ಕ್ಯಾರೆಟ್ ಉಪ್ಪಿನಕಾಯಿಯಿಂದ ಹಲ್ವಾದವರೆಗೆ: ಚಳಿಗಾಲದಲ್ಲಿ ತಿನ್ನಲೇಬೇಕಾದ 7 ವಿಧದ ಕ್ಯಾರೆಟ್ ಖಾದ್ಯಗಳಿವು
ಚಳಿಗಾಲದ ತಿಂಗಳು ಈ ಋತುವಿನ ಹಣ್ಣು, ತರಕಾರಿಗಳನ್ನು ತಿನ್ನಲು ಅತ್ಯುತ್ತಮ ಸಮಯ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕ್ಯಾರೆಟ್ ತಿನ್ನುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಕ್ಯಾರೆಟ್ ಉಪ್ಪಿನಕಾಯಿಯಿಂದ ಹಲ್ವಾದವರೆಗೆ ರುಚಿಕರವಾದ ಭಕ್ಷ್ಯ ತಯಾರಿಸಬಹುದು. ಇಲ್ಲಿದೆ ಕ್ಯಾರೆಟ್‍ನಿಂದ ಮಾಡಿದ 7 ಬಗೆಯ ಭಕ್ಷ್ಯಗಳು.
(1 / 9)
ಮಕರ ಸಂಕ್ರಾಂತಿ ಬಳಿಕ ಚಳಿ ಇನ್ನಷ್ಟು ಹೆಚ್ಚಾಗಿದೆ. ಈ ಚಳಿಯಲ್ಲಿ ಏನಾದರೂ ತಿನ್ನಬೇಕು ಎಂದೆನಿಸುವುದು ಸಹಜ. ಅದರಲ್ಲೂ ಕೆಲವು ಬಗೆಯ ಸೊಪ್ಪು, ತರಕಾರಿಗಳು ಚಳಿಗಾಲದಲ್ಲಿ ಹೇರಳವಾಗಿ ಲಭ್ಯವಿರುತ್ತವೆ. ಅವುಗಳಲ್ಲಿ ಕ್ಯಾರೆಟ್ ಕೂಡ ಒಂದು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕ್ಯಾರೆಟ್ ತಿನ್ನುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇದರಿಂದ ವೈವಿಧ್ಯಮಯ ಖಾದ್ಯ ತಯಾರಿಸಬಹುದು. ಇಲ್ಲಿದೆ ಕ್ಯಾರೆಟ್‍ನಿಂದ ಮಾಡಿದ 7 ಬಗೆಯ ಭಕ್ಷ್ಯಗಳು.
(Canva)(2 / 9)
ಕ್ಯಾರೆಟ್ ಉಪ್ಪಿನಕಾಯಿ: ಚಳಿಗಾಲದಲ್ಲಿ ಶೀತ ವಾತಾವರಣ ಇರುವುದರಿಂದ ಕೆಲವೊಮ್ಮೆ ನಾಲಿಗೆ ಖಾರ ಭಕ್ಷ್ಯಗಳನ್ನು ತಿನ್ನಲು ಹಾತೊರೆಯುತ್ತದೆ. ಹೀಗಾಗಿ ಕ್ಯಾರೆಟ್ ಉಪ್ಪಿನಕಾಯಿಯನ್ನು ತಯಾರಿಸಬಹುದು. ಸಾಸಿವೆ ಎಣ್ಣೆ, ಸಾಸಿವೆ, ಅರಿಶಿನ, ಕೆಂಪು ಮೆಣಸಿನ ಪುಡಿ ಮತ್ತು ಸ್ವಲ್ಪ ವಿನೆಗರ್ ಅಥವಾ ನಿಂಬೆ ರಸವನ್ನು ಬೆರೆಸಿ ಈ ಉಪ್ಪಿನಕಾಯಿ ತಯಾರಿಸಲಾಗುತ್ತದೆ. ಕ್ಯಾರೆಟ್ ಅನ್ನು ಸಣ್ಣಗೆ ಕತ್ತರಿಸಿ, ಬಿಸಿಲಿನಲ್ಲಿ ಒಣಗಿಸಿ, ನಂತರ ತಯಾರಿಸಿರುವ ಮಸಾಲೆ ಮಿಶ್ರಣದೊಂದಿಗೆ ಚೆನ್ನಾಗಿ ಬೆರೆಸಿದರೆ ತಿನ್ನಲು ಬಹಳ ರುಚಿಕರವಾಗಿರುತ್ತದೆ.
(Canva)(3 / 9)
ಕ್ಯಾರೆಟ್ ಹಲ್ವಾ: ಕ್ಯಾರೆಟ್ ಅನ್ನು ಸಣ್ಣಗೆ ತುರಿದು ಅದಕ್ಕೆ ಹಾಲು, ಸಕ್ಕರೆ ಮತ್ತು ತುಪ್ಪ ಹಾಕಿ ಬೇಯಿಸಿ ತಯಾರಿಸಲಾಗುತ್ತದೆ. ಇದಕ್ಕೆ ಏಲಕ್ಕಿ, ಬೀಜಗಳು ಮತ್ತು ಒಣದ್ರಾಕ್ಷಿ ಹಾಕಿದರೆ ಮತ್ತಷ್ಟು ರುಚಿಕರವಾಗಿರುತ್ತದೆ. ಮಧ್ಯಾಹ್ನ ಊಟದ ಬಳಿಕ ಏನಾದರೂ ಸಿಹಿ-ತಿಂಡಿ ಬೇಕು ಅಂತಿದ್ದರೆ ಈ ರುಚಿಕರವಾದ ಕ್ಯಾರೆಟ್ ಹಲ್ವಾ ಸವಿಯಬಹುದು.
(Pinterest )(4 / 9)
ಕ್ಯಾರೆಟ್ ಪರೋಟ: ಉಪಾಹಾರ ಅಥವಾ ಮಧ್ಯಾಹ್ನದ ಊಟಕ್ಕೆ ಸೂಕ್ತವಾದ ಕ್ಯಾರೆಟ್ ಪರೋಟವು ಮೊಸರು, ಉಪ್ಪಿನಕಾಯಿ ಅಥವಾ ಬೆಣ್ಣೆಯೊಂದಿಗೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಗೋಧಿ ಹಿಟ್ಟಿನ ಚಪಾತಿ ಲಟ್ಟಿಸಿ ಅದರ ಮಧ್ಯದಲ್ಲಿ ತುರಿದ ಕ್ಯಾರೆಟ್ (ಹಸಿಮೆಣಸಿನಕಾಯಿ, ಶುಂಠಿ, ಜೀರಿಗೆ ಮಿಶ್ರಣ ಮಾಡಬೇಕು) ಹಾಕಿ ಮತ್ತೆ ಲಟ್ಟಿಸಬೇಕು. ಬಳಿಕ ಇದನ್ನು ಒಲೆ ಮೇಲೆ ತವಾ ಇಟ್ಟು ಅದರಲ್ಲಿ ಬೇಯಿಸಿದರೆ ರುಚಿಕರವಾದ ಕ್ಯಾರೆಟ್ ಪರೋಟ ತಿನ್ನಲು ಸಿದ್ಧ.
(Pinterest )(5 / 9)
ಕ್ಯಾರೆಟ್ ಸೂಪ್: ಕ್ಯಾರೆಟ್ ಸೂಪ್ ಚಳಿಗಾಲದ ನೆಚ್ಚಿನ ಖಾದ್ಯವಾಗಿದ್ದು, ಇದು ದೇಹವನ್ನು ಬೆಚ್ಚಗಾಗಿಸುತ್ತದೆ. ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿ, ಕ್ಯಾರೆಟ್ ಹಾಕಿ ಈ ಸೂಪ್ ತಯಾರಿಸಲಾಗುತ್ತದೆ. ಇದು ನೈಸರ್ಗಿಕ ಸಿಹಿ ರುಚಿಯನ್ನು ಹೊಂದಿದ್ದು, ಬಹಳ ರುಚಿಕರವಾಗಿರುತ್ತದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಸೂಪ್ ಕುಡಿಯುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
(Canva)(6 / 9)
ಕ್ಯಾರೆಟ್ ಕೇಕ್: ಹಿಟ್ಟು, ಸಕ್ಕರೆ, ಕ್ಯಾರೆಟ್, ಎಣ್ಣೆ ಅಥವಾ ತುಪ್ಪ, ಬೇಕಿಂಗ್ ಪೌಡರ್, ಅಡುಗೆ ಸೋಡಾ, ವಾಲ್ನಟ್ಸ್ ಅಥವಾ ಒಣದ್ರಾಕ್ಷಿಗಳನ್ನು ಹಾಕಿ ಕ್ಯಾರೆಟ್ ಕೇಕ್ ತಯಾರಿಸಲಾಗುತ್ತದೆ. ಇದು ಕೂಡ ಬಹಳ ರುಚಿಕರವಾಗಿರುತ್ತದೆ. ಬೇಕರಿಗಳಲ್ಲಿ ತಯಾರಿಸಿದ ಕೇಕ್ ತಿನ್ನುವುದಕ್ಕಿಂತ ಮನೆಯಲ್ಲೇ ತಯಾರಿಸಿ ತಿನ್ನುವುದು ಆರೋಗ್ಯಕ್ಕೆ ಉತ್ತಮ. ಮಕ್ಕಳಿಗೂ ಈ ಕೇಕ್ ಮಾಡಿ ಕೊಡಬಹುದು. ಖಂಡಿತ ಇಷ್ಟಪಟ್ಟು ತಿಂತಾರೆ.
(Canva)(7 / 9)
ಕ್ಯಾರೆಟ್ ಗಂಜಿ: ಈ ಹುದುಗಿಸಿದ ಕ್ಯಾರೆಟ್ ಪಾನೀಯವನ್ನು ಬಹಳ ಸರಳವಾಗಿ ತಯಾರಿಸಬಹುದು. ಆರೋಗ್ಯಕ್ಕೆ ಇದು ಬಹಳ ಪ್ರಯೋಜನಕಾರಿಯಾಗಿದೆ. ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ. ಕ್ಯಾರೆಟ್ ಅನ್ನು ಸಣ್ಣಗೆ ಕತ್ತರಿಸಿ ಇದಕ್ಕೆ ಪುಡಿ ಮಾಡಿದ ಕಪ್ಪು ಸಾಸಿವೆ, ಉಪ್ಪು, ಮೆಣಸಿನ ಪುಡಿ, ನೀರು ಹಾಕಿ ಮಿಶ್ರಣ ಮಾಡಬೇಕು. ನಂತರ ಇದನ್ನು 4 ರಿಂದ 5 ದಿನಗಳ ಕಾಲ ಹುದುಗಿಸಲು ಬಿಟ್ಟರೆ ರುಚಿಕರವಾದ ಕ್ಯಾರೆಟ್ ಗಂಜಿ ಸವಿಯಬಹುದು. ಇದು ಜೀರ್ಣಕ್ರಿಯೆ ಉತ್ತೇಜಿಸಲು ಸಹಾಯಕವಾಗಿದೆ.
(Pinterest )(8 / 9)
ಕ್ಯಾರೆಟ್ ಲಡ್ಡು: ಕ್ಯಾರೆಟ್ ಅನ್ನು ತುರಿದು ಅದನ್ನು ತುಪ್ಪದಲ್ಲಿ ಹುರಿದು ಈ ಲಡ್ಡು ತಯಾರಿಸಲಾಗುತ್ತದೆ. ಇದಕ್ಕೆ ಹಾಲಿನ ಪುಡಿ, ಬೆಲ್ಲ ಅಥವಾ ಸಕ್ಕರೆ ಹಾಗೂ ಒಣಹಣ್ಣುಗಳನ್ನು ಹಾಕಿ ತಯಾರಿಸುವ ಈ ಲಡ್ಡು ತುಂಬಾ ರುಚಿಕರವಾಗಿರುತ್ತದೆ. ಒಂದೇ ರೀತಿಯ ಲಡ್ಡು ತಿಂದು ಬೇಸತ್ತಿದ್ದರೆ ಕ್ಯಾರೆಟ್ ಲಡ್ಡು ಪಾಕವಿಧಾನ ಪ್ರಯತ್ನಿಸಬಹುದು.
(Canva)ಇತರ ಗ್ಯಾಲರಿಗಳು