Pooja Hegde: ಕಾಲಿವುಡ್‌ನಲ್ಲಿ ನಾಲ್ಕು, ಬಾಲಿವುಡ್‌ನಲ್ಲಿ ಒಂದು; ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾದ್ರು ನಟಿ ಪೂಜಾ ಹೆಗ್ಡೆ
Pooja Hegde: ಬಹುಭಾಷಾ ನಟಿ ಪೂಜಾ ಹೆಗ್ಡೆ, 2024ರಲ್ಲಿ ಅವರ ಯಾವುದೇ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಇದೀಗ 2025ರಲ್ಲಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ದಕ್ಷಿಣದ ಸಿನಿಮಾಗಳ ಜತೆಗೆ ಬಾಲಿವುಡ್‌ನಲ್ಲಿಯೂ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಸದ್ಯ ಇವರ ಸಿನಿಮಾ ಬತ್ತಳಿಕೆಯಲ್ಲಿ 5 ಸಿನಿಮಾಗಳಿವೆ.
(1 / 5)
ಬಾಲಿವುಡ್ ನಟ ವರುಣ್ ಧವನ್ ಅವರ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಚಿತ್ರಕ್ಕೆ ಶನಿವಾರ ಹೃಷಿಕೇಶದಲ್ಲಿ ಚಾಲನೆ ನೀಡಲಾಯಿತು. ಈ ಚಿತ್ರವನ್ನು ವರುಣ್ ಧವನ್ ಅವರ ತಂದೆ ಮತ್ತು ಹಿರಿಯ ಬಾಲಿವುಡ್ ನಿರ್ದೇಶಕ ಡೇವಿಡ್ ಧವನ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿ.
(3 / 5)
2024ರಲ್ಲಿ ನಟಿ ಪೂಜಾ ಹೆಗ್ಡೆ ಅವರ ಬೇರಾವ ಸಿನಿಮಾ ತೆರೆಗೆ ಬಂದಿಲ್ಲ ಎಂಬುದಕ್ಕಿಂತ, ಪ್ರಾಜೆಕ್ಟ್ ಒಪ್ಪಿಕೊಂಡಿರಲಿಲ್ಲ. ಇದೀಗ 2025ರಲ್ಲಿ ಸಾಲು ಸಾಲು ಸಿನಿಮಾಗಳು ಅವರ ಬತ್ತಳಿಕೆಯಲ್ಲಿವೆ.
(4 / 5)
ಸದ್ಯ ಸೂರ್ಯ ನಟನೆಯ ರೆಟ್ರೋ, ರಜನಿಕಾಂತ್ ಜತೆಗೆ ಕೂಲಿ, ಕಾಂಚನ 4, ಜನ ನಾಯಗನ್ ಸಿನಿಮಾಗಳಲ್ಲಿ ಪೂಜಾ ನಟಿಸುತ್ತಿದ್ದಾರೆ.
ಇತರ ಗ್ಯಾಲರಿಗಳು