Forest Summer: ಬಿಸಿಲ ಬೇಗೆಗೆ ಬಸವಳಿಯುತಿವೆ ವನ್ಯಜೀವಿಗಳು, ಹಸಿರು, ನೀರಿಗೆ ಕಾಡಲ್ಲೂ ಈಗಲೇ ಹಾಹಾಕಾರ Photos
- ನಾಡಿನಲ್ಲಿ ಮಾತ್ರವಲ್ಲ. ಕಾಡಿನಲ್ಲೂ ಬಿಸಲೇ ಬೇಗೆ ಶುರುವಾಗಿವೆ. ಬಂಡೀಪುರ. ನಾಗರಹೊಳೆ ವನ್ಯಧಾಮಗಳಲ್ಲಿ ಆನೆ, ಹುಲಿ ಸೇರಿದಂತೆ ಪ್ರಮುಖ ಪ್ರಾಣಿಗಳೂ ನೀರು, ಹಸಿರನರಸಿ ಹೋಗುತ್ತಿವೆ. ಈ ಬಾರಿ ಬೇಸಿಗೆ ಆರಂಭದಲ್ಲೇ ನೀರಿನ ಸಮಸ್ಯೆ ಇರುವುದರಿಂದ ಅರಣ್ಯ ಇಲಾಖೆ ಕೆರೆಗಳಿಗೆ ಟ್ಯಾಂಕರ್ ಮೂಲಕ ಒದಗಿಸುವ ಸಿದ್ದತೆ ಮಾಡಿಕೊಳ್ಳುತ್ತಿದೆ. ಹೀಗಿದೆ ಬೇಸಿಗೆ ಕಾಡಿನ ಚಿತ್ರಣ

(1 / 9)
ಬೆಂಗಳೂರು ಮೈಸೂರಿನಿಂದ ನಂಜನಗೂಡು ಮಾರ್ಗವಾಗಿ ಗುಂಡ್ಲುಪೇಟೆಯಿಂದ ಬಂಡೀಪುರ ಕಡೆ ಹೊರಟರೆ ಆಗಲೇ ಬಿಸಿಲ ಝಳ ಎದುರಾಗುತ್ತದೆ, ಅರಣ್ಯದಂಚಿನ ಭಾಗದಲ್ಲಿ ಈಗ ಬಿಸಿಲ ವಾತಾವರಣ ಜೋರಾಗಿಯೇ ಇದೆ.
(2 / 9)
ಬಂಡೀಪುರ ಪ್ರವೇಶಿಸುತ್ತಿದ್ದಂತೆ ಅಲ್ಲಲ್ಲಿ ಹಸಿರು ಕಂಡು ಬರುತ್ತದೆ. ಆದರೆ ಬಹುತೇಕ ಮರಗಳು ಎಲೆಯುದುರಿಸುತ್ತಿದೆ.
(3 / 9)
ಬಂಡೀಪುರ ಅರಣ್ಯದೊಳಗೆ ಅಲ್ಲಲ್ಲಿ ಹಸಿರು. ಬಹಳಷ್ಟು ಬಿಸಿಲಿನಿಂದ ಪ್ರಾಣಿಗಳು ನೆರಳಿಗೆ ನಡೆದುಕೊಂಡು ಹೋಗಬೇಕು. ನೀರಿನ ಕೊರತೆಯೂ ಇದೆ. ಈ ಕಾರಣದಿಂದ ಬೇಸಿಗೆ ಮುಗಿಯುವರೆಗೂ ಅಲ್ಲಲ್ಲಿ ನೀರು ಸಿಗುವಂತೆ ಅರಣ್ಯ ಇಲಾಖೆ ವ್ಯವಸ್ಥೆ ಮಾಡುತ್ತಿದೆ.
(5 / 9)
ಕಾಡೆಮ್ಮೆಗಳಿಗೂ ಕೆರೆಯ ಅಕ್ಕಪಕ್ಕದ ಹಸಿರು ಪ್ರದೇಶದಲ್ಲಿಯೇ ಸಿಗುವ ಹುಲ್ಲೇ ಈಗ ನಿತ್ಯದ ಆಹಾರ. ಮಳೆ ಬಂದರೆ ಸಾಕು ಎನ್ನುವ ಸನ್ನಿವೇಶ.
(6 / 9)
ಕಾಡಾನೆಗಳೆಂದರೆ ದಿನದ ಹದಿನೆಂಟು ಗಂಟೆ ತಿನ್ನುವ, ನೀರೆಂದರೆ ಪಂಚಪ್ರಾಣದ ಜೀವ. ಅವುಗಳಿಗೂ ಹುಲ್ಲು, ಬಿದಿರು ಮೆದೆ ಸಿಕ್ಕರೆ ಅದೇ ಖುಷಿ. ಬಂಡೀಪುರದಲ್ಲಿ ಅಮ್ಮನ ಮಡಿನಲ್ಲಿ ಹಾಲುನ್ನುಳುವ ಸಂತಸದಲ್ಲಿ ಮರಿ.
(Exploretheworld )(7 / 9)
ಆನೆಗಳಿಗೆ ನೀರು ಸಿಕ್ಕರೆ ಸಾಕು. ಅದಕ್ಕಿಂತ ಬೇರೆಯ ಜಗತ್ತೇ ಇಲ್ಲ. ನಾಗರಹೊಳೆಯ ಕಬಿನಿ ಹಿನ್ನೀರೇ ಬಹುತೇಕ ಆನೆಗಳಿಗೆ ಈಗ ಜೀವಾಳ. ನೀರು ಸಿಕ್ಕ ಆನೆಯ ಖುಷಿಯನ್ನು ನೋಡಿ.
(sharatkumar)ಇತರ ಗ್ಯಾಲರಿಗಳು