Vulture Awareness Day: ಪರಿಸರ ಸ್ವಚ್ಛತಾ ಕರ್ಮಿ ರಣಹದ್ದುಗಳಿಗೆ ಕರ್ನಾಟಕದಲ್ಲೂ ಉಂಟು ಪ್ರತ್ಯೇಕಧಾಮ, ಇವುಗಳ ವಿಶೇಷ ಏನು photos
- Environment News ಯಾವುದೇ ಪ್ರಾಣಿ, ಪಕ್ಷಿಗೆ ಪರಿಸರದಲ್ಲಿ ತನ್ನದೇ ಮಹತ್ವವಿದೆ. ಹದ್ದುಗಳಲ್ಲಿ ಪ್ರಮುಖವಾದ ರಣಹದ್ದುಗಳನ್ನು ಸ್ವಚ್ಛತೆಯ ರಾಯಭಾರಿ ಎಂದೇ ಕರೆಯಲಾಗುತ್ತದೆ. ಪ್ರತಿ ವರ್ಷ ಮೊದಲ ಶನಿವಾರ ಅಂತರಾಷ್ಟ್ರೀಯ ರಣ ಹದ್ದುಗಳ ಜಾಗೃತಿ ದಿನ ಆಚರಿಸಲಾಗುತ್ತದೆ. ಈ ಕುರಿತು ಚಿತ್ರನೋಟ ಇಲ್ಲಿದೆ.
- Environment News ಯಾವುದೇ ಪ್ರಾಣಿ, ಪಕ್ಷಿಗೆ ಪರಿಸರದಲ್ಲಿ ತನ್ನದೇ ಮಹತ್ವವಿದೆ. ಹದ್ದುಗಳಲ್ಲಿ ಪ್ರಮುಖವಾದ ರಣಹದ್ದುಗಳನ್ನು ಸ್ವಚ್ಛತೆಯ ರಾಯಭಾರಿ ಎಂದೇ ಕರೆಯಲಾಗುತ್ತದೆ. ಪ್ರತಿ ವರ್ಷ ಮೊದಲ ಶನಿವಾರ ಅಂತರಾಷ್ಟ್ರೀಯ ರಣ ಹದ್ದುಗಳ ಜಾಗೃತಿ ದಿನ ಆಚರಿಸಲಾಗುತ್ತದೆ. ಈ ಕುರಿತು ಚಿತ್ರನೋಟ ಇಲ್ಲಿದೆ.
(1 / 7)
ರಣ ಹದ್ದು ಎನ್ನುವ ಪದ ಹಲವು ರೂಪಕಗಳನ್ನು ನೀಡಲಿದೆ. ನೋಟವನ್ನು ರಣಹದ್ದಿಗೆ ಹೋಲಿಸುವುದು ಉಂಟು. ಏಕೆಂದರೆ ಎಲ್ಲೇ ಸತ್ತ ಪ್ರಾಣಿ, ದೇಹ ಕಂಡು ಬಂದರೂ ಸೂಕ್ಷ್ಮ ನೋಟದಿಂದಲೇ ಪತ್ತೆ ಮಾಡುತ್ತದೆ ರಣಹದ್ದು.ಮಾಂಸಹಾರಿ ಪ್ರಾಣಿಗಳು ಸಸ್ಯಹಾರಿ ಪ್ರಾಣಿಗಳನ್ನು ತಿಂದು ಬದುಕಿದರೆ, ಮಾಂಸಹಾರಿ ಪ್ರಾಣಿಗಳು ಸತ್ತಾಗ ಅವುಗಳನ್ನು ತಿನ್ನುವುದು ರಣಹದ್ದುಗಳು. ಆದ್ದರಿಂದ ರಣ ಹದ್ದುಗಳನ್ನು ‘ಪರಿಸರ ಸ್ವಚ್ಚತೆಯ ಪೌರಕಾರ್ಮಿಕ’ ಎನ್ನುತ್ತಾರೆ. ಆ ಮೂಲಕ ಪರಿಸರ ಸಮತೊಲನಕ್ಕೆ ತನ್ನದೇ ಕೊಡುಗೆಯನ್ನು ಅವುಗಳು ನೀಡುತ್ತಾ ಬಂದಿವೆ.
(2 / 7)
ರಣಹದ್ದುಗಳು ಸುಮಾರು 10ರಿಂದ 30ವರ್ಷಗಳ ಆಯುಷ್ಯ ಹೊಂದಿರುವ ಹಕ್ಕಿಗಳು. ರಣಹದ್ದುಗಳು ಬಹುತೇಕ ಎಂದೂ ತಾವಾಗೆ ಬೇಟೆಯಾಡುವುದಿಲ್ಲ. ಬೇರೆ ಪ್ರಾಣಿ ಬೇಟೆಯಾಡಿ ತಿಂದು ಉಳಿಸಿದ ದೇಹ ಅಥವಾ ಯಾವುದೇ ಪ್ರಾಣಿಗಳು ತಾವಾಗೆ ಸತ್ತಾಗ, ಅವುಗಳ ದೇಹವನ್ನು ಭಕ್ಷಿಸುತ್ತವೆ. ರೋಗಗ್ರಸ್ತವಾಗಿ ಸತ್ತ ಪ್ರಾಣಿಗಳ ದೇಹದಿಂದ ಹಿಡಿದು, ವಯಸ್ಸಾದ ಪ್ರಾಣಿಗಳ ದೇಹಗಳವರೆಗೆ ಎಲ್ಲವನ್ನೂ ತಿಂದು ಜೀರ್ಣಿಸಿಕೊಳ್ಳುವ ಅಪರೂಪದ ಸಾಮರ್ಥ್ಯವನ್ನು ಇವು ಹೊಂದಿವೆ. ತಮ್ಮ ಆಮ್ಲೀಯ (ಅಸಿಡಿಕ್) ಹೊಟ್ಟೆಯಿಂದಾಗಿ ರಣಹದ್ದುಗಳು ಇಂತಹ ಮಾಂಸವನ್ನು ತಿಂದು ಜೀರ್ಣಿಸಿಕೊಳ್ಳುತ್ತವೆ.
