ಈ ರೀತಿ ತಯಾರಿಸಿ ಬೆಳ್ಳುಳ್ಳಿ ರೈಸ್ ಬಾತ್; ಮಕ್ಕಳು ಇಷ್ಟಪಟ್ಟು ತಿಂತಾರೆ, ಇಲ್ಲಿದೆ ರೆಸಿಪಿ
ರುಚಿಕರ ಬೆಳ್ಳುಳ್ಳಿ ರೈಸ್ ಬಾತ್ ಅಥವಾ ಬೆಳ್ಳುಳ್ಳಿ ಅನ್ನ ತಯಾರಿಸುವುದು ತುಂಬಾ ಸರಳ. ದಿನಾ ಒಂದೇ ರೀತಿಯ ರೈಸ್ ಬಾತ್ ತಿಂದು ಬೇಜಾರಾಗಿದ್ದರೆ ಈ ಪಾಕವಿಧಾನವನ್ನು ಪ್ರಯತ್ನಿಸಿ. ರುಚಿಕರ ಬೆಳ್ಳುಳ್ಳಿ ರೈಸ್ ಬಾತ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
(1 / 8)
ದಿನಾ ಒಂದೇ ರೀತಿಯ ರೈಸ್ ಬಾತ್ ತಿಂದು ಬೇಜಾರಾಗಿದ್ದರೆ ಈ ಪಾಕವಿಧಾನವನ್ನು ಪ್ರಯತ್ನಿಸಿ. ರುಚಿಕರ ಬೆಳ್ಳುಳ್ಳಿ ರೈಸ್ ಬಾತ್ ಅಥವಾ ಬೆಳ್ಳುಳ್ಳಿ ಅನ್ನ ತಯಾರಿಸುವುದು ತುಂಬಾ ಸರಳ. ಬೆಳ್ಳುಳ್ಳಿ ಹಾಗೂ ವಿವಿಧ ಮಸಾಲೆಗಳನ್ನು ಹಾಕಿ ತಯಾರಿಸಲಾಗುವ ಈ ಖಾದ್ಯ ಬಹಳ ರುಚಿಕರವಾಗಿರುತ್ತದೆ.
(solarahome)(2 / 8)
ಬೆಳ್ಳುಳ್ಳಿ ಪ್ರಿಯರಿಗಂತೂ ಈ ರೆಸಿಪಿ ಖಂಡಿತ ಇಷ್ಟವಾಗುತ್ತದೆ. ರುಚಿಕರ ಬೆಳ್ಳುಳ್ಳಿ ರೈಸ್ ಬಾತ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
(Pinterest )(3 / 8)
ಬೇಕಾಗುವ ಪದಾರ್ಥಗಳು: ಅನ್ನ- ಒಂದು ಕಪ್, ಎಣ್ಣೆ- ಒಂದು ಚಮಚ, ಸಾಸಿವೆ- ¼ ಚಮಚ, ಮೆಂತ್ಯ- ಕಾಲು ಚಮಚ, ಕರಿಬೇವು- 12 ಎಲೆ, ಈರುಳ್ಳಿ- 1, ಬೆಳ್ಳುಳ್ಳಿ ಎಸಳು- ಒಂದು ಹಿಡಿ, ಟೊಮೆಟೊ- 2, ಉಪ್ಪು ರುಚಿಗೆ ತಕ್ಕಷ್ಟು, ಅರಿಶಿನ ಪುಡಿ- ಕಾಲು ಚಮಚ, ಮೆಣಸಿನ ಪುಡಿ- ಒಂದು ಚಮಚ.
(Canva)(4 / 8)
ಮಾಡುವ ವಿಧಾನ: ಒಲೆ ಮೇಲೆ ಬಾಣಲೆಯಿಟ್ಟು ಅದಕ್ಕೆ ಎಣ್ಣೆ (ತುಪ್ಪ ಅಥವಾ ಬೆಣ್ಣೆಯನ್ನೂ ಬಳಸಬಹುದು) ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಮೆಂತ್ಯ, ಸಾಸಿವೆ, ಕರಿಬೇವಿನ ಎಲೆ, ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ.
(Canva)(5 / 8)
ಹಂತ-2: ನಂತರ ಸಣ್ಣಗೆ ಕತ್ತರಿಸಿದ ಟೊಮೆಟೊ ಹಾಕಿ ಚೆನ್ನಾಗಿ ಹುರಿಯಿರಿ. ಇದಕ್ಕೆ ಉಪ್ಪು, ಅರಿಶಿನ ಪುಡಿ, ಕರಿಬೇವು ಮತ್ತು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ, ಹುಣಸೆಹಣ್ಣಿನ ರಸವನ್ನು ಬೆರಿಸಿ ಕುದಿಸಿ. ನಂತರ ಅನ್ನ ಹಾಕಿ ಕಲಸಿದರೆ ರುಚಿಕರವಾದ ಬೆಳ್ಳುಳ್ಳಿ ರೈಸ್ ಬಾತ್ ತಿನ್ನಲು ಸಿದ್ಧ.
(Pinterest)(6 / 8)
ಈ ರೈಸ್ ಬಾತ್ ತುಂಬಾ ರುಚಿಕರವಾಗಿರುತ್ತದೆ. ದಿನಾ ಒಂದೇ ರೀತಿಯ ರೈಸ್ ಬಾತ್ ಮಾಡುವ ಬದಲು ವಿಭಿನ್ನ ರೆಸಿಪಿಯನ್ನು ಪ್ರಯತ್ನಿಸಬಹುದು. ಮಕ್ಕಳಿಗೂ ಇಷ್ಟವಾಗಬಹುದು. ಮಕ್ಕಳ ಅಥವಾ ಆಫೀಸ್ ಊಟದ ಡಬ್ಬಕ್ಕೂ ಇದನ್ನು ಹಾಕಿ ಕಳುಹಿಸಬಹುದು.
(Pinterest)(7 / 8)
ಬೆಳ್ಳುಳ್ಳಿ ರೈಸ್ ಬಾತ್ ಅನ್ನು ಹಪ್ಪಳದೊಂದಿಗೆ ನೆಂಚಿಕೊಂಡು ತಿನ್ನಬಹುದು. ಇದು ಬಹಳ ರುಚಿಕರವಾಗಿರುತ್ತದೆ. ತೆಂಗಿನಕಾಯಿ ಚಟ್ನಿಯೊಂದಿಗೂ ಇದನ್ನು ತಿನ್ನಬಹುದು.
(Pinterest )ಇತರ ಗ್ಯಾಲರಿಗಳು