Elephant Census 2024: ಕರ್ನಾಟಕದಲ್ಲಿ ಗಜಗಣತಿ ಮತ್ತೆ ಶುರು, ಹೇಗಿರುತ್ತದೆ ಕಾಡಲ್ಲಿ ಆನೆಗಳ ಲೆಕ್ಕ ಹಾಕುವ ಚಟುವಟಿಕೆ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Elephant Census 2024: ಕರ್ನಾಟಕದಲ್ಲಿ ಗಜಗಣತಿ ಮತ್ತೆ ಶುರು, ಹೇಗಿರುತ್ತದೆ ಕಾಡಲ್ಲಿ ಆನೆಗಳ ಲೆಕ್ಕ ಹಾಕುವ ಚಟುವಟಿಕೆ Photos

Elephant Census 2024: ಕರ್ನಾಟಕದಲ್ಲಿ ಗಜಗಣತಿ ಮತ್ತೆ ಶುರು, ಹೇಗಿರುತ್ತದೆ ಕಾಡಲ್ಲಿ ಆನೆಗಳ ಲೆಕ್ಕ ಹಾಕುವ ಚಟುವಟಿಕೆ photos

  • wildlife of Karnataka ಭಾರತದಲ್ಲೇ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ಕರ್ನಾಟಕವೂ ಸೇರಿದಂತೆ ಕೇರಳ, ತಮಿಳುನಾಡಿನಲ್ಲೂ ಆನೆಗಳ ಗಣತಿ2024( Elephant Census2024) ಮೇ 23ರ ಗುರುವಾರದಿಂದ ಆರಂಭವಾಗಲಿದೆ. ಅರಣ್ಯ ಇಲಾಖೆ( Forest Department) ಇದಕ್ಕಾಗಿ ಸಿದ್ದತೆಯನ್ನು ಮಾಡಿಕೊಂಡಿದೆ. ಹೇಗಿರಲಿದೆ ಗಜಗಣತಿ ಲೆಕ್ಕ. ಇಲ್ಲಿದೆ ಮಾಹಿತಿ.

ಕಾಡಿನೊಳಗೆ ಹಾಗೂ ಅರಣ್ಯದಂಚಿನಲ್ಲಿ ನೆಲೆ ಕಂಡುಕೊಂಡಿರುವ ಆನೆಗಳ ಗಣತಿ ಕಾರ್ಯ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಆರಂಭಗೊಳ್ಳಲಿದೆ. ಕರ್ನಾಟಕವೂ ಸೇರಿದಂತೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಅರಣ್ಯ ಇಲಾಖೆಗಳು ಜಂಟಿಯಾಗಿ ಆನೆ ಲೆಕ್ಕ ಹಾಕಲಿವೆ.
icon

(1 / 10)

ಇದು ಆನೆಗಳ ಸಂಖ್ಯೆಯ ಚಲನಶೀಲತೆ ಮತ್ತು ಸಂಭಾವ್ಯ ಸಂಘರ್ಷದ ಸನ್ನಿವೇಶಗಳ ಬಗ್ಗೆ ಮೌಲ್ಯಯುತ ಒಳನೋಟ ಬೀರುತ್ತದೆ ಮತ್ತು ಸಂಘರ್ಷವನ್ನು ಸಮಗ್ರ ರೀತಿಯಲ್ಲಿ ನಿರ್ವಹಿಸಲು ನೆರವಾಗುತ್ತದೆ. ಸಂಘರ್ಷ ನಿರ್ವಹಣಾ ತಂತ್ರಗಳನ್ನು ವಿನ್ಯಾಸಗೊಳಿಸಲು ಇದು ನಿರ್ಣಾಯಕವಾಗಿದೆ. ಕರ್ನಾಟಕದ ಹತ್ತು ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಆನೆಗಳು ಹೆಚ್ಚಿವೆ. ಈ ಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೂರು ದಿನ ಹೆಜ್ಜೆ ಹಾಕಿ ಆನೆಗಳ ಲೆಕ್ಕ ಹಾಕುವರು.
icon

(2 / 10)

ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಅಂತಾರಾಜ್ಯ ಗಡಿಯಲ್ಲಿರುವ ಕರ್ನಾಟಕದ 10 ಅರಣ್ಯ ವಿಭಾಗಗಳಲ್ಲಿ ಈ ಕಾರ್ಯ ನಡೆಸಲಾಗುವುದು. ಕೋಲಾರ, ಕಾವೇರಿ ವನ್ಯಜೀವಿ, ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ತಾಣ, ಬಿಳಿಗಿರಿ ರಂಗ ದೇವಸ್ಥಾನ (ಬಿ.ಆರ್.ಟಿ.) ಹುಲಿ ಸಂರಕ್ಷಿತ ಅರಣ್ಯ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಬಂಡೀಪುರ ಹುಲಿ ಸಂರಕ್ಷಿತ ತಾಣ, ನಾಗರಹೊಳೆ ಹುಲಿ ಸಂರಕ್ಷಿತ ತಾಣ, ಮಡಿಕೇರಿ ಪ್ರಾದೇಶಿಕ, ಮಡಿಕೇರಿ ವನ್ಯಜೀವಿ ಮತ್ತು ವಿರಾಜಪೇಟೆ ವಿಭಾಗಗಳಲ್ಲಿ ಈ ಕಾರ್ಯ ನಡೆಯಲಿದೆ. ಇದರಲ್ಲಿ ಸಲಗ, ಹೆಣ್ಣಾನೆ, ಮರಿ, ಮಖನಾ ಸೇರಿದಂತೆ ಎಲ್ಲಾ ಆನೆಗಳನ್ನು ಗುರುತಿಸಿ ಲೆಕ್ಕವನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಕುತ್ತಾರೆ. 
icon

(3 / 10)

ನೀಲಗಿರಿ  ಶ್ರೇಣಿಯ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಆನೆಗಳ ನಿರಂತರ ಸಂಚಾರ ಮತ್ತು ಮಾನವ- ಆನೆಗಳ ಸಂಘರ್ಷದ ಹಿನ್ನೆಲೆಯಲ್ಲಿ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳು ಅಂತಾರಾಜ್ಯ ಸಮನ್ವಯ ಸಮಿತಿಯನ್ನು (ಐಸಿಸಿ) ರಚಿಸಿವೆ. ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕರ್ನಾಟಕ, ಕೇರಳ ರಾಜ್ಯಗಳ ಅರಣ್ಯ ಸಚಿವರು ಮತ್ತು ತಮಿಳುನಾಡಿನ ಹಿರಿಯ ಅರಣ್ಯ ಅಧಿಕಾರಿಗಳು 2024 ರ ಮಾರ್ಚ್ 10 ರಂದು ಅಂತಾರಾಜ್ಯ ಸಮನ್ವಯ ಸಮಿತಿ (ಐಸಿಸಿ) ಚಾರ್ಟರ್ ಗೆ ಸಹಿ ಹಾಕಿದ್ದಾರೆ. ಈ ಚಾರ್ಟರ್ ಅಂತಾರಾಜ್ಯ ಪ್ರದೇಶದಲ್ಲಿನ ವನ್ಯಜೀವಿಗಳ ಸಂಯೋಜಿತ ಆನೆಗಳ ಅಂದಾಜು (ಗಣತಿ) ಮಾಡುವ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸುತ್ತದೆ
icon

(4 / 10)

ಮೊದಲ ದಿನ 1.    ಬ್ಲಾಕ್ ಸ್ಯಾಂಪ್ಲಿಂಗ್ ಅಥವಾ ಡೈರೆಕ್ಟ್ ಕೌಂಟ್ (ದಿನ 1) (23 ನೇ ಮೇ 2024) 2023 ರಲ್ಲಿ ನಡೆಸಿದ ಗಣತಿಯಲ್ಲಿ ಆನೆಗಳ ಇರುವಿಕೆಯನ್ನು ಹೊಂದಿರುವ ಬೀಟ್ ಗಳ ದತ್ತಾಂಶವನ್ನು ಸಂಗ್ರಹಿಸಲಾಗಿದೆ. ಈ ಬೀಟ್ ಗಳಲ್ಲಿ, ಶೇ.50 ನ್ನು ವಿಭಾಗಗಳು ಯಾದೃಚ್ಛಿಕವಾಗಿ ಆಯ್ಕೆ ಮಾಡುತ್ತವೆ. ಆಯ್ದ ಬೀಟ್ ಗಳಲ್ಲಿ, ವೈವಿಧ್ಯಮಯ ಸಸ್ಯವರ್ಗ, ಎತ್ತರದ ಶ್ರೇಣಿ ಮತ್ತು ಮಳೆಯ ಮಾದರಿಗಳನ್ನು ಗಣನೆಗೆ ತೆಗೆದುಕೊಂಡು ಪ್ರತಿ ಅರಣ್ಯ ವಿಭಾಗದಿಂದ 5 ಚದರ ಕಿ.ಮೀ ಗಾತ್ರದ ಮಾದರಿ ಬ್ಲಾಕ್ ಗಳನ್ನು ಆಯ್ಕೆ ಮಾಡಲಾಯಿತು. ಎರಡರಿಂದ ಮೂರು ಜನರ ತಂಡವು ಆಯ್ದ ಪ್ರತಿಯೊಂದು ಬ್ಲಾಕ್ ಗಳನ್ನು ವ್ಯವಸ್ಥಿತವಾಗಿ ಸಮೀಕ್ಷೆ ಮಾಡಬೇಕು ಮತ್ತು 5 ಚದರ ಕಿ.ಮೀ ಬ್ಲಾಕ್ ಅನ್ನು ಕ್ರಮಿಸಲು ಕನಿಷ್ಠ 15 ಕಿ.ಮೀ ನಡೆಯಬೇಕು ಮತ್ತು ಒದಗಿಸಲಾದ ಬ್ಲಾಕ್ ಎಣಿಕೆ ಡೇಟಾ ಶೀಟ್ ನಲ್ಲಿ ಎಲ್ಲಾ ಆನೆ ವೀಕ್ಷಣೆಗಳನ್ನು ದಾಖಲಿಸುತ್ತಾರೆ. . ಪ್ರತಿ ಮಾದರಿ ಬ್ಲಾಕ್ ನ ವಿಸ್ತೀರ್ಣವನ್ನು ನಕ್ಷೆಯಲ್ಲಿ ಗುರುತಿಸಬೇಕು ಮತ್ತು ಸರಿಯಾಗಿ ದಾಖಲಿಸಬೇಕು. ಸಾಧ್ಯವಾದಾಗಲೆಲ್ಲಾ ನೋಡಿದ ಎಲ್ಲಾ ಪ್ರಾಣಿಗಳ ವಯಸ್ಸು ಮತ್ತು ಲಿಂಗವನ್ನು ಸಿಬ್ಬಂದಿ ದಾಖಲಿಸುವರು.
icon

(5 / 10)

