ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Friday Rituals: ಹಣಕಾಸಿನ ಸಮಸ್ಯೆ ಕಾಡುತ್ತಿದೆಯೇ; ಪ್ರತಿ ಶುಕ್ರವಾರ ತಪ್ಪದೇ ಈ ಕ್ರಮಗಳನ್ನು ಅನುಸರಿಸಿ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಿ

Friday Rituals: ಹಣಕಾಸಿನ ಸಮಸ್ಯೆ ಕಾಡುತ್ತಿದೆಯೇ; ಪ್ರತಿ ಶುಕ್ರವಾರ ತಪ್ಪದೇ ಈ ಕ್ರಮಗಳನ್ನು ಅನುಸರಿಸಿ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಿ

  • Friday Rituals: ಶುಕ್ರವಾರವನ್ನು ಶುಭದಿನ ಎಂದು ಕರೆಯುತ್ತಾರೆ. ಶುಭ ಶುಕ್ರವಾರದಂದು ಕೆಲವು ಧಾರ್ಮಿಕ ಕ್ರಮಗಳನ್ನು ಅನುಸರಿಸುವ ಮೂಲಕ ದೇವರಕೃಪೆಗೆ ಪಾತ್ರರಾಗಬಹುದು. ಅಲ್ಲದೆ ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವವರು ಈ ಸಲಹೆಗಳನ್ನು ತಪ್ಪದೇ ಪಾಲಿಸುವುದರಿಂದ ಶುಭವಾಗುವುದರಲ್ಲಿ ಅನುಮಾನವಿಲ್ಲ. ಗ್ರಹದೋಷಗಳ ನಿವಾರಣೆಗೂ ಇವು ಸಹಕಾರಿ.

ಶುಕ್ರವಾರವನ್ನು ಲಕ್ಷ್ಮೀದೇವಿ ಹಾಗೂ ಶುಕ್ರದೇವರಿಗೆ ಸಮರ್ಪಿಸಲಾಗುತ್ತದೆ. ಮಾತೆ ಲಕ್ಷ್ಮೀದೇವಿಯನ್ನು ಸಂಪತ್ತು ಹಾಗೂ ಐಶ್ವರ್ಯದ ದೇವತೆ ಎಂದು ಹೇಳಲಾಗುತ್ತದೆ. ಆದರೆ ಶುಕ್ರದೇವ ದೈಹಿಕ ಸೌಕರ್ಯದ ಅಧಿಪತಿ. ಇವರಿಬ್ಬರ ಅನುಗ್ರಹವಿದ್ದರೆ ಜೀವನದಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ. ಇವರ ಅನುಗ್ರಹ ಪಡೆಯಲು, ಕುಂಡಲಿಯಲ್ಲಿ ಶುಕ್ರನ ಸ್ಥಾನವನ್ನ ಬಲಪಡಿಸಲು ಹಾಗೂ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಲು ಕೆಲವು ತಂತ್ರಗಳಿವೆ. ಈ ತಂತ್ರಗಳನ್ನು ಅನುಸರಿಸುವ ಮೂಲಕ ಗೃಹ ಹಾಗೂ ವೃತ್ತಿಯಲ್ಲಿ ಅದೃಷ್ಟದ ಬಾಗಿಲು ತೆರೆಯುತ್ತದೆ. ಹಾಗಾದರೆ ದೇವರ ಅನುಗ್ರಹಕ್ಕೆ ಶುಕ್ರವಾರ ಏನು ಮಾಡಬೇಕು; ಇಲ್ಲಿದೆ ಉತ್ತರ. 
icon

(1 / 6)

