World Lizard day: ಕರ್ನಾಟಕದಲ್ಲಿವೆ ಪ್ರಮುಖ ಜಾತಿಯ ಉಡಗಳು, ಅವುಗಳ ವಿಶೇಷ ಏನು, ಹೇಗಿದೆ ಬದುಕಿನ ಕ್ರಮ photos
- Lizards of India ಹಲ್ಲಿಯಿಂದ ಹಿಡಿದು ದೊಡ್ಡ ಉಡದವರೆಗೂ( Lizards ಎಲ್ಲವೂ ಭಿನ್ನ ಜಾತಿಯ ತಳಿಗಳು. ಆಗಸ್ಟ್ 14ರ ವಿಶ್ವ ಉಡ ದಿನದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿನಬ ಉಡಗಳ ವಿಶೇಷ ಕುರಿತು ಮಾಹಿತಿ ಇಲ್ಲಿದೆ
- ಮಾಹಿತಿ: ಸಂಜಯ ಹೊಯ್ಸಳ, ಪರಿಸರ ಪರಿವಾರ
- Lizards of India ಹಲ್ಲಿಯಿಂದ ಹಿಡಿದು ದೊಡ್ಡ ಉಡದವರೆಗೂ( Lizards ಎಲ್ಲವೂ ಭಿನ್ನ ಜಾತಿಯ ತಳಿಗಳು. ಆಗಸ್ಟ್ 14ರ ವಿಶ್ವ ಉಡ ದಿನದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿನಬ ಉಡಗಳ ವಿಶೇಷ ಕುರಿತು ಮಾಹಿತಿ ಇಲ್ಲಿದೆ
- ಮಾಹಿತಿ: ಸಂಜಯ ಹೊಯ್ಸಳ, ಪರಿಸರ ಪರಿವಾರ
(1 / 8)
ನಾನು ಗಮನಿಸಿದಂತೆ ನಮ್ಮ ಭಾಗದಲ್ಲಿ ಹಾವುಗಳು ಬಿಟ್ಟರೆ ಅತಿಹೆಚ್ಚು ನಂಬಿಕೆ, ಮೂಡನಂಬಿಕೆ, ವಿಚಿತ್ರ ನಂಬಿಕೆಗಳಿರುವುದು ಈ ಹಲ್ಲಿ, ಉಡ ಮತ್ತು ಓತಿಗಳ ಮೇಲೆಯೆ. ಮನೆಯಲ್ಲಿ ಲೊಚಗುಡುವ (ನುಡಿಯುವ) ಪಲ್ಲಿ/ ಹಲ್ಲಿ, ಅದು ಲೊಚಗುಟ್ಟುವ ಸ್ಥಳದ ಮೇಲೆ, ಅವು ಆಯಾ ತಪ್ಪಿ ಮೈಮೇಲೆ ಬಿದ್ದರೆ, ಅವು ಬಿದ್ದ ದೇಹದ ಭಾಗದ ಆಧಾರದ ಮೇಲೆ ಶುಭ, ಅಶುಭ ನಿರ್ಧಾರ ಮಾಡುವುದು, ಹಲ್ಲಿಯನ್ನು ದೇವರ ಪ್ರತಿರೂಪವಾಗಿ ಪೂಜಿವುದನ್ನು ಕಾಣಬಹುದು
(2 / 8)
ಕ್ಷಣಕೊಂದು ಬಣ್ಣ ಬದಲಿಸುವ ವ್ಯಕ್ತಿಗಳಿಗೆ 'ಊಸರವಳ್ಳಿ' ಪದವನ್ನು ನುಡಿಗಟ್ಟಿನ ರೂಪದ ಬಿರುದಾಗಿ ದಯಪಾಲಿಸಲಾಗುತ್ತದೆ. ಅಕ್ಷರಶಃ ತಾನು ನಡದ ದಾರಿಯ ಬಣ್ಣಕ್ಕೆ ತಕ್ಕಂತೆ ತನ್ನ ಬಣ್ಣ ಬದಲಿದುವ ಊರಸವಳ್ಳಿ/ ಗೋಸುಂಬಿಗಳು ಸೃಷ್ಟಿಯ ದೊಡ್ಡ ವೈಚಿತ್ರಗಳಲ್ಲಿ ಒಂದಾಗಿವೆ. ಇನ್ನು ತೇಜಸ್ವಿಯವರ ಐಕಾನಿಕ್ ಕಾದಂಬರಿಗಳಲ್ಲಿ ಅಗ್ರಸಾಲಿನಲ್ಲಿ ನಿಲ್ಲುವ ಕರ್ವಾಲೋ ಕಾದಂಬರಿಯ ಹೀರೋ 'ಹಾರುವ ಓತಿ'ಗಳನ್ನು ಕನ್ನಡಿಗರು ಮರೆಯಲು ಸಾಧ್ಯವೆ?
(3 / 8)
ತನ್ನ ಬಿಗಿ ಹಿಡಿತಕ್ಕೆ ಹೆಸರಾಗಿರುವ ಉಡಗಳನ್ನು ಹಿಂದೆ ಅಭೇಧ ಕೋಟೆಗಳ ನಿರ್ಮಾಣದಲ್ಲಿ ಬಂಡೆಗಳನ್ನು ಹಿಡಿಯಲು ಬಳಸಲಾಗುತ್ತಿತ್ತು ಎನ್ನಲಾಗುತ್ತದೆ. ತೇಜಸ್ವಿಯವರ 'ಪರಿಸರದ ಕತೆಗಳು' ಕೃತಿಯ 'ಮಾನಿಟರ್' ಲೇಖನದಲ್ಲಿ ಇವುಗಳ ಹಿಡಿತಕ್ಕೆ ತೇಜಸ್ವಿಯವರು ತಮ್ಮ ಅನುಭವದ ಕನ್ನಡಿ ಹಿಡಿಯುತ್ತಾರೆ.
(4 / 8)
ಸಾಕಷ್ಟು ವನ್ಯಜೀವಿಗಳ ಬಗೆಗಿನ ತಪ್ಪು ಮಾಹಿತಿಯಂತೆ ಉಡಗಳ ಬಗೆಗೂ ಸಾಕಷ್ಟು ತಪ್ಪು ನಂಬಿಕೆಗಳು ಹಿಂದಿನಿಂದ ಬೆಳೆದುಬಂದಿದ್ದು, ಆ ಹಿನ್ನಲೆಯಲ್ಲಿಯೇ ಇವುಗಳನ್ನು ಮಾಂಸಕ್ಕಾಗಿ ಹೆಚ್ಚು ಬೇಟೆಗೆ ಗುರಿಯಾಗುತ್ತವೆ. ಕೆಲವೊಂದು ಪ್ರಾಣಿಗಳ ಮಾಂಸ ಭಕ್ಷಿಸುವುದರಿಂದ 'ನಡ' ಗಟ್ಟಿಯಾಗುತ್ತದೆ ಎಂದು ಲೈಂಗಿಕ ಬಲವರ್ಧನೆಯ ತಪ್ಪು ಮಾಹಿತಿ ಹಿಂದಿನಿಂದಲೂ ಇದೆ. ಆದರೆ ಇದು ಶುದ್ಧ ಸುಳ್ಳು ಮಾಹಿತಿ.
(5 / 8)
ನೆಯಂಗಳದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಾಸಿಗುತ್ತಿದ್ದ ಓತಿಕ್ಯಾತಗಳು, ಹಾವ್ರಾಣಿಗಳು ಕೂಡ ಇತ್ತೀಚಿನ ಗಣನೀಯವಾಗಿ ಕಡಿಮೆಯಾಗಿವೆ. ಇವುಗಳ ಆವಾಸಸ್ಥಾನವಾದ ಬೂತಾಳೆ, ಕಾಚಿ, ಕಳ್ಳಿಯಂತಹ ಜೀವಂತ ಬೇಲಿಗಳು ಕಡಿಮೆಯಾದದ್ದು, ಬೇಸಿಗೆಯಲ್ಲಿ ಬೇಲಿಗಳಿಗೆ ಬೆಂಕಿ ಹಚ್ಚಿ, ವಿಕೃತಿಯ ಚಳಿ ಕಾಯಿಸಿಕೊಳ್ಳುವ ವಿಕೃತ ಮನಸಿನ ನರಕಾಸುರರ ಸಂತತಿ ಹೆಚ್ಚಿದಂತೆ ಇವುಗಳ ಸಂತತಿ ಕಡಿಮೆಯಾಗುತ್ತಿದೆ
(6 / 8)
ನಾವು ಚಿಕ್ಕವರಿದ್ದಾಗ ಏತಿಕ್ಯಾತಗಳನ್ನು ಹೆಣ್ಣಿನ ಪ್ರತಿರೂಪವೆಂದು, ಹವ್ರಾಣಿಗಳನ್ನು ಗಂಡಿನ ಪ್ರತಿರೂಪವೆಂದು ಪರಿಗಣಿಸಲಾಗುತ್ತಿತ್ತು. (ಹಾಡುಗಳಲ್ಲಿ ನಾಗರಹಾವನ್ನು ಗಂಡು, ಕೇರೆ ಹಾವನ್ನು ಹೆಣ್ಣು ಎನ್ನುವ ತಪ್ಪು ಮಾಹಿತಿ ತರ) ಹಾಗೆ ಬಡಕಲು, ಸಣಕಲು ದೇಹ ಹೊಂದಿರುವವರಿಗೆ 'ಓತಿಕ್ಯಾತ' ಅಡ್ಡ ಹೆಸರಿಟ್ಟು ಕಾಡಿಸಲಾಗುತ್ತಿತ್ತು.ಇದರಲ್ಲಿ ದೊಡ್ಡ ಉಡಗಳೂ ಉಂಟು.
(7 / 8)
ಓತಿ ಜಾತಿಯಲ್ಲಿ ದೊಡ್ಡದಾದ, ಅರಣ್ಯಗಳಲ್ಲಿ ಸಾಮಾನ್ಯವಾಗಿ ಸಿಗುವ ಆದರೆ ಅತಿಹೆಚ್ಚು ಬೇಟೆಗೀಡಾವ ಪ್ರಾಣಿ ಉಡ. ಉಡಗಳು ರಾಜ ಮಹಾರಾಜರುಗಳ ಕಾಲದಿಂದಲೂ ಸಾಕಷ್ಟು ಉಲ್ಲೇಖಿಸಲ್ಪಟ್ಟ 'ಐತಿಹಾಸಿಕ ಪ್ರಾಣಿ' ಎಂದರಡ್ಡಿಯಿಲ್ಲ
ಇತರ ಗ್ಯಾಲರಿಗಳು