ಆಹಾ.. ಇದು ಆಲಿಯಾ ಭಟ್ ರೆಸಿಪಿ; 2024ರ ವರ್ಷಾಂತ್ಯ ಮುಗಿಯೋ ಮುನ್ನ ಈ 3 ಆರೋಗ್ಯಕರ, ರುಚಿಕರ, ಸ್ವಾದಿಷ್ಟ ಖಾದ್ಯ ನೀವೂ ಟ್ರೈ ಮಾಡಿ
- ನಟಿ ಆಲಿಯಾ ಭಟ್ಗೆ ಕೆಲವು ಖಾದ್ಯಗಳೆಂದರೆ ಪಂಚಪ್ರಾಣ. ಏಕೆಂದರೆ ಇವುಗಳು ರುಚಿಯ ಜೊತೆಗೆ ಆರೋಗ್ಯಕ್ಕೂ ಬೆಸ್ಟ್. ನೀವು ಸಹ ಆಲಿಯಾ ಅವರ ನೆಚ್ಚಿನ ಖಾದ್ಯಗಳನ್ನು ಮನೆಯಲ್ಲಿ ಮಾಡಲು ಪ್ರಯತ್ನಿಬೇಕಾ? 2024ರ ಕ್ಯಾಲೆಂಡರ್ ವರ್ಷ ಮುಗಿಯುವ ಮೊದಲೇ ಈ ರೆಸಿಪಿ ಮಾಡಿ ತಿನ್ನಲು ಪ್ರಯತ್ನಿಸಬೇಕೇ? ಮುಳ್ಳುಸೌತೆ ಸಬ್ಜಿಯಿಂದ ಚೀಯಾ ಪುಡ್ಡಿಂಗ್‌ವರೆಗೆ… ಇಲ್ಲಿದೆ ರೆಸಿಪಿ ವಿಧಾನ.
- ನಟಿ ಆಲಿಯಾ ಭಟ್ಗೆ ಕೆಲವು ಖಾದ್ಯಗಳೆಂದರೆ ಪಂಚಪ್ರಾಣ. ಏಕೆಂದರೆ ಇವುಗಳು ರುಚಿಯ ಜೊತೆಗೆ ಆರೋಗ್ಯಕ್ಕೂ ಬೆಸ್ಟ್. ನೀವು ಸಹ ಆಲಿಯಾ ಅವರ ನೆಚ್ಚಿನ ಖಾದ್ಯಗಳನ್ನು ಮನೆಯಲ್ಲಿ ಮಾಡಲು ಪ್ರಯತ್ನಿಬೇಕಾ? 2024ರ ಕ್ಯಾಲೆಂಡರ್ ವರ್ಷ ಮುಗಿಯುವ ಮೊದಲೇ ಈ ರೆಸಿಪಿ ಮಾಡಿ ತಿನ್ನಲು ಪ್ರಯತ್ನಿಸಬೇಕೇ? ಮುಳ್ಳುಸೌತೆ ಸಬ್ಜಿಯಿಂದ ಚೀಯಾ ಪುಡ್ಡಿಂಗ್‌ವರೆಗೆ… ಇಲ್ಲಿದೆ ರೆಸಿಪಿ ವಿಧಾನ.
(1 / 9)
ಬಾಲಿವುಡ್ ನಟಿ ಆಲಿಯಾ ಭಟ್ ಈಗ ತಮ್ಮ ಮಗುವಿನೊಂದಿಗೆ ಸಮಯ ಕಳೆಯುತ್ತಿದ್ದಾರೆ. ಅವರು ಮನೆಯಲ್ಲಿ ತಾವು ಇಷ್ಟಪಟ್ಟು ತಿನ್ನುವ ಕೆಲವು ರೆಸಿಪಿಗಳ ಬಗ್ಗೆ ಹಂಚಿಕೊಂಡಿದ್ದರು. 2019 ಮತ್ತು 2020 ರಲ್ಲಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಇನ್ ಮೈ ಕಿಚನ್‌ನ ಸಂಚಿಕೆ 1 ಮತ್ತು 2 ರಲ್ಲಿ ಆಲಿಯಾ ಹಾಗೂ ಅವರ ಬಾಣಸಿಗ ಕೆಲವು ರೆಸಿಪಿಗಳನ್ನು ತಯಾರಿಸಿರುವ ವಿಡಿಯೊಗಳಿವೆ. ಈ ರೆಸಿಪಿಗಳನ್ನು ಬಹಳ ಬೇಗ ತಯಾರಿಸಬಹುದು.