ಎರಡನೇ ದಿನ// ಲೈನ್ ಟ್ರಾನ್ಸೆಕ್ಟ್ಸ್ ಕಾರ್ಯ (ದಿನ 2) (24 ನೇ ಮೇ 2024) ಟ್ರಾನ್ಸೆಕ್ಟ್ ನಡೆಯಲು ರೇಖೆಗಳನ್ನು ವಿಭಾಗದಾದ್ಯಂತ ಗುರುತಿಸಲಾಗಿದೆ. ಪ್ರತಿ ಲೈನ್ ಟ್ರಾನ್ಸೆಕ್ಟ್ ನ ಉದ್ದವು 2 ಕಿ.ಮೀ ಆಗಿರುತ್ತದೆ. ಸಿಬ್ಬಂದಿ ಟ್ರಾನ್ಸೆಕ್ಟ್ ಲೈನ್ ನಲ್ಲಿ ನಡೆಯುತ್ತಾರೆ ಮತ್ತು ರೇಖೆಯ ಎರಡೂ ಬದಿಗಳಲ್ಲಿ ಆನೆಯ ಲದ್ದಿ ರಾಶಿಯ ಬಗ್ಗೆ ದತ್ತಾಂಶವನ್ನು ದಾಖಲಿಸುತ್ತಾರೆ. ರೇಖೆಯಿಂದ ಆನೆ ಲದ್ದಿ ಲಂಬ ದೂರ ಮತ್ತು ಲದ್ದಿ ರಾಶಿಯ ತಾಜಾತನವನ್ನು (24 ಗಂಟೆಗಳಿಗಿಂತ ಕಡಿಮೆ, 24 ಗಂಟೆಗಳಿಗಿಂತ ಹೆಚ್ಚು) ದಾಖಲಿಸಲಾಗುತ್ತದೆ. ಮೇಲಿನ 2 ಕಾರ್ಯವಿಧಾನಗಳನ್ನು ಈ ಆವಾಸಸ್ಥಾನಗಳಲ್ಲಿ ಆನೆಗಳ ಸಮೃದ್ಧಿ ಅಂದಾಜು ಮಾಡಲು ಬಳಸಲಾಗುತ್ತದೆ. ಅರಣ್ಯ ಪ್ರದೇಶ, ಭೂ ಬಳಕೆಯ ಪ್ರಕಾರದ ದತ್ತಾಂಶ ಮತ್ತು ಪಡೆದ ಕ್ಷೇತ್ರ ದತ್ತಾಂಶ, ಪ್ರಸ್ತುತ ಆನೆ ಬಳಕೆ / ವಿತರಣಾ ಪ್ರದೇಶ, ಸರಾಸರಿ ಆನೆ ಸಾಂದ್ರತೆ ಮತ್ತು ಆನೆಗಳ ಸಂಖ್ಯೆಯನ್ನು ಲೆಕ್ಕಹಾಕಲಾಗುತ್ತದೆ. 
icon

(6 / 10)

ಮೂರನೇ ದಿನ ವಾಟರ್ ಹೋಲ್ ಡೈರೆಕ್ಟ್ ಕೌಂಟ್ (ಛಾಯಾಚಿತ್ರ ಪುರಾವೆಗಳೊಂದಿಗೆ) (ದಿನ 3) (25 ನೇ ಮೇ 2024)ಆನೆಗಳ ಗರಿಷ್ಠ ಬಳಸುವ ನೀರಿನ ಹೊಂಡಗಳು / ಸಾಲ್ಟ್ ಲಿಕ್ಸ್ / ತೆರೆದ ಪ್ರದೇಶಗಳನ್ನು ಗುರುತಿಸಲಾಗುತ್ತದೆ. ಈ ಆಯ್ದ ಸ್ಥಳಗಳಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಆನೆಗಳಿಗೆ ನಿಗದಿತ ತಾಣ ವೀಕ್ಷಣೆಯನ್ನು ಕೈಗೊಳ್ಳಲಾಗುತ್ತದೆ. ಹಿಂಡಿನ ಗಾತ್ರ, ಆನೆಯ ವಯಸ್ಸು ಮತ್ತು ಲಿಂಗವನ್ನು ವೈಯಕ್ತಿಕವಾಗಿ ಅಥವಾ ಗುಂಪುಗಳ ಛಾಯಾಚಿತ್ರಗಳೊಂದಿಗೆ ದಾಖಲಿಸಲಾಗುತ್ತದೆ. ಆನೆಗಳ ಸಂಖ್ಯೆಯ ವಯಸ್ಸು ಮತ್ತು ಲಿಂಗ ಹಂಚಿಕೆಯನ್ನು (ಗಣತಿಸಂಖ್ಯಾಶಾಸ್ತ್ರ) ನಿರ್ಣಯಿಸಲು ಈ ದತ್ತಾಂಶವನ್ನು ಬಳಸಲಾಗುತ್ತದೆ.ಉತ್ಪತ್ತಿಯಾದ ದತ್ತಾಂಶವನ್ನು ಸಂಗ್ರಹಿಸಬೇಕು ಮತ್ತು ಐಐಎಸ್ಸಿ ಬೆಂಗಳೂರಿನ ವಿಜ್ಞಾನಿಗಳ ಸಹಾಯದಿಂದ, ಸಂಖ್ಯಾಶಾಸ್ತ್ರೀಯ ವಿಧಾನಗಳನ್ನು ಬಳಸಿಕೊಂಡು ವಿಶ್ಲೇಷಿಸಬೇಕು. ವಿಶ್ಲೇಷಣೆಯ ನಂತರ, ಎಲ್ಲಾ 4 ರಾಜ್ಯಗಳಿಗೆ, ಪ್ರತಿ ರಾಜ್ಯದ ಗಡಿಯಲ್ಲಿ ಬರುವ ಪ್ರದೇಶಗಳಿಗೆ ಜನಸಂಖ್ಯೆಯ ಅಂದಾಜು ಪಡೆಯಲಾಗುತ್ತದೆ.
icon

