ಬೆಳಗ್ಗಿನ ಉಪಾಹಾರಕ್ಕೆ ಸೇವಿಸಿ ಆರೋಗ್ಯಕರ, ಪೌಷ್ಟಿಕಾಂಶ-ಭರಿತ ಸ್ಮೂಥಿ: ಇದನ್ನು ತಯಾರಿಸುವುದು ತುಂಬಾ ಸುಲಭ
ಸ್ಮೂಥಿ ತಯಾರಿಸುವುದು ತುಂಬಾ ಸುಲಭ. ವಿವಿಧ ರೀತಿಯ ಸ್ಮೂಥಿಗಳನ್ನು ಮಾಡಬಹುದು. ಬಹಳಷ್ಟು ಮಂದಿ ಬೆಳಗ್ಗಿನ ಉಪಾಹಾರವನ್ನು ತಿನ್ನುವುದಿಲ್ಲ. ಸಮಯದ ಕೊರತೆ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಬೆಳಗ್ಗಿನ ತಿಂಡಿಯನ್ನು ಮಾಡದವರು ಅನೇಕರಿದ್ದಾರೆ. ಬೆಳಗ್ಗಿನ ಉಪಾಹಾರಕ್ಕಾಗಿ ನೀವು ಸೇವಿಸಬಹುದಾದ ಕೆಲವು ಆರೋಗ್ಯಕರ ಮತ್ತು ಪೌಷ್ಟಿಕಾಂಶ ಭರಿತ ಸ್ಮೂಥಿಗಳು ಇಲ್ಲಿವೆ.
(1 / 7)
ಬೆಳಗ್ಗಿನ ಉಪಾಹಾರವನ್ನು ದಿನದ ಪ್ರಮುಖ ಊಟವೆಂದು ಪರಿಗಣಿಸಲಾಗುತ್ತದೆ. ಆದರೆ, ಬಹಳಷ್ಟು ಜನರು ಉಪಾಹಾರವನ್ನು ಮಾಡುವುದಿಲ್ಲ. ಸಮಯ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಬೆಳಗ್ಗಿನ ತಿಂಡಿಯನ್ನು ಮಾಡದವರು ಅನೇಕರಿದ್ದಾರೆ. ಈ ಅಭ್ಯಾಸವು ಒಳ್ಳೆಯದಲ್ಲ. ಇದು ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಉಪಾಹಾರವನ್ನು ಬಿಟ್ಟು ಬಿಡುವುದು ಒಳ್ಳೆಯ ಬೆಳವಣಿಗೆಯಲ್ಲ. ಹೀಗಾಗಿ ಸ್ಮೂಥಿ ತಯಾರಿಸಬಹುದು. ಸ್ಮೂಥಿ ತಯಾರಿಸುವುದು ತುಂಬಾ ಸುಲಭ ಹಾಗೂ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಬೆಳಗ್ಗಿನ ಉಪಾಹಾರಕ್ಕಾಗಿ ನೀವು ಸೇವಿಸಬಹುದಾದ ಕೆಲವು ಆರೋಗ್ಯಕರ ಮತ್ತು ಪೌಷ್ಟಿಕಾಂಶ ಭರಿತ ಸ್ಮೂಥಿಗಳು ಇಲ್ಲಿವೆ.
(Canva)(2 / 7)
ಪಾಲಕ್ ಸ್ಮೂಥಿ: ಈ ಸ್ಮೂಥಿಯಲ್ಲಿ ಫೈಬರ್, ಆರೋಗ್ಯಕರ ಕೊಬ್ಬುಗಳು, ಜೀವಸತ್ವಗಳು ಮತ್ತು ಖನಿಜಗಳಿವೆ. ಇದು ಜೀರ್ಣಕ್ರಿಯೆ ಮತ್ತು ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. 1 ಕಪ್ ಪಾಲಕ್ ಸೊಪ್ಪು, 1/2 ಆವಕಾಡೊ, 1 ಚಿಕ್ಕ ಬಾಳೆಹಣ್ಣು, 1 ಚಮಚ ಚಿಯಾ (ಕಾಮ ಕಸ್ತೂರಿ) ಬೀಜಗಳು, 1 ಕಪ್ ಬಾದಾಮಿ ಹಾಲು ಮತ್ತು 1 ಟೀ ಚಮಚ ಜೇನುತುಪ್ಪ (ಅಗತ್ಯವಿದ್ದರೆ ಮಾತ್ರ, ಸಿಹಿ ಬೇಕಾದಲ್ಲಿ) ಮಿಶ್ರಣ ಮಾಡಿದರೆ ಸ್ಮೂಥಿ ಸಿದ್ಧ.
