ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Forest News: ಭಾರತದಲ್ಲಿ ಆನೆ ಯೋಜನೆ ಜಾರಿಯಾಗಿ 32 ವರ್ಷ, ಕರ್ನಾಟಕದ ಗಜಪಡೆಗೆ ಯೋಜನೆಯಿಂದ ಆದ ಉಪಯೋಗ ವೇನು Photos

Forest News: ಭಾರತದಲ್ಲಿ ಆನೆ ಯೋಜನೆ ಜಾರಿಯಾಗಿ 32 ವರ್ಷ, ಕರ್ನಾಟಕದ ಗಜಪಡೆಗೆ ಯೋಜನೆಯಿಂದ ಆದ ಉಪಯೋಗ ವೇನು photos

  • wild life ಇಡೀ ವಿಶ್ವದಲ್ಲಿಯೇ ಅತಿಹೆಚ್ಚಿನ ಆನೆ ಸಾಂಧ್ರತೆ ಹೊಂದಿರುವ ರಾಜ್ಯ ಕರ್ನಾಟಕ. ಅತಿ ಹೆಚ್ಚು ಆನೆಗಳ ಜತೆಗೆ ಸಂಘರ್ಷವೂ ಅಧಿಕವಾಗಿರುವುದು ಇಲ್ಲಿಯೇ. ಆನೆಗಳ ನಿರ್ವಹಣೆಗೆಂದು ರೂಪಿಸಿರುವ ಆನೆ ಯೋಜನೆ( Project Elephant) ಜಾರಿಯಾಗಿ ಮೂರು ದಶಕವೇ ಕಳೆದಿದೆ. ಈ ಕುರಿತ ಮಾಹಿತಿ ಇಲ್ಲಿದೆ.

1992ರ ಏಪ್ರಿಲ್‌  7 ರಂದು ಭಾರತದಲ್ಲಿ ಆನೆಗಳಿಗೆ ಶಕ್ತಿ ತುಂಬುವುದು, ಅವುಗಳ ಸಂರಕ್ಷಣೆಯ ನಿಟ್ಟಿನಲ್ಲಿ ರೂಪಿಸಿದ್ದು ಆನೆ ಯೋಜನೆ( project Elephant). ಈ ಯೋಜನೆ ಜಾರಿಗೊಂಡು ಮೂರು ದಶಕಗಳೇ ಕಳೆದಿವೆ. ಆನೆಗಳು ನಾಡಿಗೆ ನುಗ್ಗುವುದು, ಮನುಷ್ಯನನ್ನು ಸಾಯಿಸುವುದು, ನಾಡಿಗೆ ನುಗ್ಗುವ ಭರದಲ್ಲಿ ಆನೆಗಳು ಜೀವ ಕಳೆದುಕೊಳ್ಳುವುದು ನಡೆದೆ ಇದೆ. 
icon

(1 / 10)

ಸರಾಸರಿ ಒಂದು ಸಾವಿರ ಆನೆಗಳಾದರೂ ನಾನಾ ಕಾರಣದಿಂದ ಕರ್ನಾಟಕದಲ್ಲಿ ಸಾಯುತ್ತಲೇ ಇವೆ. ಇಡೀ ಪ್ರಪಂಚದಲ್ಲಿ ಏಷ್ಯಾ ಆನೆಗಳ ಪ್ರಮಾಣ ಶೇ. 60ರಷ್ಟಿದೆ. ಭಾರತದಲ್ಲಿಯೇ 33 ಆನೆ ಮೀಸಲು ಪ್ರದೇಶಗಳನ್ನುರೂಪಿಸಲಾಗಿದೆ. ಕರ್ನಾಟಕದಲ್ಲೂ ಪ್ರತ್ಯೇಕ ಆನೆ ಕಾರ್ಯಯೋಜನೆ ಜಾರಿಯಲ್ಲಿದೆ. ಯೋಜನೆ ಜಾರಿಗೊಂಡ ನಂತರ ಆನೆಗಳ ಸಂತತಿಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಅದರೊಟ್ಟಿಗೆ ಸಂಘರ್ಷದ ಪ್ರಮಾಣವೂ ಏರಿಕೆಯಾಗಿದೆ. 
icon

(2 / 10)

