Forest News: ಬಂಡೀಪುರಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ, ಯುವಮಿತ್ರ ಹೆಚ್ಚಿಸಿತು ಹಿರಿಮೆ photos
- ಚಾಮರಾಜನಗರ- ಮೈಸೂರು ಜಿಲ್ಲೆ ವ್ಯಾಪ್ತಿಯ ಬಂಡೀಪುರ ಹುಲಿ ಯೋಜನೆ ಪ್ರದೇಶದಲ್ಲಿ ಶಾಲಾ ಮಕ್ಕಳು, ಶಿಕ್ಷಕರು, ಪಂಚಾಯಿತಿ ಸಿಬ್ಬಂದಿಗೆ ರೂಪಿಸಿದ ಯುವಮಿತ್ರ ಕಾರ್ಯಕ್ರಮ(Bandipur Yuva Mitra Program) ಇಂಡಿಯಾ ಬುಕ್ ಆಫ್ ರೆಕಾರ್ಡ್( India Book of Records) ಗೌರವಕ್ಕೆ ಪ್ರಾಪ್ತಿಯಾಗಿದೆ.
- ಚಾಮರಾಜನಗರ- ಮೈಸೂರು ಜಿಲ್ಲೆ ವ್ಯಾಪ್ತಿಯ ಬಂಡೀಪುರ ಹುಲಿ ಯೋಜನೆ ಪ್ರದೇಶದಲ್ಲಿ ಶಾಲಾ ಮಕ್ಕಳು, ಶಿಕ್ಷಕರು, ಪಂಚಾಯಿತಿ ಸಿಬ್ಬಂದಿಗೆ ರೂಪಿಸಿದ ಯುವಮಿತ್ರ ಕಾರ್ಯಕ್ರಮ(Bandipur Yuva Mitra Program) ಇಂಡಿಯಾ ಬುಕ್ ಆಫ್ ರೆಕಾರ್ಡ್( India Book of Records) ಗೌರವಕ್ಕೆ ಪ್ರಾಪ್ತಿಯಾಗಿದೆ.
(1 / 6)
ಬಂಡೀಪುರ ಹುಲಿ ಯೋಜನೆಗೆ 50 ತುಂಬಿದ ಸಂದರ್ಭದಲ್ಲಿ ಆಗಿನ ನಿರ್ದೇಶಕ ಹಾಗೂ ಹಿರಿಯ ಐಎಫ್‌ಎಸ್ ಅಧಿಕಾರಿ ಡಾ.ಪಿ.ರಮೇಶ್ ಕುಮಾರ್ ಒಂದು ಯೋಜನೆ ರೂಪಿಸಿದರು. ಅದರ ಹೆಸರು ಯುವ ಮಿತ್ರ. ಅಂದರೆ ಬಂಡೀಪುರಕ್ಕೆ ಹೊಂದಿಕೊಂಡಿರುವ ಐದು ತಾಲ್ಲೂಕುಗಳ ಏಳರಿಂದ ಪದವಿವರಗಿನ ವಿದ್ಯಾರ್ಥಿಗಳಿಗೆ ಕಾಡು ತೋರಿಸುವುದು.ಕಳೆದ ವರ್ಷ ಈ ಯೋಜನೆಗೆ ಚಾಲನೆ ನೀಡಲಾಗಿತ್ತು.
(2 / 6)
ಬಂಡೀಪುರ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಆರು ತಾಲ್ಲೂಕುಗಳ ಶಾಲೆಗಳ ಮಕ್ಕಳಿಗೆ ಬಂಡೀಪುರ ತೋರಿಸುವ ಯೋಜನೆಯೇ ಯುವ ಮಿತ್ರ.
(3 / 6)
ಜಾಗೃತಿಯಲ್ಲಿ 8,000 ಮಂದಿ ಭಾಗಿ: ಬಂಡೀಪುರ ಯುವ ಮಿತ್ರ ಜಾಗೃತಿ ಕಾರ್ಯಕ್ರಮದಲ್ಲಿ ಒಟ್ಟು 8,410 ಮಂದಿ ಭಾಗಿಯಾಗಿದ್ದಾರೆ. ಸಫಾರಿ ವೀಕ್ಷಿಸಿ, ಕಾನನದ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಜೊತೆಗೆ ಅರಣ್ಯ ಸಂರಕ್ಷಣೆಯ ಮಹತ್ವ ಅರಿತಿದ್ದಾರೆ. 8,410 ಮಂದಿಯಲ್ಲಿ 7,019 ವಿದ್ಯಾರ್ಥಿಗಳು, 655 ಶಿಕ್ಷಕರು, 197 ಗ್ರಾಮ ಪಂಚಾಯಿತಿ ಸಿಬ್ಬಂದಿ, ಸದಸ್ಯರು, 395 ಸ್ಥಳೀಯ ರೈತರು ಮತ್ತು 143 ಮಂದಿ ಗಿರಿಜನರಿದ್ದರು. 2023ರ ಮಾ.3ರಿಂದ 2024ರ ಮಾ.8 ರವರೆಗೆ ಒಟ್ಟು 162 ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
(4 / 6)
ಇಂತಹ ಕಾರ್ಯಕ್ರಮ ದೇಶದ ಯಾವುದೇ ಹುಲಿ ಯೋಜನೆ ಪ್ರದೇಶದಲ್ಲಿ ನಡೆದಿಲ್ಲ ಎಂದು ಗುರುತಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಇದನ್ನು ಸೇರಿಸಿ ಗೌರವಿಸಲಾಗಿದೆ.
(5 / 6)
ಬಂಡೀಪುರ ಹುಲಿ ಯೋಜನೆ ನಿರ್ದೇಶಕರಾಗಿದ್ದ ಹಾಗೂ ಹಾಲಿ ಕರ್ನಾಟಕ ಹುಲಿ ಯೋಜನೆಗಳ ನಿರ್ದೇಶಕರಾಗಿರುವ ಡಾ.ರಮೇಶ್ ಕುಮಾರ್ ಅವರು ಈ ಗೌರವವನ್ನು ಸ್ವೀಕರಿಸಿದರು.
ಇತರ ಗ್ಯಾಲರಿಗಳು