(3 / 7)
ಭಾರತದಲ್ಲಿ 9 ಜಾತಿಯ ರಣಹದ್ದುಗಳಿಗೆ ನೆಲೆ ಕಂಡು ಕೊಂಡಿವೆ. ಅವುಗಳೆಂದರೆ ಓರಿಯೆಂಟಲ್ ವೈಟ್-ಬೆಡ್, ಲಾಂಗ್-ಬಿಲ್ಡ್, ಸ್ಲೆಂಡರ್-ಬಿಲ್ಡ್, ಹಿಮಾಲಯನ್, ರೆಡ್-ಹೆಡೆಡ್, ಈಜಿಪ್ಟಿಯನ್, ಬಿಯರ್ಡೆಡ್, ಸಿನೆರಿಯಸ್ ಮತ್ತು ಯುರೇಷಿಯನ್ ಗ್ರಿಫನ್. ಈ 9 ಪ್ರಭೇದಗಳಲ್ಲಿ ಹೆಚ್ಚಿನವು ಅಳಿವಿನ ಅಪಾಯದಲ್ಲಿವೆ. (michelle peter)
(4 / 7)
ಕೆಲ ವರ್ಷದ ಹಿಂದೆ ಕರ್ನಾಟಕದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (ಬಿಟಿಆರ್) ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ (ಎನ್ ಟಿಆರ್)ಗಳಲ್ಲಿ ರಣಹದ್ದು ಸಮೀಕ್ಷೆಯನ್ನು ನಡೆಸಲಾಯಿತು. ಈ ಸರ್ವೇ ಪ್ರಕಾರ ಬಂಡೀಪುರದಲ್ಲಿ 245 ಮೂರು ವಿಧದ ರಣಹದ್ದುಗಳು ಕಂಡುಬಂದಿವೆ. ಈ ಪೈಕಿ ಭಾರತೀಯ ರಣಹದ್ದು 34, ಕೆಂಪು ತಲೆಯ ರಣಹದ್ದು 43 ಹಾಗು ಬಿಳಿ ಬೆನ್ನಿನ ರಣ ಹದ್ದುಗಳು 168 ಎಂದು ಪತ್ತೆ ಮಾಡಲಾಗಿದೆ.
(5 / 7)
ಇತ್ತೀಚಿನ ವರ್ಷಗಳಲ್ಲಿ ರಣ ಹದ್ದುಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಅರಣ್ಯ ನಾಶ, ಅರಣ್ಯ ಪ್ರದೇಶಕ್ಕೆ ಬೀಳುವ ಬೆಂಕಿ ಹಾಗೂ ನಾಡಿನ ಪ್ರದೇಶಗಳಲ್ಲಿ ಡೈಕ್ಲೊಫಿನಾಕ್ ಔಷಧಿ ಇರುವ ಜಾನುವಾರುಗಳ ಮೃತದೇಹ ತಿಂದು ರಣಹದ್ದುಗಳು ಸಾವನ್ನಪ್ಪುತ್ತಿವೆ ಎನ್ನುತ್ತವೆ ವರದಿಗಳು.
(6 / 7)
ಭಾರತದಲ್ಲಿ ರಣಹದ್ದುಗಳ ಸಾವಿನ ಕಾರಣವನ್ನು ಅಧ್ಯಯನ ಮಾಡಲು, 2001 ರಲ್ಲಿ ಹರಿಯಾಣದ ಪಿಂಜೋರ್‌ನಲ್ಲಿ ರಣಹದ್ದುಗಳ ಆರೈಕೆ ಕೇಂದ್ರವನ್ನು (VCC) ಸ್ಥಾಪಿಸಲಾಯಿತು. ನಂತರ 2004 ರಲ್ಲಿ, VCC ಅನ್ನು ಭಾರತದಲ್ಲಿ ಮೊದಲ ರಣಹದ್ದು ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಕೇಂದ್ರವಾಗಿ (VCBC) ನವೀಕರಿಸಲಾಯಿತು.ಪ್ರಸ್ತುತ, ಭಾರತದಲ್ಲಿ ಒಂಬತ್ತು ರಣಹದ್ದು ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಕೇಂದ್ರಗಳು (VCBC) ಇವೆ, ಅವುಗಳಲ್ಲಿ ಮೂರು ನೇರವಾಗಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS) ನಿಂದ ನಿರ್ವಹಿಸಲ್ಪಡುತ್ತವೆ.
ಇತರ ಗ್ಯಾಲರಿಗಳು