food and eye: ಈ ಆಹಾರ ಪದ್ಧತಿಗಳು ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು; ಎಚ್ಚರವಿರಲಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Food And Eye: ಈ ಆಹಾರ ಪದ್ಧತಿಗಳು ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು; ಎಚ್ಚರವಿರಲಿ

food and eye: ಈ ಆಹಾರ ಪದ್ಧತಿಗಳು ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು; ಎಚ್ಚರವಿರಲಿ

ಹಣ್ಣು-ತರಕಾರಿಗಳು, ಧಾನ್ಯಗಳು, ಲೀನ್‌ ಪ್ರೊಟೀನ್ ಮತ್ತು ಆರೋಗ್ಯಕರ ಕೊಬ್ಬುಗಳು ಸೇರಿದಂತೆ ಸಮತೋಲಿತ ಆಹಾರವು ಉತ್ತಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಖ್ಯವಾಗಿದೆ.

ನಾವು ಸೇವಿಸುವ ಆಹಾರ ಪದಾರ್ಥಗಳು ದೇಹಕ್ಕೆ ಮಾತ್ರವಲ್ಲ ಕಣ್ಣಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ. ಕಣ್ಣಿನ ಆರೋಗ್ಯಕ್ಕೆ ಉತ್ತಮ ಎನ್ನಿಸುವ ಹಲವು ಬಗೆಯ ಆಹಾರ ಪದಾರ್ಥಗಳಿವೆ. ಇವು ಕಣ್ಣಿನ ಆರೋಗ್ಯವನ್ನು ಸುಧಾರಿಸುವ ಜೊತೆಗೆ ದೃಷ್ಟಿಯನ್ನೂ ಚುರುಕಾಗಿಸುತ್ತವೆ. ಆದರೆ ಕೆಲವೊಮ್ಮೆ ನಾವು ಸೇವಿಸುವ ಆಹಾರಗಳು ಕಣ್ಣಿಗೆ ಆರೋಗ್ಯವನ್ನು ಕೆಡಿಸಬಹುದು. ಅಲ್ಲದೆ ಅಪಾಯವನ್ನೂ ಹೆಚ್ಚಿಸಬಹುದು. ಕಣ್ಣಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಆಹಾರ ಪದ್ಧತಿಗಳು ಹೀಗಿವೆ ನೋಡಿ. 
icon

(1 / 7)

ನಾವು ಸೇವಿಸುವ ಆಹಾರ ಪದಾರ್ಥಗಳು ದೇಹಕ್ಕೆ ಮಾತ್ರವಲ್ಲ ಕಣ್ಣಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ. ಕಣ್ಣಿನ ಆರೋಗ್ಯಕ್ಕೆ ಉತ್ತಮ ಎನ್ನಿಸುವ ಹಲವು ಬಗೆಯ ಆಹಾರ ಪದಾರ್ಥಗಳಿವೆ. ಇವು ಕಣ್ಣಿನ ಆರೋಗ್ಯವನ್ನು ಸುಧಾರಿಸುವ ಜೊತೆಗೆ ದೃಷ್ಟಿಯನ್ನೂ ಚುರುಕಾಗಿಸುತ್ತವೆ. ಆದರೆ ಕೆಲವೊಮ್ಮೆ ನಾವು ಸೇವಿಸುವ ಆಹಾರಗಳು ಕಣ್ಣಿಗೆ ಆರೋಗ್ಯವನ್ನು ಕೆಡಿಸಬಹುದು. ಅಲ್ಲದೆ ಅಪಾಯವನ್ನೂ ಹೆಚ್ಚಿಸಬಹುದು. ಕಣ್ಣಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಆಹಾರ ಪದ್ಧತಿಗಳು ಹೀಗಿವೆ ನೋಡಿ. 

ಟ್ರಾನ್ಸ್ ಕೊಬ್ಬುಗಳು: ಕರಿದ ಆಹಾರಗಳು, ಸಂಸ್ಕರಿಸಿದ ತಿಂಡಿಗಳಲ್ಲಿ ಕಂಡುಬರುವ ಟ್ರಾನ್ಸ್ ಕೊಬ್ಬುಗಳು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ (AMD) ಅಪಾಯವನ್ನು ಹೆಚ್ಚಿಸಬಹುದು, ಇದು ದೃಷ್ಟಿ ನಷ್ಟಕ್ಕೂ ಕಾರಣವಾಗಬಹುದು.
icon

(2 / 7)

ಟ್ರಾನ್ಸ್ ಕೊಬ್ಬುಗಳು: ಕರಿದ ಆಹಾರಗಳು, ಸಂಸ್ಕರಿಸಿದ ತಿಂಡಿಗಳಲ್ಲಿ ಕಂಡುಬರುವ ಟ್ರಾನ್ಸ್ ಕೊಬ್ಬುಗಳು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ (AMD) ಅಪಾಯವನ್ನು ಹೆಚ್ಚಿಸಬಹುದು, ಇದು ದೃಷ್ಟಿ ನಷ್ಟಕ್ಕೂ ಕಾರಣವಾಗಬಹುದು.(Unsplash)

ಉಪ್ಪು: ಉಪ್ಪಿನಂಶ ಅಧಿಕವಾಗಿರುವ ಆಹಾರವು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದು ಗ್ಲುಕೋಮಾಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ.
icon

(3 / 7)

ಉಪ್ಪು: ಉಪ್ಪಿನಂಶ ಅಧಿಕವಾಗಿರುವ ಆಹಾರವು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದು ಗ್ಲುಕೋಮಾಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ.(Pinterest)

ಹಣ್ಣುಗಳು ಮತ್ತು ತರಕಾರಿಗಳ ಕೊರತೆ: ಹಣ್ಣು, ತರಕಾರಿಗಳ ಸೇವನೆಯ ಕೊರತೆ ಇರುವವರಲ್ಲಿ ವಿಟಮಿನ್‌ ಸಿ, ವಿಟಮಿನ್‌ ಇ ಹಾಗೂ ಬೀಟಾ ಕ್ಯಾರೊಟಿನ್‌ ಸೇರಿದಂತೆ ಕಣ್ಣಿನ ಆರೋಗ್ಯಕ್ಕೆ ಪ್ರಮುಖವಾದ ಜೀವಸತ್ವಗಳು ಮತ್ತು ಪೋಷಕಾಂಶಗಳ ಕೊರತೆಗೆ ಕಾರಣವಾಗಬಹುದು.
icon

(4 / 7)

ಹಣ್ಣುಗಳು ಮತ್ತು ತರಕಾರಿಗಳ ಕೊರತೆ: ಹಣ್ಣು, ತರಕಾರಿಗಳ ಸೇವನೆಯ ಕೊರತೆ ಇರುವವರಲ್ಲಿ ವಿಟಮಿನ್‌ ಸಿ, ವಿಟಮಿನ್‌ ಇ ಹಾಗೂ ಬೀಟಾ ಕ್ಯಾರೊಟಿನ್‌ ಸೇರಿದಂತೆ ಕಣ್ಣಿನ ಆರೋಗ್ಯಕ್ಕೆ ಪ್ರಮುಖವಾದ ಜೀವಸತ್ವಗಳು ಮತ್ತು ಪೋಷಕಾಂಶಗಳ ಕೊರತೆಗೆ ಕಾರಣವಾಗಬಹುದು.(Pixabay)

ಅತಿಯಾದ ಆಲ್ಕೋಹಾಲ್ ಸೇವನೆ: ಅತಿಯಾದ ಮದ್ಯಪಾನ ಸೇವನೆಯು ದೃಷ್ಟಿ ಚುರುಕಾಗಲು ಅಗತ್ಯವಾದ ವಿಟಮಿನ್ ಎ ಕೊರತೆ ಸೇರಿದಂತೆ ಪೌಷ್ಟಿಕಾಂಶದ ಕೊರತೆಗಳಿಗೆ ಕಾರಣವಾಗಬಹುದು.
icon

(5 / 7)

ಅತಿಯಾದ ಆಲ್ಕೋಹಾಲ್ ಸೇವನೆ: ಅತಿಯಾದ ಮದ್ಯಪಾನ ಸೇವನೆಯು ದೃಷ್ಟಿ ಚುರುಕಾಗಲು ಅಗತ್ಯವಾದ ವಿಟಮಿನ್ ಎ ಕೊರತೆ ಸೇರಿದಂತೆ ಪೌಷ್ಟಿಕಾಂಶದ ಕೊರತೆಗಳಿಗೆ ಕಾರಣವಾಗಬಹುದು.(File Photo)

ಸಿಹಿ ಮತ್ತು ಸಂಸ್ಕರಿಸಿದ ಆಹಾರಗಳು: ಸಿಹಿ ಮತ್ತು ಸಂಸ್ಕರಿಸಿದ ಆಹಾರಗಳಲ್ಲಿ ಹೆಚ್ಚಿನ ಆಹಾರವು ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತದೆ. ಇದು ಡಯಾಬಿಟಿಕ್‌ ರೆಟಿನೋಪತಿಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಇದರಿಂದ ಕುರುಡುತನ ಉಂಟಾಗುವ ಸಾಧ್ಯತೆ ಇದೆ. 
icon

(6 / 7)

ಸಿಹಿ ಮತ್ತು ಸಂಸ್ಕರಿಸಿದ ಆಹಾರಗಳು: ಸಿಹಿ ಮತ್ತು ಸಂಸ್ಕರಿಸಿದ ಆಹಾರಗಳಲ್ಲಿ ಹೆಚ್ಚಿನ ಆಹಾರವು ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತದೆ. ಇದು ಡಯಾಬಿಟಿಕ್‌ ರೆಟಿನೋಪತಿಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಇದರಿಂದ ಕುರುಡುತನ ಉಂಟಾಗುವ ಸಾಧ್ಯತೆ ಇದೆ. (Unsplash)

ಕೆಫೀನ್: ಹೆಚ್ಚು ಕೆಫೀನ್ ಕಣ್ಣಿನ ಒತ್ತಡವನ್ನು ಹೆಚ್ಚಿಸುತ್ತದೆ, ಇದು ಗ್ಲುಕೋಮಾಗೆ ಕಾರಣವಾಗಬಹುದು.
icon

(7 / 7)

ಕೆಫೀನ್: ಹೆಚ್ಚು ಕೆಫೀನ್ ಕಣ್ಣಿನ ಒತ್ತಡವನ್ನು ಹೆಚ್ಚಿಸುತ್ತದೆ, ಇದು ಗ್ಲುಕೋಮಾಗೆ ಕಾರಣವಾಗಬಹುದು.(Unsplash)


ಇತರ ಗ್ಯಾಲರಿಗಳು