Forest News: ಕರುನಾಡ ಆನೆಗಳಿಗೆ ಹೊರ ನಾಡಿನಲ್ಲಿ ಭಾರೀ ಬೇಡಿಕೆ, ಆಂಧ್ರಪ್ರದೇಶಕ್ಕೆ ಬೇಕಿದೆ 9 ಆನೆ
- Elephants of Karnataka ಕರ್ನಾಟಕ ಆನೆಗಳಿಗೆ ಬಲು ಜನಪ್ರಿಯ. ಇಲ್ಲಿ ಕಾಡಾನೆಗಳ ಸಂಖ್ಯೆಯೂ ಹೆಚ್ಚಿವೆ. ಅದೇ ರೀತಿ ಶಿಬಿರದಲ್ಲಿರುವ ಸಾಕಾನೆಗಳೂ( Elephant camp) ಕೂಡ. ಇವುಗಳಿಗೂ ಎಲ್ಲಿಲ್ಲದ ಬೇಡಿಕೆ. ಕರ್ನಾಟಕದ ಆನೆಗಳಿಗೆ ಏಕೆ ಅಷ್ಟು ಬೇಡಿಕೆ ಇಲ್ಲಿದೆ ಮಾಹಿತಿ.

(1 / 6)
ಕರ್ನಾಟಕದಲ್ಲಿ ಆರಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹತ್ತು ಸಾಕಾನೆ ಶಿಬಿರಗಳಿದ್ದು, ಅರಣ್ಯ ಇಲಾಖೆ ನಿರ್ವಹಣೆ ಮಾಡುತ್ತಿದೆ. ಇಲ್ಲಿ ನೂರಕ್ಕೂ ಅಧಿಕ ಆನೆಗಳಿದ್ದು, ಅವುಗಳಿಗೆ ಹೊರ ರಾಜ್ಯಗಳಿಂದ ಎಲ್ಲಿಲ್ಲದ ಬೇಡಿಕೆ.
(2 / 6)
ಕರ್ನಾಟಕದಲ್ಲಿಯೇ ಆರು ಸಾವಿರಕ್ಕೂ ಅಧಿಕ ಆನೆಗಳಿದ್ದು, ಉಪಟಳವೂ ಹೆಚ್ಚಿದೆ, ಹಾಸನ, ಕೊಡಗು, ಮೈಸೂರು ಭಾಗದಲ್ಲಿ ಆನೆಗಳನ್ನು ಸೆರೆ ಹಿಡಿದು ಪಳಗಿಸಲಾಗುತ್ತಿದೆ.
(3 / 6)
ಕರ್ನಾಟಕದ ಆನೆಗಳನ್ನು ಪಳಗಿಸುವ ರೀತಿ ನಿಜಕ್ಕೂ ವಿಶೇಷ. ಮುಂಚೆ ಖೆಡ್ಡಾ ಕಾರ್ಯಾಚರಣೆ ಮೂಲಕ ಪಳಗಿಸಲಾಗುತ್ತಿತ್ತು. ಅದು ನಿಷೇಧವಾದ ನಂತರ ಈಗ ಕ್ರಾಲ್ ನಲ್ಲಿ ಹಾಕಿ ಪಳಗಿಸಲಾಗುತ್ತದೆ, ತರಬೇತಿ ರೀತಿಯೂ ಬೇರೆ ರಾಜ್ಯಗಳ ಬೇಡಿಕೆಗೆ ಕಾರಣ.
(4 / 6)
ಕರುನಾಡ ಆನೆಗಳನ್ನು ತೆಗೆದುಕೊಂಡು ಹೋದರೆ ಅರಣ್ಯ ನಿರ್ವಹಣೆ ಜತೆಗೆ ವನ್ಯ ಜೀವಿಗಳ ಕಾರ್ಯಾಚರಣೆಗೂ ಬಳಸಬಹುದು. ಆನೆ ಸೆರೆಗೆ ನಮ್ಮ ಆನೆಗಳು ಫಿಟ್ ಎನ್ನುವ ನಂಬಿಕೆ ಹೊರ ರಾಜ್ಯದ ಅರಣ್ಯ ಇಲಾಖೆಗಳಲ್ಲಿದೆ.
(5 / 6)
ಈಗಾಗಲೇ ಎರಡು ದಶಕದಿಂದಲೂ ಹೊರ ರಾಜ್ಯಗಳಿಗೆ ಕೊಡಲಾಗುತ್ತಿದೆ. ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕರ್ನಾಟಕದ ಸಾಕಾನೆಗಳೆ ಹೆಚ್ಚಿವೆ.
ಇತರ ಗ್ಯಾಲರಿಗಳು