Rava Idli: 2ನೇ ಮಹಾಯುದ್ಧದ ಸಮಯದಲ್ಲಿ ಹುಟ್ಟಿದ ಈ ತಿಂಡಿಗೆ ಈಗಲೂ ಸಖತ್‌ ಡಿಮ್ಯಾಂಡ್‌;ರವೆ ಇಡ್ಲಿ ಸೃಷ್ಟಿಯಾದ ಇಂಟ್ರೆಸ್ಟಿಂಗ್‌ ಕಥೆ ಇಲ್ಲಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rava Idli: 2ನೇ ಮಹಾಯುದ್ಧದ ಸಮಯದಲ್ಲಿ ಹುಟ್ಟಿದ ಈ ತಿಂಡಿಗೆ ಈಗಲೂ ಸಖತ್‌ ಡಿಮ್ಯಾಂಡ್‌;ರವೆ ಇಡ್ಲಿ ಸೃಷ್ಟಿಯಾದ ಇಂಟ್ರೆಸ್ಟಿಂಗ್‌ ಕಥೆ ಇಲ್ಲಿದೆ

Rava Idli: 2ನೇ ಮಹಾಯುದ್ಧದ ಸಮಯದಲ್ಲಿ ಹುಟ್ಟಿದ ಈ ತಿಂಡಿಗೆ ಈಗಲೂ ಸಖತ್‌ ಡಿಮ್ಯಾಂಡ್‌;ರವೆ ಇಡ್ಲಿ ಸೃಷ್ಟಿಯಾದ ಇಂಟ್ರೆಸ್ಟಿಂಗ್‌ ಕಥೆ ಇಲ್ಲಿದೆ

ನಾಳೆ ಏನು ಟಿಫನ್‌ ಮಾಡೋದು ಅಂತ ಪ್ರತಿದಿನ ರಾತ್ರಿ ಎಲ್ಲಾ ಮಹಿಳೆಯರಿಗೆ ಕಾಡುವ ದೊಡ್ಡ ಚಿಂತೆ. ನಾವು ಏನೇ ಪ್ಲಾನ್‌ ಮಾಡಿದರೂ ಕೆಲವೊಮ್ಮೆ ಕೆಲಸದ ಒತ್ತಡದಿಂದ ಅಂದುಕೊಂಡದನ್ನು ಮಾಡಲಾಗುವುದಿಲ್ಲ. ಆಗ ನಮ್ಮ ಸಹಾಯಕ್ಕೆ ಬರುವುದೇ ದಿಢೀರ್‌ ತಿಂಡಿಗಳು.

ಎಷ್ಟೋ ರೀತಿಯ ಇನ್‌ಸ್ಟಂಟ್‌ ತಿಂಡಿಗಳನ್ನು ತಯಾರಿಸಬಹುದು. ಅದರಲ್ಲಿ ಸುಲಭವಾಗಿ ತಯಾರಿಸಬಹುದಾದ, ಹೆಚ್ಚಿನ ಸಾಮಗ್ರಿ ಬಳಸದ, ಎಲ್ಲರೂ ಇಷ್ಟಪಡುವ ತಿಂಡಿ ಎಂದರೆ ರವೆ ಇಡ್ಲಿ. 
icon

(1 / 14)

ಎಷ್ಟೋ ರೀತಿಯ ಇನ್‌ಸ್ಟಂಟ್‌ ತಿಂಡಿಗಳನ್ನು ತಯಾರಿಸಬಹುದು. ಅದರಲ್ಲಿ ಸುಲಭವಾಗಿ ತಯಾರಿಸಬಹುದಾದ, ಹೆಚ್ಚಿನ ಸಾಮಗ್ರಿ ಬಳಸದ, ಎಲ್ಲರೂ ಇಷ್ಟಪಡುವ ತಿಂಡಿ ಎಂದರೆ ರವೆ ಇಡ್ಲಿ. (PC: MTR - Mavalli Tiffin Rooms, Facebook user)

ಅಕ್ಕಿ ಇಡ್ಲಿ ಆದ್ರೆ ಹಿಂದಿನ ದಿನವೇ ಅಕ್ಕಿ ನೆನೆಸಬೇಕು, ರಾತ್ರಿ ಹಿಟ್ಟು ರುಬ್ಬಬೇಕು, ಅದನ್ನು ಫರ್ಮೆಂಟ್‌ ಮಾಡಬೇಕು, ನಂತರ ಇಡ್ಲಿ ಮಾಡಿ ತಿನ್ನಬೇಕು. ಆದರೆ ರವೆ ಇಡ್ಲಿ ಆ ರೀತಿ ಅಲ್ಲ. ಇತ್ತೀಚಿನ ದಿನಗಳಲ್ಲಿ ರೆಡಿ ಟು ಈಟ್‌ ರವೆ ಇಡ್ಲಿ ದೊರೆಯುತ್ತದೆ. ಅದನ್ನು ನೀರು ಅಥವಾ ಮೊಸರಿನಲ್ಲಿ ಮಿಕ್ಸ್‌ ಮಾಡಿ 10 ನಿಮಿಷ ಇಡ್ಲಿ ಬೇಯಿಸಿದರೆ ಮುಗಿಯಿತು. ಥಟ್‌ ಅಂತ ಬೆಳಗಿನ ಟಿಫನ್‌ ರೆಡಿ. 
icon

(2 / 14)

ಅದಿರಲಿ, ನಾವೆಲ್ಲಾ ಇದುವರೆಗೂ ಅನೇಕ ಬಾರಿ ಮನೆಯಲ್ಲಿ, ಹೊರಗೆ ಹೋಟೆಲ್‌ನಲ್ಲಿ ರವೆ ಇಡ್ಲಿ ತಿಂದಿದ್ದೇವೆ. ಆದರೆ ಎಂದಾದರೂ ರವೆ ಇಡ್ಲಿ ಹುಟ್ಟಿದ್ದು ಹೇಗೆ? ಎಲ್ಲಿ ಎಂಬ ಯೋಚನೆ ಮಾಡಿದ್ದೀರಾ? ಎಲ್ಲಾ ತಿಂಡಿ ತಿನಿಸುಗಳಿಗೂ ಒಂದೊಂದು ಮೂಲ ಇದೆ. ಹಾಗೇ ರವೆ ಇಡ್ಲಿಗೆ ಕೂಡಾ ಒಂದು ಹಿನ್ನೆಲೆ ಇದೆ. 
icon

(3 / 14)

ರವೆ ಇಡ್ಲಿ ದಕ್ಷಿಣ ಭಾರತದಲ್ಲಿ ಬಹಳ ಫೇಮಸ್‌. ಅಸಲಿಗೆ ರವೆ ಇಡ್ಲಿ ಹುಟ್ಟಿದ್ದೇ ಕರ್ನಾಟಕದಲ್ಲಿ. ಈ ವಿಚಾರ ಬಹಳಷ್ಟು ಜನರಿಗೆ ಗೊತ್ತಿಲ್ಲ. 
icon

(4 / 14)

1924ರಲ್ಲಿ 2ನೇ ಮಹಾಯುದ್ಧದ ಸಮಯದಲ್ಲಿ ಈ ರುಚಿಕರ ತಿಂಡಿ ಬೆಂಗಳೂರಿನಲ್ಲಿ ಜನ್ಮ ತಾಳಿತು. 
icon

(5 / 14)

1924ರಲ್ಲಿ 2ನೇ ಮಹಾಯುದ್ಧದ ಸಮಯದಲ್ಲಿ ಈ ರುಚಿಕರ ತಿಂಡಿ ಬೆಂಗಳೂರಿನಲ್ಲಿ ಜನ್ಮ ತಾಳಿತು. 

ಬೆಂಗಳೂರಿನ ಖ್ಯಾತ MTR (ಮಾವಳ್ಳಿ ಟಿಫನ್‌ ರೂಮ್‌) ರೆಸ್ಟೋರೆಂಟ್‌ ಬಾಣಸಿಗರು ಮೊದಲ ಬಾರಿಗೆ ರವೆ ಇಡ್ಲಿಯನ್ನು ಎರಡನೇ ಮಹಾಯುದ್ಧದ ಸಮಯದಲ್ಲಿ  ತಯಾರಿಸಿದರು. 
icon

(6 / 14)

ಆಗೆಲ್ಲಾ ಇಡ್ಲಿಗೆ ಅಕ್ಕಿ ಬಳಸಲಾಗುತ್ತಿತ್ತು. ಆದರೆ ಯುದ್ಧದ ಸಮಯದಲ್ಲಿ ಅಕ್ಕಿಯ ಕೊರತೆ ಉಂಟಾದ ಕಾರಣ ಎಂಟಿಆರ್‌ ಅಡುಗೆ ಮನೆಯಲ್ಲಿ ಮೊದಲ ಬಾರಿಗೆ ರವೆಯಿಂದ ಇಡ್ಲಿ ಮಾಡುವ ಪ್ರಯೋಗ ಆರಂಭವಾಯ್ತು. ಈ ಟ್ರಯಲ್‌ ಯಶಸ್ವಿ ಕೂಡಾ ಆಯ್ತು. 
icon

(7 / 14)

ರವೆಯಿಂದ ತಯಾರಿಸಿದ ಇಡ್ಲಿ ಎಲ್ಲರಿಗೂ ಇಷ್ಟವಾಯ್ತು. ತತ್‌ ಕ್ಷಣವೇ ಮಾಡಬಹುದಾದ ರವೆ ಇಡ್ಲಿಯ ರುಚಿಗೆ ಜನರು ಮಾರು ಹೋದರು. 
icon

(8 / 14)

'ಸಾಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ…' ಎಂದು ಡಾ. ರಾಜ್‌ಕುಮಾರ್‌, ಬಂಗಾರದ ಮನುಷ್ಯ ಸಿನಿಮಾದಲ್ಲಿ ಹಾಡಿದ್ದಾರೆ. ಅದೇ ರೀತಿ ಅಕ್ಕಿಯ ಕೊರತೆಯಿಂದ ಇಡ್ಲಿ ಮಾಡಲು ಆಗುವುದಿಲ್ಲ ಎಂದು ಬಾಣಸಿಗರು ಸುಮ್ಮನೆ ಕುಳಿತಿದ್ದರೆ ರುಚಿಯಾದ ರವೆ ಇಡ್ಲಿ ನಮಗೆ ಪರಿಚಯವಾಗುತ್ತಿರಲಿಲ್ಲ. 
icon

(9 / 14)

ಆಗ ಸೃಷ್ಟಿಯಾದ ರವೆ ಇಡ್ಲಿಗೆ ಈಗ ಒಂದಿಷ್ಟು ಕ್ಯಾರೆಟ್‌, ಬಟಾಣಿ, ಗೋಡಂಬಿ ಸೇರಿಸಿ ರುಚಿಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. 
icon

(10 / 14)

ರವೆ ಇಡ್ಲಿ ರೀತಿಯಲ್ಲೇ ಅನೇಕ ತಿಂಡಿಗಳು ಕೂಡಾ ಇದೇ ರೀತಿ ಕಷ್ಟದ ಸಮಯದಲ್ಲಿ ಕೈ ಹಿಡಿದಿದೆ. ಅದ್ಭುತ ರುಚಿಯ ಮೂಲಕ ಜನರ ಮೆಚ್ಚುಗೆ ಗಳಿಸಿವೆ. 
icon

(11 / 14)

250 ಗ್ರಾಂ ರವೆ, 2 ಕಪ್‌ ಮೊಸರು, ಅಗತ್ಯಕ್ಕೆ ತಕ್ಕಷ್ಟು ನೀರು, ಉಪ್ಪು, ಒಂದಿಷ್ಟು ಎಣ್ಣೆ ಇದ್ದರೆ ರವೆ ಇಡ್ಲಿ ತಯಾರಿಸಬಹುದು. ಜೊತೆಗೆ ಚಟ್ನಿ ಅಥವಾ ಸಾಗು ಇದ್ದರೆ ಅದರ ರುಚಿ ದುಪ್ಪಟ್ಟಾಗುತ್ತದೆ. 
icon

(12 / 14)

ಮೊಸರು ಒಡಕಲು ಇಲ್ಲದಂತೆ ಬೀಟ್‌ ಮಾಡಿ, ಅದರೊಂದಿಗೆ ರವೆ ಸೇರಿಸಿ ಮಿಕ್ಸ್‌ ಮಾಡಿ ಮುಚ್ಚಳ ಮುಚ್ಚಿ ಮಿಶ್ರಣವನ್ನು 20 ನಿಮಿಷ ಬಿಡಿ. ನಂತರ ಅಗತ್ಯಕ್ಕೆ ತಕ್ಕಂತೆ ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್‌ ಮಾಡಿ. 
icon

(13 / 14)

ಬ್ಯಾಟರ್‌ ಬಹಳ ಗಟ್ಟಿಯಾಗಿ ಅಥವಾ ತೆಳ್ಳಗೆ ಇರಬಾರದು. ಇಡ್ಲಿ ಪ್ಲೇಟ್‌ಗಳಗೆ ಸ್ವಲ್ಪ ಎಣ್ಣೆ ಸವರಿ ಮುಕ್ಕಾಲು ಭಾಗ ಇಡ್ಲಿ ಹಿಟ್ಟು ಸೇರಿಸಿ, 10 ನಿಮಿಷ ಹಬೆಯಲ್ಲಿ ಬೇಯಿಸಿ. ಕ್ಯಾರೆಟ್‌ ತುರಿ, ಗೋಡಂಬಿ, ಬಟಾಣಿ ಬಳಸಿದರೆ ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. 
icon

(14 / 14)

ಇತರ ಗ್ಯಾಲರಿಗಳು