ಪ್ರೇಮಿಗಳ ದಿನದ ಪ್ರಯುಕ್ತ ಈ ವಾರ ಒಟಿಟಿಗೆ ಎಂಟ್ರಿಕೊಡುತ್ತಿರುವ ಹೊಸ ಹೊಸ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳಿವು
OTT Valentine's Day Week Releases: ವ್ಯಾಲೆಂಟೈನ್ಸ್ ಡೇ ವೀಕ್ ಶುರುವಾಗಿದೆ. ಹೀಗಿರುವಾಗ ಒಟಿಟಿಯಲ್ಲಿ ಒಂದಲ್ಲ ಎರಡಲ್ಲ ಬಹುನಿರೀಕ್ಷಿತ ಹಲವು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಪ್ರಸಾರವಾಗಲಿವೆ. ಆ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.
(1 / 8)
ವ್ಯಾಲೆಂಟೈನ್ಸ್ ಡೇ ಸಮೀಪಿಸುತ್ತಿದೆ. ಆ ವಾರ ಅಂದರೆ ಫೆ 10ರಿಂದ 16ರ ಅವಧಿಯಲ್ಲಿ ಒಟಿಟಿಯಲ್ಲಿ ಯಾವೆಲ್ಲ ಸಿನಿಮಾಗಳು ಮತ್ತು ವೆಬ್ ಸರಣಿಗಳು ಸ್ಟ್ರೀಮಿಂಗ್ ಆಗಲಿವೆ ಎಂಬ ಕುರಿತ ಮಾಹಿತಿ ಇಲ್ಲಿದೆ.
(2 / 8)
'ಬಾಬಿ ಔರ್ ರಿಷಿ ಕಿ ಲವ್ ಸ್ಟೋರಿ' ಚಿತ್ರ ಮಂಗಳವಾರ (ಫೆಬ್ರವರಿ 11) ಡಿಸ್ನಿ + ಹಾಟ್‌ಸ್ಟಾರ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಪ್ರೇಮಿಗಳ ದಿನಕ್ಕೂ ಮುನ್ನ ಬಿಡುಗಡೆ ಆಗಲಿದೆ.
(3 / 8)
ಜಯಂ ರವಿ ಮತ್ತು ನಿತ್ಯಾ ಮೆನನ್ ಅಭಿನಯದ ಕಾದಲಿಕ್ಕ ನೆರಮಿಲ್ಲೈ ಫೆಬ್ರವರಿ 11ರಂದು ನೆಟ್ ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
(4 / 8)
ಸೋಮವಾರ (ಫೆಬ್ರವರಿ 10) ಸೊಮಾಲಿಯಾ ಮತ್ತು ಯುಎಸ್ಎ ನಡುವಿನ 1993ರ ಯುದ್ಧದ ಹಿನ್ನೆಲೆಯ ಸಾಕ್ಷ್ಯಚಿತ್ರ ಸರ್ವೈವಿಂಗ್ ಬ್ಲ್ಯಾಕ್ ಹಾಕ್ ಡೌನ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
(5 / 8)
ಯಾಮಿ ಗೌತಮ್ ಮತ್ತು ಪ್ರತೀಕ್ ಗಾಂಧಿ ಅಭಿನಯದ 'ಧೂಮ್ ಧಾಮ್' ಫೆಬ್ರವರಿ 14ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
(6 / 8)
ವೈಲೆಂಟ್ ಆಕ್ಷನ್ ಥ್ರಿಲ್ಲರ್ ಮಲಯಾಳಂ ಸಿನಿಮಾ ಮಾರ್ಕೊ ಫೆಬ್ರವರಿ 14 ರಂದು ಸೋನಿ ಲೈವ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಇತರ ಗ್ಯಾಲರಿಗಳು