(Canva)(3 / 7)
ಬೆರ್ರಿ ಸ್ಮೂಥಿ: ಇದು ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. 1 ಕಪ್ ಮಿಶ್ರ ಬೆರ್ರಿ ಹಣ್ಣುಗಳು (ಬ್ಲೂಬೆರ್ರಿಸ್, ರಾಸ್ಬೆರ್ರಿ, ಸ್ಟ್ರಾಬೆರಿ), 1/2 ಕಪ್ ಮೊಸರು (ಯೋಗರ್ಟ್), 1 ಚಮಚ ಅಗಸೆಬೀಜ, 1 ಕಪ್ ನೀರು ಅಥವಾ ತೆಂಗಿನಕಾಯಿ ನೀರನ್ನು ಮಿಶ್ರಣ ಮಾಡಿದರೆ ಸ್ಮೂಥಿ ಸಿದ್ಧ.
(Canva)(4 / 7)
ಪ್ರೋಟೀನ್ ಸ್ಮೂಥಿ: ಇದು ವಿಟಮಿನ್ ಸಿ, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬನ್ನು ಹೊಂದಿದೆ. 1/2 ಕಪ್ ಅನಾನಸು, 1/2 ಕಪ್ ಬಾಳೆಹಣ್ಣು, 1 ಚಮಚ ಪ್ರೋಟೀನ್ ಪುಡಿ, 1 ಚಮಚ ತೆಂಗಿನ ಹಾಲು ಮತ್ತು 1 ಕಪ್ ತೆಂಗಿನಕಾಯಿ ನೀರು ಹಾಕಿದರೆ ಸ್ಮೂಥಿ ಸಿದ್ಧ.
(Canva)(5 / 7)
ಓಟ್ ಮೀಲ್ ಸ್ಮೂಥಿ: ಈ ಸ್ಮೂಥಿಯು ಫೈಬರ್ ಮತ್ತು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಇದು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹೃದಯದ ಆರೋಗ್ಯ ಮತ್ತು ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಈ ಸ್ಮೂಥಿ ಸಹಕಾರಿ. 1/4 ಕಪ್ ರೋಲ್ಡ್ ಓಟ್ಸ್, 1/2 ಬಾಳೆಹಣ್ಣು, 1 ಚಮಚ ಕಡಲೆಕಾಯಿ ಬೆಣ್ಣೆ ಅಥವಾ ಬಾದಾಮಿ ಬೆಣ್ಣೆ, 1 ಕಪ್ ಬಾದಾಮಿ ಹಾಲು ಮತ್ತು 1 ಚಮಚ ಕಾಮ ಕಸ್ತೂರಿ ಹಾಕಿ ಮಿಶ್ರಣ ಮಾಡಿದರೆ ಸ್ಮೂಥಿ ಸಿದ್ಧ.
(Canva)(6 / 7)
ಆವಕಾಡೊ-ಕಿತ್ತಳೆ ಸ್ಮೂಥಿ: ಈ ಸ್ಮೂಥಿಯಲ್ಲಿ ವಿಟಮಿನ್ ಸಿ ಮತ್ತು ಆರೋಗ್ಯಕರ ಕೊಬ್ಬುಗಳಿವೆ. ಇದು ಚರ್ಮದ ಆರೋಗ್ಯವನ್ನು ಉತ್ತೇಜಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. 1 ಆವಕಾಡೊ, 1 ಕಿತ್ತಳೆ (ಸಿಪ್ಪೆ ಸುಲಿದ), 1/2 ಕಪ್ ಅನಾನಸ್ ಅಥವಾ ಕಿವಿ (ಬೇಕಿದ್ದರೆ ಮಾತ್ರ), 1 ಚಮಚ ಕಾಮ ಕಸ್ತೂರಿ ಬೀಜ ಮತ್ತು 1 ಕಪ್ ತೆಂಗಿನಕಾಯಿ ನೀರು ಹಾಕಿ ಮಿಶ್ರಣ ಮಾಡಿದರೆ ಸ್ಮೂಥಿ ಸವಿಯಲು ಸಿದ್ಧ.
(Canva)ಇತರ ಗ್ಯಾಲರಿಗಳು