(7 / 10)

ಹೀಗೆ ಮೂರು ದಿನಗಳ ಕಾಲ ಸಂಗ್ರಹಿಸಿದ ದತ್ತಾಂಶವನ್ನು ಒಟ್ಟುಗೂಡಿಸಿ ಆನೆಗಳ ಸಂಖ್ಯೆಯನ್ನು ಆಯಾ ರಾಜ್ಯದ ಅರಣ್ಯ ಇಲಾಖೆಗಳು ಪ್ರಕಟಿಸಲಿವೆ. ಇದರಿಂದ ಯಾವ ರಾಜ್ಯದಲ್ಲಿ ಎಷ್ಟು ಆನೆಗಳಿವ ಎನ್ನುವ ನಿಖರ ಮಾಹಿತಿ ದೊರೆತು ಮುಂದೆ ಅರಣ್ಯ ಇಲಾಖೆ ಸಮರ್ಪಕವಾಗಿ ಯೋಜನೆ ರೂಪಿಸಲು ಸಹಕಾರಿಯಾಗಲಿದೆ. 
icon

(8 / 10)

ಆಖಿಲ ಭಾರತ ,ಮಟ್ಟದಲ್ಲಿ ನಾಲ್ಕು ವರ್ಷಗಳಿಗೆ ಒಮ್ಮೆ ಆನೆ ಗಣತಿ ನಡೆದರೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂದಿನ ಗಣತಿಗೆ ನಿಖರ ಮಾಹಿತಿ ಸಿಗಲಿ ಎನ್ನುವ ಉದ್ದೇಶದಿಂದ ಈ ಬಾರಿಯೂ ನಾಲ್ಕು ರಾಜ್ಯಗಳ ಸಂಯೋಜಿತ ಗಣತಿ ನಡೆಯುತ್ತಿದೆ. 
icon

(9 / 10)

ಕರ್ನಾಟಕದಲ್ಲಂತೂ ಕಳೆದ ವರ್ಷ ನಡೆಸಿದ್ದ ಆನೆ ಗಣತಿ ವೇಳೆ 6395 ಆನೆಗಳು ಇರುವ ಮಾಹಿತಿಯನ್ನು ಪ್ರಕಟಿಸಲಾಗಿತ್ತು. ಇದು ದಕ್ಷಿಣ ಭಾರತದಲ್ಲೇ ಅತ್ಯಧಿಕ ಸಂಖ್ಯೆಯಾಗಿತ್ತು.
icon

(10 / 10)

ಇತರ ಗ್ಯಾಲರಿಗಳು