ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಜನ್ಮದಿನ; 800ಕ್ಕೂ ಹೆಚ್ಚು ಗೋಲು ಗಳಿಸಿದ ದಿಗ್ಗಜ ಸಾಧಿಸದ್ದು ಏನೂ ಇಲ್ಲ
- Lionel Messi Birthday: ಫುಟ್ಬಾಲ್ ದಿಗ್ಗಜ, ವಿಶ್ವ ಚಾಂಪಿಯನ್ ಲಿಯೋನೆಲ್ ಮೆಸ್ಸಿ ಇಂದು ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅರ್ಜೆಂಟೀನಾ ಫುಟ್ಬಾಲ್ ತಂಡದ ನಾಯಕನಾಗಿ, ಭಾರತದಲ್ಲಿ ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಮೆಸ್ಸಿ ತಮ್ಮ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಒಬ್ಬ ಆಟಗಾರ ಬಯಸುವ ಎಲ್ಲವನ್ನೂ ಸಾಧಿಸಿದ್ದಾರೆ.
- Lionel Messi Birthday: ಫುಟ್ಬಾಲ್ ದಿಗ್ಗಜ, ವಿಶ್ವ ಚಾಂಪಿಯನ್ ಲಿಯೋನೆಲ್ ಮೆಸ್ಸಿ ಇಂದು ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅರ್ಜೆಂಟೀನಾ ಫುಟ್ಬಾಲ್ ತಂಡದ ನಾಯಕನಾಗಿ, ಭಾರತದಲ್ಲಿ ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಮೆಸ್ಸಿ ತಮ್ಮ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಒಬ್ಬ ಆಟಗಾರ ಬಯಸುವ ಎಲ್ಲವನ್ನೂ ಸಾಧಿಸಿದ್ದಾರೆ.
(1 / 7)
ಮೆಸ್ಸಿ ತಮ್ಮ ಅದ್ಧೂರಿ ವೃತ್ತಿಜೀವನದಲ್ಲಿ 800ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ್ದಾರೆ. ಇದರಲ್ಲಿ ತಮ್ಮ ದೇಶ ಹಾಗೂ ಕ್ಲಬ್ ಪರ ಆಡಿದ ಗೋಲುಗಳು ಸೇರಿವೆ. ಏಳು ಬಾರಿ ಬ್ಯಾಲನ್ ಡಿ'ಓರ್ ಗೆದ್ದಿದ್ದಾರೆ. ಆರು ಯುರೋಪಿಯನ್ ಗೋಲ್ಡನ್ ಶೂ ಪ್ರಶಸ್ತಿಗಳು ಸೇರಿದಂತೆ ಹಲವಾರು ಮೈಲಿಗಲ್ಲುಗಳನ್ನು ತಲುಪಿದ್ದಾರೆ.
(AFP)(2 / 7)
ಮೆಸ್ಸಿ ಬಾಲ್ಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು: ಒಬ್ಬ ಫುಟ್ಬಾಲ್ ಆಟಗಾರನಾಗಿ ಬೆಳೆಯುವುದು ಮೆಸ್ಸಿಗೆ ಅಷ್ಟು ಸುಲಭವಾಗಿರಲ್ಲ. ಇವರು 11 ವರ್ಷದವರಿದ್ದಾಗ ಬೆಳವಣಿಗೆಯ ಹಾರ್ಮೋನ್ ಕೊರತೆಯಿಂದ ಆರೋಗ್ಯ ಸಮಸ್ಯೆ ಎದುರಿಸಿದ್ದರು. 12ನೇ ವಯಸ್ಸಿನಲ್ಲಿ ಪ್ರತಿದಿನ ಚುಚ್ಚುಮದ್ದು ಬೇಕಾಗಿತ್ತು.
(AFP)(3 / 7)
ಬಾಲ್ಯದಲ್ಲೇ ಕಾಲ್ಚೆಂಡು ಆಟದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಮೆಸ್ಸಿ, ತಮ್ಮ 13ನೇ ವಯಸ್ಸಿನಲ್ಲಿ ಸ್ಪೇನ್‌ಗೆ ಬಂದು ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ಸೇರಿದರು. ಈ ಒಪ್ಪಂದಕ್ಕೆ ಅವರು ಬಾರ್ಸಿಲೋನಾಗೆ ನ್ಯಾಪ್ಕಿನ್‌ನಲ್ಲಿ ಸಹಿ ಹಾಕಿಕೊಟ್ಟಿದ್ದರು.
(AP)(4 / 7)
2000ದಲ್ಲಿ, ಬಾರ್ಸಿಲೋನಾ ಪ್ರತಿಭಾವಂತ ಆಟಗಾರರನ್ನು ಹುಡುಕುತ್ತಿತ್ತು. ಆದ್ದರಿಂದ ಕ್ಲಬ್ ಟ್ಯಾಲೆಂಟ್ ಹಂಟ್ ಕಾರ್ಯಕ್ರಮ ಆರಂಭಿಸಿತ್ತು. ಮೆಸ್ಸಿಯ ತಂದೆ ಬಾರ್ಸಿಲೋನಾದ ಕಾರ್ಯಕ್ರಮದ ಬಗ್ಗೆ ತಿಳಿದುಕೊಂಡರು. ಕ್ಲಬ್ ಅನ್ನು ಸಂಪರ್ಕಿಸಿದರು.
