ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನಿಂದ ಹೊರಬಿದ್ದ ಬೆನ್ನಲ್ಲೇ ಶ್ರೇಯಾಂಕದಲ್ಲಿ ಭಾರತ ಭಾರಿ ಕುಸಿತ

ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನಿಂದ ಹೊರಬಿದ್ದ ಬೆನ್ನಲ್ಲೇ ಶ್ರೇಯಾಂಕದಲ್ಲಿ ಭಾರತ ಭಾರಿ ಕುಸಿತ

  • Fifa Ranking: ವಿಶ್ವಕಪ್ ಕ್ವಾಲಿಫೈಯರ್​ನಲ್ಲಿ ಕುವೈತ್ ವಿರುದ್ಧ ಡ್ರಾ ಸಾಧಿಸಿದ್ದು, ಕತಾರ್ ವಿರುದ್ಧ ಸೋತಿರುವ ಕಾರಣ ಫಿಫಾ ಶ್ರೇಯಾಂಕದಲ್ಲಿ ಭಾರತ ತಂಡ ಕುಸಿತ ಕಂಡಿದೆ.

ವಿಶ್ವಕಪ್​​ಗೆ ಅರ್ಹತೆ ಪಡೆಯಲು ಭಾರತ ವಿಫಲವಾದ ಕಾರಣ ಫಿಫಾ ಶ್ರೇಯಾಂಕದ ಮೇಲೆ ಪರಿಣಾಮ ಬೀರಿದೆ. ಫಿಫಾ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡ ಮೂರು ಸ್ಥಾನ ಕುಸಿದಿದ್ದು, 124ನೇ ಸ್ಥಾನ ಪಡೆದಿದೆ. ಏಷ್ಯಾದ ರಾಷ್ಟ್ರಗಳ ಪೈಕಿ ಭಾರತವೂ ಶ್ರೇಯಾಂಕದಲ್ಲಿ ಕುಸಿತ ಕಂಡಿದೆ. ಸುನಿಲ್ ಛೆಟ್ರಿ ನಿವೃತ್ತಿಯ ನಂತರ ಭಾರತೀಯ ಫುಟ್ಬಾಲ್​ಗೆ ಮತ್ತೆ ದೊಡ್ಡ ಹೊಡೆತವಾಗಿದೆ.
icon

(1 / 5)

ಟಿ20 ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಕುವೈತ್ ವಿರುದ್ಧ ಡ್ರಾ ಮತ್ತು ಕತಾರ್ ವಿರುದ್ಧದ ಸೋಲು ಭಾರತ ತಂಡವನ್ನು ಶ್ರೇಯಾಂಕದಲ್ಲಿ ಕುಸಿಯುವಂತೆ ಮಾಡಿತು. ಏಷ್ಯಾದ ರಾಷ್ಟ್ರಗಳಲ್ಲಿ ಭಾರತ ಈಗ 22ನೇ ಸ್ಥಾನದಲ್ಲಿದೆ. ಲೆಬನಾನ್, ಪ್ಯಾಲೆಸ್ಟೈನ್, ವಿಯೆಟ್ನಾಂನಂತಹ ತಂಡಗಳು ಸಹ ಭಾರತಕ್ಕಿಂತ ಮುಂದಿವೆ.
icon

(2 / 5)

2017ರ ಮಾರ್ಚ್ 9ರಂದು ಭಾರತದ ಅತ್ಯಂತ ಕೆಟ್ಟ ಶ್ರೇಯಾಂಕ ಪಡೆದಿತ್ತು. ಆಗ ಟೀಮ್ ಇಂಡಿಯಾ 132ನೇ ಸ್ಥಾನದಲ್ಲಿತ್ತು. ಇದೀಗ 7 ವರ್ಷಗಳ ನಂತರ ಮತ್ತೆ ಕಳಪೆ ಶ್ರೇಯಾಂಕಕ್ಕೆ (124) ಕುಸಿದಿದೆ. 
icon

(3 / 5)

ಸ್ಟಿಮಾಕ್ 2019ರಲ್ಲಿ ಭಾರತದ ಮುಖ್ಯ ಕೋಚ್ ಆಗಿ ನೇಮಕಗೊಂಡರು. ತಮ್ಮ 5 ವರ್ಷಗಳ ಮಾರ್ಗದರ್ಶನದಲ್ಲಿ ಭಾರತಕ್ಕೆ 4 ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ. ಈ ಪೈಕಿ ಎರಡು ಸ್ಯಾಫ್ ಚಾಂಪಿಯನ್​​ಶಿಪ್​ ಮತ್ತು ಇಂಟರ್​​ಕಾಂಟಿನೆಂಟಲ್​ ಕಪ್, ತ್ರಿಕೋನ ಸರಣಿ ಸೇರಿವೆ. ಅಲ್ಲದೆ, ಅವರ ಮಾರ್ಗದರ್ಶನದಲ್ಲಿ ಭಾರತವು ಕಳೆದ ವರ್ಷ ಜುಲೈನಲ್ಲಿ ಶ್ರೇಯಾಂಕದ ಅಗ್ರ 100 ರೊಳಗೆ ಪ್ರವೇಶಿಸಿತು.
icon

(4 / 5)

ಆದಾಗ್ಯೂ, 100ರೊಳಗೆ ಪ್ರವೇಶಿಸಿದ ನಂತರ ಭಾರತವು ಮತ್ತೆ ಕುಸಿಯಲು ಪ್ರಾರಂಭಿಸಿತು. ಕಳೆದ 12 ಪಂದ್ಯಗಳಲ್ಲಿ ಟೀಮ್ ಇಂಡಿಯಾ 9ರಲ್ಲಿ ಸೋತಿದೆ. ಎಎಫ್ಸಿ ಏಷ್ಯನ್ ಕಪ್​ನಲ್ಲಿ ಭಾರತ ತನ್ನ ಎಲ್ಲಾ ಗುಂಪು ಹಂತದ ಪಂದ್ಯಗಳನ್ನು ಸೋತಿದೆ.
icon

(5 / 5)

ಇತರ ಗ್ಯಾಲರಿಗಳು