Photos: ಚಿತ್ರರಂಗಕ್ಕೆ ಕಾಲಿಡುವಾಗ ತಮ್ಮ ಹೆಸರನ್ನು ಬದಲಾಯಿಸಿಕೊಂಡ ಬಾಲಿವುಡ್ ಸೆಲೆಬ್ರಿಟಿಗಳಿವರು..
- ಹೆಸರಲ್ಲಿ ಏನಿದೆ ಎಂದು ಅಂದುಕೊಳ್ಳಬೇಡಿ. ಸೆಲೆಬ್ರಿಟಿಗಳಿಗೆ ಅವರ ಹೆಸರೇ ಅವರಿಗೆ ಮೊದಲ ಗುರುತನ್ನು ನೀಡುತ್ತದೆ ಮತ್ತು ಪ್ರೇಕ್ಷಕರಿಗೆ ಪರಿಚಯಿಸುತ್ತದೆ. ಅಮಿತಾಬ್ ಬಚ್ಚನ್ನಿಂದ ಹಿಡಿದು ಕಿಯಾರಾ ಅಡ್ವಾಣಿ ವರೆಗೆ ಬಾಲಿವುಡ್ನ ಅನೇಕ ನಟ-ನಟಿಯರು ಚಿತ್ರರಂಗಕ್ಕೆ ಕಾಲಿಡುವಾಗ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಹೆಸರಿನ ಉಚ್ಛಾರಣೆ ಕಷ್ಟವಾಗುತ್ತದೆ ಎಂದು, ಜ್ಯೋತಿಷ್ಯರು ಹೇಳಿದರೆಂದು, ತಮ್ಮ ಹೆಸರಿನ ಮತ್ತೊಬ್ಬ ಸೆಲೆಬ್ರಿಟಿ ಈಗಾಗಲೇ ಇದ್ದಾರೆಂದು - ಹೀಗೆ ನಾನಾ ಕಾರಣಗಳಿಗೆ ಸೆಲೆಬ್ರಿಟಿಗಳು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಈ ಲಿಸ್ಟ್ನಲ್ಲಿ ಯಾವ್ಯಾವ ಬಾಲಿವುಡ್ ತಾರೆಯರು ಇದ್ದಾರೆಂದು ನೋಡೋಣ ಬನ್ನಿ..

(1 / 8)
ಅಜಯ್ ದೇವಗನ್: ಅಜಯ್ ದೇವಗನ್ ಅವರ ನಿಜವಾದ ಹೆಸರು ವಿಶಾಲ್ ದೇವಗನ್. ಸಂಖ್ಯಾಶಾಸ್ತ್ರದ ಕಾರಣದಿಂದ ಅವರು ತಮ್ಮ ಹಸರನ್ನು ಅಜಯ್ ಎಂದು ಹಾಗೂ ಸರ್ ನೇಮ್ ಅನ್ನು ‘Devgan’ ಇಂದ ‘Devgn’ ಎಂದು ಬದಲಾಯಿಸಿಕೊಂಡರು.
(2 / 8)
ಟೈಗರ್ ಶ್ರಾಫ್: ನಟ ಟೈಗರ್ ಶ್ರಾಫ್ ಅವರ ನಿಜವಾದ ಹೆಸರು ಜೈ ಹೇಮಂತ್ ಶ್ರಾಫ್ ಎಂಬುದು ಅನೇಕರಿಗೆ ತಿಳಿದಿಲ್ಲ. ಇವರು ಚಿಕ್ಕವರಿದ್ದಾಗ ಎಲ್ಲರನ್ನೂ ಕಚ್ಚುತ್ತಿದ್ದರಂತೆ, ಹೀಗಾಗಿ ಇವರ ತಂದೆ ಜಾಕಿ ಶ್ರಾಫ್ ಮಗನಿಗೆ 'ಟೈಗರ್' ಎಂದು ಕರೆಯುತ್ತಾರೆ. ಬಳಿಕ ಬಾಲಿವುಡ್ಗೆ ಪದಾರ್ಪಣೆ ಮಾಡುವಾಗ ಟೈಗರ್ ಶ್ರಾಫ್ ಎಂದೇ ತಮ್ಮ ಹೆಸರನ್ನು ಬದಲಾಯಿಸಿಕೊಂಡರು.