ಈ ಪರಿಹಾರ ತಂತ್ರಗಳ ಅನುಸರಣೆಯ ಮೂಲಕ ಆರ್ಥಿಕ ಸಮಸ್ಯೆಗಳ ನಿವಾರಣೆ ಸಾಧ್ಯ. ಹಣಕಾಸಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಹಣ ಮೂಲಗಳು ಮುಚ್ಚಿ ಹೋಗಿವೆ ಎನ್ನಿಸಿದರೆ, ಇಂದಿನಿಂದ 21 ಶುಕ್ರವಾರಗಳ ಕಾಲ ಮಹಾಲಕ್ಷ್ಮಿ ಪೂಜೆ ಮಾಡಿ. ಪ್ರತಿ ಶುಕ್ರವಾರ ಕೇಸರಿ ಹಾಲು ಹಾಗೂ ಸಕ್ಕರೆಯನ್ನು ದೇವರಿಗೆ ಸಮರ್ಪಿಸಿ. ನಂತರ ಐದು ಮಂದಿ ಒಂಬತ್ತು ವರ್ಷದ ಬಾಲಕಿಯರಿಗೆ ಹಾಲು ಹಾಗೂ ಸಿಹಿತಿಂಡಿಗಳ ಪ್ರಸಾದವನ್ನು ನೀಡಿ. ಮನೆಯಲ್ಲಿ ಹಿರಿಯ ಮಹಿಳೆಗೆ ಪ್ರಸಾದ ನೀಡಿ, ನಂತರ ಇತರರಿಗೆ ಪ್ರಸಾದ ಹಂಚಿ. ಇದರಿಂದ ನಿಧಾನಕ್ಕೆ ಹಣಕಾಸಿನ ಸಮಸ್ಯೆ ಪರಿಹಾರವಾಗುತ್ತದೆ ಹಾಗೂ ಹಣ ಪಡೆಯುವ ಮಾರ್ಗವೂ ವಿಸ್ತಾರವಾಗುತ್ತದೆ.
icon

(2 / 6)

ಶುಕ್ರವಾರದಂದು ಬೆಳಗೆದ್ದು ಸ್ನಾನ ಮಾಡಿ, ಸಂಪೂರ್ಣ ಮನೆಯನ್ನು ಸ್ವಚ್ಛವಾಗಿಸಿ, ಅಲ್ಲದೆ ಮನೆಗೆ ಸುಗಂಧ ದ್ರವ್ಯ ಸಿಂಪಡಿಸಿ. ಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ 11 ಕಮಲದ ಹೂವುಗಳನ್ನು ಅರ್ಪಿಸಿ ಮತ್ತು ಒಂಬತ್ತು ಬಟ್ಟಲುಗಳ ತುಪ್ಪದ ದೀಪವನ್ನು ಬೆಳಗಿಸಿ ಪೂಜೆ ಮಾಡಿ. ಬಿಳಿ ಬಟ್ಟೆಗಳನ್ನು ಧರಿಸಿ ಮತ್ತು ಹರಿಯುವ ನೀರಿನಲ್ಲಿ ಎರಡು ಮುತ್ತುಗಳನ್ನು ತೇಲುವಂತೆ ಮಾಡಿ. ಇದರಿಂದ ಹಣಕಾಸಿನಗೆ ಸಂಬಂಧಿಸಿದ ನಿಮ್ಮ ಎಲ್ಲಾ ಪರಿಹರವಾಗುತ್ತದೆ ಮತ್ತು ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ.
icon

(3 / 6)

ನೀವು ವ್ಯವಹಾರ ನಡೆಸುತ್ತಿದ್ದು, ವ್ಯಾಪಾರ ಹೆಚ್ಚಾಗದಿದ್ದರೆ, ಶುಕ್ಲಪಕ್ಷದ ಶುಕ್ರವಾರದಂದು ಕೆಲಸದ ಸ್ಥಳ, ಕಾರ್ಖಾನೆ, ಅಂಗಡಿ ಹೀಗೆ ನೀವು ವ್ಯವಹಾರ ನಡೆಸುವ ಜಾಗದಲ್ಲಿ ಬಾಗಿಲಿನ ಎರಡೂ ಬದಿಗಳಲ್ಲಿ ಸ್ವಲ್ಪ ಗೋಧಿಹಿಟ್ಟನ್ನು ಹಾಕಿ ಮತ್ತು ಆದರೆ ಇದನ್ನು ಮಾಡುವಾಗ ಯಾರಿಗೂ ಕಾಣದಂತೆ ಮಾಡಬೇಕು ಎಂಬುದನ್ನು ನೆನಪಿಡಿ. ಇದಲ್ಲದೇ ಶ್ರೀಯಂತ್ರವನ್ನು ಪೂಜಾ ಕೋಣೆಯಲ್ಲಿ ಇರಿಸಿ. ಹೀಗೆ ಮಾಡುವುದರಿಂದ ವ್ಯಾಪಾರ ವೃದ್ಧಿಯಾಗುತ್ತದೆ ಮತ್ತು ಲಕ್ಷ್ಮಿಯ ಆಶೀರ್ವಾದ ಸದಾ ನಿಮ್ಮೊಂದಿಗಿರುತ್ತದೆ. 
icon

