Bassaru Recipe: ರಾಗಿಮುದ್ದೆಗೆ ಬೆಸ್ಟ್ ಕಾಂಬಿನೇಶನ್ ಬಸ್ಸಾರು ತಯಾರಿಸುವ ವಿಧಾನ ಇಲ್ಲಿದೆ; ನಿಮ್ಮ ಕಡೆ ಯಾವ ರೀತಿ ಮಾಡ್ತೀರ?
ಕರ್ನಾಟಕದ ದಕ್ಷಿಣ ಭಾಗದ ಅಡುಗೆಗಳಲ್ಲಿ ಬಸ್ಸಾರು ಕೂಡಾ ಬಹಳ ಫೇಮಸ್. ರಾಗಿಮುದ್ದೆಯೊಂದಿಗೆ ಇದನ್ನು ಸೇವಿಸುತ್ತಿದ್ದರೆ, ಇದರ ರುಚಿಗೆ ಬೇರೆ ಯಾವುದೂ ಸಮ ಇಲ್ಲ ಎನಿಸೋದು ಖಂಡಿತ.
(1 / 7)
ಬಸ್ಸಾರನ್ನು ವಿವಿಧ ರೀತಿಯಲ್ಲಿ ತಯಾರಿಸಬಹುದು. ತೊಗರಿಬೇಳೆ+ದಂಟಿನ ಸೊಪ್ಪು, ತೊಗರಿಬೇಳೆ+ ಸಬ್ಬಸಿಗೆ ಸೊಪ್ಪು+ಹುರಳಿಕಾಯಿ, ಹೆಸರುಕಾಳು+ಅಲಸಂದೆ+ಸೊಪ್ಪುಗಳು, ತೊಗರಿಬೇಳೆ, ಅಲಸಂದೆ ಹೆಸರುಕಾಳಿನ ಜೊತೆಗೆ ಸೊಪ್ಪುಗಳು, ತೊಗರಿಬೇಳೆ+ನುಗ್ಗೆಸೊಪ್ಪು+ಹೆಸರುಕಾಳು, ತೊಗರಿಬೇಳೆ + ಹೀರೆಕಾಯಿ+ ಸೊಪ್ಪು ಹೀಗೆ ಯಾವುದೇ ಕಾಂಬಿನೇಷನ್‌ನಲ್ಲಿ ತಯಾರಿಸಬಹುದು. (PC: Renuka Manjunath )
(2 / 7)
ಬಸ್ಸಾರು ಮಾಡುವಾಗ ಯಾವುದೇ ಕಾಳುಗಳನ್ನು ಪೂರ್ತಿ ಬೇಯಿಸಬಾರದು, ಹಾಗಂತ ಗಟ್ಟಿಯೂ ಇರಬಾರದು. ಹದವಾಗಿ ಬೆಂದಿರಬೇಕು. ಸೊಪ್ಪನ್ನು ಸಣ್ಣಗೆ ಹೆಚ್ಚಿ ಬೆಂದ ಬೇಳೆಗೆ ಹಾಕಿ ನೇರವಾಗಿ ಒಲೆಯ ಮೇಲಿಟ್ಟು ಉಪ್ಪು ಹಾಕಿ ಬೇಯಿಸಬೇಕು. ನೀರು ನಮಗೆಷ್ಟು ಬೇಕೋ ಅಷ್ಟು ಅಡ್ಜೆಸ್ಟ್ ಮಾಡಿಕೊಳ್ಳಬೇಕು. ಬೆಂದ ನಂತರ ಕಟ್ಟು ಬಸಿದು ಕೊಳ್ಳಬೇಕು.
(3 / 7)
ಆ ನಂತರ ಸೊಪ್ಪು ಬೇಳೆಗೆ , ಈರುಳ್ಳಿ, ಹಸಿಮೆಣಸಿನಕಾಯಿ, ಕರಿಬೇವು ಕೊತ್ತಂಬರಿ ಸೊಪ್ಪಿನೊಂದಿಗೆ ಒಗ್ಗರಣೆ ಹಾಕಿ , ಮೇಲೆ ಹಸಿ ತೆಂಗಿನತುರಿ ಸೇರೆಸಿ ಪಲ್ಯ ಮಾಡಿಟ್ಟುಕೊಳ್ಳಬೇಕು.
(4 / 7)
ಖಾರದ ಪುಡಿಗೆ ಬೇಕಾಗುವ ಸಾಮಾನುಗಳು ಧನಿಯಾ -1 ಕೆಜಿ,ಬ್ಯಾಡಗಿ ಮೆಣಸಿನಕಾಯಿ - 1/2ಅರ್ಧ ಕೆಜಿ,ಗುಂಟೂರು ಮೆಣಸಿನಕಾಯಿ- 1/2ಕೆಜಿ,ಮೆಂತ್ಯ-100ಗ್ರಾಂ,ಕರಿಮೆಣಸು- 100 ಗ್ರಾಂ,ಜೀರಿಗೆ- 250 ಗ್ರಾಂ,ಕಡಲೆಬೇಳೆ- ಒಂದು ಪಾವು,ಉದ್ದಿನ ಬೇಳೆ- 150 ಗ್ರಾಂ,ತೊಗರಿ ಬೇಳೆ- 150 ಗ್ರಾಂ,ಅರಶಿಣ ಕೊಂಬು- 50 ಗ್ರಾಂ,ಕರಿಬೇವು - 2 ಕಟ್ಟು,ಸಾಸಿವೆ : 50 ಗ್ರಾಂ,ಎಲ್ಲವನ್ನೂ ಪ್ರತ್ಯೇಕವಾಗಿ , ಹದವಾಗಿ ಹುರಿದು ಪುಡಿಮಾಡಿಟ್ಟುಕೊಳ್ಳಬೇಕು.
(5 / 7)
ಇನ್ನು ಬಸ್ಸಾರಿಗೆ ಮಸಾಲೆ ಮಾಡಿಕೊಳ್ಳಲುಸ್ವಲ್ಪ ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು, 15 ಹಸಿ ಬೆಳ್ಳುಳ್ಳಿ ಎಸಳು, ಖಾರದ ಪುಡಿ (ಬಸಿದುಕೊಂಡ ಸೊಪ್ಪು ಬೇಳೆ ನೀರು ಮತ್ರು ನಮಗೆ ಬೇಕಾಗುವಷ್ಟು ಸಾರಿಗನುಗುಣವಾಗಿ ಪುಡಿ), ಗ್ಯಾಸ್ ಸ್ಟವ್ ಮೇಲೆ ಹಿಡಿಯಾಗಿ ಒಂದು ಈರುಳ್ಳಿಯನ್ನು ಸುಟ್ಟು ಸಿಪ್ಪೆ ಬಿಡಿಸಿ ಸೇರಿಸಬೇಕು. ಅಥವಾ ಒಂದು ಈರುಳ್ಳಿಯನ್ನು ಹೆಂಚಿನ ಮೇಲೆ ಅರ್ಧ ಚಮಚ ಎಣ್ಣೆಯಲ್ಲಿ ಹುರಿದರೆ ಸಾಕು .ಅದನ್ನೇ ಸೇರಿಸಿದರಾಯ್ರು, ಅರಿಶಿನ, ಇದೆಲ್ಲವನ್ನೂ ನುಣ್ಣಗೆ ರುಬ್ಬಿ ನಾವು ಸಾಂಬಾರ್ ಮಾಡುವ ಪಾತ್ರೆಗೆ ಹಾಕಿಕೊಳ್ಳಬೇಕು.
(6 / 7)
ಅದಕ್ಕೆ ಬೇಕಾಗುವಷ್ಟು ಹುಣಿಸೆ ಹುಳಿಯನ್ಬು ರುಬ್ಬಿದ ಖಾರಕ್ಕೆ ಸೇರಿಸಿ ಉಪ್ಪು ಹಾಕಿ ಚೆನ್ನಾಗಿ ಕುದಿಸಬೇಕು. ಕುದಿಯುವಾಗ ಬಸಿದ ನೀರನ್ನು ಸೇರಿಸಿ, ಒಂದೆರಡು ಕಡ್ಡಿ ಕರಿಬೇವನ್ನು ಅದರಲ್ಲಿ ಕುದಿಯಲು ಹಾಕಿ , ಉಪ್ಪು ಖಾರ ಹುಳಿ ರುಚಿಗೆ ಹದ ಮಾಡಿಕೊಂಡು ಕುದಿಸಿ ಇಳಿಸಬೇಕು.
ಇತರ ಗ್ಯಾಲರಿಗಳು