ಸಂಜೆ ಚಹಾದೊಂದಿಗೆ ಬಜ್ಜಿ ತಿನ್ನುವ ಮಜಾವೇ ಬೇರೆ; ಇಲ್ಲಿದೆ ನೀವು ಪ್ರಯತ್ನಿಸಬಹುದಾದ 6 ಬಗೆಯ ಪಕೋಡ ಭಕ್ಷ್ಯಗಳು
ಸಂಜೆ ವೇಳೆ ಬಿಸಿ ಬಿಸಿ ಚಹಾ ಕುಡಿಯುವಾಗ ಪಕೋಡ ಅಥವಾ ಬಜ್ಜಿ ತಿನ್ನುತ್ತಿದ್ದರೆ ಅದರ ರುಚಿಯೇ ಬೇರೆ. ಸಂಜೆಯಾದ್ರೆ ಸಾಕು ಬಜ್ಜಿ-ಬೋಂಡಾಗಳ ಅಂಗಡಿಗಳ ಮುಂದೆ ಜನರು ಸಾಲುಗಟ್ಟಿ ನಿಂತಿರುತ್ತಾರೆ. ಇಲ್ಲಿದೆ ನೀವು ಪ್ರಯತ್ನಿಸಬಹುದಾದ 6 ಬಗೆಯ ಪಕೋಡ ಭಕ್ಷ್ಯಗಳು.
(1 / 8)
ಸಂಜೆ ವೇಳೆ ಬಿಸಿ ಬಿಸಿ ಚಹಾದೊಂದಿಗೆ ಬಜ್ಜಿ ಅಥವಾ ಪಕೋಡ ತಿನ್ನುತ್ತಿದ್ದರೆ ಅದರ ಮಜಾವೇ ಬೇರೆ. ಸಂಜೆಯಾದ್ರೆ ಸಾಕು ಬಜ್ಜಿ-ಬೋಂಡಾಗಳ ಅಂಗಡಿಗಳ ಮುಂದೆ ಜನರು ಸಾಲುಗಟ್ಟಿ ನಿಂತಿರುತ್ತಾರೆ. ಇನ್ನೂ ಕೆಲವರು ಮನೆಯಲ್ಲಿಯೇ ವಿಧ-ವಿಧದ ಪಕೋಡ ತಯಾರಿಸುತ್ತಾರೆ. ಇಲ್ಲಿದೆ ನೀವು ಪ್ರಯತ್ನಿಸಬಹುದಾದ 6 ಬಗೆಯ ಪಕೋಡ ಭಕ್ಷ್ಯಗಳು.
(2 / 8)
ಈರುಳ್ಳಿ ಪಕೋಡ: ನುಣ್ಣಗೆ ಕತ್ತರಿಸಿದ ಈರುಳ್ಳಿಗೆ ಕಡಲೆ ಹಿಟ್ಟು, ಜೀರಿಗೆ, ಧನಿಯಾ ಮತ್ತು ಅರಿಶಿನದಂತಹ ಪದಾರ್ಥಗಳನ್ನು ಮಿಶ್ರಣ ಮಾಡುವ ಮೂಲಕ ರುಚಿಕರವಾದ ಈರುಳ್ಳಿ ಪಕೋಡವನ್ನು ತಯಾರಿಸಬಹುದು. ಇದನ್ನು ಎಣ್ಣೆಯಲ್ಲಿ ಆಳವಾಗಿ ಕರಿಯುವ ಮೂಲಕ ತಯಾರಿಸಲಾಗುತ್ತದೆ. ಸಂಜೆ ಚಹಾಗೆ ಬೆಸ್ಟ್ ಕಾಂಬಿನೇಶನ್ ಅಂದರೆ ತಪ್ಪಿಲ್ಲ.
(Pinterest )(3 / 8)
ಪಾಲಕ್ ಪಕೋಡಾ: ಸಣ್ಣಗೆ ಕತ್ತರಿಸಿದ ಪಾಲಕ್ ಸೊಪ್ಪಿಗೆ, ಈರುಳ್ಳಿ, ಜೀರಿಗೆ, ಧನಿಯಾ ಪುಡಿ, ಮೆಣಸಿನ ಪುಡಿ ಮತ್ತು ಕಡಲೆಹಿಟ್ಟು ಬೆರೆಸಬೇಕು. ಇದನ್ನು ಎಣ್ಣೆಯಲ್ಲಿ ಕರಿದರೆ ರುಚಿಕರವಾದ ಪಾಲಕ್ ಪಕೋಡ ತಿನ್ನಲು ಸಿದ್ಧ. ಸಂಜೆ ವೇಳೆಗೆ ಏನು ತಿಂಡಿ ಮಾಡುವುದು ಎಂದು ಯೋಚಿಸುತ್ತಿದ್ದರೆ ಈ ಆರೋಗ್ಯಕರ ಖಾದ್ಯವನ್ನು ಪ್ರಯತ್ನಿಸಬಹುದು.
(Pinterest )(4 / 8)
ಮೆಂತ್ಯ ಪಕೋಡ: ಈ ಪಕೋಡಾವನ್ನು ಮೆಂತ್ಯ ಸೊಪ್ಪಿನಿಂದ ತಯಾರಿಸಲಾಗುತ್ತದೆ. ಇದು ಸ್ವಲ್ಪ ಕಹಿ ರುಚಿಯನ್ನು ಹೊಂದಿರುತ್ತದೆ. ಕತ್ತರಿಸಿದ ಮೆಂತ್ಯ ಸೊಪ್ಪು, ಈರುಳ್ಳಿ, ಶುಂಠಿ, ಕಡಲೆ ಹಿಟ್ಟು ಮತ್ತು ಅಕ್ಕಿ ಹಿಟ್ಟನ್ನು ಬೆರೆಸಿ ಎಣ್ಣೆಯಲ್ಲಿ ಕರಿದರೆ ರುಚಿಕರ ಮೆಂತ್ಯ ಪಕೋಡ ತಿನ್ನಲು ಸಿದ್ಧ.
(Pinterest )(5 / 8)
ಆಲೂಗಡ್ಡೆ ಪಕೋಡ: ಇದು ಚಳಿಗಾಲದಲ್ಲಿ ಬಹುತೇಕರು ತಿನ್ನುವ ಖಾದ್ಯ. ಬೇಯಿಸಿದ ಆಲೂಗಡ್ಡೆಗೆ ಜೀರಿಗೆ, ಕೊತ್ತಂಬರಿ ಪುಡಿ, ಅರಿಶಿನ ಮುಂತಾದ ಪದಾರ್ಥಗಳನ್ನು ಬೆರೆಸಿ ಆಲೂ ಬಜ್ಜಿ ಅಥವಾ ಆಲೂಗಡ್ಡೆ ಪಕೋಡ ತಯಾರಿಸಲಾಗುತ್ತದೆ. ಆಲೂಗಡ್ಡೆ ಮಿಶ್ರಣವನ್ನು ಕಡಲೆ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಗರಿಗರಿಯಾಗುವವರೆಗೆ ಕರಿಯಬೇಕು. ಇದು ಹೊರಭಾಗದಲ್ಲಿ ಗರಿಗರಿಯಾಗಿದ್ದರೂ, ಒಳಗೆ ಮೃದುವಾಗಿರುತ್ತದೆ ಹಾಗೆಯೇ ಅದ್ಭುತ ರುಚಿಯನ್ನು ಹೊಂದಿರುತ್ತದೆ.
(Pinterest )(6 / 8)
ಗೋಬಿ ಪಕೋಡ (ಹೂಕೋಸು ಪಕೋಡ): ಹೂಕೋಸನ್ನು ಸ್ವಚ್ಛವಾಗಿ ತೊಳೆದು ಕತ್ತರಿಸಿ, ಅದಕ್ಕೆ ಅರಿಶಿನ, ಓಂಕಾಳು, ಶುಂಠಿ, ಹಸಿರು ಮೆಣಸಿನಕಾಯಿಯನ್ನು ಬೆರೆಸಿ. ನಂತರ ಕಡಲೆ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಬೇಕು. ಕುರುಕಲು ತಿಂಡಿಯಾದ ಇವು ಉತ್ತಮ ರುಚಿಯನ್ನು ಹೊಂದಿರುತ್ತದೆ.
(Pinterest )(7 / 8)
ಹೆಸರು ಬೇಳೆ ಪಕೋಡ: ನೆನೆಸಿ, ರುಬ್ಬಿದ ಹೆಸರು ಬೇಳೆಯಿಂದ ತಯಾರಿಸಿದ ಪಕೋಡ ತುಂಬಾ ರುಚಿಕರವಾಗಿರುತ್ತದೆ. ಹೆಸರುಬೇಳೆಗೆ ಜೀರಿಗೆ, ಧನಿಯಾ ಪುಡಿ, ಇಂಗು ಮುಂತಾದ ಪದಾರ್ಥಗಳ ಬಳಕೆಯಿಂದ ಅದರ ರುಚಿ ಇನ್ನಷ್ಟು ಇಮ್ಮಡಿಗೊಳ್ಳುತ್ತದೆ. ಹೊರಭಾಗದಲ್ಲಿ ಗರಿಗರಿಯಾಗಿರುವ ಈ ಪಕೋಡ ಒಳಭಾಗದಲ್ಲಿ ಮೃದುವಾಗಿರುತ್ತದೆ ಮತ್ತು ತಿನ್ನಲು ಬಹಳ ರುಚಿಕರವಾಗಿರುತ್ತದೆ.
(Pinterest )ಇತರ ಗ್ಯಾಲರಿಗಳು