ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಿತ್ರಾಣಗೊಂಡಿದ್ದ ಆನೆ ಮರಿಗೆ ಮರುಜೀವ, ತಾಯಿ ಜತೆ ಸೇರ್ಪಡೆ; ಬಿಆರ್‌ಟಿ ಅರಣ್ಯ ಸಿಬ್ಬಂದಿ ಶ್ಲಾಘನೀಯ ಸೇವೆ Photos

ನಿತ್ರಾಣಗೊಂಡಿದ್ದ ಆನೆ ಮರಿಗೆ ಮರುಜೀವ, ತಾಯಿ ಜತೆ ಸೇರ್ಪಡೆ; ಬಿಆರ್‌ಟಿ ಅರಣ್ಯ ಸಿಬ್ಬಂದಿ ಶ್ಲಾಘನೀಯ ಸೇವೆ photos

  • Kudos to Forest Staff ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗ ಹುಲಿಧಾಮದಲ್ಲಿ ಅಸ್ವಸ್ಥವಾಗಿ ಬಿದ್ದಿದ್ದ ಆನೆ ಮರಿಯನ್ನು ಸಿಬ್ಬಂದಿ ಉಳಿಸಿ ತಾಯಿಯೊಂದಿಗೆ ಸೇರಿಸಿದ ವಿಶೇಷ ಸನ್ನಿವೇಶವಿದು. ಇದಕ್ಕಾಗಿ ಅರಣ್ಯ ಸಿಬ್ಬಂದಿಗೆ ಶಹಬ್ಬಾಷ್‌ ಹೇಳಲೇಬೇಕು.

ಚಾಮರಾಜನಗರ ಜಿಲ್ಲೆಯ ಬಿಆರ್‌ ಟಿ( BRT )ಯ ಯಳಂದೂರು ವನ್ಯಜೀವಿ ವಲಯದಲ್ಲಿ ನಿತ್ರಾಣಗೊಂಡಿದ್ದ ಆನೆ ಮರಿಯೊಂದು ಸಾಯುವ ಹಂತಕ್ಕೆ ತಲುಪಿತ್ತು.ಇದನ್ನು ತಾಯಿ ಕಾಯುತ್ತಲೇ ಇತ್ತು.
icon

(1 / 6)

ಆನೆ ನಿತ್ರಾಣಗೊಂಡು ಬಿದ್ದಿರುವುದು. ತಾಯಿ ರೋಧಿಸುತ್ತಿರುವುದರ ಮಾಹಿತಿ ತಿಳಿದ ಅರಣ್ಯ ಸಿಬ್ಬಂದಿ ಅದನ್ನು ಉಳಿಸಿಕೊಳ್ಳಲು ಮುಂದಾಯಿತು.
icon

(2 / 6)

ಡಿಎಫ್‌ಒ ದೀಪ್‌ ಕಂಟ್ರಾಕ್ಟರ್‌ ಅವರ ಮಾರ್ಗದರ್ಶನದಲ್ಲಿ ಪಶು ವೈದ್ಯಾಧಿಕಾರಿ ಡಾ.ವಸೀಂ ಮಿರ್ಜಾ ಮತ್ತವರ ತಂಡ ಆನೆ ಮರಿಗೆ ಡ್ರಿಪ್ಸ್‌ ಹಾಕಿ ಶಕ್ತಿ ತುಂಬಿತು.
icon

(3 / 6)

ಚಿಕಿತ್ಸೆಗೆ ಸ್ಪಂದಿಸಿದ ಆನೆ ಮರಿ ಆಹಾರವನ್ನು ಸೇವಿಸತೊಡಗಿತು,. ಒಂದು ದಿನದಲ್ಲಿಯೇ ಚೈತನ್ಯ ಪಡೆದು ಎದ್ದು ಹೊರಟೇ ಬಿಟ್ಟಿತು. ಸಮೀಪದಲ್ಲಿಯೇ ಇದ್ದ ತಾಯಿಯೊಂದಿಗೆ ಸೇರಿಕೊಂಡಿತು. ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನ ಫಲಿಸಿತು.
icon

(4 / 6)

ಸಾಮಾನ್ಯವಾಗಿ ಎರಡು ವರ್ಷದವರೆಗೂ ಆನೆಗಳು ತಾಯಿಯ ಹಾಲು ಸೇವಿಸಿ ಜತೆಯಲ್ಲಿಯೇ ಇರುತ್ತವೆ.
icon

(5 / 6)

ಇದಾದ ನಂತರವೂ ಆನೆಗಳು ಗುಂಪಾಗಿಯೇ ಇರುತ್ತವೆ. ಇವುಗಳಲ್ಲಿ ಮರಿ, ಪ್ರಾಯದ ಆನೆ, ಹಿರಿಯಾನೆಗಳು ಇರಲಿವೆ. ಈ ರೀತಿಯ ಆನೆ ಗುಂಪು ಸಾಮಾನ್ಯ. ಅದರಲ್ಲೂ ತಾಯಿಯ ಆಸರೆಯಲ್ಲಿಯೇ ಮರಿ ಬೆಳೆಯುವುದು ಆನೆಗಳ ಬದುಕಿನ ಕ್ರಮವೂ ಹೌದು.,
icon

(6 / 6)

ಇತರ ಗ್ಯಾಲರಿಗಳು