Forest News: ಕರ್ನಾಟಕ ಅರಣ್ಯ ಇಲಾಖೆ ಶಿಬಿರದಲ್ಲಿ ಆನೆಗಳ ನಿರಂತರ ಸಾವು, ಕೇಳೋರಿಲ್ಲ ಯಾರು photos
- ಕರ್ನಾಟಕದ ಶಿಬಿರಗಳಲ್ಲಿ ಆನೆಗಳು ನಿರಂತರವಾಗಿ ಸಾಯುತ್ತಿವೆ. 12 ತಿಂಗಳಲ್ಲಿ ನಾಗರಹೊಳೆಯಲ್ಲಿ ಐದು ಆನೆ ಸಾವನ್ನಪ್ಪಿರುವುದು ಆತಂಕಕಾರಿ. ಶಿಬಿರದ ಆನೆಗಳ ಆರೋಗ್ಯ ಸ್ಥಿತಿ ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿಲ್ಲ. ಶಿಬಿರದಲ್ಲಿ ಸರಿಯಾದ ವೈದ್ಯಕೀಯ ಮೂಲಸೌಕರ್ಯಗಳಿಲ್ಲಎಂಬ ಆರೋಪಗಳಿವೆ. ಈ ಕುರಿತು ಪರಿಸರ ಹೋರಾಟಗಾರ ಜೋಸೆಫ್ ಹೂವರ್ ದೂರು ಕೂಡ ನೀಡಿದ್ದಾರೆ.

(1 / 8)
ನಾಗರಹೊಳೆಯ ಮತ್ತೀಗೋಡು ಆನೆ ಶಿಬಿರದಲ್ಲಿದ್ದ ಅಂಬಾರಿ ಹೊತ್ತ ಬಲರಾಮ ಆನೆ ಮೇಯಲು ಹೋಗಲು ಗುಂಡೇಟು ತಿಂದು ನಂತರ ಮೃತಪಟ್ಟಿತ್ತು.
(2 / 8)
ನಾಗರಹೊಳೆಯ ಬಳ್ಳೆ ಆನೆ ಶಿಬಿರದಲ್ಲಿದ್ದ ಅಂಬಾರಿ ಹೊತ್ತ ಅರ್ಜುನ ಆನೆ ಹಾಸನ ಯಸಳೂರು ಬಳಿ ಆನೆ ಸೆರೆ ಕಾರ್ಯಾಚರಣೆಗೆ ಹೋದಾಗ ಜೀವ ಕಳೆದುಕೊಂಡಿತು.
(3 / 8)
ವಾರದ ಹಿಂದೆಯಷ್ಟೇ ನಾಗರಹೊಳೆಯ ಬಳ್ಳೆ ಶಿಬಿರದಲ್ಲಿದ್ದ ಕುಮಾರಸ್ವಾಮಿ ಎಂಬ ಆನೆ ಕಾಣೆಯಾಗಿ ಶವವಾಗಿ ಪತ್ತೆಯಾಗಿತ್ತು. ಆನೆ ಕಾಣೆಯಾದರೂ ಅಧಿಕಾರಿ, ಸಿಬ್ಬಂದಿ ತಲೆ ಕೆಡಿಸಿಕೊಂಡಿರಲಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದ್ದವು,
(4 / 8)
ನಾಗರಹೊಳೆ ಮತ್ತಿಗೋಡು ಆನೆ ಶಿಬಿರದಲ್ಲಿ ಕೃಷ್ಣ ಎನ್ನುವ ಆನೆ ಕೆಲ ದಿನಗಳ ಹಿಂದೆ ಮೃತಪಟ್ಟಿದೆ. ಈ ಆನೆಯನ್ನು ವರ್ಷದ ಹಿಂದೆಯಷ್ಟೇ ಸೆರೆ ಹಿಡಿದು ತರಲಾಗಿತ್ತು.
(5 / 8)
ಆರು ತಿಂಗಳ ಹಿಂದೆ ಸೆರೆ ಸಿಕ್ಕಿದ್ದ ವಿರಾಟ್ ಎನ್ನುವ ಆನೆಯೂ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಲ್ಲಿ ಜೀವ ಕಳೆದುಕೊಂಡಿದೆ. ಈ ಆನೆಯ ಆರೋಗ್ಯವನ್ನು ನೋಡಿಕೊಳ್ಳುವಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ ಆರೋಪಗಳಿವೆ.
(6 / 8)
ದಕ್ಷಿಣ ಕನ್ನಡದಿಂದ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರಕ್ಕೆ ತರಲಾಗಿದ್ದ ಸುಬ್ರಮಣಿ ಎನ್ನುವ ಗಟ್ಟಿಮುಟ್ಟಾಗಿದ್ದರೂ ಕಳೆದ ವರ್ಷ ಜೀವ ಕಳೆದುಕೊಂಡಿತ್ತು.
(7 / 8)
ತಮಿಳುನಾಡು ಹಾಗೂ ಕರ್ನಾಟಕ ತೀವ್ರ ಗದ್ದಲ ಮಾಡುತ್ತ ಸೆರೆ ಸಿಕ್ಕಿದ್ದ ಅಕ್ಕಿರಾಜಾ ಎನ್ನುವ ಆನೆ ಬಂಡೀಪುರದ ರಾಮಪುರ ಆನೆ ಶಿಬಿರದಲ್ಲಿ ಕಳೆದ ವರ್ಷ ಸತ್ತು ಹೋಯಿತು,. ಹಿಡಿದು ತಂದ ತಿಂಗಳೊಳಗೆ ಆನೆ ಪ್ರಾಣ ಕಳೆದುಕೊಂಡಿತು,
ಇತರ ಗ್ಯಾಲರಿಗಳು