60 ದಾಟಿದ ಮೇಲೆ ಮದುವೆ; ಪಶ್ಚಿಮ ಬಂಗಾಳದ ಬಿಜೆಪಿ ಮಾಜಿ ಅಧ್ಯಕ್ಷ ದಿಲೀಪ್ ಘೋಷ್ - ರಿಂಕು ಮಜುಂದಾರ್ ವಿವಾಹದ ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  60 ದಾಟಿದ ಮೇಲೆ ಮದುವೆ; ಪಶ್ಚಿಮ ಬಂಗಾಳದ ಬಿಜೆಪಿ ಮಾಜಿ ಅಧ್ಯಕ್ಷ ದಿಲೀಪ್ ಘೋಷ್ - ರಿಂಕು ಮಜುಂದಾರ್ ವಿವಾಹದ ಚಿತ್ರನೋಟ

60 ದಾಟಿದ ಮೇಲೆ ಮದುವೆ; ಪಶ್ಚಿಮ ಬಂಗಾಳದ ಬಿಜೆಪಿ ಮಾಜಿ ಅಧ್ಯಕ್ಷ ದಿಲೀಪ್ ಘೋಷ್ - ರಿಂಕು ಮಜುಂದಾರ್ ವಿವಾಹದ ಚಿತ್ರನೋಟ

60 ದಾಟಿದ ಮೇಲೆ ಮದುವೆ: ಪಶ್ಚಿಮ ಬಂಗಾಳದ ಬಿಜೆಪಿಯ ಮಾಜಿ ಅಧ್ಯಕ್ಷ ದಿಲೀಪ್ ಘೋಷ್ 61ನೇ ವಯಸ್ಸಿನಲ್ಲಿ ಪಕ್ಷದ ಕಾರ್ಯಕರ್ತೆ ರಿಂಕು ಮಜುಂದಾರ್ ಅವರನ್ನು ಮದುವೆಯಾದರು. ಕೋಲ್ಕತ್ತದ ಅವರ ನ್ಯೂಟೌನ್‌ ನಿವಾಸದಲ್ಲೇ ವಿವಾಹ ನೆರವೇರಿತು. ದಿಲೀಪ್ ಘೋಷ್ - ರಿಂಕು ಮಜುಂದಾರ್ ವಿವಾಹದ ಚಿತ್ರನೋಟ.

ಕೋಲ್ಕತದ ನ್ಯೂಟೌನ್‌ನಲ್ಲಿರುವ ಬಿಜೆಪಿ ನಾಯಕ ದಿಲೀಪ್ ಘೋಷ್ ಮನೆಯಲ್ಲಿ ಇಂದು ಸಂಭ್ರಮ, ಸಡಗರ. 61ರ ವಯಸ್ಸಿನಲ್ಲಿ ದಿಲೀಪ್ ಘೋಷ್ ಮದುವೆಯಾಗುತ್ತಿರುವುದು ಅದಕ್ಕೆ ಕಾರಣ. ಹಾಗಾಗಿ, ಪಶ್ಚಿಮ ಬಂಗಾಳದ ಬಿಜೆಪಿ ಮಾಜಿ ಅಧ್ಯಕ್ಷ ದಿಲೀಪ್ ಘೋಷ್ - ರಿಂಕು ಮಜುಂದಾರ್ ವಿವಾಹ ಸದ್ಯ ಕುತೂಹಲದ ಕೇಂದ್ರ ಬಿಂದು.
icon

(1 / 7)

ಘೋಷ್ ಅವರ ಮನೆಯಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ಮದುವೆಗೆ ತಯಾರಿ ನಡೆದಿತ್ತು,. ಶುಕ್ರವಾರ ಬೆಳಿಗ್ಗೆ ದಿಲೀಪ್ ಘೋಷ್ ಅವರು ರಿಂಕು ಮಜುಂದಾರ್ ಅವರನ್ನು ವಿವಾಹವಾದರು. ಬಿಜೆಪಿ ರಾಜ್ಯ ಅಧ್ಯಕ್ಷ ಸುಕಾಂತ ಮಜುಂದಾರ್‌ ಮತ್ತು ಮಂಗಲ್ ಪಾಂಡೆ, ಸತೀಶ್ ಧವನ್, ಸುನಿಲ್ ಬನ್ಸಾಲ್, ಸಮಿಕ್ ಭಟ್ಟಾಚಾರ್ಯ, ಲಾಕೆಟ್ ಚಟರ್ಜಿ ಸೇರಿ ಇತರೆ ನಾಯಕರು ಘೋಷ್ ಅವರ ನಿವಾಸಕ್ಕೆ ತೆರಳಿ ಶುಭಕೋರಿದರು.
icon