ಆನೆ ಯೋಜನೆ ಮುಖ್ಯ ಗುರಿಗಳು ಮೂರು. ಅದರಲ್ಲಿ ಆನೆಗಳು ಹಾಗೂ ಅವುಗಳ ಆವಾಸಸ್ಥಾವನ್ನು ಉಳಿಸುವುದು. ಆನೆಗಳ ಕಾರಿಡಾರ್‌ಗಳನ್ನು ರಕ್ಷಣೆ ಮಾಡುವುದು,ಮನುಷ್ಯ ಮತ್ತು ಪ್ರಾಣಿ ಸಂಘರ್ಷದ ಪ್ರಮಾಣವನ್ನು ತಗ್ಗಿಸುವುದು, ಶಿಬಿರಗಳಲ್ಲಿ ನೆಲೆ ಕಂಡುಕೊಂಡಿರುವ ಸಾಕಾನೆಗಳ ಯೋಗಕ್ಷೇಮದ ನಿರ್ವಹಣೆಯೂ ಸೇರಿದೆ.  
icon

(3 / 10)

ಕರ್ನಾಟಕದಲ್ಲಿ ಎರಡು ಆನೆ ಮೀಸಲು ಅರಣ್ಯ ಪ್ರದೇಶಗಳಿವೆ. ಮೊದಲನೆಯದ್ದು ಕರ್ನಾಟಕ, ತಮಿಳುನಾಡು ಹಾಗೂ ಕೇರಳದ ನೀಲಗಿರಿ ಜೀವ ವೈವಿಧ್ಯತಾಣಕ್ಕೆ ಹೊಂದಿಕೊಂಡಿರುವ ಮೈಸೂರು ಆನೆ ಮೀಸಲು ಪ್ರದೇಶ.  ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಹೊಂದಿಕೊಂಡ ಪಶ್ಚಿಮ ಘಟ್ಟಗಳ ದಾಂಡೇಲಿ ಆನೆ ಮೀಸಲು ಪ್ರದೇಶ.
icon

(4 / 10)

ಭಾರತದ ಪಾರಂಪರಿಕ ಪ್ರಾಣಿಯಾಗಿ ಆನೆಯನ್ನು ಗುರುತಿಸಲಾಗುತ್ತದೆ/. ಕರ್ನಾಟಕದ ರಾಜ್ಯ ಪ್ರಾಣಿಯೂ ಹೌದು. ನಮ್ಮ ದೇಶದ ಪುರಾಣ, ಇತಿಹಾಸ, ಪರಂಪರೆಯೊಂದಿಗೆ ಆನೆಯ ಸಂಬಂಧ ಅವಿನಾಭಾವವಾದದ್ದು. ಜನ ಮಾನಸದಲ್ಲಿ ಆನೆಗೆ ವಿಶೇಷ ಸ್ಥಾನ ಮೊದಲಿನಿಂದಲೂ ಇದೆ.
icon

(5 / 10)

ಕರ್ನಾಟಕ ಇಡೀ ದೇಶದಲ್ಲಿಯೇ ಅತಿ ಹೆಚ್ಚು ಆನೆಗಳನ್ನು ಹೊಂದಿದ ರಾಜ್ಯ. ಅಷ್ಟೇ ಏಷ್ಯಾದಲ್ಲಿಯೇ ಹೆಚ್ಚು ಆನೆ ಸಾಂಧ್ರತೆ ಇರುವ ಪ್ರದೇಶ ಕರ್ನಾಟಕವೇ. ಇದು ನಾವೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿಯೇ. ಅದರಲ್ಲೂ ನಾಗರಹೊಳೆ ಹಾಗೂ ಬಂಡೀಪುರ ಪ್ರದೇಶ ಒಳಗೊಂಡ ಪ್ರದೇಶದಲ್ಲಿ ಅತಿ ಹೆಚ್ಚಿನ ಹಾಗೂ ಅತ್ಯುತ್ತಮ ಆನೆಗಳ ತಾಣ ಎನ್ನುವ ಹಿರಿಮೆಯೂ ಇದೆ. 
icon

(6 / 10)

ಭಾರತದಲ್ಲಿ ಮೂರು ದಶಕದ ಹಿಂದೆಯೇ ಆನೆ ಯೋಜನೆ ಅನುಷ್ಠಾನಗೊಂಡರೂ ಕರ್ನಾಟಕದಲ್ಲಿ ಕೆಲ ವರ್ಷ ಹಿಂದೆಯಷ್ಟೇ ಇದಕ್ಕೊಂದು ರೂಪ ನೀಡಲಾಗಿದೆ. ಮೈಸೂರು ಕೇಂದ್ರವಾಗಿ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯ ಅಧಿಕಾರಿಯನ್ನು ಆನೆ ಯೋಜನೆ ನಿರ್ದೇಶಕರಾಗಿ ನೇಮಿಸಲಾಗಿದೆ.
icon

