Friday OTT Releases: ಶುಕ್ರವಾರ ಒಟಿಟಿಯಲ್ಲಿ ಬಹುನಿರೀಕ್ಷಿತ ಹಲವು ಸಿನಿಮಾ, ವೆಬ್‌ಸಿರೀಸ್‌ಗಳು ರಿಲೀಸ್; ವೀಕ್ಷಣೆ ಎಲ್ಲಿ
- Friday OTT Releases: ಈ ಶುಕ್ರವಾರ (ಆಗಸ್ಟ್ 9) ಒಟಿಟಿ ವೀಕ್ಷಕರಿಗೆ ಹಬ್ಬ. ಈ ವಾರ ಒಟಿಟಿಯಲ್ಲಿ ಐದು ಹಿಂದಿ ಸಿನಿಮಾಗಳು ಮತ್ತು ವೆಬ್ ಸರಣಿಗಳು ಸ್ಟ್ರೀಮಿಂಗ್ ಆರಂಭಿಸಿವೆ. ಆ ಸಿನಿಮಾ, ವೆಬ್ ಸರಣಿಗಳು ಯಾವ ಒಟಿಟಿಯಲ್ಲಿ ಪ್ರಸಾರವಾಗಲಿದೆ ಎಂಬ ಮಾಹಿತಿ ಇಲ್ಲಿದೆ.

(1 / 7)
ಈ ಶುಕ್ರವಾರ ಹಲವು ಸಿನಿಮಾಗಳು ಮತ್ತು ವೆಬ್ ಸರಣಿಗಳು ವಿವಿಧ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗಿವೆ. ಅವು ಯಾವವು ಮತ್ತು ವೀಕ್ಷಣೆ ಎಲ್ಲಿ ಎಂಬುದನ್ನು ಇಲ್ಲಿ ನೋಡೋಣ.
(2 / 7)
ಕಾರ್ತಿಕ್ ಆರ್ಯನ್ ಅಭಿನಯದ 'ಚಂದು ಚಾಂಪಿಯನ್' ಕೆಲವು ದಿನಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಂಥ ಕಮಾಯಿ ಮಾಡದ ಈ ಸಿನಿಮಾ ಇದೀಗ ಆಗಸ್ಟ್ 9 ರಿಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
(3 / 7)
ವಿಕ್ರಾಂತ್ ಮಾಸ್ಸಿ, ತಾಪ್ಸಿ ಪನ್ನು ಮತ್ತು ಸನ್ನಿ ಕೌಶಿಕ್ ಅಭಿನಯದ 'ಫಿರ್ ಆಯಿ ಹಸೀನ್ ದಿಲ್ ರುಬಾ' ಶುಕ್ರವಾರದಿಂದ (ಆಗಸ್ಟ್ 9) ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
(4 / 7)
ರಾಘವ್ ಜುಯಾಲ್, ಕೃತಿಕಾ ಕಮ್ರಾ ಮತ್ತು ಧೈರ್ಯ ಕರ್ವಾ ಅಭಿನಯದ ವೆಬ್ ಸರಣಿ 'ಗ್ಯಾರಾ ಗ್ಯಾರಾ' ಆಗಸ್ಟ್ 9 ರಿಂದ ಜೀ 5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸಿದೆ.
(5 / 7)
ಸಂಜಯ್ ದತ್ ಮತ್ತು ರವೀನಾ ಟಂಡನ್ ಅಭಿನಯದ ರೊಮ್ಯಾಂಟಿಕ್ ಹಾಸ್ಯ ಚಿತ್ರ ಗುಡ್ಚಡಿ. ಈ ಚಿತ್ರವು ಜಿಯೋ ಸಿನೆಮಾದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಇತರ ಗ್ಯಾಲರಿಗಳು