ದೀಪಿಕಾ ಪಡುಕೋಣೆಯಿಂದ ಅನುಷ್ಕಾ ಶರ್ಮಾವರೆಗೆ; ಈ ವರ್ಷ ಮಗುವನ್ನು ಪಡೆದ ಬಾಲಿವುಡ್ ಸೆಲೆಬ್ರಿಟಿಗಳಿವರು
Bollywood celebrity couples: ಬಾಲಿವುಡ್ ಸಿನಿಮಾರಂಗದ ಟಾಪ್ ಸೆಲೆಬ್ರಿಟಿ ದಂಪತಿ ಈ ವರ್ಷ ಸಂಭ್ರಮದಲ್ಲಿದ್ದಾರೆ. ಅದಕ್ಕೆ ಕಾರಣ; ಈ ವರ್ಷ ಹಲವು ಜೋಡಿ ತಮ್ಮ ಮಡಿಲಿಗೆ ಮಗುವನ್ನು ಬರಮಾಡಿಕೊಂಡಿದ್ದಾರೆ. ಇಲ್ಲಿವೆ ನೋಡಿ ಆ ಜೋಡಿಗಳು.
(1 / 7)
ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಈ ವರ್ಷ ಪೋಷಕರಾಗಿದ್ದಾರೆ. ಸೆಪ್ಟೆಂಬರ್ 8 ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಣವೀರ್ ಮತ್ತು ದೀಪಿಕಾ ತಮ್ಮ ಮಗಳಿಗೆ ದುವಾ ಪಡುಕೋಣೆ ಸಿಂಗ್ ಎಂದು ಹೆಸರಿಟ್ಟಿದ್ದಾರೆ.
(2 / 7)
ಬಾಲಿವುಡ್ ನಟ ವರುಣ್ ಧವನ್ ಮತ್ತು ಅವರ ಪತ್ನಿ ಮತ್ತು ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ಈ ವರ್ಷ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ನತಾಶಾ ದಲಾಲ್ ಈ ವರ್ಷದ ಜೂನ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು.
(3 / 7)
ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಈ ವರ್ಷದ ಫೆಬ್ರವರಿ 15 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅನುಷ್ಕಾ ತಮ್ಮ ಮಗನಿಗೆ ಅಕೈ ಎಂದು ಹೆಸರಿಟ್ಟಿದ್ದಾರೆ. (Instagram/File)
(4 / 7)
ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ ಮತ್ತು ನಟ ಸತ್ಯದೀಪ್ ಮಿಶ್ರಾ ಈ ವರ್ಷದ ಅಕ್ಟೋಬರ್ ನಲ್ಲಿ ಹೆಣ್ಣು ಮಗುವನ್ನು ತಮ್ಮ ಜೀವನಕ್ಕೆ ಆಹ್ವಾನಿಸಿದ್ದರು.
(5 / 7)
ಬಾಲಿವುಡ್ ದಂಪತಿ ರಿಚಾ ಚಡ್ಡಾ ಮತ್ತು ಅಲಿ ಫಜಲ್ ಕೂಡ ಈ ವರ್ಷ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದರು. ರಿಚಾ ಜುಲೈ 16ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು.
(6 / 7)
ಬಾಲಿವುಡ್ ಸ್ಟಾರ್ ನಟಿ ಯಾಮಿ ಗೌತಮ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವರ್ಷದ ಮೇ 10 ರಂದು ಮಗು ಜನಿಸಿದ್ದು, ಮಗನಿಗೆ ವೇದವಿದ್ ಎಂದು ಹೆಸರಿಟ್ಟರು.
ಇತರ ಗ್ಯಾಲರಿಗಳು