ಟಿಆರ್‌ಪಿಯಲ್ಲಿ ʻಮುದ್ದುಸೊಸೆʼ ಧಾರಾವಾಹಿಗೆ ಬಂಪರ್! ಅತಿ ಹೆಚ್ಚು ನಂಬರ್ಸ್‌ ಪಡೆದ ಕನ್ನಡದ ಟಾಪ್‌ 10 ಸೀರಿಯಲ್‌ಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿಆರ್‌ಪಿಯಲ್ಲಿ ʻಮುದ್ದುಸೊಸೆʼ ಧಾರಾವಾಹಿಗೆ ಬಂಪರ್! ಅತಿ ಹೆಚ್ಚು ನಂಬರ್ಸ್‌ ಪಡೆದ ಕನ್ನಡದ ಟಾಪ್‌ 10 ಸೀರಿಯಲ್‌ಗಳಿವು

ಟಿಆರ್‌ಪಿಯಲ್ಲಿ ʻಮುದ್ದುಸೊಸೆʼ ಧಾರಾವಾಹಿಗೆ ಬಂಪರ್! ಅತಿ ಹೆಚ್ಚು ನಂಬರ್ಸ್‌ ಪಡೆದ ಕನ್ನಡದ ಟಾಪ್‌ 10 ಸೀರಿಯಲ್‌ಗಳಿವು

ಕನ್ನಡ ಕಿರುತೆರೆಯ 15ನೇ ವಾರದ ಟಿಆರ್‌ಪಿಯಲ್ಲಿ ಹೆಚ್ಚು ಬದಲಾವಣೆಗಳು ಕಂಡಿಲ್ಲ. ಈ ನಡುವೆ ಹೊಸ ಸೀರಿಯಲ್‌ ʻಮುದ್ದುಸೊಸೆʼಗೆ ಎಷ್ಟು ನಂಬರ್‌ ಬರಬಹುದು ಎಂಬ ಕುತೂಹಲ ಇತ್ತು. ಅದರಂತೆ, ʻಮುದ್ದುಸೊಸೆʼ ಸೇರಿ ಕನ್ನಡ ಕಿರುತೆರೆ ಟಾಪ್‌ 10 ಧಾರಾವಾಹಿಗಳ ಟಿಆರ್‌ಪಿ ರೇಟಿಂಗ್‌ ಇಲ್ಲಿದೆ.

15ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಕುತೂಹಲಕ್ಕೆ ತೆರೆ ಬಿದ್ದಿದೆ. ಹೊಸದಾಗಿ ಶುರುವಾಗಿದ್ದ ಮುದ್ದು ಸೊಸೆಗೆ ವೀಕ್ಷಕ ಫಿದಾ ಆಗಿದ್ದಾನೆ. ಅದರಂತೆ, ಒಳ್ಳೆಯ ಟಿಆರ್‌ಪಿ ಸಹ ಈ ಸೀರಿಯಲ್‌ಗೆ ಸಿಕ್ಕಿದೆ.
icon

(1 / 11)

ಜೀ ಕನ್ನಡದ 15ನೇ ವಾರದ ಟಿಆರ್‌ಪಿಯಲ್ಲಿ ನಂಬರ್‌ 1 ಸೀರಿಯಲ್‌ ಎಂಬ ಪಟ್ಟವನ್ನು ಮತ್ತೆ ಪಡೆದುಕೊಂಡಿದೆ ಶ್ರಾವಣಿ ಸುಬ್ರಮಣ್ಯ ಸೀರಿಯಲ್.‌ ಈ ಸೀರಿಯಲ್‌ 7.3 ಟಿಆರ್‌ಪಿ ಪಡೆದು ಅತಿ ಹೆಚ್ಚು ಟಿಆರ್‌ಪಿ ಪಡೆದು ಮೊದಲ ಸ್ಥಾನದಲ್ಲಿದೆ.
icon

(2 / 11)

ಜೀ ಕನ್ನಡದ ಇನ್ನೊಂದು ಫ್ಯಾಂಟಸಿ ಹಾರರ್‌ ಸಿನಿಮಾ ನಾ ನಿನ್ನ ಬಿಡಲಾರೆ ಧಾರಾವಾಹಿ 15ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ 7.1 ಟಿವಿಆರ್‌ ಪಡೆದು ಎರಡನೇ ಸ್ಥಾನದಲ್ಲಿದೆ.
icon

(3 / 11)

ಇನ್ನು ಜೀ ಕನ್ನಡದ ಒಂದು ಗಂಟೆ ಪ್ರಸಾರ ಕಾಣುವ ಲಕ್ಷ್ಮೀ ನಿವಾಸ ಸೀರಿಯಲ್‌ ರೋಚಕ ಟ್ವಿಸ್ಟ್‌ ಜತೆಗೆ ನೋಡುಗರನ್ನು ಸೆಳೆದಿದೆ. ಈ ಸೀರಿಯಲ್‌ 7.0 ಟಿಆರ್‌ಪಿ ಪಡೆದು ಮೂರನೇ ಸ್ಥಾನದಲ್ಲಿ ಗಟ್ಟಿಯಾಗಿ ನಿಂತಿದೆ.
icon

