Forest News: ಕಾಡಾನೆ ದಂತಕ್ಕೆ ಕತ್ತರಿ, ಬಂಡೀಪುರದಲ್ಲಿ ಪ್ರಯೋಗ, ಹೇಗಿದ್ದ ಆನೆ ಹೇಗಾಯ್ತು ಗೊತ್ತಾ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Forest News: ಕಾಡಾನೆ ದಂತಕ್ಕೆ ಕತ್ತರಿ, ಬಂಡೀಪುರದಲ್ಲಿ ಪ್ರಯೋಗ, ಹೇಗಿದ್ದ ಆನೆ ಹೇಗಾಯ್ತು ಗೊತ್ತಾ?

Forest News: ಕಾಡಾನೆ ದಂತಕ್ಕೆ ಕತ್ತರಿ, ಬಂಡೀಪುರದಲ್ಲಿ ಪ್ರಯೋಗ, ಹೇಗಿದ್ದ ಆನೆ ಹೇಗಾಯ್ತು ಗೊತ್ತಾ?

  • Chamarajnagar News ದಂತಭಗ್ನ ಎನ್ನುವ ಮಾತು ಆಗಾಗಲೇ ಕೇಳುತ್ತೇವೆ. ಆದರೆ ಬಂಡೀಪುರ ಅರಣ್ಯದಲ್ಲಿ( Bandipur Forest) ವಕ್ರದಂತದ ಸಮಸ್ಯೆ ಎದುರಿಸುತ್ತಿದ್ದ ಕಾಡಾನೆಗೆ ಮರು ಜೀವ ಸಿಕ್ಕಿದೆ. ದಂತ ಕತ್ತರಿಸಿ ಈಗ ಸಹಜ ಬದುಕು ನಡೆಸುತ್ತಿದೆ. ಈ ಕುರಿತು ಚಿತ್ರನೋಟ ಇಲ್ಲಿದೆ.

ಇದು ಬಂಡೀಪುರ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟದ ಆಸುಪಾಸಿನಲ್ಲಿ ನೆಲೆಸಿರುವ ಕಾಡಾನೆ. ಇದರ ದಂತ ಮಿತಿ ಮೀರಿ ಬೆಳೆದಿತ್ತು. ದಂತದ ಸಮಸ್ಯೆಯಿಂದ ಸರಿಯಾಗಿ ಆಹಾರ ಸೇವಿಸಲು ಆಗದೇ ಬೆಳೆಯನ್ನೇ ನಾಶ ಮಾಡುತ್ತಿತ್ತು. ಇದರಿಂದ ಕೆರಳಿದ ಗುಂಡ್ಲುಪೇಟೆ ಭಾಗದ ರೈತರು ಅರಣ್ಯ ಇಲಾಖೆಗೆ ದೂರು ನೀಡಿ ಆನೆ ಉಪಟಳ ತಪ್ಪಿಸುವಂತೆ ಸೂಚಿಸಿದ್ದರು.
icon

(1 / 7)

ಕೊನೆಗೆ ಆನೆ ಸ್ಥಿತಿಗತಿಯನ್ನು ಅಧ್ಯಯನ ಮಾಡಲು ಬಂಡೀಪುರ ಡಿಸಿಎಫ್‌ ಪ್ರಭಾಕರನ್‌ ಸೂಚಿಸಿದರು. ಆನೆಯ ವಕ್ರದಂತದ ಸಮಸ್ಯೆ ಇರುವುದು ಅರಿವಿಗೆ ಬಂದಿತು.
icon

(2 / 7)

ಮೇಲಾಧಿಕಾರಿಗಳ ಅನುಮತಿ ಪಡೆದು ಆನೆಯನ್ನು ಸಾಕಾನೆಗಳ ಸಹಾಯದಿಂದ ಸೆರೆ ಹಿಡಿಯಲಾಯಿತು. ಸುಮಾರು ಮೂರು ಇಂಚಿನಷ್ಟು ದಂತವನ್ನು ಕತ್ತರಿಸಲಾಯಿತು. ಆನಂತರ ಕಾಡಿಗೆ ಬಿಡಲಾಯಿತು. ಈಗ ಸಹಜವಾಗಿ ಅದು ಆಹಾರ ಸೇವಿಸುತ್ತಿರುವುದು ಕಂಡು ಬಂದಿದೆ.
icon

(3 / 7)

ಆನೆಗಳಿಗೆ ದಂತವೇ ಭೂಷಣ. ದಂತ ಸರಿಯಾಗಿದ್ದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ವಕ್ತವಾಗಿ ಇಲ್ಲವೇ ಅಡ್ಡಲಾಗಿ ಬೆಳೆದರೆ ಸಲಗಗಳು ಕಷ್ಟಪಡಬೇಕಾಗುತ್ತದೆ. ಇಂತಹ ಹಲವು ಸಲಗಗಳು ಬಂಡೀಪುರ, ನಾಗರಹೊಳೆ ಭಾಗದವಲ್ಲಿವೆ. 
icon

(4 / 7)

ಕೆಲವೊಂದು ಆನೆಗಳು ಆಹಾರವನ್ನು ಸರಿಯಾಗಿ ಸೇವಿಸಲಾಗದೇ ಫಸಲನ್ನು ಬೇಕಾಬಿಟ್ಟಿ ನಾಶ ಮಾಡಿದ ಉದಾಹರಣೆಯೂ ಇದೆ. ನಾಗರಹೊಳೆ ಕಬಿನಿ ಹಿನ್ನೀರಿನಲ್ಲೂ ಇಂತಹ ಆನೆಗಳು ಕಂಡು ಬರುತ್ತವೆ
icon

(5 / 7)

ಆನೆ ದಂತ ಸಾಮಾನ್ಯವಾಗಿ ಆರೇಳು ಅಡಿ ಉದ್ದ ಇರುತ್ತವೆ. ವಯಸ್ಕ ಆನೆಯ ದಂತ ಗಟ್ಟಿಮುಟ್ಟಾಗಿಯೂ ಇರುತ್ತದೆ. ಕೂಡು ದಂತಗಳಿದ್ದರೂ ಅತಿಯಾಗಿ ಕೂಡಿಕೊಂಡಾಗ ಸಮಸ್ಯೆ ಎದುರಾಗುತ್ತದೆ ಎನ್ನುವುದು ತಜ್ಞರ ನುಡಿ.
icon

(6 / 7)

ಕಾಡಾನೆ ದಂತವನ್ನು ಅನುಮತಿ ಇಲ್ಲದೇ ಸಾಗಿಸುವ ಹಾಗಿಲ್ಲ. ಇದು ಅಪರಾಧ. ಅದರಲ್ಲೂ ಆನೆ ದಂತವನ್ನು ಕತ್ತರಿಸುವುದಕ್ಕೂ ಆಯಾ ರಾಜ್ಯಗಳ ಅರಣ್ಯ ಇಲಾಖೆ ಮುಖ್ಯಸ್ಥರ ಅನುಮತಿ ಬೇಕೇಬೇಕು. ಕರ್ನಾಟಕದಲ್ಲಿ ಹೀಗೆ ಕಾಡಾನೆ ದಂತ ಸೌಂದರ್ಯ ಪ್ರಕರಣ ವಿರಳ.
icon

(7 / 7)

ಇತರ ಗ್ಯಾಲರಿಗಳು