ಮನೆಯಲ್ಲೇ ತಯಾರಿಸಿ ರುಚಿಕರ ಆಲೂಗಡ್ಡೆ ಬೋಂಡಾ: ಸಂಜೆ ಚಹಾ ಹೀರುತ್ತಾ ಕರಿದ ತಿಂಡಿ ತಿನ್ನುವ ಮಜಾವೇ ಬೇರೆ, ಇಲ್ಲಿದೆ ಪಾಕವಿಧಾನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮನೆಯಲ್ಲೇ ತಯಾರಿಸಿ ರುಚಿಕರ ಆಲೂಗಡ್ಡೆ ಬೋಂಡಾ: ಸಂಜೆ ಚಹಾ ಹೀರುತ್ತಾ ಕರಿದ ತಿಂಡಿ ತಿನ್ನುವ ಮಜಾವೇ ಬೇರೆ, ಇಲ್ಲಿದೆ ಪಾಕವಿಧಾನ

ಮನೆಯಲ್ಲೇ ತಯಾರಿಸಿ ರುಚಿಕರ ಆಲೂಗಡ್ಡೆ ಬೋಂಡಾ: ಸಂಜೆ ಚಹಾ ಹೀರುತ್ತಾ ಕರಿದ ತಿಂಡಿ ತಿನ್ನುವ ಮಜಾವೇ ಬೇರೆ, ಇಲ್ಲಿದೆ ಪಾಕವಿಧಾನ

ಆಲೂಗಡ್ಡೆಯಿಂದ ತಯಾರಿಸಿದ ತಿಂಡಿಗಳು ರುಚಿಕರವಾಗಿರುತ್ತವೆ. ಅದರಲ್ಲೂ ಆಲೂಗಡ್ಡೆ ಬೋಂಡಾವಂತೂ ಹಲವರ ಫೇವರಿಟ್. ಸಂಜೆ ಚಹಾ ಜೊತೆ ಈ ಕರಿದ ತಿಂಡಿ ತಿನ್ನುತ್ತಿದ್ದರೆ ಅದರ ರುಚಿಯೇ ಬೇರೆ. ಇದರ ಪಾಕವಿಧಾನವು ತುಂಬಾ ಸರಳ. ಮಕ್ಕಳು ಇಷ್ಟಪಟ್ಟು ತಿಂತಾರೆ. ಆಲೂಗಡ್ಡೆ ಬೋಂಡಾ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸಂಜೆ ವೇಳೆ ಬಜ್ಜಿ, ಬೋಂಡಾ, ಪಕೋಡ ಇತ್ಯಾದಿ ಕರಿದ ತಿಂಡಿಗಳನ್ನು ತಿನ್ನಬೇಕು ಎಂದೆನಿಸುವುದು ಸಹಜ. ಹೀಗಾಗಿ ಸಂಜೆಯಾದ್ರೆ ಸಾಕು ಕರಿಯುವ ತಿಂಡಿಗಳ ಅಂಗಡಿ ಮುಂದೆ ಜನರು ಸಾಲುಗಟ್ಟಿ ನಿಂತಿರುತ್ತಾರೆ. ಪಕೋಡ, ಆಲೂಗಡ್ಡೆ ಬೋಂಡಾ ಇಷ್ಟಪಡುವವರ ಸಂಖ್ಯೆ ದೊಡ್ಡದಿದೆ. ಆಲೂಗಡ್ಡೆಯಿಂದ ಮಾಡಿದ ರುಚಿಕರವಾದ ಈ ತಿಂಡಿಗಳನ್ನು ತಯಾರಿಸುವುದು ಸಹ ತುಂಬಾ ಸುಲಭ. ಹೊರಗೆ ತಿನ್ನುವ ಬದಲು ಇದನ್ನು ಶುಚಿ, ರುಚಿಯಾಗಿ ಮನೆಯಲ್ಲೇ ಮಾಡಿಕೊಳ್ಳಬಹುದು. ಆಲೂಗಡ್ಡೆ ಬೋಂಡಾ ತಯಾರಿಸುವ ವಿಧಾನ ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
icon

(1 / 10)

(PC: Slurrp)

ಆಲೂಗಡ್ಡೆಯಿಂದ ಮಾಡಿದ ರುಚಿಕರವಾದ ಈ ತಿಂಡಿಗಳನ್ನು ತಯಾರಿಸುವುದು ಸಹ ತುಂಬಾ ಸುಲಭ. ಆಲೂಗಡ್ಡೆ ಬೋಂಡಾ ತಯಾರಿಸುವ ವಿಧಾನ ಇಲ್ಲಿದೆ.
icon

(2 / 10)

ಬೇಕಾಗುವ ಪದಾರ್ಥಗಳು: ಆಲೂಗಡ್ಡೆ- ಎರಡು, ಸಾಸಿವೆ- ಒಂದು ಚಮಚ, ಜೀರಿಗೆ- ಒಂದು ಚಮಚ, ಹಸಿ ಮೆಣಸಿನಕಾಯಿ- ಎರಡು, ಈರುಳ್ಳಿ- ಒಂದು, ಉಪ್ಪು ರುಚಿಗೆ ತಕ್ಕಷ್ಟು, ಕೊತ್ತಂಬರಿ ಪುಡಿ- ಅರ್ಧ ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ, ಗರಂ ಮಸಾಲೆ- ಅರ್ಧ ಚಮಚ, ಅರಿಶಿನ- ಅರ್ಧ ಚಮಚ, ನಿಂಬೆ ರಸ- 2 ಚಮಚ, ಮೆಣಸಿನ ಪುಡಿ- ಅರ್ಧ ಚಮಚ, ಕಡಲೆ ಹಿಟ್ಟು- ಕಾಲು ಕಪ್, ಅಕ್ಕಿ ಹಿಟ್ಟು- 4 ಚಮಚ, ನೀರು- ಅಗತ್ಯಕ್ಕೆ ತಕ್ಕಷ್ಟು, ಎಣ್ಣೆ- ಕರಿಯಲು ಬೇಕಾಗುವಷ್ಟು.
icon