(4 / 11)

ಇನ್ನು ಆಗೊಮ್ಮೆ ಈಗೊಮ್ಮೆ ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟು ಮರಳುವ ಜೀ ಕನ್ನಡದ ಅಣ್ಣಯ್ಯ ಸೀರಿಯಲ್‌ 15ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ 6.5 ಟಿವಿಆರ್‌ ಪಡೆದು ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದೆ.
icon

(5 / 11)

ಜೀ ಕನ್ನಡದ ಇನ್ನೊಂದು ವೀಕ್ಷಕರ ಮೆಚ್ಚಿನ ಸೀರಿಯಲ್‌ಗಳಲ್ಲಿ ಒಂದಾಗಿದೆ ಅಮೃತಧಾರೆ. ಈ ಧಾರಾವಾಹಿ 15ನೇ ವಾರದ ಟಿಆರ್‌ಪಿ ಲೆಕ್ಕಾಚಾರದಲ್ಲಿ 5.8 ಟಿಆರ್‌ಪಿ ಪಡೆದು ಐದನೇ ಸ್ಥಾನದಲ್ಲಿದೆ.
icon

(6 / 11)

ಜೀ ಕನ್ನಡದ ಬ್ರಹ್ಮಗಂಟು ಧಾರಾವಾಹಿಯೂ 15ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ 5.0 ಟಿಆರ್‌ಪಿ ಪಡೆದು ಈ ಹಿಂದಿನ ನಂಬರ್‌ಗಿಂತ ಕಡಿಮೆ ಟಿಆರ್‌ಪಿ ಪಡೆದಿದೆ. ಈ ಮೂಲಕ ಆರನೇ ಸ್ಥಾನದಲ್ಲಿದೆ ಈ ಸೀರಿಯಲ್.‌
icon

(7 / 11)

ಕಲರ್ಸ್‌ ಕನ್ನಡದ ಹೊಸ ಸೀರಿಯಲ್‌ ಮುದ್ದು ಸೊಸೆ ಪ್ರಸಾರ ಆರಂಭಿಸಿದ ಮೊದಲ ವಾರವೇ ಕಮಾಲ್‌ ಮಾಡಿದೆ. ಅದರಂತೆ 15ನೇ ವಾರದ ಟಿಆರ್‌ಪಿಯಲ್ಲಿ 5.0 ಟಿಆರ್‌ಪಿ ಪಡೆದು ಯಶಸ್ವಿಯಾಗಿದೆ. ಕಲರ್ಸ್‌ ಕನ್ನಡದ ನಂಬರ್‌ 1 ಧಾರಾವಾಹಿಯಾಗಿ ಹೊರಹೊಮ್ಮಿದೆ. ಒಟ್ಟಾರೆಯಾಗಿ ಟಾಪ್‌ 10ರಲ್ಲಿ ಏಳನೇ ಸ್ಥಾನದಲ್ಲಿದೆ.
icon

(8 / 11)

ಇನ್ನು ಕಲರ್ಸ್‌ ಕನ್ನಡದ ಭಾಗ್ಯಲಕ್ಷ್ಮೀ ಧಾರಾವಾಹಿ ಟಿಆರ್‌ಪಿಯಲ್ಲಿ ಕುಸಿತ ಕಾಣುತ್ತಿದೆ. ಈ ಧಾರಾವಾಹಿ 15ನೇ ವಾರದ ಲೆಕ್ಕಾಚಾರದಲ್ಲಿ 4.4 ನಂಬರ್ಸ್‌ ಪಡೆದಿದೆ. ಈ ಸೀರಿಯಲ್‌ ಎಂಟನೇ ಸ್ಥಾನದಲ್ಲಿದೆ.
icon

(9 / 11)

ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟಿಆರ್‌ಪಿಯಲ್ಲಿ ಕೊಂಚ ತಟಸ್ಥವಾಗಿ ಉಳಿದಿದೆ. ಟಿಆರ್‌ಪಿಯಲ್ಲಿಯೂ ಹೆಚ್ಚು ಮೋಡಿ ಮಾಡದ ಈ ಧಾರಾವಾಹಿ, 15ನೇ ವಾರ 4.2 ಟಿಆರ್‌ಪಿ ಪಡೆದು ಒಂಬತ್ತನೇ ಸ್ಥಾನದಲ್ಲಿದೆ.
icon

(10 / 11)

ಸ್ಟಾರ್‌ ಸುವರ್ಣದಲ್ಲಿ ಪ್ರಸಾರ ಕಾಣುತ್ತಿರುವ ನಿನ್ನ ಜೊತೆ ನನ್ನ ಕಥೆ ಸೀರಿಯಲ್‌ ಹೆಚ್ಚು ವೀಕ್ಷಕರನ್ನು ಸೆಳೆಯುತ್ತಿದೆ. ಈ ಸೀರಿಯಲ್‌ 4.2 ಟಿಆರ್‌ಪಿ ಪಡೆದು 10ನೇ ಟಿಆರ್‌ಪಿ ಪಡೆದಿದೆ.
icon

(11 / 11)

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು