Lions day 2024: ಸಿಂಹದ ಜತೆ ಜತೆಯಲ್ಲಿಯೇ ನಮ್ಮ ಬದುಕಿಗೆ ಹೊಂದಿಕೆಯಾಗುವ ನುಡಿಗಟ್ಟು ಹೇಗಿವೆ ನೋಡಿ photos-forest news lions day 2024 special how lions relate to our lifestyle with many of phrases here are some examples ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lions Day 2024: ಸಿಂಹದ ಜತೆ ಜತೆಯಲ್ಲಿಯೇ ನಮ್ಮ ಬದುಕಿಗೆ ಹೊಂದಿಕೆಯಾಗುವ ನುಡಿಗಟ್ಟು ಹೇಗಿವೆ ನೋಡಿ Photos

Lions day 2024: ಸಿಂಹದ ಜತೆ ಜತೆಯಲ್ಲಿಯೇ ನಮ್ಮ ಬದುಕಿಗೆ ಹೊಂದಿಕೆಯಾಗುವ ನುಡಿಗಟ್ಟು ಹೇಗಿವೆ ನೋಡಿ photos

  • lion Phrases ಮುಖ್ಯವಾಗಿ ಸಿಂಹ ಎಂದರೆ ನಮ್ಮ ತಲೆಯಲ್ಲಿ ಬರುವುದು ಪಂಚತಂತ್ರ ಕಥೆಯ( Panchatantra) ಕಾಡಿನ ರಾಜ. ಆ ರಾಜನ‌‌ ಕಥಾವಸ್ತುಗಳನ್ನೊಳಗೊಂಡ ವಿವಿಧ ಕತೆಗಳು. ನಮ್ಮ ನಾಡಲ್ಲಿ ಸಿಂಹಗಳಿಲ್ಲದಿದ್ದರೂ ಕನ್ನಡದ ಹಲವು ನುಡಿಗಟ್ಟು/ಪದಗಳು ಸಿಂಹಗಳ ಹೆಸರನ್ನು ಒಳಗೊಂಡಿವೆ. ಅವುಗಳ ಹಿನ್ನೆಲೆ ಹೀಗಿದೆ.
  • ಮಾಹಿತಿ: ಪರಿಸರ ಬಳಗದ ಸಂಜಯ್‌ ಹೊಯ್ಸಳ

ಸಿಂಹಕ್ಕೆ ಸಂಬಂಧಿಸಿದ ನುಡಿಗಟ್ಟುಗಳು ಸಿಂಹಕ್ಕೆ, ಅದರ ದೇಹಭಾಷೆ ಎಷ್ಟು ಸೂಕ್ತವಾಗಿ ಹೊಂದಾಣಿಕೆಯಾಗುತ್ತದೆ ಎಂಬುದನ್ನು ನಾವು ಅವುಗಳನ್ನೇ ನೋಡುತ್ತಾ ಹೋದರೆ ಮನದಟ್ಟಾಗುತ್ತದೆ.
icon

(1 / 7)

ಸಿಂಹ ಸ್ವಪ್ನ//ಸಿಂಹ ಒಮ್ಮೆ ಘರ್ಜನೆ ಹಾಕಿದರೆ ಎದೆ ನಡುಗುತ್ತದೆ. ಎದುರಿಗಿರುವ ಸಿಂಹವನ್ನು ನೋಡಿ ಅಂಜಿದವನು ಅದರ ನೆನಪಿನಲ್ಲೇ ಮಲಗಿದರೆ ನಿದ್ದೆ ಎಲ್ಲಿ ಬರುವುದು ಅರೆಬರೆ ನಿದ್ದೆಯಲ್ಲಿ ಸ್ವಪ್ನ ಬಿದ್ದರೂ ಸಿಂಹದ್ದೇ ಸ್ವಪ್ನ, ಅಂತಹ ಘಟನೆಯನ್ನು ಸಿಂಹ ಸ್ವಪ್ನ ಎನ್ನವುದುಂಟು.
icon

(2 / 7)

ಸಿಂಹಾಸನ///ರಾಜನ ಆಸನವನ್ನು ಸಿಂಹಾಸನ ಎನ್ನುವರು. ಆ ಆಸನ ರಾಜನಿಗೆ ಮಾತ್ರ ಮೀಸಲು. ಸಿಂಹ ಕಾಡಿನ ರಾಜನಾಗಿರುವುದರಿಂದ ನಾಡಿನ ರಾಜನ ಆಸನಕ್ಕೂ ಸಿಂಹಾಸನ ಹೆಸರು ಬಂದಿದೆ.
icon

(3 / 7)

ಸಿಂಹನಡಿಗೆ///    ಗತ್ತು, ಆತ್ಮವಿಶ್ವಾಸ ತುಂಬಿದ, ತಲೆಎತ್ತಿ, ಎದೆಯುಬ್ಬಿಸಿ ನಡೆಯುವುದಕ್ಕೆ 'ಸಿಂಹ ನಡಿಗೆ' ಎನ್ನುತ್ತಾರೆ. ಆ ಸಿಂಹನಡಿಗೆಯನ್ನು ವಿಡಿಯೋದಲ್ಲಿ ನೀವು ಗಮನಿಸಬಹುದು.
icon

(4 / 7)

ಸಿಂಹಾವಲೋಕನ //ಹಿಂದೆಯಾದ ಘಟನೆಗಳನ್ನು ನೆನೆಯುತ್ತಾ, ಅಲ್ಲಿನ ಸರಿ, ತಪ್ಪುಗಳ ಕುರಿತು ಆತ್ಮಾವಲೋಕನ ಮಾಡಿಕೊಂಡು ಮುಂದಿನ ಯೋಜನೆ ಸಿದ್ದಪಡಿಸುವುದಕ್ಕೆ 'ಸಿಂಹಾವಲೋಕನ' ಎನ್ನುವರು.
icon

(5 / 7)

ಸಿಂಹಕಟಿ //ಸೊಂಟದ ಭಾಗ ದೇಹದ ಇತರ ಭಾಗಗಳಿಗಿಂತ ಬಹಳ ತೆಳ್ಳಿಗಿರುವುದಕ್ಕೆ ಸಿಂಹಕಟಿ ಎನ್ನುತ್ತಾರೆ. ಏರಿಳಿತದ ದೇಹಹೊಂದಿ, ಚಿಕ್ಕದಾದ ಸೊಂಟ ಹೊಂದಿದ ಹುಡುಗಿಯರಿಗೆ 'ಸಿಂಹಕಟಿ' ಹೊಂದಿದವಳು ಎನ್ನುತ್ತಾರೆ. ಆ ಸಿಂಹಕಟಿಯನ್ನು ನಾವು ಗಮನಿಸಬಹುದು.
icon

(6 / 7)

ಸಿಂಹಘರ್ಜನೆ // ಗತ್ತಿನ, ತೂಕದ, ಶೌರ್ಯದ, ಪೌರುಷದ ಮಾತುಗಳಿಗೆ 'ಸಿಂಹಘರ್ಜನೆ' ಎನ್ನುತ್ತಾರೆ. ಆ ಸಿಂಹದ ಘರ್ಜನೆಯನ್ನು ಕೂಡ  ಕಾಣಬಹುದು.
icon

(7 / 7)

ಇತರ ಗ್ಯಾಲರಿಗಳು