(4 / 6)

ನೀವು ವ್ಯವಹಾರ ನಡೆಸುತ್ತಿದ್ದು, ವ್ಯಾಪಾರ ಹೆಚ್ಚಾಗದಿದ್ದರೆ, ಶುಕ್ಲಪಕ್ಷದ ಶುಕ್ರವಾರದಂದು ಕೆಲಸದ ಸ್ಥಳ, ಕಾರ್ಖಾನೆ, ಅಂಗಡಿ ಹೀಗೆ ನೀವು ವ್ಯವಹಾರ ನಡೆಸುವ ಜಾಗದಲ್ಲಿ ಬಾಗಿಲಿನ ಎರಡೂ ಬದಿಗಳಲ್ಲಿ ಸ್ವಲ್ಪ ಗೋಧಿಹಿಟ್ಟನ್ನು ಹಾಕಿ ಮತ್ತು ಆದರೆ ಇದನ್ನು ಮಾಡುವಾಗ ಯಾರಿಗೂ ಕಾಣದಂತೆ ಮಾಡಬೇಕು ಎಂಬುದನ್ನು ನೆನಪಿಡಿ. ಇದಲ್ಲದೇ ಶ್ರೀಯಂತ್ರವನ್ನು ಪೂಜಾ ಕೋಣೆಯಲ್ಲಿ ಇರಿಸಿ. ಹೀಗೆ ಮಾಡುವುದರಿಂದ ವ್ಯಾಪಾರ ವೃದ್ಧಿಯಾಗುತ್ತದೆ ಮತ್ತು ಲಕ್ಷ್ಮಿಯ ಆಶೀರ್ವಾದ ಸದಾ ನಿಮ್ಮೊಂದಿಗಿರುತ್ತದೆ. (Freepik)

ಕೆಲವೊಮ್ಮೆ ನಾವು ಕಷ್ಟಪಟ್ಟು ದುಡಿದು ಹಣ ಗಳಿಸುತ್ತೇವೆ. ಆದರೆ ಗಳಿಸಿದ ಹಣವು ಹೀಗೆ ಬಂದು ಹಾಗೆ ಹೋಗುತ್ತದೆ. ಅಲ್ಲದೆ ಯಾವ ಕಾರಣಕ್ಕೆ ಖರ್ಚಾಯಿತು ಎಂಬುದು ಅರಿವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಮನೆಯಲ್ಲಿ ಯಾವುದಾದರೂ ನಳ್ಳಿಯಲ್ಲಿ ನೀರು ಸೋರುತ್ತಿದೆಯೇ ಗಮನಿಸಿ. ಹಾಲು ಅಥವಾ ಚಹಾವನ್ನು ತೆರೆದ ಜಾಗದಲ್ಲಿ ಕಾಯಿಸಬಾರದು. ಅಡುಗೆಮನೆಯಲ್ಲಿ ಊಟದ ಸಾಮಾನುಗಳನ್ನು ಇರಿಸಬಾರದು. ಇಂತಹ ವಿಷಯಗಳ ಅನುಕರಣೆಯಿಂದ ಹೆಚ್ಚು ಹಣ ಖರ್ಚಾಗುತ್ತದೆ. 
icon

(5 / 6)

