Forest News: ಅರಣ್ಯ ಸೇವೆಯಲ್ಲಿ ಹುತಾತ್ಮರಾದವರಿಗೆ ಕರ್ನಾಟಕದ ಹಾಸನ, ಹಾವೇರಿ, ಮೈಸೂರು ಜಿಲ್ಲೆಗಳಲ್ಲಿ ಗೌರವ photos-forest news forest martyrs day celebrated in across karnataka haveri hassan chamarajnagar gokak mysore kub ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Forest News: ಅರಣ್ಯ ಸೇವೆಯಲ್ಲಿ ಹುತಾತ್ಮರಾದವರಿಗೆ ಕರ್ನಾಟಕದ ಹಾಸನ, ಹಾವೇರಿ, ಮೈಸೂರು ಜಿಲ್ಲೆಗಳಲ್ಲಿ ಗೌರವ Photos

Forest News: ಅರಣ್ಯ ಸೇವೆಯಲ್ಲಿ ಹುತಾತ್ಮರಾದವರಿಗೆ ಕರ್ನಾಟಕದ ಹಾಸನ, ಹಾವೇರಿ, ಮೈಸೂರು ಜಿಲ್ಲೆಗಳಲ್ಲಿ ಗೌರವ photos

  • ಮರಗಳ ಉಳಿವಿಗಾಗಿ ಪ್ರಾಣ ತ್ಯಾಗ ಮಾಡಿದ ರಾಜಸ್ತಾನದ ಬೀಷ್ಣೋಯಿಗಳ ಸ್ಮರಣಾರ್ಥವಾಗಿ ಸೆಪ್ಟೆಂಬರ್11 ಅನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನಾಗಿ ಭಾರತ ಸರ್ಕಾರ ಘೋಷಿಸಿ, ಇಡೀ ದೇಶದಾದ್ಯಂತ ಅರಣ್ಯ ವನ್ಯಜೀವಿಗಳ ಸಂರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮರಾದ ಸಿಬ್ಬಂದಿಗಳನ್ನು ಸ್ಮರಿಸಿ ಗೌರವಿಸಲಾಗುತ್ತದೆ. ಈ ಬಾರಿ ಕರ್ನಾಟಕದಲ್ಲೂ ಹಲವೆಡೆ ಗೌರವ ಸಲ್ಲಿಸಲಾಗಿದೆ.

ಅರಣ್ಯ ಇಲಾಖೆಯಲ್ಲಿ ಮುಖ್ಯವಾಗಿ ವನ್ಯಜೀವಿ ವಲಯಗಳಾದ ಹುಲಿ ಸಂರಕ್ಷಿತ ಪ್ರದೇಶ, ರಾಷ್ಟ್ರೀಯ ಉದ್ಯಾನ, ಅಭಯಾರಣ್ಯದಂತಹ ವನ್ಯಜೀವಿಗಳ ವ್ಯಾಪನೆ ಹೆಚ್ಚಾಗಿರುವ ಸ್ಥಳಗಳಲ್ಲಿ ಕೆಲಸ ಮಾಡುವುದು ಬಹಳ ಸವಾಲಿನದ್ದು. ಇಲ್ಲಿ ಬೇಟೆಗಾರರು, ಮರಗಳ್ಳರು, ಒತ್ತುವರಿದಾರರ, ಕಾಡ್ಗಿಚ್ಚು ಮುಂತಾದ ಹೊರಗಿನ ಸವಾಲುಗಳನ್ನು ಎದುರಿಸುವುದು ಒಂದು ಕಡೆಯಾದರೆ, ಆನೆ, ಹುಲಿ,ಚುರತೆ, ಕಾಟಿಯಂತಹ ಆಕ್ರಮಣಕಾರಿ ಪ್ರಾಣಿಗಳ ಜೊತೆಯೇ ಇದ್ದು ಕೆಲಸ ಮಾಡಬೇಕಾದ ಸವಾಲು ಮತ್ತೊಂದು ಕಡೆ. ಇಂತಹ ಸಂದರ್ಭದಲ್ಲಿ ಪ್ರತಿ ವರ್ಷ ಹಲವರು ಹುತಾತ್ಮರಾಗುತ್ತಾರೆ. ಅವರಿಗೆ ಗೌರವ ಸಲ್ಲಿಸಲಾಗುತ್ತದೆ.
icon

(1 / 6)

ಹಾಸನ ಜಿಲ್ಲೆಯಲ್ಲೂ ಅರಣ್ಯ ಹುತಾತ್ಮ ದಿನಾಚರಣೆಯಲ್ಲಿ ಎಸ್ಪಿ ಮೊಹಮ್ಮದ್‌ ಸುಜೀತಾ ಅವರು ಗೌರವ ಸಲ್ಲಿಸಿದರು.
icon

(2 / 6)

ವೀರಪ್ಪನ್‌ ಹಾವಳಿಯಿದ್ದ ಚಾಮರಾಜನಗರ ಜಿಲ್ಲೆಯಲ್ಲೂ ಹಲವರು ಹುತಾತ್ಮರಾಗಿದ್ದು, ಚಾಮರಾಜನಗರ ಎಸ್ಪಿ ಬಿ.ಟಿ.ಕವಿತಾ ಅವರು ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು.
icon

(3 / 6)

ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲ್ಲೂಕಿನ ಘಟಪ್ರಭಾ ವಿಭಾಗದಲ್ಲಿ ಅರಣ್ಯ ಹುತಾತ್ಮರಿಗೆ ಗೌರವ ಸಲ್ಲಿಕೆಯಾಯಿತು.
icon

(4 / 6)

ಹಾವೇರಿ ಜಿಲ್ಲೆಯಲ್ಲೂ ಅರಣ್ಯ ಹುತಾತ್ಮರಿಗೆ ಅಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ನಮನ ಸಲ್ಲಿಸಿದರು.
icon

(5 / 6)

ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಅರಣ್ಯ ಹುತಾತ್ಮರಿಗೆ ಪೊಲೀಸ್‌ ಆಯುಕ್ತರಾದ ಸೀಮಾ ಲಾಟ್ಕರ್‌ ಹಾಗೂ ಇತರರು ಗೌರವ ಸಲ್ಲಿಸಿದರು.
icon

(6 / 6)

ಇತರ ಗ್ಯಾಲರಿಗಳು