ಕೇವಲ ಮೂರೇ ಮೂರು ಪದಾರ್ಥಗಳೊಂದಿಗೆ ತಯಾರಿಸಿ ರುಚಿಕರ ಮಾವಿನ ಜಾಮ್; ಇಲ್ಲಿದೆ ಪಾಕವಿಧಾನ
ಕೇವಲ ಮೂರೇ ಮೂರು ಪದಾರ್ಥಗಳೊಂದಿಗೆ ರುಚಿಕರ ಮಾವಿನಹಣ್ಣಿನ ಜಾಮ್ ತಯಾರಿಸಿ. ಒಮ್ಮೆ ಮಾಡಿದ ಬಳಿಕ ಅದನ್ನು ಎರಡರಿಂದ ಮೂರು ತಿಂಗಳವರೆಗೆ ಸಂಗ್ರಹಿಸಲಾಗುತ್ತದೆ. ಇಲ್ಲಿದೆ ಮಾವಿನಹಣ್ಣಿನ ಜಾಮ್ ರೆಸಿಪಿ.
(1 / 9)
ಮಾವಿನ ಹಣ್ಣಿನ ಋತುವಿನಲ್ಲಿ, ಅವುಗಳಿಂದ ತಯಾರಿಸಿದ ಆಹಾರವನ್ನು ಸೇವಿಸಬೇಕು. ಋತುಮಾನದ ಆಹಾರವನ್ನು ಸೇವಿಸುವುದರಿಂದ ದೇಹಕ್ಕೆ ಹೊಸ ಶಕ್ತಿ ಸಿಗುತ್ತದೆ. ಮಾವಿನ ಹಣ್ಣುಗಳು ಬೇಸಿಗೆಯಲ್ಲಿ ಮಾತ್ರ ಲಭ್ಯವಿವೆ. ಮಾವಿನ ಹಣ್ಣುಗಳನ್ನು ಸವಿಯುವುದಷ್ಟೇ ಅಲ್ಲ, ಅವುಗಳಿಂದ ರುಚಿಕರವಾದ ತರಹೇವಾರಿ ಖಾದ್ಯಗಳನ್ನು ಕೂಡ ತಯಾರಿಸಲಾಗುತ್ತದೆ. ಇಲ್ಲಿ ಮಾವಿನ ಹಣ್ಣಿನ ಜಾಮ್ ಪಾಕವಿಧಾನ ತಿಳಿಸಲಾಗಿದೆ.
(All Image Credit: Canva)(2 / 9)
ಇಲ್ಲಿ ಮಾವಿನ ಜಾಮ್ ಪಾಕವಿಧಾನವನ್ನು ನೀಡಲಾಗಿದೆ. ಅದನ್ನು ತಯಾರಿಸಲು ನೀವು ತುಂಬಾ ಕಷ್ಟಪಡಬೇಕಾಗಿಲ್ಲ. ಮನೆಯಲ್ಲೇ ಕೇವಲ ಮೂರು ಪದಾರ್ಥಗಳಿಂದ ಮಾವಿನ ಹಣ್ಣಿನ ಜಾಮ್ ತಯಾರಿಸಬಹುದು.ಅದನ್ನು ಎರಡರಿಂದ ಮೂರು ತಿಂಗಳವರೆಗೆ ಸಂಗ್ರಹಿಸಲಾಗುತ್ತದೆ. ಬ್ರೆಡ್ ಮೇಲೆ ಮಾವಿನ ಜಾಮ್ ಹಚ್ಚಿ ತಿನ್ನುವುದು ಬಹಳ ರುಚಿಕರವಾಗಿರುತ್ತದೆ. ಮಾವಿನ ಹಣ್ಣಿನ ಜಾಮ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
(4 / 9)
ಪಾಕವಿಧಾನ: ಮಾವಿನಹಣ್ಣಿನ ಜಾಮ್ ತಯಾರಿಸಲು ನೀವು ಯಾವುದೇ ರೀತಿಯ ಮಾವಿನಹಣ್ಣುಗಳನ್ನು ತೆಗೆದುಕೊಳ್ಳಬಹುದು. ಆದರೆ, ಹೆಚ್ಚು ತಿರುಳನ್ನು ಹೊಂದಿರುವ ಮಾವಿನ ಹಣ್ಣನ್ನು ತೆಗೆದುಕೊಳ್ಳುವುದು ಉತ್ತಮ.
(5 / 9)
ಮೊದಲಿಗೆ ಮಾವಿನ ಹಣ್ಣಿನ ಸಿಪ್ಪೆ ತೆಗೆದು ತಿರುಳನ್ನು ಒಂದು ಬಟ್ಟಲಿನಲ್ಲಿ ಹಾಕಿ. ಇದನ್ನು ಮಿಕ್ಸಿಯಲ್ಲಿ ಹಾಕಿ ಒಮ್ಮೆ ರುಬ್ಬಿಕೊಳ್ಳಿ. ಮೃದುವಾದ, ರಸಭರಿತ ಪ್ಯೂರಿ ಸಿದ್ಧವಾಗುತ್ತದೆ.
(6 / 9)
ಈಗ ಕಡಾಯಿಯನ್ನು ಒಲೆಯ ಮೇಲೆ ಇರಿಸಿ, ಸಕ್ಕರೆ ಬೆರೆಸಿ. ಇದಕ್ಕೆ ಮಾವಿನ ಪ್ಯೂರಿಯನ್ನು ಸೇರಿಸಿ ಸಣ್ಣ ಉರಿಯಲ್ಲಿ ಮಿಶ್ರಣ ಮಾಡಿ. ಸಕ್ಕರೆ ನಿಧಾನವಾಗಿ ಕರಗಿ ಖಾದ್ಯವಾಗಿ ರೂಪುಗೊಳ್ಳುತ್ತದೆ. ಆರರಿಂದ ಏಳು ನಿಮಿಷಗಳ ನಂತರ, ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
(7 / 9)
ಇಡೀ ಮಿಶ್ರಣವನ್ನು ಐದು ನಿಮಿಷಗಳ ಕಾಲ ಬೇಯಿಸಿ. ಇದರ ಬಣ್ಣವು ಸ್ವಲ್ಪ ಪಾರದರ್ಶಕವಾಗಲು ಪ್ರಾರಂಭಿಸುತ್ತದೆ ಅಥವಾ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಈ ವೇಳೆ ಅದರ ಮೇಲೆ ಮುಚ್ಚಳವನ್ನು ಇರಿಸಿ. ಆದರೆ ಅದನ್ನು ಸಂಪೂರ್ಣವಾಗಿ ಮುಚ್ಚುವ ಬದಲು, ಮುಚ್ಚಳವನ್ನು ಅರ್ಧ ಮುಚ್ಚಿರುವಂತೆ ಇರಿಸಿ. ಜಾಮ್ ಸ್ವಲ್ಪ ತೆಳುವಾದಾಗ ಮುಚ್ಚಳವನ್ನು ತೆಗೆದು ಒಲೆಯನ್ನು ಆಫ್ ಮಾಡಿ.
(8 / 9)
ಮಾವಿನ ಜಾಮ್ ಅನ್ನು ಸಂಗ್ರಹಿಸಲು ಗಾಜಿನ ಜಾರ್ ತೆಗೆದುಕೊಳ್ಳಿ. ಇದರಲ್ಲಿ ಸಂಗ್ರಹಿಸುವುದರಿಂದ ಎರಡರಿಂದ ಮೂರು ತಿಂಗಳವರೆಗೆ ತಾಜಾವಾಗಿರುತ್ತದೆ. ಗಾಜಿನ ಪಾತ್ರೆಗಳು ಸಂಗ್ರಹಿಸಲು ಉತ್ತಮವಾಗಿರುತ್ತವೆ. ರೊಟ್ಟಿ, ಬ್ರೆಡ್ ಮತ್ತು ಬಿಸ್ಕತ್ತುಗಳ ಮೇಲೆ ಜಾಮ್ ಹಾಕಿ ತಿಂದರೆ ತುಂಬಾ ರುಚಿಕರವಾಗಿರುತ್ತದೆ. ಈ ಜಾಮ್ ಅನ್ನು ಒಮ್ಮೆ ಪ್ರಯತ್ನಿಸಿ, ಮತ್ತೆ ಮತ್ತೆ ಮಾಡಿ ತಿನ್ನುವಿರಿ.
ಇತರ ಗ್ಯಾಲರಿಗಳು