ಕೆಲವೊಮ್ಮೆ ನಾವು ಕಷ್ಟಪಟ್ಟು ದುಡಿದು ಹಣ ಗಳಿಸುತ್ತೇವೆ. ಆದರೆ ಗಳಿಸಿದ ಹಣವು ಹೀಗೆ ಬಂದು ಹಾಗೆ ಹೋಗುತ್ತದೆ. ಅಲ್ಲದೆ ಯಾವ ಕಾರಣಕ್ಕೆ ಖರ್ಚಾಯಿತು ಎಂಬುದು ಅರಿವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಮನೆಯಲ್ಲಿ ಯಾವುದಾದರೂ ನಳ್ಳಿಯಲ್ಲಿ ನೀರು ಸೋರುತ್ತಿದೆಯೇ ಗಮನಿಸಿ. ಹಾಲು ಅಥವಾ ಚಹಾವನ್ನು ತೆರೆದ ಜಾಗದಲ್ಲಿ ಕಾಯಿಸಬಾರದು. ಅಡುಗೆಮನೆಯಲ್ಲಿ ಊಟದ ಸಾಮಾನುಗಳನ್ನು ಇರಿಸಬಾರದು. ಇಂತಹ ವಿಷಯಗಳ ಅನುಕರಣೆಯಿಂದ ಹೆಚ್ಚು ಹಣ ಖರ್ಚಾಗುತ್ತದೆ. (Pixabay)

ವೃತ್ತಿಜೀವನದಲ್ಲಿ ಸದಾ ಹಿನ್ನಡೆಯಾಗುತ್ತಿದ್ದು, ಶುಭಸುದ್ದಿ ಸಿಗದಿದ್ದರೆ, ನೀವು ಮಾಡುವ ಕೆಲಸದಲ್ಲಿ ಪ್ರಗತಿಯಿಲ್ಲದಿದ್ದರೆ, ಶುಕ್ರವಾರ ಸ್ಟೀಲ್‌ ಬೀಗವನ್ನು ಖರೀದಿಸಿ. ಅದನ್ನು ಖರೀದಿಸುವಾಗ ಅದು ಒಳ್ಳೆಯದು ಅಥವಾ ಕೆಟ್ಟದ್ದು ಎಂಬ ಯೋಚನೆ ಮಾಡಬೇಡಿ. ಶುಕ್ರವಾರದಂದು ರಾತ್ರಿ ಮಲಗುವ ಮುನ್ನ ನಿಮ್ಮ ದಿಂಬಿನ ಕೆಳಗೆ ಇರಿಸಿ ಮತ್ತು ಶನಿವಾರದಂದು ಯಾವುದಾದರೂ ಧಾರ್ಮಿಕ ಸ್ಥಳದಲ್ಲಿ ಇರಿಸಿ ಬನ್ನಿ. ನೀವು ಇಟ್ಟ ಬೀಗ ಯಾರಾದರೂ ತೆಗೆದಿದ್ದರೆ, ನಿಮ್ಮ ಅದೃಷ್ಟ ಬದಲಾಯಿತು ಎಂದೇ ಅರ್ಥ. 
icon

(6 / 6)

ವೃತ್ತಿಜೀವನದಲ್ಲಿ ಸದಾ ಹಿನ್ನಡೆಯಾಗುತ್ತಿದ್ದು, ಶುಭಸುದ್ದಿ ಸಿಗದಿದ್ದರೆ, ನೀವು ಮಾಡುವ ಕೆಲಸದಲ್ಲಿ ಪ್ರಗತಿಯಿಲ್ಲದಿದ್ದರೆ, ಶುಕ್ರವಾರ ಸ್ಟೀಲ್‌ ಬೀಗವನ್ನು ಖರೀದಿಸಿ. ಅದನ್ನು ಖರೀದಿಸುವಾಗ ಅದು ಒಳ್ಳೆಯದು ಅಥವಾ ಕೆಟ್ಟದ್ದು ಎಂಬ ಯೋಚನೆ ಮಾಡಬೇಡಿ. ಶುಕ್ರವಾರದಂದು ರಾತ್ರಿ ಮಲಗುವ ಮುನ್ನ ನಿಮ್ಮ ದಿಂಬಿನ ಕೆಳಗೆ ಇರಿಸಿ ಮತ್ತು ಶನಿವಾರದಂದು ಯಾವುದಾದರೂ ಧಾರ್ಮಿಕ ಸ್ಥಳದಲ್ಲಿ ಇರಿಸಿ ಬನ್ನಿ. ನೀವು ಇಟ್ಟ ಬೀಗ ಯಾರಾದರೂ ತೆಗೆದಿದ್ದರೆ, ನಿಮ್ಮ ಅದೃಷ್ಟ ಬದಲಾಯಿತು ಎಂದೇ ಅರ್ಥ. (PTI)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು