ಬೂದು ಕುಂಬಳಕಾಯಿಯಿಂದ ತಯಾರಿಸಬಹುದು ಸಖತ್ ಟೇಸ್ಟಿ ಹಲ್ವಾ; ಇಲ್ಲಿದೆ ಕಾಶಿ ಹಲ್ವಾ ಮಾಡುವ ವಿಧಾನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೂದು ಕುಂಬಳಕಾಯಿಯಿಂದ ತಯಾರಿಸಬಹುದು ಸಖತ್ ಟೇಸ್ಟಿ ಹಲ್ವಾ; ಇಲ್ಲಿದೆ ಕಾಶಿ ಹಲ್ವಾ ಮಾಡುವ ವಿಧಾನ

ಬೂದು ಕುಂಬಳಕಾಯಿಯಿಂದ ತಯಾರಿಸಬಹುದು ಸಖತ್ ಟೇಸ್ಟಿ ಹಲ್ವಾ; ಇಲ್ಲಿದೆ ಕಾಶಿ ಹಲ್ವಾ ಮಾಡುವ ವಿಧಾನ

ಬೂದು ಕುಂಬಳಕಾಯಿಯನ್ನು ಮಜ್ಜಿಗೆ ಹುಳಿ, ಪಲ್ಯ ಇತ್ಯಾದಿ ಖಾದ್ಯ ತಯಾರಿಸಲು ಬಳಸಲಾಗುತ್ತದೆ. ಅಷ್ಟೇ ಅಲ್ಲ, ಇದರಿಂದ ರುಚಿಕರವಾದ ಸಿಹಿ ಖಾದ್ಯ ತಯಾರಿಸಬಹುದು. ಬೂದು ಕುಂಬಳಕಾಯಿ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದೆ. ಕಾಶಿ ಹಲ್ವಾ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ. 

ಬೂದು ಕುಂಬಳಕಾಯಿ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದು ಕಬ್ಬಿಣಸ ಕ್ಯಾಲ್ಸಿಯಂ, ರಂಜಕ, ಸತು, ಮೆಗ್ನೀಸಿಯಮ್, ತಾಮ್ರ ಮತ್ತು ಮ್ಯಾಂಗನೀಸ್‌ನಂತಹ ಖನಿಜಗಳನ್ನು ಹೊಂದಿದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನವಿದೆ. ಇದನ್ನು ಸರಿಯಾದ ಜಾಗದಲ್ಲಿ ಸಂಗ್ರಹಿಸಿಟ್ಟರೆ ಬಹಳ ದೀರ್ಘಕಾಲದವರೆಗ ಸಂಗ್ರಹಿಸಬಹುದು.
icon

(1 / 11)

(Canva/Pinterest)

ಕರ್ನಾಟಕದ ಕರಾವಳಿ ಕಡೆಗೆ ಬೂದು ಕುಂಬಳಕಾಯಿಯಿಂದ ಮಜ್ಜಿಗೆ ಹುಳಿ, ಸಾಂಬಾರ್, ಪಲ್ಯ ಇತ್ಯಾದಿ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಅಷ್ಟೇ ಅಲ್ಲ ಇದರ ಸಿಪ್ಪೆಯನ್ನು ಸಹ ಎಸೆಯುವುದಿಲ್ಲ. ಇದರಿಂದ ಪಲ್ಯ ತಯಾರಿಸಬಹುದು. ಬೂದು ಕುಂಬಳಕಾಯಿಯಿಂದ ಸಾಂಬಾರ್ ಮಾತ್ರವಲ್ಲ ರುಚಿಕರ ಹಲ್ವಾವನ್ನು ತಯಾರಿಸಬಹುದು. ಇಲ್ಲಿದೆ ರುಚಿಕರವಾದ ಕಾಶಿ ಹಲ್ವಾ ಪಾಕವಿಧಾನ. 
icon

(2 / 11)

(Canva)

ಬೇಕಾಗುವ ಸಾಮಗ್ರಿಗಳು: ಬೂದು ಕುಂಬಳಕಾಯಿ- 4 ಕಪ್, ಸಕ್ಕರೆ- 2 ಕಪ್, ತುಪ್ಪ- ಮುಕ್ಕಾಲು ಕಪ್, ದ್ರಾಕ್ಷಿ-ಗೋಡಂಬಿ- ಸ್ವಲ್ಪ.
icon

(3 / 11)

(Pinterest)

(4 / 11)

ಮಾಡುವ ವಿಧಾನ: ಮೊದಲಿಗೆ ಬೂದು ಕುಂಬಳಕಾಯಿಯನ್ನು ಚೆನ್ನಾಗಿ ತೊಳೆಯಿರಿ. ನಂತರ ಇದರ ಸಿಪ್ಪೆಯನ್ನು ತೆಗೆದು ಒಳಗಿನ ಭಾಗವನ್ನು ಸಣ್ಣಗೆ ತುರಿಯಿರಿ.
icon

(5 / 11)

ಹಂತ-2: ಈಗ ಒಲೆ ಮೇಲೆ ಬಾಣಲೆಯಿಟ್ಟು ಅದಕ್ಕೆ 2 ಚಮಚದಷ್ಟು ತುಪ್ಪ ಹಾಕಿ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಹುರಿದು, ಒಂದು ತಟ್ಟೆಗೆ ಎತ್ತಿಡಿ.
icon

(6 / 11)

ಹಂತ-3: ನಂತರ ಅದೇ ಬಾಣಲೆಗೆ ತುರಿದ ಕುಂಬಳಕಾಯಿ ಹಾಕಿ ಹುರಿಯಿರಿ. ಇದನ್ನು ಚೆನ್ನಾಗಿ ಹುರಿಯಬೇಕು ಕುಂಬಳಕಾಯಿ ನೀರು ಬಿಟ್ಟುಕೊಳ್ಳುತ್ತದೆ. ಅದು ಆವಿಯಾಗುವವರೆಗೆ ಹುರಿಯಿರಿ. 
icon

(7 / 11)

ಹಂತ-4: ಕುಂಬಳಕಾಯಿಯನ್ನು ಚೆನ್ನಾಗಿ ಹುರಿದ ನಂತರ ಅದಕ್ಕೆ ಸಕ್ಕರೆ ಹಾಕಿ. ಈ ವೇಳೆ ಮತ್ತೆ ಸ್ವಲ್ಪ ನೀರು ಬಿಟ್ಟುಕೊಳ್ಳುತ್ತದೆ. ಚಮಚ ಬಿಡದೆ ತಿರುವುತ್ತಿರಿ. ಇದನ್ನು ಬಣ್ಣ ಬದಲಾಗುವವರೆಗೆ ಹುರಿಯಬೇಕು.
icon

(8 / 11)

ಹಂತ- 5: ಕೊನೆಗೆ ತುಪ್ಪ ಹಾಕಿ ಮತ್ತೆ ಬಿಡದೆ ಚಮಚದಿಂದ ತಿರುವುತ್ತಿರಿ. ಹಲ್ವಾ ಹದಕ್ಕೆ ಬಂದಾಗ ಇದಕ್ಕೆ ಹುರಿದಿಟ್ಟ ದ್ರಾಕ್ಷಿ-ಗೋಡಂಬಿ ಹಾಕಿದರೆ ರುಚಿಕರವಾದ ಕಾಶಿ ಹಲ್ವಾ ಅಥವಾ ಬೂದು ಕುಂಬಳಕಾಯಿ ಹಲ್ವಾ ಸವಿಯಲು ಸಿದ್ಧ.
icon

(9 / 11)

ಮನೆಗೆ ಅತಿಥಿಗಳು ಬಂದಾಗ ಈ ರುಚಿಕರವಾದ ಹಲ್ವಾವನ್ನು ಮಾಡಿಕೊಡಬಹುದು. ಒಮ್ಮೆ ಮಾಡಿ ನೋಡಿ ನೀವು ಕೂಡ ಖಂಡಿತ ಇಷ್ಟಪಡುತ್ತೀರಿ. ಕಾಶಿ ಹಲ್ವಾ ತಯಾರಿಸಲು ಸಕ್ಕರೆಯನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ನಿಮಗೆ ಸಕ್ಕರೆ ಇಷ್ಟವಿಲ್ಲದಿದ್ದರೆ ಬೆಲ್ಲದಿಂದಲೂ ಮಾಡಬಹುದು.
icon

(10 / 11)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ.
icon

(11 / 11)

ಇತರ ಗ್ಯಾಲರಿಗಳು