ಕನ್ನಡ ಸುದ್ದಿ  /  Photo Gallery  /  Forest News Bandipur Tiger Kills Cattle After Woman Death Mysuru District Forest Staff Intensify Combing Operation Kub

Operation Bandipur Tiger: ಮೈಸೂರು ಜಿಲ್ಲೆಯಲ್ಲಿ ಹಸುವಿನ ಮೇಲೆ ಹುಲಿ ದಾಳಿ: ನರಭಕ್ಷಕ ವ್ಯಾಘ್ರ ಸೆರೆಗೆ ತಂಡ ಕಟ್ಟೆಚ್ಚರ

  • ಬಂಡೀಪುರ ಅರಣ್ಯದಂಚಿನ ಬಳ್ಳೂರು ಹುಂಡಿನಲ್ಲಿ ಮಹಿಳೆ ಕೊಂದಿದ್ದ ಹುಲಿ ಅದೇ ಸ್ಥಳದಲ್ಲಿ ಹಸು ಕೊಂದು ಹಾಕಿದೆ. ಒಂದು ಕಿ.ಮಿ ವ್ಯಾಪ್ತಿಯಲ್ಲೇ ಹುಲಿ ಸಂಚರಿಸುತ್ತಿರುವುದರಿಂದ ಕರ್ನಾಟಕ ಅರಣ್ಯ ಇಲಾಖೆ( Karnataka Forest Department) ಕಾರ್ಯಾಚರಣೆ ಚುರುಕುಗೊಳಿಸಿದೆ. ಹುಲಿ ಸೆರೆ ಹಿಡಿಯಲು ಸಿಬ್ಬಂದಿ ಹೆಚ್ಚಿಸಲಾಗಿದೆ. ಎರಡನೇ ದಿನದ ಕಾರ್ಯಾಚರಣೆ ಚಿತ್ರಣ ಹೀಗಿತ್ತು.

ಬಂಡೀಪುರ ಅರಣ್ಯದಂಚಿನ ಬಳ್ಳೂರು ಹುಂಡಿ ಬಳಿ ಮಹಿಳೆ ಕೊಂದಿದ್ದ ಹುಲಿ ಅಲ್ಲಿಗೆ ಸಮೀಪದ ಕಲ್ಲಾರೆ ಹುಂಡಿ ಬಳಿ ಹಸು ಕೊಂದು ಹಾಕಿದೆ. ಹುಲಿ ಯಾವುದೇ ಕ್ಷಣದಲ್ಲಾದರೂ ಅಲಲಿಗೆ ಬರಬಹುದು ಎನ್ನುವ ಕಾರಣದಿಂದ ಸಿಬ್ಬಂದಿ ಅರವಳಿಕೆ ಗನ್‌ನೊಂದಿಗೆ ಕಾಯುತ್ತಿದ್ಧಾರೆ
icon

(1 / 6)

 ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹೆಡಿಯಾಲ ವನ್ಯಜೀವಿ ವಿಭಾಗದಲ್ಲಿ ಹುಲಿ ದಾಳಿಯಿಂದ ಮಹಿಳೆ ಮೃತಪಟ್ಟ ನಂತರ ಸೆರೆ ಕಾರ್ಯಾಚರಣೆ ಮುಂದುವರಿದಿದೆ. ಹುಲಿ ಘರ್ಜನೆ ಹಾಗೂ ಜಿಂಕೆಗಳ ಅಲರಂ ಕಾಲ್‌ ಅನ್ನು ಸಿಬ್ಬಂದಿ ಆಲಿಸುತ್ತಿದ್ದಾರೆ.
icon

(2 / 6)

ಮಹಿಳೆಯನ್ನು ಕೊಂದ ಸ್ಥಳದಿಂದ ಒಂದು  ಕಿ..ಮಿ ವ್ಯಾಪ್ತಿಯಲ್ಲಿಯೇ ಹುಲಿ ಇರುವ ಸೂಚನೆ ಇರುವುದರಿಂದ ಸಿಬ್ಬಂದಿ ಜತೆಗೆ ಆನೆಗಳ ತಂಡವೂ ಹುಲಿ ಪತ್ತೆಗೆ ನಿರಂತರ ಪ್ರಯತ್ನ ಮಾಡುತ್ತಿವೆ. 
icon

(3 / 6)

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ಹುಲಿ ದಾಳಿ ನಂತರ ಅದರ ಸೆರೆಗೆ ಗಿರಿಜನ ಯುವಕರು, ಸ್ಥಳೀಯರ ತಂಡವೂ ಹುಲಿ ಹೆಜ್ಜೆ ಪತ್ತೆಗೆ ಮುಂದಾಗಿದೆ. ಕರ್ನಾಟಕ ಅರಣ್ಯ ಇಲಾಖೆಯು ಗಿರಿಜನರನ್ನು ಪತ್ತೆ ಕಾರ್ಯಕ್ಕೆ ನಿಯೋಜಿಸಿದೆ.
icon

(4 / 6)

ಮಹಿಳೆ ಹತ್ಯೆ ಮಾಡಿದ ಹುಲಿ ಸೆರೆಗೆ ಬಂಡೀಪುರ ಅರಣ್ಯ ಸಿಬ್ಬಂದಿ ನಿರಂತರ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸಿಬ್ಬಂದಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆ ಗಡಿ ಭಾಗದ ಓಂಕಾರ ಹಾಗೂ ಹೆಡಿಯಾಲ ವಲಯದಲ್ಲಿ ಹುಲಿ ಹೆಜ್ಜೆ ಪತ್ತೆಗೆ ಯತ್ನಿಸುತ್ತಿದ್ದಾರೆ.
icon

(5 / 6)

ಬಂಡೀಪುರದ ನರಭಕ್ಷಕ ಹುಲಿಯು ಸಮೀಪದಲ್ಲಿಯೇ ಇರುವ ಮಾಹಿತಿ ಕಾರಣಕ್ಕೆ ಬಂಡೀಪುರ ನಿರ್ದೇಶ ಡಾ.ರಮೇಶ್‌ ಕುಮಾರ್‌ ಹಾಗೂ ಇತರರ ತಂಡವು ಢ್ರೋಣ್‌ ಬಳಸಿ ಹುಲಿ ಜಾಡು ಪತ್ತೆ ಮಾಡುತ್ತಿದೆ.
icon

(6 / 6)

ಇತರ ಗ್ಯಾಲರಿಗಳು