Green Bandipura: ಹಸಿರಿನಿಂದ ಕಂಗೊಳಿಸುತ್ತಿದೆ ಬಂಡೀಪುರ; ಹೀಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಛಾಯಾಗ್ರಾಹಕ ರಘು ಕ್ಲಿಕ್ಕಿಸಿದ ಕ್ಷಣಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Green Bandipura: ಹಸಿರಿನಿಂದ ಕಂಗೊಳಿಸುತ್ತಿದೆ ಬಂಡೀಪುರ; ಹೀಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಛಾಯಾಗ್ರಾಹಕ ರಘು ಕ್ಲಿಕ್ಕಿಸಿದ ಕ್ಷಣಗಳು

Green Bandipura: ಹಸಿರಿನಿಂದ ಕಂಗೊಳಿಸುತ್ತಿದೆ ಬಂಡೀಪುರ; ಹೀಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಛಾಯಾಗ್ರಾಹಕ ರಘು ಕ್ಲಿಕ್ಕಿಸಿದ ಕ್ಷಣಗಳು

  • Bandipur Photography  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ರಿಕಾ ಛಾಯಾಗ್ರಾಹಕರಾಗಿರುವ ದಿಡ್ಡಹಳ್ಳಿ ರಘು ಅವರು ಬಂಡೀಪುರ ಹುಲಿಧಾಮ( Bandipur Tiger Reserve)ಕ್ಕೆ ಭೇಟಿ ನೀಡಿದಾಗ ಸೆರೆ ಹಿಡಿದ ವನ್ಯಲೋಕ ಹಾಗೂ  ಹಸಿರು ಕ್ಷಣಗಳು ಹೀಗಿವೆ. 

ಮೈಸೂರಿನಿಂದ ಊಟಿಗೆ ಹೋಗುವ ಮಾರ್ಗದಲ್ಲಿ ಸಿಗುವ ಬಂಡೀಪುರ ದೇಶದ ಪ್ರಮುಖ ಹುಲಿಧಾಮ. ಇಲ್ಲಿ ಯಥೇಚ್ಛ ವನ್ಯಜೀವಿಗಳಿವೆ. ನಾಲ್ಕೈದು ತಿಂಗಳಿನಿಂದ ಮಳೆಯಿಲ್ಲದೇ ಬಳಲಿದ್ದ ವನ್ಯಜೀವಿಗಳೂ ಈಗ ನಿರಾಳ. ಜಿಂಕೆಗಳ ಹಿಂಡು ಕಂಡಿದ್ದು ಹೀಗೆ.
icon

(1 / 8)

ಕಾಡೆಮ್ಮೆಯೊಂದು ತನ್ನ ಮರಿಯೊಂದಿಗೆ ಕಾಡಿನೊಳಗೆ ಕಳೆಯುತ್ತಿದೆ. ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು ಎನ್ನುವಂತೆ.
icon

(2 / 8)

ಚಿರತೆಗಳು ಕಾಡಿನಲ್ಲಿ ಕಾಣುವುದೇ ಅಪರೂಪ. ಅದರ ಮರದ ಮೇಲೇರಿದ್ದರೆ ಭರ್ಜರಿ ಬೇಟೆಯೇ ಆಗಿದೆ ಎಂದರ್ಥ. ಚಿರತೆಯೊಂದು ಬಂಡಿಪುರದ ಮರದ ಮೇಲೆ ನಿದ್ರೆಗೆ ಜಾರಲು ಅಣಿಯಾಗುತ್ತಿತ್ತು.
icon

(3 / 8)

ಬೇಟೆಗಾರ ಕೆನ್ನಾಯಿ ಸದಾ ಎಚ್ಚರ. ಹೊಂಚು ಹಾಕಿ ಕುಳಿತು ಬೇಟೆಯಾಡುವ ಸೀಳು ನಾಯಿಗಳು ಬಂಡೀಪುರದಲ್ಲಿ ಯಥೇಚ್ಛವಾಗಿಯೇ ಇವೆ. 
icon

(4 / 8)

ಆನೆಗಳಿಗೂ ಕಾಡಿನಲ್ಲಿ ನೀರಿಲ್ಲದೇ ತೊಂದರೆಯಾಗಿತ್ತು. ಈಗ ಮಳೆ ಶುರುವಾಗಿರುವುದರಿಂದ ಕೊಂಚ ಸಮಾಧಾನ ತಂದಿದೆ. ಆಹಾರ ಸೇವನೆ ನಿರತ ಕಾಡಾನೆಗೆ ಹಕ್ಕಿಗಳು ಕೂತು ಖುಷಿ ಅನುಭವಿಸುತ್ತಿವೆ. 
icon

(5 / 8)

ಮುಂಗಸಿ ಕಂಡರೆ ಅದೃಷ್ಟ ಎನ್ನುವ ಮಾತಿದೆ. ಬಂಡೀಪುರದಲ್ಲೂ ನೆಲೆಗೊಂಡಿರುವ ಮುಂಗಸಿ ಕೂಡ ದರ್ಶನ ನೀಡಿದೆ. 
icon

(6 / 8)

ಬಿಸಿಲ ಬೇಗೆಯಿಂದ ಬಳಲಿದ್ದ ಜಂಬೂಕನಿಗೂ ಈಗ ಎಳೆಬಿಸಿಲು, ಹನಿ ಮಳೆಯ ಸಂತಸ, ದಟ್ಟ ಕಾಡಿನಿಂದ ಹೊರ ಬಂದು ದರ್ಶನ ನೀಡುತ್ತಿವೆ. 
icon

(7 / 8)

ಇವರೇ ದಿಡ್ಡಹಳ್ಳಿ ರಘು. ಮೂರು ದಶಕದಿಂದ ಪತ್ರಿಕಾ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ರಘು ವನ್ಯಜೀವಿ ಸಹಿತ ಹಲವು ಚಿತ್ರಗಳನ್ನು ಆಗಾಗ ತೆಗೆಯುತ್ತಾರೆ. ಸಿದ್ದರಾಮಯ್ಯ ಅವರ ಪತ್ರಿಕಾ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
icon

(8 / 8)

ಇತರ ಗ್ಯಾಲರಿಗಳು