Winter Health Tips: ಚಳಿಗಾಲದಲ್ಲಿ ಬಡವರ ಬಾದಾಮಿ ಕಡಲೇಕಾಯಿ ಸೇವಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Winter Health Tips: ಚಳಿಗಾಲದಲ್ಲಿ ಬಡವರ ಬಾದಾಮಿ ಕಡಲೇಕಾಯಿ ಸೇವಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ನೋಡಿ

Winter Health Tips: ಚಳಿಗಾಲದಲ್ಲಿ ಬಡವರ ಬಾದಾಮಿ ಕಡಲೇಕಾಯಿ ಸೇವಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ನೋಡಿ

  • Health Tips: ಚರ್ಮದ ಆರೋಗ್ಯದಿಂದ ಹಿಡಿದು ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುವಲ್ಲಿ ಕಡಲೇಕಾಯಿ ಬೀಜಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಚಳಿಗಾಲದಲ್ಲಿ ಈ ಕಡಲೇಕಾಯಿ ಸೇವನೆ ಮಾಡುವುದರಿಂದ ಏನೆಲ್ಲ ಲಾಭವಿದೆ ಎಂಬುದನ್ನು ತಿಳಿದುಕೊಳ್ಳೋಣ.

ಆಗುತ್ತೆ, ಅಡುಗೆಗೂ ಬಳಕೆಯಾಗುತ್ತದೆ. ಏನೂ ಬೇಡ ಎನಿಸಿದ್ರೆ ನೀವು ಹಾಗೆಯೇ ಇದನ್ನು ತಿನ್ನಬಹುದು ಕೂಡ. ಚಳಿಗಾಲದಲ್ಲಿ ನಿಮ್ಮ ಹಸಿವನ್ನು ನೀಗಿಸೋಕೆ ಶೇಂಗಾ ಒಂದು ಪರಿಪೂರ್ಣವಾದ ಹಾಗೂ ಆರೋಗ್ಯಕರವಾದ ಕುರಕಲು ತಿಂಡಿಯಾಗಿ ಬಳಕೆಯಾಗಬಹುದು. ಶೇಂಗಾದಲ್ಲಿ ಅದ್ಭುತವಾದ ಪೋಷಕಾಂಶಗಳು ಅಡಗಿದ್ದು ಇವುಗಳು ನಿಮಗೆ ಸಾಕಷ್ಟು ಆರೋಗ್ಯ ಪ್ರಯೋಜನವನ್ನು ನೀಡುತ್ತವೆ. (PC: Unsplash)
icon

(1 / 6)

ಹಸಿವು ನಿರ್ವಹಣೆ: ಕಡಲೇಕಾಯಿಯಲ್ಲಿ ಅಡಗಿರುವ ಮೊನೊಸಾಚುರೆಟೇಡ್​ ಕೊಬ್ಬಿನ ಅಂಶವು ಹಾರ್ಮೋನ್​​ಗಳನ್ನು ಉತ್ತೇಜಿಸುವ ಕಾರ್ಯವನ್ನು ಮಾಡುತ್ತವೆ. ಹೀಗಾಗಿ ನಿಮಗೊಂದು ರೀತಿಯಲ್ಲಿ ತೃಪ್ತಿಕರ ಭಾವನೆ ನೀಡುತ್ತದೆ. ಇದರಿಂದಾಗಿ ನೀವು ಹಸಿವನ್ನು ನಿರ್ವಹಣೆ ಮಾಡುವುದು ಇನ್ನಷ್ಟು ಸುಲಭವಾಗುತ್ತದೆ. (PC: Unsplash)
icon

(2 / 6)