(3 / 10)

(PC: Pinterest )

ಮಾಡುವ ವಿಧಾನ: ಆಲೂ ಬೋಂಡಾ ಮಾಡಲು, ಮೊದಲು 2 ದೊಡ್ಡ ಆಲೂಗಡ್ಡೆಯನ್ನು ಕುಕ್ಕರ್‌ನಲ್ಲಿ ಹಾಕಿ ಮೃದುವಾಗುವವರೆಗೆ ಬೇಯಿಸಿ. ಮೇಲ್ಭಾಗವನ್ನು ಸಿಪ್ಪೆ ತೆಗೆದು ಕೈಗಳಿಂದ ಹಿಸುಕಿ. ಈಗ ಒಲೆಯ ಮೇಲೆ ಬಾಣಲೆ ಇಟ್ಟು ಒಂದು ಚಮಚ ಎಣ್ಣೆ ಹಾಕಿ. ಎಣ್ಣೆಗೆ ಸಾಸಿವೆ, ಜೀರಿಗೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
icon

(4 / 10)

(5 / 10)

(PC: Pinterest)

ಹಂತ-2: ಈ ಮಿಶ್ರಣಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ ಬೆರೆಸಿ ಚೆನ್ನಾಗಿ ಹುರಿಯಿರಿ. ಅದು ಬೆಂದ ನಂತರ, ರುಚಿಗೆ ತಕ್ಕಷ್ಟು ಉಪ್ಪು, ಗರಂ ಮಸಾಲೆ ಮತ್ತು ಕೊತ್ತಂಬರಿ ಪುಡಿಯನ್ನು ಬೆರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಹಿಸುಕಿದ ಆಲೂಗಡ್ಡೆ ಬೆರಿಸಿ ಮಿಶ್ರಣ ಮಾಡಿ. ಕೊನೆಗೆ ಅರಿಶಿನ ಮತ್ತು ನಿಂಬೆ ರಸವನ್ನು ಹಾಕಿ ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ.
icon

(6 / 10)

ಹಂತ-3: ಒಂದು ಬಟ್ಟಲಿನಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು ಮತ್ತು ಉಪ್ಪು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಸ್ವಲ್ಪ ಅರಿಶಿನ ಮತ್ತು ಮೆಣಸಿನ ಪುಡಿ ಬೆರಿಸಿ ಮಿಶ್ರಣ ಮಾಡಿ. ಅದಕ್ಕೆ ಅಗತ್ಯಕ್ಕೆ ತಕ್ಕಷ್ಟು ನೀರು ಬೆರೆಸಿ ಮಿಶ್ರಣ ಮಾಡಿ ಹಿಟ್ಟನ್ನು ತಯಾರಿಸಿ.
icon

(7 / 10)

ಹಂತ-4: ಈಗ ಆಲೂಗಡ್ಡೆ ಮಿಶ್ರಣವನ್ನು ಸಣ್ಣ ಉಂಡೆಗಳಾಗಿ ಮಾಡಿ. ಒಲೆಯ ಮೇಲೆ ಬಾಣಲೆಯಿಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಉಂಡೆಯಂತೆ ಮಾಡಿರುವ ಆಲೂಗಡ್ಡೆ ಮಿಶ್ರಣವನ್ನು ಕಡಲೆ ಹಿಟ್ಟಿನ ಮಿಶ್ರಣಕ್ಕೆ ಅದ್ದಿ ಎಣ್ಣೆಗೆ ಬಿಡಿ. ಇದನ್ನು ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ. ನಂತರ ಹೊರತೆಗೆದು ತಟ್ಟೆಗೆ ಹಾಕಿದರೆ ರುಚಿಕರವಾದ ಆಲೂಗಡ್ಡೆ ಬೋಂಡಾ ತಿನ್ನಲು ಸಿದ್ಧ. 
icon

(8 / 10)

ಆಲೂಗಡ್ಡೆ ಬೋಂಡಾ ಪಾಕವಿಧಾನ ತುಂಬಾ ಸುಲಭ. ಮಕ್ಕಳಿಗಂತೂ ಖಂಡಿತ ಇಷ್ಟವಾಗುತ್ತೆ. ಒಮ್ಮೆ ಮಾಡಿ ನೋಡಿ, ನಿಮಗೂ ಇಷ್ಟವಾಗಬಹುದು. ಇದನ್ನು ಸಾಸ್ ಅಥವಾ ಹಸಿರು ಚಟ್ನಿಯೊಂದಿಗೆ ಬಿಸಿ ಬಿಸಿಯಾಗಿ ತಿನ್ನಿ.
icon

(9 / 10)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ.
icon

(10 / 10)

ಇತರ ಗ್ಯಾಲರಿಗಳು