(7 / 10)

ಆನೆ ಗಣತಿಯನ್ನೂ ನಡೆಸಲಾಗಿದೆ. ಭದ್ರಾದಿಂದ ಆರಂಭಗೊಂಡು ಹಾಸನ,.ಕೊಡಗು, ಬಂಡೀಪುರ, ನಾಗರಹೊಳೆ, ಚಾಮರಾಜನಗರ, ಬನ್ನೇರಘಟ್ಟವರೆಗಿನ ವ್ಯಾಪ್ತಿಯಲ್ಲಿ ಇರುವ ಆನೆಗಳ ಸಂಖ್ಯೆ ಆರು ಸಾವಿರಕ್ಕೂ ಅಧಿಕ. ನೆರೆಯ ನೀಲಗಿರಿ(ತಮಿಳುನಾಡು) ಹಾಗೂ ವಯನಾಡು(ಕೇರಳ) ವ್ಯಾಪ್ತಿಯನ್ನೊಳಗೊಂಡ ಪ್ರದೇಶವನ್ನು ಏಷ್ಯಾದ ಅತಿ ದೊಡ್ಡ ಆನೆ ಹೆದ್ದಾರಿ ಎಂದೇ ಕರೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಆನೆಗಳ ಸಾವಿನ ಸಂಖ್ಯೆ ಏರಿಕೆಯೂ ಆತಂಕದ ವಿಷಯವೇ ಆಗಿದೆ.
icon

(8 / 10)

ಯೋಜನೆ ಅಡಿ ಸಾಕಷ್ಟು ಕೆಲಸಗಳೂ ಆಗಿವೆ. ಅತ್ಯಾಧುನಿಕ ತಂತ್ರಜ್ಞಾನದ ಭಾಗವಾದ ಮೈಕ್ರೋಚಿಪ್ ಬಳಸಿ ಸಾಕಾನೆಗಳ ನೊಂದಣಿ ಆರಂಭಿಸಿ ಅಧ್ಯಯನ ಮಾಡಲಾಗುತ್ತಿದೆ. ಮೈಕ್ರೋಚಿಪ್ ಆನೆಯ ಎಲ್ಲಾ ವಿವರಗಳನ್ನು ಒದಗಿಸಲಿದೆ. ಅಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮಬಂಗಾಲ, ಅಂಡಮಾನ್ ಹಾಗೂ ನಿಕೋಬಾರ್. ದಿಲ್ಲಿಯಲ್ಲಿ ಇದು ಆಗಿದೆ. ಇದಕ್ಕಾಗಿ ತರಬೇತಿಯನ್ನೂ ನೀಡಿ ಗುಣಮಟ್ಟದ ಮೈಕ್ರೋಚಿಪ್‌ಗಳನ್ನು ಬಳಸಲಾಗಿದೆ. 
icon

(9 / 10)

ಆನೆ ಪಾರಂಪರಿಕ ಪ್ರಾಣಿ ಎಂಬ ಘೋಷಣೆಯೊಂದಿಗೆ ವಿಶೇಷ ಮೆರಗನ್ನು ಪಡೆದಿದೆ. ಕೇವಲ ಕಾಡು ಪ್ರಾಣಿಗಳಾಗಿಯೇ ಉಳಿಯದೇ ನಾಡಿನ ಗುಡಿ, ಮಠಗಳಲ್ಲಿ ವನ್ಯಪ್ರಿಯರನ್ನು ಪ್ರೀತಿಯಿಂದ ಹರಸುತ್ತಲೇ ಇವೆ. ಒಂದು ಕಡೆ ಕಾಡಿನ ಮುಕ್ತತೆ, ಮತ್ತೊಂದೆಡೆ ಭವ ಬಂಧನದ ನಡುವೆಯೇ ಬದುಕು ಕಂಡುಕೊಂಡಿದ್ದಾನೆ ಗಜರಾಜ.
icon

(10 / 10)

IPL_Entry_Point

ಇತರ ಗ್ಯಾಲರಿಗಳು