Sankranti Recipe: ಮಕರ ಸಂಕ್ರಾಂತಿಗೆ ವಿಶೇಷ ಖಾದ್ಯಗಳನ್ನು ತಯಾರಿಸುವ ಪ್ಲಾನ್‌ ಇದ್ಯಾ; ಹಾಗಿದ್ರೆ ಈ ತಿನಿಸುಗಳು ನಿಮ್ಮ ಪಟ್ಟಿಯಲ್ಲಿರಲಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sankranti Recipe: ಮಕರ ಸಂಕ್ರಾಂತಿಗೆ ವಿಶೇಷ ಖಾದ್ಯಗಳನ್ನು ತಯಾರಿಸುವ ಪ್ಲಾನ್‌ ಇದ್ಯಾ; ಹಾಗಿದ್ರೆ ಈ ತಿನಿಸುಗಳು ನಿಮ್ಮ ಪಟ್ಟಿಯಲ್ಲಿರಲಿ

Sankranti Recipe: ಮಕರ ಸಂಕ್ರಾಂತಿಗೆ ವಿಶೇಷ ಖಾದ್ಯಗಳನ್ನು ತಯಾರಿಸುವ ಪ್ಲಾನ್‌ ಇದ್ಯಾ; ಹಾಗಿದ್ರೆ ಈ ತಿನಿಸುಗಳು ನಿಮ್ಮ ಪಟ್ಟಿಯಲ್ಲಿರಲಿ

  • ಭಾರತ ದೇಶದಾದ್ಯಂತ ಮಕರ ಸಂಕ್ರಾಂತಿಯನ್ನು ಸಡಗರದಿಂದ ಆಚರಿಸುತ್ತಾರೆ. ಸುಗ್ಗಿ ಹಬ್ಬ ಎಂದೇ ಕರೆಸಿಕೊಳ್ಳುವ ಮಕರ ಸಂಕ್ರಾಂತಿಯಲ್ಲಿ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸುವುದು ವಿಶೇಷ. ಈ ಬಾರಿ ನೀವು ಹಬ್ಬಕ್ಕೆ ವಿಶೇಷ ತಿನಿಸುಗಳನ್ನು ತಯಾರಿಸಬೇಕು ಅಂತಿಂದ್ರೆ ಇಲ್ಲಿದೆ ನಿಮಗಾಗಿ ಐಡಿಯಾ.

ಮಕರ ಸಂಕ್ರಾಂತಿ ಹಬ್ಬ ಭಾರತದಲ್ಲಿ ನಡೆಯುವ ಪ್ರಮುಖ ಹಬ್ಬಗಳಲ್ಲಿ ಒಂದು. ದಕ್ಷಿಣದಲ್ಲಿ ಮಾತ್ರವಲ್ಲ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ಹಬ್ಬಕ್ಕೆ ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರಿದೆ. ಈ ಹಬ್ಬಕ್ಕೆ ವಿಶೇಷ ತಿನಿಸುಗಳನ್ನು ತಯಾರಿಸುವುದು ವಾಡಿಕೆ. ಇಂತಹ ಖಾದ್ಯಗಳ ಪರಿಚಯ ಇಲ್ಲಿದೆ. 
icon

(1 / 7)

ಪೊಂಗಲ್‌: ಮಕರ ಸಂಕ್ರಾಂತಿಯಲ್ಲಿ ಪೊಂಗಲ್‌ ಬಹಳ ವಿಶೇಷ. ಸಾಮಾನ್ಯವಾಗಿ ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿ ಪೊಂಗಲ್‌ ತಯಾರಿಸುತ್ತಾರೆ. ಅನ್ನ, ಹೆಸರುಬೇಳೆ, ಜೀರಿಗೆ, ಕಾಳುಮೆಣಸು, ಕರಿಬೇವು, ಶುಂಠಿ ಹಾಕಿ ತಯಾರಿಸುವ ಪೊಂಗಲ್‌ ಆರೋಗ್ಯಕ್ಕೂ ಉತ್ತಮ. ಅನ್ನ, ಬೇಳೆಯೊಂದಿಗೆ ಬೆಲ್ಲ ಬೆರೆಸಿ ಸಿಹಿ ಪೊಂಗಲ್‌ ಕೂಡ ತಯಾರಿಸಬಹುದು. 
icon