(5 / 7)
ಬಾರ್ಸಿಲೋನಾಗೆ ಸೇರಿದ ನಂತರ ಮೆಸ್ಸಿ ಹಿಂತಿರುಗಿ ನೋಡಲೇ ನೋಡಲೇ ಇಲ್ಲ. ಮೆಸ್ಸಿಯ ಪ್ರದರ್ಶನಗಳು ವರ್ಷದಿಂದ ವರ್ಷಕ್ಕೆ ಸುಧಾರಿಸುತ್ತಾ ಬಂತು. ಕ್ಲಬ್ ಪರ ಮೆಸ್ಸಿ 10 ಲಾ ಲಿಗಾ ಮತ್ತು 4 ಯುಇಎಫ್ಎ ಚಾಂಪಿಯನ್ಸ್ ಪ್ರಶಸ್ತಿಗಳನ್ನು ಗೆದ್ದರು. ಅವರು ಬಾರ್ಸಿಲೋನಾವನ್ನು ಸ್ಪ್ಯಾನಿಷ್ ಸೂಪರ್ ಕಪ್‌ನಲ್ಲಿ 8 ಬಾರಿ ಚಾಂಪಿಯನ್ ಪಟ್ಟದತ್ತ ಮುನ್ನಡೆಸಿದರು. ಮೆಸ್ಸಿ ನಾಯಕತ್ವದಲ್ಲಿ ಬಾರ್ಸಿಲೋನಾ ಏಳು ಬಾರಿ ಕೋಪಾ ಡೆಲ್ ರೇ ಪ್ರಶಸ್ತಿಯನ್ನು ಗೆದ್ದಿದೆ.
(6 / 7)
ಲಿಯೋನೆಲ್ ಮೆಸ್ಸಿ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 800ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ್ದಾರೆ. ಅರ್ಜೆಂಟೀನಾದ ಸ್ಟಾರ್ ಆಟಗಾರ ಕ್ಲಬ್ ಪರ ಆಡುವಾಗ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ದಾಖಲೆ ಹೊಂದಿದ್ದಾರೆ. ಲಾ ಲಿಗಾ ಮತ್ತು ಯುರೋಪಿಯನ್ ಲೀಗ್ ಋತುಗಳಲ್ಲಿ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ದಾಖಲೆಯನ್ನು ಮೆಸ್ಸಿ ಹೊಂದಿದ್ದಾರೆ. ಈ ಲೀಗ್‌ನಲ್ಲಿ ಮೆಸ್ಸಿ ಅತಿ ಹೆಚ್ಚು ಹ್ಯಾಟ್ರಿಕ್ ಗೋಲುಗಳನ್ನು ಗಳಿಸಿದ್ದಾರೆ.
(7 / 7)
36 ವರ್ಷಗಳ ನಂತರ ವಿಶ್ವಕಪ್ ಗೆಲುವು: ಲಿಯೋನೆಲ್ ಮೆಸ್ಸಿ ನಾಯಕತ್ವದಲ್ಲಿ ಅರ್ಜೆಂಟೀನಾ 2022ರಲ್ಲಿ ಫಿಫಾ ವಿಶ್ವಕಪ್ ಗೆದ್ದಿತ್ತು. ಮೆಸ್ಸಿ 36 ವರ್ಷಗಳ ನಂತರ ಅರ್ಜೆಂಟೀನಾವನ್ನು ವಿಶ್ವ ಚಾಂಪಿಯನ್ ಆಗಿ ಮಾಡಿದರು. ಫ್ರಾನ್ಸ್ ವಿರುದ್ಧದ ರೋಚಕ ಫೈನಲ್ ಪಂದ್ಯದಲ್ಲಿ ಮೆಸ್ಸಿಯ ಪ್ರದರ್ಶನ ಅತ್ಯುತ್ತಮವಾಗಿತ್ತು. ಪೆನಾಲ್ಟಿ ಶೂಟೌಟ್‌ನಲ್ಲಿ ಬಲವಾದ ಗೋಲ್‌ನೊಂದಿಗೆ ಅರ್ಜೆಂಟೀನಾ ದೇಶವಾಸಿಗಳು ಮುಗಿಲೆತ್ತರಕ್ಕೆ ಸಂಭ್ರಮಿಸುವಂತೆ ಮಾಡಿದರು. ಅಂದು ಭಾರತದಲ್ಲೂ ಸಂಭ್ರಮ ಮನೆ ಮಾಡಿತು.
ಇತರ ಗ್ಯಾಲರಿಗಳು