(3 / 8)
ಕಿಯಾರಾ ಅಡ್ವಾಣಿ: ನಟಿ ಕಿಯಾರಾ ಅಡ್ವಾಣಿ ಅವರ ಮೊದಲ ಹೆಸರು ಆಲಿಯಾ ಅಡ್ವಾಣಿ. ಆಲಿಯಾ ಭಟ್ ಆಗಲೇ ಯಶಸ್ವಿ ಬಾಲಿವುಡ್ ನಟಿಯಾಗಿದ್ದ ಕಾರಣ ಆಲಿಯಾ ಅಡ್ವಾಣಿ ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ತಮ್ಮ ಹೆಸರನ್ನು ಕಿಯಾರಾ ಅಡ್ವಾಣಿ ಎಂದು ಬದಲಾಯಿಸಿಕೊಂಡರು.
(4 / 8)
ಸೈಫ್ ಅಲಿ ಖಾನ್: ನಟ ಸೈಫ್ ಅಲಿ ಖಾನ್ ಅವರ ಮೂಲ ಹೆಸರು ಯಾವುದೆಂದು ಯಾರಿಗೂ ತಿಳಿದಿರಲಿಲ್ಲ. ಆದರೆ ಕರೀನಾ ಕಪೂರ್ ಜೊತೆಗಿನ ಮದುವೆ ಪ್ರಮಾಣಪತ್ರದ ನಕಲು ಆಕಸ್ಮಿಕವಾಗಿ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡಿದಾಗ ಅವರ ನಿಜವಾದ ಹೆಸರು ಸಾಜಿದ್ ಅಲಿ ಖಾನ್ ಎಂದು ತಿಳಿದುಬಂದಿದೆ.
(5 / 8)
ಅಮಿತಾಬ್ ಬಚ್ಚನ್: ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಮೂಲ ಹೆಸರು ಇಂಕ್ವಿಲಾಬ್ ಶ್ರೀವಾಸ್ತವ. ಪ್ರಸಿದ್ಧ ಭಾರತೀಯ ಕವಿ ಸುಮಿತ್ರಾನಂದನ್ ಪಂತ್ ಅವರ ಸಲಹೆಯ ಮೇರೆಗೆ ಅದನ್ನು ನಂತರ ಅಮಿತಾಬ್ ಬಚ್ಚನ್ ಎಂದು ಬದಲಾಯಿಸಲಾಯಿತು.
(6 / 8)
ಅಕ್ಷಯ್ ಕುಮಾರ್: ಬಾಲಿವುಡ್ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರ ಮೊದಲ ಹೆಸರು ರಾಜೀವ್ ಹರಿ ಓಂ ಭಾಟಿಯಾ. ಫಿಲ್ಮ್ ಇಂಡಸ್ಟ್ರಿಗೆ ಬರುವಾಗ ತಮ್ಮ ಹೆಸರನ್ನು ಬದಲಾಯಿಸಿಕೊಂಡ ನಟ, ಬಳಿಕ ತಮ್ಮ ಮೂಲ ಹೆಸರಲ್ಲಿ ಹರಿ ಓಂ ಎಂಟರ್ಟೈನ್ಮೆಂಟ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದರು.
(7 / 8)
ಶಿಲ್ಪಾ ಶೆಟ್ಟಿ: ಬಳುಕುವ ಬಳ್ಳಿ ಶಿಲ್ಪಾ ಶೆಟ್ಟಿ ಅವರನ್ನು ಆರಂಭದಲ್ಲಿ ಅಶ್ವಿನಿ ಶೆಟ್ಟಿ ಎಂದು ಕರೆಯಲಾಗುತ್ತಿತ್ತು. ಆದರೆ ಜ್ಯೋತಿಷಿಯೊಬ್ಬರು ತಮ್ಮ ಹೆಸರನ್ನು ಬದಲಾಯಿಸಲು ಹೇಳಿದ ಕಾರಣ ಶಿಲ್ಪಾ ಶೆಟ್ಟಿ ಎಂದು ಬದಲಾಯಿಸಿಕೊಂಡರು.
ಇತರ ಗ್ಯಾಲರಿಗಳು