(YouTube/Alia Bhatt, healthmylifestyle.com and mrsjoneskitchen.com)(2 / 9)
ಬೀಟ್ರೂಟ್ ಸಲಾಡ್, ಮುಳ್ಳುಸೌತೆ ಸಬ್ಜಿ, ಚೀಯಾ ಪುಡ್ಡಿಂಗ್ ಆಲಿಯಾ ಭಟ್ ಫೇವರಿಟ್ ಖಾದ್ಯಗಳಾಗಿವೆ. ಅವರು ಮನೆಯಲ್ಲಿ ಈ ಖಾದ್ಯಗಳನ್ನು ಹೆಚ್ಚಾಗಿ ತಯಾರಿಸಿ ತಿನ್ನಲು ಇಷ್ಟಪಡುತ್ತಾರೆ. ಇದನ್ನು ಮಾಡೋದು ಹೇಗೆ ನೋಡಿ. ಇದನ್ನು 2024ರ ವರ್ಷಾಂತ್ಯ ಮುಗಿಯುವುದರೊಳಗೆ ನೀವು ಮನೆಯಲ್ಲಿ ಟ್ರೈ ಮಾಡಿ.
(3 / 9)
ಬೀಟ್ರೂಟ್ ಸಲಾಡ್
ಆಲಿಯಾ ಭಟ್ ಅವರ ಬೀಟ್ರೂಟ್ ಸಲಾಡ್‌ಗೆ 1 ಬೇಯಿಸಿದ ಮತ್ತು ತುರಿದ ಬೀಟ್ರೂಟ್, 1 ಕಪ್ ಮೊಸರು, ಒಂದು ಚಿಟಿಕೆ ಕಾಳುಮೆಣಸಿನ ಪುಡಿ, ಒಂದು ಚಿಟಿಕೆ ಚಾಟ್ ಮಸಾಲಾ ಬೇಕು. ಒಗ್ಗರಣೆಗೆ ಕಾಲು ಚಮಚ ಎಣ್ಣೆ, ಸಾಸಿವೆ, ಜೀರಿಗೆ, ಇಂಗು, ಕರಿಬೇವು ಬೇಕು.
(4 / 9)
ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಬೀಟ್ರೂಟ್ ಮತ್ತು ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕರಿಮೆಣಸು, ಚಾಟ್ ಮಸಾಲಾ ಮತ್ತು ತಾಜಾ ಕೊತ್ತಂಬರಿ ಸೇರಿಸಿ. ಈಗ ಮೇಲೆ ಹೇಳಿದ ಸಾಮಗ್ರಿಗಳಿಂದ ಒಗ್ಗರಣೆ ಮಾಡಿ. ಬೀಟ್ರೂಟ್, ಮೊಸರಿನ ಜೊತೆ ಮಿಶ್ರಣ ಮಾಡಿ. ಈ ನಿಮ್ಮ ಮುಂದೆ ರುಚಿಯಾದ ಬೀಟ್ರೂಟ್ ಸಲಾಡ್ ಸವಿಯಲು ಸಿದ್ಧ.
(5 / 9)
ಚಿಯಾ ಪುಡ್ಡಿಂಗ್ ಮಾಡಲು ಎರಡು ಚಮಚ ಹುರಿದ ಚಿಯಾ ಬೀಜಗಳು, 1 ಕಪ್ ತೆಂಗಿನಹಾಲು, 1 ಚಮಚ ಪ್ರೊಟೀನ್ ಪುಡಿ, ರುಚಿಗೆ ಸ್ಟಿವೀಯಾ ಹನಿಗಳು ಬೇಕಾಗುತ್ತವೆ.
(Representative photo: Freepik)(6 / 9)
ತಯಾರಿಸುವ ವಿಧಾನ: ತೆಂಗಿನ ಹಾಲು, ಪ್ರೊಟೀನ್ ಪುಡಿ ಮತ್ತು ಸ್ಟೀವಿಯಾ ಹನಿಗಳ ಜೊತೆ ಚಿಯಾ ಬೀಜಗಳನ್ನು ಬೌಲ್‌ಗೆ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸ್ವಲ್ಪ ಸಮಯದವರೆಗೆ ಫ್ರಿಜ್ನಲ್ಲಿ ಇರಿಸಿ. ನಿಮಗೆ ಬೇಕಿದ್ದರೆ ದ್ರಾಕ್ಷಿ, ಬ್ರೆರಿ ಹಣ್ಣುಗಳನ್ನೂ ಸೇರಿಸಬಹುದು.
(Representative photo: Freepik))(7 / 9)
ಮುಳ್ಳು ಸೌತೆ ಸಬ್ಜಿ ಕೂಡ ಅಲಿಯಾ ಭಟ್ ಫೇವರಿಟ್. ಇದನ್ನು ಮಾಡಲು ಸೌತೆಕಾಯಿ – 1, ಎಣ್ಣೆ – 1/2 ಚಮಚ, ಕಪ್ಪು ಸಾಸಿವೆ – 1/4 ಚಮಚ, ಇಂಗು – 1/4 ಟೀ ಚಮಚ, ಕರಿಬೇವು ಸ್ವಲ್ಪ, ಹಸಿರು ಮೆಣಸಿನಕಾಯಿ – 1, ಕೊತ್ತಂಬರಿ ಪುಡಿ – ಅರ್ಧ ಚಮಚ, ಜೀರಿಗೆ ಪುಡಿ - 1/4 ಚಮಚ, ಸೋಂಪು ಪುಡಿ – ಕಾಲು ಚಮಚ, ಆಮ್ಚೂರ್ ಪುಡಿ – 1/4 ಚಮಚ, ತಾಜಾ ಕೊತ್ತಂಬರಿ ಮತ್ತು ಸ್ವಲ್ಪ ತುರಿದ ತೆಂಗಿನಕಾಯಿ ಬೇಕು.
(8 / 9)
ತಯಾರಿಸುವ ವಿಧಾನ: ಎಣ್ಣೆ, ಸಾಸಿವೆ, ಇಂಗು, ಕರಿಬೇವು ಮತ್ತು ಮೆಣಸಿನಕಾಯಿ ಸೇರಿಸಿ ಒಗ್ಗರಣೆ ಹಾಕಿ. ಈಗ ಕತ್ತರಿಸಿಕೊಂಡ ಸೌತೆಕಾಯಿ ಹಾಗೂ ಉಪ್ಪು ಸೇರಿಸಿ. ತರಕಾರಿ ಹಾಗೂ ಒಗ್ಗರಣೆ ಮಿಶ್ರಣ ಮಾಡಿ. 2 ನಿಮಿಷಗಳ ಕಾಲ ಮುಚ್ಚಿಡಿ. ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಆಮ್ಚೂರ್ ಪುಡಿ ಮತ್ತು ಫೆನ್ನೆಲ್ ಪುಡಿ ಸೇರಿಸಿ. ತೆಂಗಿನ ತುರಿ ಹಾಕಿ ಬೇಯಿಸಿ. ಅಗತ್ಯ ಇರುವಷ್ಟು ಕೊತ್ತಂಬರಿ ಸೊಪ್ಪು ಉದುರಿಸಿ.
(Representative photo: Jcookingodyssey.com)ಇತರ ಗ್ಯಾಲರಿಗಳು