Workout Tips: ವ್ಯಾಯಾಮ ಮಾಡುವಾಗ ಈ ಸಲಹೆಗಳನ್ನು ಪಾಲಿಸಿ; ನಿಮ್ಮ ಸ್ನಾಯುಗಳು ಸುರಕ್ಷಿತವಾಗಿರುತ್ತವೆ
- Workout Tips : ಬೆಳಗ್ಗೆ ಅಥವಾ ಸಂಜೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬಾರದು, ವಾರದಲ್ಲಿ ಒಂದು ದಿನವಾದರೂ ದೇಹಕ್ಕೆ ವಿಶ್ರಾಂತಿ ನೀಡಬೇಕು ಎನ್ನುತ್ತಾರೆ ತಜ್ಞರು. ವ್ಯಾಯಾಮದ ಸಮಯದಲ್ಲಿ ಸ್ನಾಯುಗಳು ಆಯಾಸಗೊಳ್ಳುವಂತಹ ಸಮಸ್ಯೆಯಿಂದ ತಪ್ಪಿಸಲು ಕೆಲವು ಸಲಹೆಗಳನ್ನು ಅನುಸರಿಸಬೇಕು ಎಂದು ಹೇಳಲಾಗುತ್ತದೆ.

(1 / 6)
ವ್ಯಾಯಾಮ ಮಾಡುವಾಗ ಕೆಲವೊಂದು ಅವಘಡಗಳು ಸಂಭವಿಸಬಹುದು. ಆದರೂ, ದೈನಂದಿನ ಫಿಟ್ನೆಸ್ ದಿನಚರಿಯನ್ನು ಅನುಸರಿಸುವುದು ಮುಖ್ಯವಾಗಿದೆ. ಆದರೆ ಈ ಸಮಯದಲ್ಲಿ ಕೆಲ ಸಮಸ್ಯೆಗಳನ್ನು ತಪ್ಪಿಸಲು ಕೆಲವು ಮೂಲಭೂತ ನಿಯಮಗಳನ್ನು ಪಾಲಿಸುವುದು ಅಷ್ಟೇ ಮುಖ್ಯ. ನಿಮ್ಮ ಸ್ನಾಯುಗಳು ಮತ್ತು ಕೀಲುಗಳಿಗೆ ಸಾಕಷ್ಟು ವಿಶ್ರಾಂತಿ ನೀಡದಿದ್ದರೆ, ಅವು ಸಮಸ್ಯೆಗಳಿಗೆ ಗುರಿಯಾಗುತ್ತವೆ. ಇದು ಆರೋಗ್ಯಕ್ಕೆ ಮಾರಕವಾಗಬಹುದು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಈ ಸಮಸ್ಯೆಗಳನ್ನು ತಪ್ಪಿಸಲು ಏನು ಮಾಡಬೇಕು ಎಂದು ಈಗ ತಿಳಿಯೋಣ.(Unsplash)
(2 / 6)
ವರ್ಕೌಟ್ ಮಾಡುವುದಕ್ಕಿಂತ ಮೊದಲು, ಕನಿಷ್ಠ 10ರಿಂದ 12 ನಿಮಿಷಗಳ ಕಾಲ ದೇಹವನ್ನು ವಾರ್ಮ್ ಅಪ್ ಮಾಡಬೇಕು. ಇದರಿಂದ ನಿಮ್ಮ ದೇಹ ಮತ್ತು ಸ್ನಾಯುಗಳು ಮುಕ್ತವಾಗುತ್ತವೆ.(Unsplash)
(3 / 6)
ಪ್ರತಿದಿನ ಒಂದೇ ರೀತಿಯ ಫಿಟ್‌ನೆಸ್ ದಿನಚರಿಯನ್ನು ಅನುಸರಿಸುವುದನ್ನು ತಪ್ಪಿಸಿ. ಇವತ್ತು ಸೈಕ್ಲಿಂಗ್ ಮಾಡಿದರೆ, ನಾಳೆ ಬೇರೆ ವ್ಯಾಯಾಮ ಮಾಡಿ.(Unsplash)
(4 / 6)
ವ್ಯಾಯಾಮವನ್ನು ಪ್ರಾರಂಭಿಸುವ ಕನಿಷ್ಠ ಹದಿನೈದು ನಿಮಿಷಗಳ ಮೊದಲು ಹಣ್ಣುಗಳನ್ನು ತಿನ್ನುವುದು ಉತ್ತಮ.(Unsplash)
(5 / 6)
ಸಂಪೂರ್ಣ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬೇಡಿ. ಇದು ನಿಮ್ಮ ದೇಹವನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ ನಿಮ್ಮನ್ನು ಅಸ್ವಸ್ಥಗೊಳಿಸುತ್ತದೆ.(Unsplash)
ಇತರ ಗ್ಯಾಲರಿಗಳು