ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೀವು ಸಣ್ಣವರಾಗಿದ್ದಾಗ ಆಡಿದ ಕೆಂಪು ಬೀಜ ಯಾವುದೆಂದು ಗುರುತಿಸಬಲ್ಲಿರಾ Photos

ನೀವು ಸಣ್ಣವರಾಗಿದ್ದಾಗ ಆಡಿದ ಕೆಂಪು ಬೀಜ ಯಾವುದೆಂದು ಗುರುತಿಸಬಲ್ಲಿರಾ Photos

  ಬೇಲಿ ಸಾಲುಗಳಲ್ಲಿ ಬೆಳೆಯುವ ಈ ಗುಲಗಂಜಿ ನಮ್ಮ ಬಾಲ್ಯದ ಆಟದ ವಸ್ತು. ಈಗಲೂ ಬೇಲಿಯಲ್ಲಿ ಗುಲಗಂಜಿ ನಮ್ಮಲ್ಲಿದೆ. ಅದರ ವಿಶೇಷ, ನೆನಪಿನ ಚಿತ್ರ, ಸಾಲುಗಳು ಇಲ್ಲಿವೆ.ವಿವರ: ಪರಿಸರ ಪರಿವಾರ 

ಅರಣ್ಯ, ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆ/ ಅಪಾಯಗಳಲ್ಲಿ ಆಕ್ರಮಣಕಾರಿ ಸಸ್ಯಗಳು( Invasive plants) ಪ್ರಮುಖ ವಾದದ್ದು. ಆಕ್ರಮಣಕಾರಿ ಸಸ್ಯಗಳು ಎಂದಾಕ್ಷಣ ತಕ್ಷಣ ಬೇರೆ ದೇಶದಿಂದ ಇಲ್ಲಿಗೆ ಪರಿಚಯವಾದ (Exotic) ಸಸ್ಯಪ್ರಭೇಧ ಎನಿಸುತ್ತದೆ. 
icon

(1 / 7)

ಆದರೆ ನಮ್ಮದೇ ದೇಶದ ನಿರ್ದಿಷ್ಟ ಭಾಗದ ಸಸ್ಯ ಮತ್ತೊಂದು ಭಾಗಕ್ಕೆಆಕ್ರಮಣಕಾರಿ/ ಅಪಾಯಕಾರಿಯಾಗಿ ಬೆಳೆಯುವ ಸಸ್ಯಗಳು ಆಗಬಹುದು.  
icon

(2 / 7)

ಆನೆ ಗುಲಗಂಜಿ (Adenanthera pavonina) ಭಾರತದ ಸ್ಥಳೀಯ ಮೂಲದ ಸಸ್ಯ. ನಾಗರಹೊಳೆ, ಬಂಡೀಪುರದ ಸಹಜ ಕಾಡಿನಲ್ಲಿ ಎಲ್ಲೂ ಕಾಣದ ಈ ಮರ ಮೈಸೂರಿನ ಸಾಕಷ್ಟು ಉದ್ಯಾನಗಳಲ್ಲಿ, ರಸ್ತೆಬದಿಗಳಲ್ಲಿ ಸಾಕಷ್ಟಿವೆ. 
icon

(3 / 7)

ಆಕರ್ಷಕ ಹೂ, ಗುಲಗಂಜಿ ಯಂತೆಯೇ ಆದರೆ ಅದಕ್ಕಿಂತ ಸ್ವಲ್ಪ ದಪ್ಪ, ಪೂರ್ಣವಾಗಿ ಕೆಂಪಾಗಿರುವ ಇದರ ಬೀಜಗಳು ಕೂಡ ಅತ್ಯಂತ ಆಕರ್ಷಕವಾಗಿದ್ದು, ಅವುಗಳನ್ನು ಕೆಲವು ಕಡೆ ಆಭರಣ ವಸ್ತುಗಳ ತಯಾರಿಕೆಯಲ್ಲಿ ಬಳಸುತ್ತಾರೆ.  ಈ ಮರ ಅಮೇರಿಕಾದಲ್ಲಿ Invasive ಆಗಿ ಸಮಸ್ಯೆಯಾಗಿದೆ. ನಾನು ಗಮನಿಸಿದಂತೆ ಮರದ ಬುಡದಲ್ಲಿ ಪೈರಿನಂತೆ ಬೆಳೆಯುವ ಇದರ ಸಸಿಗಳು, ಇದರ ವೇಗವಾಗಿ ಬೆಳೆಯುವ ಗುಣದಿಂದಾಗಿ ಅಪಾಯಕಾರಿಯಾಗಿ ಎಲ್ಲೆಡೆ ಆವರಿಸಬಹುದು 
icon

(4 / 7)

ಕೆಲವರು ಬಯಲು ಸೀಮೆಯ ಸಸ್ಯಗಳನ್ನು ಮಲೆನಾಡಲ್ಲಿ ಮಲೆನಾಡಿವನ್ನು ಬಯಲು ಸೀಮೆಯಲ್ಲಿ ಬೆಳೆಸುವ ಪ್ರಯತ್ನ ಮಾಡಿದ್ದಾರೆ. ಪ್ರಯತ್ನ ಯಶಸ್ವಿಯಾಗಿದ್ದರು‌. ಅವು ಹುಲುಸಾಗಿ, ಸಹಜ ಸಂಮೃದ್ಧವಾಗಿ ಬೆಳೆದಿರುವುದಿಲ್ಲ. ಓ ಹಿನ್ನಲೆಯಲ್ಲಿ 'ಸ್ಥಳೀಯ' ಎಂದರೆ ದೇಶೀಯ ವಿಶಾಲ ಅರ್ಥದಲ್ಲಿ ಎಂದು ಅರ್ಥೈಸದೆ, ನಿರ್ದಿಷ್ಟ, ಸೀಮಿತ ಪ್ರದೇಶಕ್ಕೆ ಅರ್ಥೈಸುವುದು ಹೆಚ್ಚು ಸೂಕ್ತ
icon

(5 / 7)

ಇದೇ ಎಂತಲ್ಲ, ಗಿಡ‌ನೆಡುವಾಗ ಯಾವಾಗಲೂ ಆಯಾ ಬೌಗೋಳಿಕ ಪ್ರದೇಶಕ್ಕೆ ಸೂಕ್ತವಾದ, ಪರಿಚಿತವಾದ ಸಸ್ಯಗಳನ್ನೆ ಆಯ್ಕೆ ಮಾಡುವುದು ಸೂಕ್ತ. ಮೈಸೂರು ಸೇರಿ ಬಯಲುಸೀಮೆಯ ಕಡೆ ಅತ್ಯಂತ ಸಾಮಾನ್ಯವಾಗಿರುವ ಬೇವಿನ ಮರಗಳು ಮಲೆನಾಡ ಭಾಗದಲ್ಲಿ ತೀರಾ ವಿರಳ. ಮಲೆನಾಡಲ್ಲಿ ಸಾಮಾನ್ಯವಾಗಿರುವ ರಂಜ, ಹೆಬ್ಬಲಸು, ರಾಮಪತ್ರೆ, ನಾಗಸಂಪಿಗೆ, ಜಂಬೆ ಮತ್ತಿತ್ಯಾದಿ ಮರಗಳು ಬಯಲು ಸೀಮೆಯಲ್ಲಿನ ಸ್ವಾಭಾವಿಕ ಸಸ್ಯವರ್ಗದಲ್ಲಿ ಸ್ಥಾನ ಪಡೆದಿಲ್ಲ. 
icon

(6 / 7)

ಈ ಕೆಂಪು ಬೀಜಗಳನ್ನು ಎಳೆಯರಿದ್ದಾಗ ಬೇಲಿ ಸಾಲುಗಳಲ್ಲಿ ಹುಡುಕಿ ಒಂದು ಕಡೆ ಒಟ್ಟುಗೂಡಿಸಿಕೊಂಡು ಆಡವಾಡಿದ್ದು ಬಹುತೇಕರಿಗೆ ನೆನಪಿರಬೇಕು. ಗುಲಗಂಜಿ ಗಿಡ ಈಗಲೂ ಬೇಲಿ ಸಾಲುಗಳಲ್ಲಿದ್ದರೂ ಈಗಿನ ಮಕ್ಕಳಿಗೆ ಇದೆಲ್ಲವೂ ಬೇಡ.
icon

(7 / 7)

IPL_Entry_Point

ಇತರ ಗ್ಯಾಲರಿಗಳು