ಕೆಡಿ ಜಾಧವ್ರಿಂದ ರವಿ ದಹಿಯಾ ತನಕ: ಒಲಿಂಪಿಕ್ಸ್ ಇತಿಹಾಸದಲ್ಲಿ ಪದಕ ಗೆದ್ದಿರುವ ಭಾರತೀಯ ಕುಸ್ತಿಪಟುಗಳ ಪಟ್ಟಿ
Paris Olympics 2024: ಪ್ರತಿಷ್ಠಿತ ಕ್ರೀಡಾಕೂಟ ಪ್ಯಾರಿಸ್ ಒಲಿಂಪಿಕ್ಸ್ 2024ಕ್ಕೆ ದಿನಗಣನೆ ಆರಂಭಗೊಂಡಿದೆ. ಜುಲೈ 26ರಿಂದ ಕ್ರೀಡಾಕೂಟ ಪ್ರಾರಂಭವಾಗಲಿದೆ. ಈ ಹಿನ್ನೆಲೆ ಪುರುಷರ ಕುಸ್ತಿ ವಿಭಾಗದಿಂದ ಭಾರತ ಎಷ್ಟು ಒಲಿಂಪಿಕ್ ಪದಕಗಳನ್ನು ಗೆದ್ದಿದೆ ಎಂಬುದರ ನೋಟ ಇಲ್ಲಿದೆ.
(1 / 7)
ಒಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಪಟ್ಟಿಯಲ್ಲಿ ಪುರುಷರ ಹಾಕಿ ಪ್ರಾಬಲ್ಯ ಹೊಂದಿದೆ. ಈವರೆಗೂ ಹಾಕಿ 12 ಪದಕಗಳನ್ನು ಗೆದ್ದುಕೊಂಡಿದೆ. ತಂಡೇತರ ಸ್ಪರ್ಧೆಗಳಲ್ಲಿ ಕುಸ್ತಿ ಅತಿ ಹೆಚ್ಚು ಪದಕಕ್ಕೆ ಮುತ್ತಿಕ್ಕಿದೆ. 2008ರ ಬೀಜಿಂಗ್ ಒಲಿಂಪಿಕ್ಸ್ ಬಳಿಕ ಭಾರತದ ಕುಸ್ತಿಪಟುಗಳು ಏಳು ಪದಕಗಳನ್ನು ಗೆದ್ದಿದ್ದಾರೆ. ಭಾರತದ ಪರ ಅತ್ಯಧಿಕ ಮೆಡಲ್ಸ್ ಜಯಿಸಿದ ಎರಡನೇ ವಿಭಾಗವಾಗಿದೆ.
(2 / 7)
ಕೆಡಿ ಜಾಧವ್ ಅವರು ಒಲಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಕುಸ್ತಿಪಟು ಆಗಿದ್ದಾರೆ. ಹೀಗಾಗಿ, ಹಾಕಿ ಹೊರತುಪಡಿಸಿ ಬೇರೆ ಕ್ರೀಡೆಯಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದರು. ಈ ಮೂಲಕ ದೇಶದ ಸ್ವಾತಂತ್ರ್ಯದಲ್ಲಿ ಮೊದಲ ವೈಯಕ್ತಿಕ ಪದಕ ವಿಜೇತರೂ ಆಗಿದ್ದಾರೆ. ಜಾಧವ್ 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಬ್ಯಾಂಟಮ್‌ವೇಟ್ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿ ಕಂಚು ಗೆದ್ದಿದ್ದರು.(Olympics)
(3 / 7)
ಅರ್ಧ ಶತಮಾನದ ನಂತರ 2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪುರುಷರ 66 ಕೆಜಿ ಫ್ರೀಸ್ಟೈಲ್ನಲ್ಲಿ ಸುಶೀಲ್ ಕುಮಾರ್ ಕಂಚಿನ ಪದಕ ಗೆದ್ದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ 66 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸುಶೀಲ್, ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. (PTI)
(4 / 7)
ನಾಲ್ಕು ವರ್ಷಗಳ ಹಿಂದೆ ಬೀಜಿಂಗ್‌ನಲ್ಲಿ ಸ್ವಲ್ಪದರಲ್ಲಿ ತಪ್ಪಿಸಿಕೊಂಡ ನಂತರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದರು. ಸುಶೀಲ್ ಮತ್ತು ಜಾಧವ್ ನಂತರ ಒಲಿಂಪಿಕ್ ಪದಕ ಗೆದ್ದ 3ನೇ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.
(5 / 7)
2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಸಾಕ್ಷಿ ಮಲಿಕ್ ಪಾತ್ರರಾಗಿದ್ದಾರೆ. ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಬರ ನೀಗಿಸಿದ ಅಥ್ಲೀಟ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.(Getty Images)
(6 / 7)
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಫ್ರೀಸ್ಟೈಲ್ 65 ಕೆಜಿ ವಿಭಾಗದಲ್ಲಿ ಬಜರಂಗ್ ಪೂನಿಯಾ ಕಂಚಿನ ಪದಕ ಗೆದ್ದಿದ್ದರು.(REUTERS)
ಇತರ ಗ್ಯಾಲರಿಗಳು