Corn Chaat: ಹತ್ತೇ ನಿಮಿಷದಲ್ಲಿ ಕಾರ್ನ್​ ಚಾಟ್ ಮಾಡುವ ವಿಧಾನ ಇಲ್ಲಿದೆ; ಬಾಯಿ ಚಪ್ಪರಿಸಿ ತಿನ್ನುವ ರುಚಿ ನೀಡುತ್ತೆ ಜೋಳದ ಈ ರೆಸಿಪಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Corn Chaat: ಹತ್ತೇ ನಿಮಿಷದಲ್ಲಿ ಕಾರ್ನ್​ ಚಾಟ್ ಮಾಡುವ ವಿಧಾನ ಇಲ್ಲಿದೆ; ಬಾಯಿ ಚಪ್ಪರಿಸಿ ತಿನ್ನುವ ರುಚಿ ನೀಡುತ್ತೆ ಜೋಳದ ಈ ರೆಸಿಪಿ

Corn Chaat: ಹತ್ತೇ ನಿಮಿಷದಲ್ಲಿ ಕಾರ್ನ್​ ಚಾಟ್ ಮಾಡುವ ವಿಧಾನ ಇಲ್ಲಿದೆ; ಬಾಯಿ ಚಪ್ಪರಿಸಿ ತಿನ್ನುವ ರುಚಿ ನೀಡುತ್ತೆ ಜೋಳದ ಈ ರೆಸಿಪಿ

  • Corn Chaat recipe in kannada: ಜಾತ್ರೆಗಳಲ್ಲಿ, ರಸ್ತೆ ಬದಿ ಕಪ್​ ಒಳಗೆ ಹಾಕಿ ಕಾರ್ನ್​ ಚಾಟ್ ಮಾರಾಟ ಮಾಡುತ್ತಾ ಇರುವುದನ್ನ ನೋಡಿರುತ್ತೀರ. ಅದರ ಪರಿಮಳ, ರುಚಿಗೆ ಮನಸೋಲುವವರೇ ಹೆಚ್ಚು. ಬಾಯಲ್ಲಿ ನೀರೂರಿಸುವ ಕಾರ್ನ್​ ಚಾಟ್ ಮಸಾಲಾವನ್ನು ಮಳೆಗಾಲ-ಚಳಿಗಾಲದಲ್ಲಿ ಮನೆಯಲ್ಲಿಯೇ ತಯಾರಿಸಿ ಕುಟುಂಬದ ಎಲ್ಲರೂ ಸವಿಯಿರಿ. ಕಾರ್ನ್​ ಚಾಟ್ ಮಾಡುವ ವಿಧಾನ ಇಲ್ಲಿದೆ ನೋಡಿ.

ಪ್ಯಾನ್​​ನಲ್ಲಿ ನೀರು ಹಾಕಿ, ಅದಕ್ಕೆ ಸ್ವೀಟ್​ ಕಾರ್ನ್ ಕಾಳುಗಳನ್ನು (  ಬಿಡಿಸಿದ ಸಿಹಿ ಜೋಳ) ಹಾಕಿ 7-8 ನಿಮಿಷ ಬೇಯಿಸಿ. 
icon

(1 / 5)

ಬೇಯಿಸಿದ ಜೋಳವನ್ನು ಬಿಸಿ ನೀರಿನಿಂದ ತೆಗೆದು ಬೇರೊಂದು ಪ್ಯಾನ್​​ಗೆ ಹಾಕಿ. ಇದಕ್ಕೆ ಒಂದು ಟೀಸ್ಪೂನ್​ ಬೆಣ್ಣೆ ಹಾಕಿ ಒಂದು ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿ. 
icon

(2 / 5)

ನಂತರ ಸ್ಟವ್​ ಆಫ್​ ಮಾಡಿ ಬಿಸಿ ಇರುವಾಗಲೇ ಒಂದು ಬೌಲ್​ಗೆ ಹಾಕಿ.  
icon

(3 / 5)

ನಂತರ ಸ್ಟವ್​ ಆಫ್​ ಮಾಡಿ ಬಿಸಿ ಇರುವಾಗಲೇ ಒಂದು ಬೌಲ್​ಗೆ ಹಾಕಿ.  

ಇದಕ್ಕೆ ಕಾಲು ಟೀಸ್ಪೂನ್​​ ಸ್ವಲ್ಪ ಅಚ್ಚ ಖಾರದ ಪುಡಿ, ಕಾಲು ಟೀಸ್ಪೂನ್ ಜೀರಿಗೆ ಪುಡಿ, ಅರ್ಧ ಟೀಸ್ಪೂನ್​ ಚಾಟ್​ ಮಸಾಲಾ, ಚಿಟಿಕೆ ಕಾಳುಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕೊನೆಯಲ್ಲಿ ಅರ್ಧ ನಿಂಬೆ ಹಣ್ಣಿನ ರಸ ಹಾಕಿ ಎಲ್ಲವನ್ನೂ ಚೆನ್ನಾಗಿ ಕಲಕಿ. 
icon

(4 / 5)

ಈಗ ನಿಮ್ಮ ಕಾರ್ನ್​ ಚಾಟ್ ರೆಡಿ. ಬಿಸಿ ಬಿಸಿ ಇರುವಾಗಲೆ ಸವಿಯಿರಿ, ತಣ್ಣಗಾದ ಮೇಲೆ ತಿಂದರೆ ರುಚಿ ತಿಳಿಯುವುದಿಲ್ಲ. 
icon

(5 / 5)

ಇತರ ಗ್ಯಾಲರಿಗಳು