ಆರೋಗ್ಯಕರ ಚರ್ಮ: ವಿಟಮಿನ್​ ಬಿ 3 ಹಾಗೂ ನಿಯಾಸಿನ್​​ ಅಂಶಗಳು ಕಡಲೆಕಾಯಿಗಳಲ್ಲಿ ಸಂಪನ್ನವಾಗಿ ಇರುತ್ತದೆ. ಚಳಿಗಾಲದ ತ್ವಚೆ ಶುಷ್ಕವಾಗೋದ್ರಿಂದ ಇವುಗಳ ಸೇವನೆ ಮಾಡುವುದು ನಿಜಕ್ಕೂ ಒಳ್ಳೆಯದು. ಕಡಲೇಕಾಯಿಗಳು ನಿಮ್ಮನ್ನು ಎಲ್ಲಾ ರೀತಿಯ ಚರ್ಮರೋಗಗಳಿಂದ ದೂರವಿಡುವ ಕಾರ್ಯ ಮಾಡುತ್ತವೆ. ಸುಕ್ಕುಗಟ್ಟಿದ ಚರ್ಮ, ಹೈಪರ್​​ ಪಿಗ್ಮೆಂಟೇಷನ್​​ನಂತಹ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಕಡಲೆಕಾಯಿ ಮಹತ್ವದ ಪಾತ್ರವನ್ನು ವಹಿಸುತ್ತದೆ.(PC: Unsplash)
icon

(3 / 6)

ಕ್ಯಾನ್ಸರ್​​ಗೆ ರಾಮಬಾಣ: ಕಡಲೆಕಾಯಿಯಲ್ಲಿ ಇರುವ ಫೈಟೋಸ್ಟೆರಾಲ್​ ಎಂಬ ಅಂಶವು ಪ್ರಾಸ್ಟೇಟ್​ ಗಡ್ಡೆಗಳ ಬೆಳವಣಿಗೆಗಳನ್ನು 40 ಪ್ರತಿಶತಕ್ಕಿಂತಲೂ ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಇದರಿಂದ ಒಬ್ಬ ವ್ಯಕ್ತಿಗೆ ಕ್ಯಾನ್ಸರ್​ ಉಂಟಾಗುವ ಸಾಧ್ಯತೆ 50 ಪ್ರತಿಶತ ಕಡಿಮೆಯಾಗುತ್ತದೆ.  ಕ್ಯಾನ್ಸರ್​ ಕೋಶಗಳ ಬೆಳವಣಿಗೆಯನ್ನು ತಡೆಯುವ ಶಕ್ತಿ ಹೊಂದಿರುವ ಕಡಲೇಕಾಯಿ ಬೀಜಗಳು ಕ್ಯಾನ್ಸರ್​ ರೋಗಿಗಳಿಗೆ ಉತ್ತಮ ಆಹಾರವಾಗಿದೆ. (PC: Unsplash)
icon

(4 / 6)

ಮಕ್ಕಳ ಆರೋಗ್ಯ: ಕಡಲೇಕಾಯಿ ಬೀಜಗಳಲ್ಲಿ ಅಗಾಧ ಪ್ರಮಾಣದ ಪ್ರೊಟೀನ್​ ಇರುತ್ತದೆ. ಇದು ಮೂಳೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಹೀಗಾಗಿ ಬೆಳೆಯುತ್ತಿರುವ ಮಕ್ಕಳಿಗೆ ಶೇಂಗಾವನ್ನು ನೀಡಬೇಕು. ಇದು ಅವರ ಶಾರೀರಿಕ ಬೆಳವಣಿಗೆಗೆ ಸಹಕಾರಿಯಾಗಿದೆ. (PC: Unsplash)
icon

(5 / 6)

ಗರ್ಭಿಣಿಯರಿಗೆ ಉತ್ತಮ ಆಹಾರ: ಫೋಲೇಟ್ ಎಂಬುವುದು ಉತ್ತಮವಾದ ಪೋಷಕಾಂಶವಾಗಿದ್ದು ಗರ್ಭಿಣಿಯರ ಆರೋಗ್ಯಕ್ಕೆ ಸಹಕಾರಿಯಾಗಿದೆ. ಫೋಲೇಟ್​ ಅಂಶವನ್ನು ಅಗಾಧ ಪ್ರಮಾಣದಲ್ಲಿ ಹೊಂದಿರುವ ಈ ಕಡಲೇಕಾಯಿಗಳು ಗರ್ಭಿಣಿಯರಿಗೆ ಹೇಳಿ ಮಾಡಿಸಿದಂತಹ ಆಹಾರ ಪದಾರ್ಥವಾಗಿದೆ. (PC: Unsplash)
icon

(6 / 6)

ಇತರ ಗ್ಯಾಲರಿಗಳು