(2 / 7)

(Saikat Paul / ANI )

ದಿಲೀಪ್ ಘೋಷ್ ಅವರ ಮನೆಯಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ನೆರವೇರಿತು. ಕೆಲವೇ ಕೆಲವು ಆಪ್ತರನ್ನಷ್ಟೇ ಅವರು ಆಹ್ವಾನಿಸಿದ್ದರು.  ದಿಲೀಪ್ ಘೋಷ್ ಅವರ ತಾಯಿ ಗೋಪಿವಲ್ಲಭಪುರದಿಂದ ಈ ಮದುವೆಗಾಗಿ ಆಗಮಿಸಿದ್ದರು ಎಂದು ಬಿಜೆಪಿಯ ಹಿರಿಯ ನಾಯಕರು ತಿಳಿಸಿದ್ದಾಗಿ ಎಎನ್‌ಐ ವರದಿ ಮಾಡಿದೆ.
icon

(3 / 7)

(Saikat Paul / ANI)

ದಿಲೀಪ್ ಘೋಷ್ ಅವರು ರಾಷ್ಡ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದು, ಸಂಘಕಾರ್ಯದ ಭಾಗವಾಗಿ ರಾಜಕೀಯಕ್ಕೆ ಬಂದವರು. ವಿವಿಧ ಹೊಣೆಗಾರಿಕೆಗಳನ್ನು ನಿಭಾಯಿಸಿದ ಅವರು, ಮಾಜಿ ಸಂಸದರು ಕೂಡ. ಅವರಿಗೆ ರಿಂಕು ಮಜುಂದಾರ್ ಅವರು ಪಕ್ಷ ಸಂಘಟನೆ ವೇಳೆ ಪರಿಚಿತರಾಗಿದ್ದರು.
icon

(4 / 7)

ದಿಲೀಪ್ ಘೋಷ್ ಅವರು ತಮ್ಮ ತಾಯಿಯ ಬಲವಂತದ ಕಾರಣಕ್ಕೆ ಮದುವೆಯಾಗಲು ಒಪ್ಪಿಕೊಂಡರು. ಹಾಗಾಗಿ ಈಗ 60 ದಾಟಿದ ಬಳಿಕ ಮದುವೆಯಾದರು ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ದಿಲೀಪ್ ಘೋಷ್ ಮತ್ತು ರಿಂಕು ಮಜುಂದಾರ್ ಅವರ ಮದುವೆಯ ಒಂದು ನೋಟ.
icon

(5 / 7)

(PTI)

ದಿಲೀಪ್ ಘೋಷ್ ಅವರು ತಮ್ಮ ತಾಯಿಯೊಂದಿಗೆ ಅತಿಥಿಗಳಿಗೆ ಉಡುಗೊರೆ ನೀಡಿದರು.
icon

(6 / 7)

ದಿಲೀಪ್ ಘೋಷ್ ಅವರು ತಮ್ಮ ತಾಯಿಯೊಂದಿಗೆ ಅತಿಥಿಗಳಿಗೆ ಉಡುಗೊರೆ ನೀಡಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಈಡನ್ ಗಾರ್ಡನ್‌ಗೆ ಐಪಿಎಲ್ ಮ್ಯಾಚ್‌ ನೋಡಲು ರಿಂಕು ಅವರ ಕುಟುಂಬದ ಜತೆಗೆ ಹೋಗಿದ್ದಾಗ, ಮದುವೆ ಪ್ರಸ್ತಾಪ ಮಾಡಿದ್ದಾಗಿ ಆವರ ಅಪ್ತರೊಬ್ಬರು ತಿಳಿಸಿದ್ದಾರೆ.  ಏಪ್ರಿಲ್ 3 ರಂದು ಈ ಮದುವೆ ನಿಶ್ಚಿತಾರ್ಥ ನಡೆಯಿತು.
icon

(7 / 7)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು