ಜಸ್ಪ್ರೀತ್ ಬುಮ್ರಾ ವಿಶ್ವದ ಪರಿಪೂರ್ಣ ಬೌಲರ್; ದಕ್ಷಿಣ ಆಫ್ರಿಕಾ ಮಾಜಿ ವೇಗಿ ವೆರ್ನಾನ್ ಫಿಲಾಂಡರ್
- Jasprit Bumrah: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ವಿಕೆಟ್ ಕಬಳಿಸಿ ಮಿಂಚಿದರು. ಈ ಪ್ರದರ್ಶನದ ಬೆನ್ನಲ್ಲೇ ಅವರು ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ ಸ್ಥಾನಕ್ಕೇರಿದ್ದಾರೆ. ಸದ್ಯ ಬುಮ್ರಾ ಅವರ ಪ್ರದರ್ಶನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅವರಲ್ಲಿ ವೆರ್ನಾನ್ ಫಿಲ್ಯಾಂಡರ್ ಕೂಡಾ ಒಬ್ಬರು.

(1 / 7)
ದಕ್ಷಿಣ ಆಫ್ರಿಕಾದ ಮಾಜಿ ವೇಗಿ ವೆರ್ನಾನ್ ಫಿಲ್ಯಾಂಡರ್ ಭಾರತದ ಬೌಲರ್ ಅನ್ನು ವಿಶ್ವದ ಅತ್ಯಂತ ಪರಿಪೂರ್ಣ ಬೌಲರ್ ಎಂದು ಹೊಗಳಿದ್ದಾರೆ.(PTI)
(2 / 7)
ಬುಮ್ರಾ ಈ ಸಮಯದಲ್ಲಿ ಅತ್ಯಂತ ಪರಿಪೂರ್ಣ ಬೌಲರ್ ಆಗಿದ್ದಾರೆ. ಅವರು ಅದ್ಭುತ ಕೌಶಲ್ಯಗಳನ್ನು ಹೊಂದಿದ್ದಾರೆ. ಸರಿಯಾದ ಲೈನ್ ಮತ್ತು ಲೆಂತ್‌ನಲ್ಲಿ ಬೌಲಿಂಗ್ ಮಾಡಿರುವುದೇ ಟೆಸ್ಟ್ ಪಂದ್ಯದಲ್ಲಿ ಅವರ ಯಶಸ್ಸಿಗೆ ಕಾರಣ ಎಂದು ಫಿಲಾಂಡರ್ ತಿಳಿಸಿದ್ದಾರೆ. (AFP)
(3 / 7)
ಆರಂಭದಲ್ಲಿ ಅವರು ವಿಕೆಟ್ ಟೇಕಿಂಗ್ ಎಸೆತಗಳನ್ನು ಬೌಲ್ ಮಾಡುತ್ತಿದ್ದರು. ಹೀಗಾಗಿ ರನ್ ಸೋರಿಕೆಯಾಗುತ್ತಿತ್ತು. ಆದರೆ ಈಗ ಅವರು ಸ್ಥಿರತೆ ಸಾಧಿಸಿದ್ದಾರೆ ಎಂದು ಫಿಲಾಂಡರ್ ಹೇಳಿದ್ದಾರೆ.(AFP)
(4 / 7)
ಬುಮ್ರಾ ಅವರ ಮೇಲೆ ತಂಡವು ಹೆಚ್ಚು ಅವಲಂಬಿತವಾಗಿದೆ ಎಂದು ಫಿಲಾಂಡರ್ ಹೇಳಿದರು. ಅವರು ಹೊಸ ಚೆಂಡನ್ನು ಸ್ವಿಂಗ್ ಮಾಡುತ್ತಾರೆ. ಆರಂಭದಲ್ಲೇ ಬ್ಯಾಟರ್‌ಗಳಿಗೆ ಸವಾಲೆಸೆಯುತ್ತಾರೆ. ಅವರ ಆ ಬದಲಾವಣೆಗಳು ಮತ್ತು ಮಾರಕ ಯಾರ್ಕರ್‌ಗಳು ಅದುರಾಳಿಗಳಿಗೆ ಕಂಟಕವಾಗುತ್ತದೆ. ಟಿ20 ವಿಶ್ವಕಪ್‌ನಲ್ಲಿ ತಂಡವೊಂದು ಬಯಸುವ ಕೌಶಲ್ಯ ಇದುವೇ ಎಂದು ಫಿಲಾಂಡರ್ ವಿವರಿಸಿದ್ದಾರೆ.(PTI)
(5 / 7)
ಅವರು ವಿಶ್ವಕಪ್ ಪಂದ್ಯಾವಳಿಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಕೇವಲ ಏಳು ಪಂದ್ಯಗಳಲ್ಲಿ 50 ಟೆಸ್ಟ್ ವಿಕೆಟ್‌ಗಳನ್ನು ಪಡೆಯುವ ಮೂಲಕ ಈ ಮೈಲಿಗಲ್ಲು ತಲುಪಿದ ಎರಡನೇ ಅತಿ ವೇಗದ ಆಟಗಾರ ಎನಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.(PTI)
(6 / 7)
ಇಂಗ್ಲೆಂಡ್ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದ ನಂತರ, ಬುಮ್ರಾ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ. ಆ ಮೂಲಕ ಈ ಸ್ಥಾನ ಪಡೆದ ಮೊದಲ ಭಾರತೀಯ ವೇಗಿ ಎನಿಸಿಕೊಂಡಿದ್ದಾರೆ.(AP)
ಇತರ ಗ್ಯಾಲರಿಗಳು