Mrs ಸಿನಿಮಾದಲ್ಲಿ ತೋರಿಸಿರುವ 10 ಪ್ರಸಿದ್ಧ ಭಾರತೀಯ ತಿನಿಸುಗಳಿವು: ಈ ಸಿನಿಮಾ ಕಣ್ಣಿಗಷ್ಟೇ ಅಲ್ಲ ನಾಲಿಗೆಗೂ ಹಬ್ಬ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mrs ಸಿನಿಮಾದಲ್ಲಿ ತೋರಿಸಿರುವ 10 ಪ್ರಸಿದ್ಧ ಭಾರತೀಯ ತಿನಿಸುಗಳಿವು: ಈ ಸಿನಿಮಾ ಕಣ್ಣಿಗಷ್ಟೇ ಅಲ್ಲ ನಾಲಿಗೆಗೂ ಹಬ್ಬ

Mrs ಸಿನಿಮಾದಲ್ಲಿ ತೋರಿಸಿರುವ 10 ಪ್ರಸಿದ್ಧ ಭಾರತೀಯ ತಿನಿಸುಗಳಿವು: ಈ ಸಿನಿಮಾ ಕಣ್ಣಿಗಷ್ಟೇ ಅಲ್ಲ ನಾಲಿಗೆಗೂ ಹಬ್ಬ

ಸಾನ್ಯಾ ಮಲ್ಹೋತ್ರಾ ಅವರ Mrs (ಮಿಸ್ಸಸ್/ಶ್ರೀಮತಿ) ಸಿನಿಮಾದಲ್ಲಿ ಭಾರತದ ಪ್ರಸಿದ್ಧ ಪಾಕವಿಧಾನಗಳನ್ನು ಚಿತ್ರಿಸಲಾಗಿದೆ. ಸಿನಿಮಾದಲ್ಲಿ ತೋರಿಸಿರುವ 10 ಪ್ರಸಿದ್ಧ ತಿನಿಸುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಸಾನ್ಯಾ ಮಲ್ಹೋತ್ರಾ ಅವರ Mrs (ಮಿಸ್ಸಸ್/ಶ್ರೀಮತಿ)  ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಾಣದಿರಬಹುದು. ಆದರೆ ಈ ಚಿತ್ರವು ಪಿತೃಪ್ರಭುತ್ವದ ಗಮನಿಸದ ಸೂಕ್ಷ್ಮ ವ್ಯತ್ಯಾಸಗಳನ್ನು ಹೇಗೆ ಬೆಳಕಿಗೆ ತರುತ್ತದೆ ಎಂಬುದರ ಕುರಿತಾಗಿದೆ. ಭಾರತೀಯ ಗೃಹಿಣಿಯರು ತಮ್ಮ ಪ್ರೀತಿಪಾತ್ರರು ಮತ್ತು ಸ್ನೇಹಿತರಿಗಾಗಿ ಖುಷಿಯಿಂದ ಪಾಕವಿಧಾನ ಮಾಡಿದರೂ, ಇದು ಭಾರತೀಯ ಗೃಹಿಣಿಯರ ಮೇಲೆ ಪಾವತಿಸದ ದುಡಿಮೆಯ ಹೊರೆಯನ್ನು ಇದು ತೋರಿಸುತ್ತದೆ. ಚಿತ್ರದ ಬಹುಪಾಲು ದೃಶ್ಯಗಳು ರಿಚಾ ಅಡುಗೆಮನೆಯಲ್ಲಿ ಏನಾದರೂ ಅಡುಗೆ ಮಾಡುವುದನ್ನು ತೋರಿಸುತ್ತವೆ. Mrs (ಶ್ರೀಮತಿ) ಸಿನಿಮಾದಲ್ಲಿ ತೋರಿಸಿರುವ 10 ಪ್ರಸಿದ್ಧ ಭಾರತೀಯ ತಿನಿಸುಗಳ ಬಗ್ಗೆ ಇಲ್ಲಿದೆ ಮಾಹಿತಿ.
icon

(1 / 11)

(PC: Arati Kadav/ Instagram)

ಪತ್ರಾ: ಮಳೆಗಾಲದಲ್ಲಿ ಹೆಚ್ಚಾಗಿ ಆನಂದಿಸುವ ಗುಜರಾತಿ ಖಾದ್ಯವೆಂದರೆ ಪತ್ರಾ (ಕರ್ನಾಟಕದ ಕರಾವಳಿ ಕಡೆಗಳಲ್ಲಿ ಇದನ್ನು ಪತ್ರೊಡೆ ಎನ್ನುತ್ತಾರೆ). ಇದನ್ನು ಚಿತ್ರದ ಆರಂಭಿಕ ದೃಶ್ಯದಲ್ಲಿ ತೋರಿಸಲಾಗಿದೆ. ಕೆಸುವಿನ ಎಲೆಗಳನ್ನು ಮಸಾಲೆಯುಕ್ತ ಕಡಲೆ ಹಿಟ್ಟಿನೊಂದಿಗೆ ತಯಾರಿಸಿ ಅದನ್ನು ಇಡ್ಲಿಯಂತೆ ಆವಿಯಲ್ಲಿ ಬೇಯಿಸಲಾಗುತ್ತದೆ. ನಂತರ ತೆಳುವಾದ ತುಂಡುಗಳಾಗಿ ಕತ್ತರಿಸಿ, ಗರಿಗರಿಯಾಗುವವರೆಗೆ ಹುರಿಯಲಾಗುತ್ತದೆ. ಈ ಖಾದ್ಯವು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಬೆಳಗ್ಗಿನ ಉಪಾಹಾರಕ್ಕೆ ಮಳೆಗಾಲದಲ್ಲಿ ಇದನ್ನು ಹೆಚ್ಚಾಗಿ ಮಾಡಲಾಗುತ್ತದೆ.
icon

(2 / 11)

(PC: Slurrp)

ರವೆ ಹಲ್ವಾ: ಮದುವೆಯ ನಂತರ ರಿಚಾ ಅವರ ಮಗಳಾಗುತ್ತಾಳೆ ಎಂದು ಸಿನಿಮಾದಲ್ಲಿ ಆಕೆಯ ಮಾವ ಹೇಳುವುದು ವಿಪರ್ಯಾಸ. ಮರುದಿನ, ಅವಳು ಹೊಸ ಮನೆಯಲ್ಲಿ ಮೊದಲ ಊಟ ಬೇಯಿಸುವುದು ಆಚರಣೆಯನ್ನು ರವೆ ಹಲ್ವಾ ಮಾಡುವ ಮೂಲಕ ಪೂರ್ಣಗೊಳಿಸುತ್ತಾಳೆ. ಈ ಮಧ್ಯೆ, ಅವಳು ತನ್ನ ಪತಿಗೆ ಚಹಾ ಕೂಡ ಮಾಡಿ ಅದಕ್ಕೆ ಬಾದಾಮಿಯನ್ನು ಬೆರೆಸುತ್ತಾಳೆ.
icon

(3 / 11)

(PC: Freepik)

ಲೌಂಗ್ ಲಟ ಮತ್ತು ಗಟ್ಟೆ ಕಿ ಸಬ್ಜಿ: ಸಿನಿಮಾದಲ್ಲಿ ರಿಚಾ ಮತ್ತು ಆಕೆಯ ಪತಿ ತನ್ನ ತಾಯಿಯ ಮನೆಗೆ ಭೇಟಿ ನೀಡಿದಾಗ, ಆಕೆಯ ತಾಯಿ ಅಡುಗೆ ಮಾಡುತ್ತಾರೆ. ಈ ವೇಳೆ ಲೌಂಗ್ ಲಟ ಮತ್ತು ಗಟ್ಟೆ ಕಿ ಸಬ್ಜಿ ಖಾದ್ಯಗಳನ್ನು ತಯಾರಿಸಿರುತ್ತಾರೆ. ಲೌಂಗ್ ಲತಾ ಪೂರ್ವ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಒಡಿಶಾದಲ್ಲಿ ತಯಾರಿಸಲಾಗುವ ಜನಪ್ರಿಯ ಸಿಹಿ ಖಾದ್ಯವಾಗಿದ್ದರೆ, ಗಟ್ಟೆ ಕಿ ಸಬ್ಜಿ ಕಡಲೆಹಿಟ್ಟಿನಿಂದ ತಯಾರಿಸಲಾಗುವ ಖಾದ್ಯ. ಇದು ರಾಜಸ್ತಾನದ ಬಹಳ ಜನಪ್ರಿಯ ಭಕ್ಷ್ಯವಾಗಿದ್ದು, ಇದನ್ನು ರೊಟ್ಟಿಯೊಂದಿಗೆ ಸವಿಯಲಾಗುತ್ತದೆ
icon

(4 / 11)

ಕೈಯಿಂದ ಮಾಡಿದ ಬೆಣ್ಣೆ ಮತ್ತು ಚಟ್ನಿ: ಸಾಂಪ್ರದಾಯಿಕ ಕಲ್ಲು ರುಬ್ಬುವಿಕೆಯು ಆರೋಗ್ಯಕರ ಮತ್ತು ರುಚಿಕರವಾದ ಖಾದ್ಯಗಳನ್ನು ನೀಡುತ್ತದೆ ಎಂಬುದು ನಿಜವಾದರೂ, ಆಧುನಿಕ ಉಪಕರಣಗಳು ಕೆಲವೇ ಸೆಕೆಂಡುಗಳಲ್ಲಿ ಅಡುಗೆ ಮಾಡುವ ಸುಲಭತೆಯನ್ನು ನೀಡುತ್ತವೆ. ರಿಚಾ ಅವರ ಅತ್ತೆ ತನ್ನ ಕೈಗಳಿಂದ ಬೆಣ್ಣೆಯನ್ನು ಕಡೆಯುವುದನ್ನು ಮತ್ತು ಅವರ ಮಾವ ಚಟ್ನಿ ತಯಾರಿಸಲು ರುಬ್ಬುವ ಕಲ್ಲನ್ನು ಬಳಸುವಂತೆ ಸೊಸೆಯನ್ನು ಕೇಳುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಏಕೆಂದರೆ ಅವರ ಮಾವ ಅದನ್ನು ಇಷ್ಟಪಡುತ್ತಾರೆ. ನಂತರದ ಭಾಗದಲ್ಲಿ, ತಾಳ್ಮೆ ಮತ್ತು ಸಾಂಪ್ರದಾಯಿಕ ವಿಧಾನಗಳೊಂದಿಗೆ ಆಹಾರವನ್ನು ತಯಾರಿಸುವುದಕ್ಕಿಂತ ಮಹಿಳೆ ಸುಲಭವಾಗಿಸುವುದನ್ನು ಆರಿಸಿಕೊಳ್ಳಬಾರದು ಎಂದು ಮಾವ ಹೇಳಿದ್ದಾರೆ. ಭಾರತ ಸೇರಿದಂತೆ ಅನೇಕ ಏಷ್ಯಾದ ಅಡುಗೆಮನೆಗಳಲ್ಲಿ ಮೊದಲಿನಿಂದಲೂ ಭಕ್ಷ್ಯಗಳನ್ನು ತಯಾರಿಸಲು ಸಾಂಪ್ರದಾಯಿಕ ಉಪಕರಣಗಳನ್ನು ಇನ್ನೂ ಕೂಡ ಬಳಸಲಾಗುತ್ತಿದೆ. 
icon

(5 / 11)

ಭರ್ವಾನ್ ಕರೇಲಾ: ಭರ್ವಾನ್ ಕರೇಲಾ ಒಂದು ಸೈಡ್ ಡಿಶ್ ಆಗಿದ್ದು, ಇದನ್ನು ಮುಂಚಿತವಾಗಿ ತಯಾರಿಸಿ ಒಂದು ವಾರ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಹುದು. ಹಾಗಲಕಾಯಿಗೆ ಮಸಾಲೆಯುಕ್ತ ಕಡಲೆಹಿಟ್ಟಿನ ಮಿಶ್ರಣದಿಂದ ತುಂಬಿಸಿ ಗರಿಗರಿಯಾಗುವವರೆಗೆ ಆಳವಾಗಿ ಕರಿಯಲಾಗುತ್ತದೆ. ಸಿನಿಮಾದಲ್ಲಿ ರಿಚಾ ತನ್ನ ಅತ್ತೆ ತನ್ನ ಗರ್ಭಿಣಿ ಮಗಳ ಬಳಿಗೆ ಕಳುಹಿಸಿದಾಗ ತಯಾರಿಸಿದ ಮೊದಲ ಖಾದ್ಯ ಇದು.
icon

(6 / 11)

ದಮ್‌ ಪುಖ್ತ್ ಬಿರ್‌ಯಾನಿ: ದಮ್ ಪುಖ್ತ್ ಬಿರಿಯಾನಿಯನ್ನು ಮ್ಯಾರಿನೇಟ್ ಮಾಡಿದ ಮಟನ್ ಅಥವಾ ಚಿಕನ್‌ನೊಂದಿಗೆ ಹೆಚ್ಚಾಗಿ ತಯಾರಿಸಲಾಗುತ್ತದೆ. ರಿಚಾ ಮೊದಲ ಬಾರಿಗೆ ಮಟನ್ ಮಾಂಸವನ್ನು ಬೇಯಿಸಿದಾಗ, ಮಾಂಸವನ್ನು ಪರಿಪೂರ್ಣವಾಗಿ ಬೇಯಿಸಲು ಅವಳು ಹೆಣಗಾಡುತ್ತಿದ್ದಳು. ಹೀಗಾಗಿ ಆಕೆ ಅದನ್ನು ಕುಕ್ಕರ್‌ನಲ್ಲಿ ತಯಾರಿಸಿದಳು. ಅದು ಸರಿಯಾದ ವಿಧಾನವಲ್ಲ ಎಂದು ಅವಳ ಮಾವ ಹೇಳಿದರು. ಮರುದಿನ, ಅವಳು ಒಂದು ವಿಡಿಯೋವನ್ನು ವೀಕ್ಷಿಸಿ, ಅದರಂತೆ ಬಿರಿಯಾನಿ ತಯಾರಿಸಿದಳು.
icon

(7 / 11)

ರಿಚಾ ಹೊರಗಾದಾಗ ಚಿತ್ರವು ಕುತೂಹಲಕಾರಿ ತಿರುವು ಪಡೆಯುತ್ತದೆ. ಆಕೆಯ ಪತಿ ಮತ್ತು ಮಾವ ಹೊರಗಿನ ಆಹಾರ ಅಥವಾ ಕೆಲಸದಾಕೆ ಮಾಡುವ ಉಪ್ಮಾ, ಪಲಾವ್, ಅವಲಕ್ಕಿ, ಬ್ರೆಡ್ ಟೋಸ್ಟ್ ಮತ್ತು ಆಮ್ಲೆಟ್‌ ಇತ್ಯಾದಿ ತಿನ್ನಲು ಒಪ್ಪಿ ಆಕೆಗೆ ವಿಶ್ರಾಂತಿ ನೀಡಿದರು. ಈ ಖಾದ್ಯಗಳನ್ನು ಬಹಳ ಬೇಗನೆ ಸರಳವಾಗಿ ತಯಾರಿಸಬಹುದು.
icon

(8 / 11)

(PC: Pinterest )

ದಾಲ್ ಪಿಠಾ: ದಾಲ್ ಪಿಠಾ ಎಂಬುದು ಬಿಹಾರಿ ಖಾದ್ಯವಾಗಿದ್ದು, ರಿಚಾ ಅವರ ಅತ್ತೆ ಅವರ ಕುಟುಂಬಕ್ಕಾಗಿ ಇದನ್ನು ತಯಾರಿಸುತ್ತಿದ್ದರು. ರಿಚಾ ಯೂಟ್ಯೂಬ್‌ನಿಂದ ಪಾಕವಿಧಾನವನ್ನು ಕಲಿತು ತಮ್ಮ ಪತಿ ಮತ್ತು ಮಾವ ಅವರನ್ನು ಮೆಚ್ಚಿಸಲು ಅದನ್ನು ಬೇಯಿಸುತ್ತಾರೆ. ಈ ಖಾದ್ಯವು ಪ್ರೋಟೀನ್‌ನಲ್ಲಿ ಹೇರಳವಾಗಿದ್ದು, ಆರೋಗ್ಯಕರವಾಗಿದೆ. ಇದನ್ನು ಕೊತ್ತಂಬರಿ ಚಟ್ನಿಯೊಂದಿಗೆ ತಿನ್ನಬಹುದು.
icon

(9 / 11)

ಮಟನ್ ಗ್ರೇವಿ: ರಿಚಾಳ ಸೋದರ ಮಾವ ತನ್ನ ಹೆಂಡತಿ ಮತ್ತು ಮಗುವಿನೊಂದಿಗೆ ಅವಳ ಮನೆಗೆ ಭೇಟಿ ನೀಡಿದಾಗ, ಮನೆಯ ಪುರುಷರು ಮಟನ್ ಗ್ರೇವಿ ಬೇಯಿಸುತ್ತಾರೆ ಎಂದು ಹೆಮ್ಮೆಯಿಂದ ಹೇಳುತ್ತಾನೆ. ಅವನು ತನ್ನ ಹೆಂಡತಿಗೆ ಮಾಂಸವನ್ನು ಮ್ಯಾರಿನೇಟ್ ಮಾಡಲು ಹೇಳುತ್ತಾನೆ. ರಿಚಾಳಿಗೆ ಈರುಳ್ಳಿ ಕತ್ತರಿಸುವಂತೆ ಸೂಚಿಸುತ್ತಾನೆ. ಪುರುಷರು ಅಡುಗೆ ಮುಗಿಸಿದಾಗ, ಅಡುಗೆಮನೆಯು ಅವ್ಯವಸ್ಥೆಯಾಗಿರುತ್ತದೆ. ಮಟನ್ ಗ್ರೇವಿ ತುಂಬಾ ರುಚಿಕರವಾಗಿರುತ್ತದೆ. ಇದನ್ನು ಅನ್ನ ಹಾಗೂ ರೊಟ್ಟಿ, ಚಪಾತಿಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.
icon

(10 / 11)

ಕೇವಲ ಇವಿಷ್ಟೇ ಭಕ್ಷ್ಯಗಳು ಮಾತ್ರವಲ್ಲ, ಸಿನಿಮಾದಲ್ಲಿ ಬೆಂಡೆಕಾಯಿ ಖಾದ್ಯ, ದಾಲ್ ಧೋಕ್ಲಿ, ಕ್ಯಾರೆಟ್ ಹಲ್ವಾ, ಕ್ಯಾರೆಟ್ ಪಲ್ಯ, ಮಟರ್ ಪನೀರ್, ಸೀಬೆ ಹಣ್ಣಿನ ಪಲ್ಯ, ಸಬ್ಬಕ್ಕಿ ಖಿಚಡಿ, ಪೂರಿ ಸಾಗು ಸೇರಿದಂತೆ ಹಲವಾರು ಭಕ್ಷ್ಯಗಳನ್ನು ತೋರಿಸಲಾಗಿದೆ. 
icon

(11 / 11)

ಕೇವಲ ಇವಿಷ್ಟೇ ಭಕ್ಷ್ಯಗಳು ಮಾತ್ರವಲ್ಲ, ಸಿನಿಮಾದಲ್ಲಿ ಬೆಂಡೆಕಾಯಿ ಖಾದ್ಯ, ದಾಲ್ ಧೋಕ್ಲಿ, ಕ್ಯಾರೆಟ್ ಹಲ್ವಾ, ಕ್ಯಾರೆಟ್ ಪಲ್ಯ, ಮಟರ್ ಪನೀರ್, ಸೀಬೆ ಹಣ್ಣಿನ ಪಲ್ಯ, ಸಬ್ಬಕ್ಕಿ ಖಿಚಡಿ, ಪೂರಿ ಸಾಗು ಸೇರಿದಂತೆ ಹಲವಾರು ಭಕ್ಷ್ಯಗಳನ್ನು ತೋರಿಸಲಾಗಿದೆ. 
(PC: Arati Kadav/ Instagram)

Priyanka Gowda

eMail

ಇತರ ಗ್ಯಾಲರಿಗಳು