Black Panther: ನಾಗರಹೊಳೆ ಸಫಾರಿಗೆ ಹೋದವರಿಗೆ ಕರಿಚಿರತೆ ದರ್ಶನ, ಕಂಡವರು ಖುಷ್ photos
- ಪ್ರಾಣಿಗಳಲ್ಲಿ ಕರಿ ಬಣ್ಣದ್ದವು ಇವೆ. ಅದರಲ್ಲಿ ಕರಿ ಚಿರತೆಯೂ ಒಂದು.ನಾಗರಹೊಳೆಯಲ್ಲಿ ಒಂದು ದಶಕದಿಂದ ಕಾಣಿಸಿಕೊಳ್ಳುತ್ತಿರುವ ಕರಿ ಚಿರತೆ( Black Panther) ಕೂಡ ಒಂದು. ಅದರ ವಿಭಿನ್ನ ನೋಟ ಇಲ್ಲಿದೆ.
- ಪ್ರಾಣಿಗಳಲ್ಲಿ ಕರಿ ಬಣ್ಣದ್ದವು ಇವೆ. ಅದರಲ್ಲಿ ಕರಿ ಚಿರತೆಯೂ ಒಂದು.ನಾಗರಹೊಳೆಯಲ್ಲಿ ಒಂದು ದಶಕದಿಂದ ಕಾಣಿಸಿಕೊಳ್ಳುತ್ತಿರುವ ಕರಿ ಚಿರತೆ( Black Panther) ಕೂಡ ಒಂದು. ಅದರ ವಿಭಿನ್ನ ನೋಟ ಇಲ್ಲಿದೆ.
(1 / 8)
ಕರ್ನಾಟಕದ ಪ್ರಮುಖ ಅಭಯಾರಣ್ಯ ನಾಗರಹೊಳೆ ಮೈಸೂರು ಹಾಗೂ ಕೊಡಗು ನಡುವೆ ಹಂಚಿ ಹೋಗಿದೆ. ಇಲ್ಲಿನ ಕರಿ ಚಿರತೆಯೂ ಪ್ರಮುಖ ಆಕರ್ಷಣೆ.
(2 / 8)
ನಾಗರಹೊಳೆಯಲ್ಲಿ ಒಂದು ದಶಕದಿಂದ ಕಾಣಿಸಿಕೊಳ್ಳುತ್ತಿರುವ ಕರಿ ಚಿರತೆ ವನ್ಯಪ್ರಿಯರು ಹಾಗೂ ಪ್ರವಾಸಿಗರ ಆಕರ್ಷಣೆಯೂ ಹೌದು.
(3 / 8)
ನಾಗರಹೊಳೆಯ ಕೊಡಗು ಭಾಗ ಹಾಗೂ ಮೈಸೂರು ಭಾಗಗಳಲ್ಲಿ ಕಾಣಿಸಿಕೊಳ್ಳುವ ಕರಿಚಿರತೆಯನ್ನು ಸಾಯಾ ಎನ್ನುವ ಹೆಸರಿನಿಂದ ಗುರುತಿಸಲಾಗುತ್ತದೆ,
(4 / 8)
ನಾಗರಹೊಳೆಯ ಪ್ರಮುಖ ಭಾಗವಾಗಿರುವ ಕಬಿನಿ ಹಿನ್ನೀರು ಪ್ರದೇಶವೂ ಒಳಗೊಂಡಂತೆ ಹಲವು ಕಡೆ ಸುತ್ತು ಹಾಕುವ ಕರಿ ಚಿರತೆಯು ಕಬಿನಿ ಚಿರತೆ ಎಂದೇ ಜನಜನಿತವಾಗಿದೆ,
(Jayanth Sharma)(5 / 8)
ಕರಿ ಚಿರತೆ ಕುರಿತು ನಾಲ್ಕು ವರ್ಷದ ಹಿಂದೆ ಶಾಜ್ ಜಂಗ್(Shaaz Jung) ಅವರು ಸಾಕ್ಷ್ಯಚಿತ್ರವೊಂದನ್ನು ಹೊರ ತಂದಿದ್ದು, ಇದು ಸಾಮಾನ್ಯ ಚಿರತೆ ಜತೆಗೆ ಇರುವ ಕ್ಷಣಗಳನ್ನು ಸೆರೆ ಹಿಡಿಯಲಾಗಿದೆ.
(6 / 8)
ಇದು ಸಾಮಾನ್ಯ ಚಿರತೆಯಾದರೂ ಮೆಲನಿನ್ ಕೊರತೆಯಿಂದ ಕಪ್ಪು ಬಣ್ಣದೊಂದಿಗೆ ಜನಿಸಿ ಗಮನ ಸೆಳೆಯುತ್ತಿದೆ. ಇದೇ ರೀತಿ ಹುಲಿ ಕೂಡ ಕರಿ ಇರುವುದು ಇತ್ತೀಚಿಗೆ ಕಂಡು ಬಂದಿತ್ತು.
(goldie Reddy)(7 / 8)
ಆದರೆ ಈ ಕರಿ ಚಿರತೆ ಮಾತ್ರ ನಾಗರಹೊಳೆ ವ್ಯಾಪ್ತಿಯಲ್ಲಿ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆಯುತ್ತಿದೆ. ಎಂಟು ತಿಂಗಳ ನಂತರ ಈಗ ಪ್ರವಾಸಿಗರಿಗೆ ದರ್ಶನ ನೀಡುತ್ತಿದೆ. ಕರ್ನಾಟಕದಲ್ಲಿ ಹಲವು ಕಡೆ ಈ ಕರಿಚಿರತೆ ಇದ್ದರೂ ನಮ್ಮದು ಬಹುಜನಪ್ರಿಯವಾಗಿದೆ ಎನ್ನುವುದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ ಚಿಕ್ಕನರಗುಂದ ಹೇಳುವ ಮಾತು.
ಇತರ ಗ್ಯಾಲರಿಗಳು