮಾಡಲು ಪ್ರಯತ್ನಿಸಿ.
icon

(7 / 7)

ನಿಮ್ಮ ಋತುಚಕ್ರದ ಸಮಯದಲ್ಲಿ ನೋವು, ಸೆಳೆತದಿಂದ ಪರಿಹಾರ ಪಡೆಯಲು ಈ ಆಸನಗಳು ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ. ಒತ್ತಡಕ್ಕೆ ಕೂಡಾ ಇದು ಪರಿಣಾಮಕಾರಿಯಾಗಿದೆ. ಹೆಚ್ಚು ಹೊತ್ತು ಈ ಆಸನಗಳನ್ನು ಮಾಡಲು ಆಗದೆ ಇರಬಹುದು. ಆದರೆ ನೋವಿನಿಂದ ಒಂದೇ ಸಮಯ ಮಲಗುವುದು, ಮಾತ್ರೆ ಸೇವಿಸುವುದರ ಬದಲಿಗೆ ಈ ಆಸನಗಳನ್ನು ಸ್ವಲ್ಪ ಮಟ್ಟಿಗೆ ಮಾಡಲು ಪ್ರಯತ್ನಿಸಿ.(PC: Freepik.com)


ಇತರ ಗ್ಯಾಲರಿಗಳು