(2 / 7)

ಪೂರನ್‌ ಪೋಲಿ: ಇದನ್ನು ಹೋಳಿಗೆ, ಒಬ್ಬಟ್ಟು ಎಂದು ಕರ್ನಾಟಕದಲ್ಲಿ ಕರೆಯುತ್ತಾರೆ. ಬೇಳೆ, ಮೈದಾಹಿಟ್ಟು, ಬೆಲ್ಲ, ಏಲಕ್ಕಿ ಪುಡಿ, ತುಪ್ಪ ಇಷ್ಟಿದ್ದರೆ ಸಿಹಿಯಾದ ಹೋಳಿಗೆ ಸವಿಯಲು ಸಿದ್ಧವಾಗುತ್ತದೆ. 
icon

(3 / 7)

ಎಳ್ಳುಂಡೆ: ಮಕರ ಸಂಕ್ರಾಂತಿಯ ಸಾಂಪ್ರದಾಯಿಕ ತಿನಿಸುಗಳಲ್ಲಿ ಎಳ್ಳುಂಡೆ ಕೂಡ ಒಂದು. ಹುರಿದ ಎಳ್ಳು, ಬೆಲ್ಲದ ಪಾಕ ಸೇರಿಸಿ ತಯಾರಿಸುವ ಎಳ್ಳುಂಡೆ ರುಚಿ ನಿಜಕ್ಕೂ ಅದ್ಭುತ. 
icon

(4 / 7)

ಪಾಯಸ: ಹಬ್ಬವೆಂದ ಮೇಲೆ ಪಾಯಸ ಇಲ್ಲದೇ ಇರಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಮಕರ ಸಂಕ್ರಾಂತಿಗೆ ಅಕ್ಕಿ ಪಾಯಸ ಮಾಡುತ್ತಾರೆ. 
icon

(5 / 7)

ಗುರ್‌ ಹಲ್ವಾ: ಇದು ಉತ್ತರ ಭಾರತದ ಕಡೆ ಸಂಕ್ರಾಂತಿಗೆ ತಯಾರಿಸುವ ವಿಶೇಷ ರೆಸಿಪಿ. ಗುರ್‌ ಹಲ್ವಾ ಎನ್ನುವುದು ಗೋಧಿಹಿಟ್ಟು, ಬೆಲ್ಲ, ತುಪ್ಪದಿಂದ ಮಾಡುವ ವಿಶೇಷ ಸಿಹಿತಿನಿಸು.
icon

(6 / 7)

ಮಕರ ಛವ್ಲಾ: ಇದು ಒಡಿಶಾದಲ್ಲಿ ಮಕರ ಸಂಕ್ರಾಂತಿ ಮಾಡುವ ಖಾದ್ಯ. ಹೊಸದಾಗಿ ಬೆಳೆದ ಬೆಳೆಯಿಂದ ಅದನ್ನು ತಯಾರಿಸಲಾಗುತ್ತದೆ. ನಮ್ಮ ಹೊಲದಲ್ಲಿ ಬೆಳೆದ ಅಕ್ಕಿಯನ್ನು ಪುಡಿ ಮಾಡಿ ಅದಕ್ಕೆ  ಹಾಲು, ಕಬ್ಬಿನಹಾಲು, ಬಾಳೆಹಣ್ಣು, ತೆಂಗಿನತುರಿ ಸೇರಿಸಿ ತಯಾರಿಸಬಹುದಾಗಿದೆ.  
icon

(7 / 7)

ಇತರ ಗ್ಯಾಲರಿಗಳು